For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಮುಟ್ಟಾದ ಬಳಿಕ ಅವರಿಗೇಕೆ ಈ ರೀತಿ ಶಿಕ್ಷೆ?

By Deepu
|

ಮುಟ್ಟಿನ ಅಥವಾ ಋತುಚಕ್ರದ ಅವಧಿಯಲ್ಲಿ ಹಿ೦ದೂ ಹುಡುಗಿಯರು ಅನುಸರಿಸಬೇಕಾದ ಅನೇಕ ಕಟ್ಟುಪಾಡುಗಳು ಹಿ೦ದೆಯೂ ಇದ್ದವು ಹಾಗೂ ಇ೦ದಿಗೂ ಕೂಡ ಜಾರಿಯಲ್ಲಿವೆ. ಹೆಣ್ಣಿನ ಜೀವನದಲ್ಲಿ ಋತುಚಕ್ರವೆ೦ಬುದು ಒ೦ದು ಹಗುರವಾಗಿ ತೆಗೆದುಕೊಳ್ಳಬಹುದಾದ ಸ೦ಗತಿಯ೦ತೂ ಖ೦ಡಿತ ಅಲ್ಲ. ಈ ಪ್ರಕ್ರಿಯೆಯು ಶರೀರಶಾಸ್ತ್ರ, ಸ೦ಸ್ಕೃತಿ, ಹಾಗೂ ಸಾಮಾಜಿಕ ಕಟ್ಟುಪಾಡುಗಳೊ೦ದಿಗೆ ತಳುಕುಹಾಕಿಕೊ೦ಡಿದೆ.

ಹೌದು ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಮುಟ್ಟಾದ ಸ್ತ್ರೀಯು ಮನೆಯಲ್ಲಿನ ಪೂಜಾಗೃಹಕ್ಕೆ ಅಥವಾ ದೇವಾಲಯಕ್ಕೆ ಪ್ರವೇಶ ಮಾಡಬಾರದು. ಇದಲ್ಲದೆ ಆಕೆಯು ಕುಟುಂಬದ ಇತರ ಸದಸ್ಯರಿಂದ ದೂರವಿರಬೇಕು, ತನ್ನ ಕೂದಲನ್ನು ಬಾಚಿಕೊಳ್ಳಬಾರದು, ಉಪ್ಪಿನಕಾಯಿಯನ್ನು ಮುಟ್ಟಬಾರದು, ಯಾವುದೇ ತರಹದ ಕಾಡಿಗೆ ಅಥವಾ ಮೇಕಪ್ ಅನ್ನು ಬಳಸಬಾರದು. ಅಡುಗೆ ಮನೆಗೆ ಪ್ರವೇಶಿಸಬಾರದು. ಇನ್ನೂ ಸರಳವಾಗಿ ಹೇಳಬೇಕೆಂದರೆ ಮುಟ್ಟಾದ ಸ್ತ್ರೀಯು ಈ ಅವಧಿಯಲ್ಲಿ ತನ್ನ ದೈನಂದಿನ ಜೀವನವನ್ನು ಎಂದಿನಂತೆ ನಡೆಸಲು ಆಗುವುದಿಲ್ಲ. ಹಿಂದಿನ ಕಾಲದಲ್ಲಿ ಮಹಿಳೆಯರು ಮುಟ್ಟಾದ ಸಮಯದಲ್ಲಿ ಅವರನ್ನು ಅಕ್ಷರಶಃ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರು!

ಆ ಅವಧಿಯಲ್ಲಿ ಅವರು ಕೇವಲ ಒಂದು ಬಟ್ಟೆಯನ್ನು ಮಾತ್ರ ತೊಡಬೇಕಾಗಿತ್ತು. ಯಾರೊಂದಿಗೂ ಮಾತನಾಡದೆ, ತಲೆಯನ್ನು ಬಾಚದೆ, ಸರಳ ಆಹಾರವನ್ನು ಸೇವಿಸುತ್ತ, ನೆಲದ ಮೇಲೆ ಮಲಗಬೇಕಿತ್ತು. ಇವರು ಈ ಅವಧಿಯಲ್ಲಿ ಮುಟ್ಟಿದ್ದು ಅಪವಿತ್ರ ಎಂದು ಭಾವಿಸಾಲಾಗುತ್ತಿತ್ತು. ಹಾಗಾಗಿ ಇವರು ಯಾವುದನ್ನು ಮುಟ್ಟುತ್ತಿರಲಿಲ್ಲ. ಇದಕ್ಕಾಗಿಯೇ ಮುಟ್ಟಾದ ಹೆಂಗಸರನ್ನು ಪೂಜೆ ಪುನ ಸ್ಕಾರಗಳಿಂದ ಮತ್ತು ಮನೆಯ ಕೆಲಸಗಳಿಂದ ದೂರವಿಡುತ್ತಿದ್ದರು.

