For Quick Alerts
ALLOW NOTIFICATIONS  
For Daily Alerts

ಮಹಾ ಶಿವರಾತ್ರಿ 2020 ದಿನಾಂಕ, ಶುಭ ಮಹೂರ್ತ ಮತ್ತು ಮಹತ್ವ

|

ಹಿಂದೂ ಪಂಚಾಂಗದ ಪ್ರಕಾರ ಮಾಘ ಅಥವಾ ಫಲ್ಗುಣ ಮಾಸದ 13ನೇ ದಿನದ ರಾತ್ರಿ ಹಾಗೂ 14ನೇ ದಿನದ ಬೆಳಗ್ಗೆ ಆಚರಿಸುವ ಮಹಾಶಿವರಾತ್ರಿ ಶಿವನನ್ನು ಒಲಿಸಿಕೊಳ್ಳಲು ಮತ್ತು ಅವನ ಆಶೀರ್ವಾದ ಪಡೆಯಲು ಇರುವ ಪವಿತ್ರ ದಿನ.

Maha Shivaratri Subh Muhurat

ಪದ್ಮರಾಜರಾತ್ರಿ ಎಂದೂ ಕರೆಯುವ ಶಿವರಾತ್ರಿ 2020ಸಾಲಿನಲ್ಲಿ ಫೆಬ್ರವರಿ 21ರಂದು ಆಚರಿಸಲಾಗುತ್ತಿದೆ. ಆಡಂಬರ ಬಯಸದ ಶಿವ ಶುದ್ಧ ಮನಸ್ಸಿನಿಂದ, ಶುಭ್ರ ಬಟ್ಟೆತೊಟ್ಟು ಪೂಜಿಸಿ. ಈ ದಿನ ಬೆಳಿಗ್ಗೆಯೇ ಶಿವಲಿಂಗಕ್ಕೆ ಹಾಲು, ತುಪ್ಪ, ಜೇನುತುಪ್ಪ, ಗಂಧ, ಅರಿಶಿನ, ಗಂಗಾಜಲದಲ್ಲಿ ಅಭಿಷೇಕ ಮಾಡಿದರೆ ಶಿವನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ.

ಪೂಜೆಗೆ ಪವಿತ್ರ ಸಮಯ

ಪೂಜೆಗೆ ಪವಿತ್ರ ಸಮಯ

  • ನಿಶಿತಾ ಕಾಲ ಪೂಜಾ ಸಮಯ: ಫೆಬ್ರವರಿ 22 ರಂದು ಬೆಳಿಗ್ಗೆ 12.09 ರಿಂದ 1.00 ರವರೆಗೆ
  • ಮಹಾ ಶಿವರಾತ್ರಿ ಪಾರಣ ಸಮಯ: ಫೆಬ್ರವರಿ 22 ರಂದು ಬೆಳಿಗ್ಗೆ 6.54 ರಿಂದ ಮಧ್ಯಾಹ್ನ 3.25 ರವರೆಗೆ
  • ರಾತ್ರಿ ಮೊದಲ ಪ್ರಹಾರ ಪೂಜಾ ಸಮಯ - ಸಂಜೆ 06:15 ರಿಂದ ರಾತ್ರಿ 09:25ರವರೆಗೆ
  • ರಾತ್ರಿ ಎರಡನೇ ಪ್ರಹಾರ ಪೂಜಾ ಸಮಯ - ರಾತ್ರಿ 09:25 ರಿಂದ ಫೆಬ್ರವರಿ 22ರ ಮಧ್ಯಾರಾತ್ರಿ 12:34ರವರೆಗೆ
  • ರಾತ್ರಿ ಮೂರನೇ ಪ್ರಹಾರ ಪೂಜಾ ಸಮಯ - ಮಧ್ಯರಾತ್ರಿ 12:34 ರಿಂದ ಮುಂಜಾನೆ 03:44 ರವರೆಗೆ
  • ರಾತ್ರಿ ನಾಲ್ಕನೇ ಪ್ರಹಾರ ಪೂಜಾ ಸಮಯ - ಮುಂಜಾನೆ 03:44 ರಿಂದ ಬೆಳಿಗ್ಗೆ 06:54ರವರೆಗೆ
  • ಚತುರ್ದಶಿ ತಿಥಿ ಪ್ರಾರಂಭ: ಫೆಬ್ರವರಿ 21ರಂದು ಸಂಜೆ 5.20ರಿಂದ
  • ಚತುರ್ದಶಿ ತಿಥಿ ಅಂತ್ಯ: ಫೆಬ್ರವರಿ 22ರ ಸಂಜೆ 7.02ಕ್ಕೆ
  • ಶಿವರಾತ್ರಿ ಪೂಜಾ ವಿಧಿ ವಿಧಾನ