ಹೆಣ್ಣು ಮುಟ್ಟಾಗುವ ಪ್ರಕ್ರಿಯೆಯನ್ನು ಬಹಳ ವಿಭಿನ್ನವಾಗಿ ಇತರ ಧರ್ಮದಲ್ಲಿಯೂ ವಿಭಿನ್ನವಾಗಿ ಪರಿಗಣಿಸಲಾಗಿದ್ದು, ಇದರ ಸುತ್ತಲೂ ಹಲವಾರು ಮೂಢನ೦ಬಿಕೆಗಳೂ ಸಹ ಹೆಣೆದುಕೊ೦ಡಿವೆ. ಈಗ ಋತುಚಕ್ರದ ಕುರಿತಾದ ಹಿ೦ದೂ ಸ೦ಪ್ರದಾಯದ ಹಳೆಯ ಕಾಲದ ಕೆಲವು ಆಚರಣೆಗಳ ಕುರಿತು ಇಲ್ಲಿ ಚರ್ಚಿಸೋಣ....

ಆ ಅವಧಿಯಲ್ಲಿ ಅಕೆ ಅಪ್ಪಿತಪ್ಪಿಯೂ ದೇವಸ್ಥಾನ ಪ್ರೇಶಿಸಬಾರದು

ಆ ಅವಧಿಯಲ್ಲಿ ಅಕೆ ಅಪ್ಪಿತಪ್ಪಿಯೂ ದೇವಸ್ಥಾನ ಪ್ರೇಶಿಸಬಾರದು

ಹಿ೦ದೂ ಸ೦ಪ್ರದಾಯದ ಕೆಲವೊ೦ದು ಕಲ್ಪನೆಗಳ ಪ್ರಕಾರ, ಮುಟ್ಟಾಗಿರುವ ಹೆಣ್ಣು ದೇವಾಲಯಕ್ಕೆ ಭೇಟಿ ಕೊಡುವ೦ತಿಲ್ಲ ಅಥವಾ ಆ ಸ೦ದರ್ಭದಲ್ಲಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವ೦ತಿಲ್ಲ. ಈ ಸ೦ಪ್ರದಾಯ ಹಾಗೂ ನ೦ಬಿಕೆಗಳ ಪ್ರಕಾರ, ಮುಟ್ಟಾಗಿರುವ ಸಮಯದಲ್ಲಿ ಅಥವಾ ಋತುಚಕ್ರದ ಅವಧಿಯಲ್ಲಿ ಹುಡುಗಿಯು ಅಪವಿತ್ರಳಾಗಿರುತ್ತಾಳೆ. ಆದ್ದರಿ೦ದ, ಅ೦ಥ ಸ೦ದರ್ಭದಲ್ಲಿ ಹುಡುಗಿಯು ದೇವರಿಗೆ ಅರ್ಪಿಸಲ್ಪಡುವ ಯಾವೊ೦ದು ವಸ್ತುವನ್ನೇ ಆಗಲೀ, ಸ್ಪರ್ಶಿಸುವುದಕ್ಕೂ ಕೂಡ ಅವಕಾಶವಿರುವುದಿಲ್ಲ.

ಅಡುಗೆ ಮಾಡುವಂತಿಲ್ಲ!

ಅಡುಗೆ ಮಾಡುವಂತಿಲ್ಲ!

ಋತುಚಕ್ರದ ಅವಧಿಯಲ್ಲಿ ಹುಡುಗಿಯರು ಅಪವಿತ್ರರೆಂದು ಪರಿಗಣಿಸಲ್ಪಡುವುದರಿoದ ಅವರು ಅಡುಗೆ ಕೋಣೆಯನ್ನು ಪ್ರವೇಶಿಸುವಂತಿಲ್ಲ!, ಹಿಂದೂ ಧರ್ಮದ ಪ್ರಕಾರ ಈ ಸಮಯದಲ್ಲಿ ಹುಡುಗಿಯು ತಯಾರಿಸಿದ ಆಹಾರವು ಅನಾರೋಗ್ಯಕರವೂ, ಅಶುದ್ಧವೂ ಆಗಿರುತ್ತದೆ. ಈ ಒಂದು ನಂಬಿಕೆಗೆ ಮತ್ತೊಂದು ಆಯಾಮವೂ ಇದೆ.

ಮೂರನೆಯ ದಿನದಂದು ಬಟ್ಟೆಗಳನ್ನು ಒಗೆದುಕೊಳ್ಳಬೇಕು

ಮೂರನೆಯ ದಿನದಂದು ಬಟ್ಟೆಗಳನ್ನು ಒಗೆದುಕೊಳ್ಳಬೇಕು

ಕೆಲವೊಂದು ಹಿಂದೂ ಸಂಪ್ರದಾಯದ ಪ್ರಕಾರ, ಋತುಚಕ್ರದ ಅವಧಿಯು ಮುಗಿದ ತರುವಾಯ ಮೂರನೆಯ ದಿನದಂದು ಆಕೆಯು ತನ್ನೆಲ್ಲಾ ಬಟ್ಟೆಗಳು ಹಾಗೂ ಹೊದಿಕೆ, ಬೆಡ್ ಶೀಟ್ ಗಳನ್ನು ಸ್ವಚ್ಛವಾಗಿ ಒಗೆಯಬೇಕು. ಅದೇ ದಿನದಂದು ಅವರು ತಮ್ಮ ಕೂದಲನ್ನು ಶಾಂಪೂವಿನಿಂದ ಸ್ವಚ್ಛ ಗೊಳಿಸಿಕೊಳ್ಳಬೇಕಾಗುತ್ತದೆ.

ಉಪ್ಪಿನಕಾಯಿ ಡಬ್ಬ ಕೂಡ ಮುಟ್ಟಬಾರದು

ಉಪ್ಪಿನಕಾಯಿ ಡಬ್ಬ ಕೂಡ ಮುಟ್ಟಬಾರದು

ಋತುಚಕ್ರದ ಅವಧಿಯಲ್ಲಿ ಹುಡುಗಿಯರು ಉಪ್ಪಿನಕಾಯಿಯನ್ನು ಮುಟ್ಟುವಂತಿಲ್ಲವೆಂದು ಹೇಳಲಾಗುತ್ತದೆ. ಹಿಂದೂ ಆಚರಣೆಯ ಕಲ್ಪನೆಯ ಪ್ರಕಾರ ಹಾಗೊಂದು ವೇಳೆ ಹುಡುಗಿಯು ಆ ಅವಧಿಯಲ್ಲಿ ಉಪ್ಪಿನಕಾಯಿಯನ್ನೇನಾದರೂ ಮುಟ್ಟಿದರೆ, ಅದು ಹಾಳಾಗುತ್ತದೆ. ಏನೇ ಆಗಲಿ, ಈ ನಂಬಿಕೆಯ ಹಿಂದೆ ಯಾವುದೇ ತಾರ್ಕಿಕವಾದ ಹಿನ್ನೆಲೆಯಿದ್ದಂತೆ ಕಾಣುವುದಿಲ್ಲ. ನಿಮಗೇನಾದರೂ ಇದರ ಬಗ್ಗೆ ತಿಳಿದಿದ್ದರೆ ನಮಗೂ ಅದನ್ನು ತಿಳಿಸಿರಿ.

ಮನೆಯ ತುಳಸಿ ಗಿಡದಿಂದ ದೂರವಿರಬೇಕಂತೆ!

ಮನೆಯ ತುಳಸಿ ಗಿಡದಿಂದ ದೂರವಿರಬೇಕಂತೆ!

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಸಸ್ಯವೆಂದು ಪರಿಗಣಿಸಲಾಗಿದೆ. ಅದ್ದರಿಂದ ಹುಡುಗಿಯರು ಮುಟ್ಟಿನ ದಿನಗಳಲ್ಲಿ ತುಳಸಿ ಗಿಡವನ್ನು ಸ್ಪರ್ಶಿಸುವಂತಿಲ್ಲ. ಈ ಅವಧಿಯಲ್ಲಿ ಅಂತಹ ಹುಡುಗಿಯರು ತಮ್ಮ ನೆರಳೂ ಸಹ ತುಳಸಿ ಗಿಡದ ಮೇಲೆ ಬೀಳದಂತೆ ಎಚ್ಚರವಹಿಸಬೇಕಾಗುತ್ತದೆ. ನಂಬಿಕೆಗಳ ಪ್ರಕಾರ, ಹಾಗೇನಾದರೂ ನಡೆದರೆ ತುಳಸಿ ಗಿಡವು ಸತ್ತೇ ಹೋಗುತ್ತದೆ. ಈ ಎಲ್ಲವೂ ಕೂಡ ತಲೆತಲಾಂತರದಿಂದ ಸಾಗಿ ಬಂದ ಜನಪ್ರಿಯವಾದ ಹಿಂದೂ ಕಲ್ಪನೆಗಳಾಗಿವೆ. ಕೆಲವೊಂದು ಹಿಂದೂ ಕಲ್ಪನೆಗಳಿಗೆ ತಾರ್ಕಿಕವಾದ ವಿವರಣೆಯಿದೆ ಆದರೆ ಕೆಲವೊಂದಕ್ಕೆ ಇರುವುದಿಲ್ಲ.

English summary

Menstruation related myths in India

There were and still are a lot of customs to be followed by Hindu girls during their menstruation. People in recent times laugh at such unreasonable Hindu customs. Menstruation is not an easy thing in a woman's life. It is all related with physiology, culture and society. Biologically, menstruating is a very good sign indicating the fact that a woman has a healthy reproductive cycle. But in many religions a girls menstruation is perceived quite differently and there are many superstitions surrounding it.
X
Desktop Bottom Promotion