    ಶಿವರಾತ್ರಿ ಪೂಜಾ ವಿಧಿ ವಿಧಾನ

    ಮಹಾ ಶಿವರಾತ್ರಿ ಸೂರ್ಯೋದಯ ಆಗುವ ಮುನ್ನವೇ ಎದ್ದು ಶುದ್ಧವಾಗಿ ಸ್ನಾನ ಮಾಡಿ. ನಂತರ ಈಶ್ವರನಿಗೆ ಷೋಡಶೋಪಚಾರದಿಂದ (ಹದಿನಾರು ಬಗೆಯಿಂದ ಶಿವನಿಗೆ ಉಪಚಾರ) ಪೂಜೆ ಮಾಡಬೇಕು. ಈ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಲು ಮರೆಯಬೇಡಿ. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

    ಉಪವಾಸ ಕ್ರಮ: ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡಬೇಕು. ಉಪವಾಸ ಮಾಡಲು ಆಗದಿದ್ದರೆ, ಫಲಹಾರ ತೆಗೆದುಕೊಳ್ಳಬಹುದು.

    ಬೇಕಾಗುವ ಪೂಜಾ ಸಾಮಾಗ್ರಿಗಳು

    ಬೇಕಾಗುವ ಪೂಜಾ ಸಾಮಾಗ್ರಿಗಳು

    ರಂಗೋಲಿ, ಮಣೆ, ಮಂಟಪ

    ದೇವರ ವಿಗ್ರಹ/ ದೇವರ ಫೋಟೋ

    ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ

    ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ

    ನೀರು, ಅರಿಶಿನ, ಕುಂಕುಮ, ಮಂತ್ರಾಕ್ಷತೆ, ಶ್ರೀಗಂಧ, ಊದಿನ ಕಡ್ಡಿ, ವಿಭೂತಿ

    ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ, ಪಂಚಾಮೃತ- (ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ)

    ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ

    ವೀಳ್ಯದ ಎಲೆ, ಅಡಿಕೆ, ಹಣ್ಣು

    ತೆಂಗಿನ ಕಾಯಿ, ಕರ್ಪೂರ, ಆರತಿ ತಟ್ಟೆ, ಹೂಬತ್ತಿ

    ಪೂಜಾ ಕ್ರಮ

    ಪೂಜಾ ಕ್ರಮ

    1. ಆವಾಹನೆ - ದೇವರಿಗೆ ಆಹ್ವಾನ ನೀಡುವುದು. ನೀವು ಪೂಜೆ ಮಾಡಲು ನಿರ್ಧರಿಸಿದ ಸ್ಥಳ, ದೇವರ ಮನೆಗೆ ದೇವರನ್ನು ಆಹ್ವಾನ ಮಾಡುವುದು.
    2. ಆಸನ- ದೇವರನ್ನು ಇಡುವ ಜಾಗ. ಶಿವಲಿಂಗ ಅಥವ ಶಿವ ಪ್ರತಿಮೆಯನ್ನು ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
    3. ಪಾದ್ಯ- ಕಾಲು ತೊಳೆದುಕೊಳ್ಳುವ ನೀರು
    4. ರ್ಘ್ಯ- ಕೈ ತೊಳೆಯುವ ನೀರು
    5. ಆಚಮನ- ಕುಡಿಯುವ ನೀರು
    6. ಅಭಿಷೇಕ- ನೀರು ಮತ್ತು ಪಂಚಾಮೃತದಿಂದ ದೇವರಿಗೆ ಅಥವಾ ವಿಗ್ರಹಕಕೆ ಅಭಿಷೇಕ ಮಾಡುವುದು
    7. ವಸ್ತ್ರ- ದೇವರಿಗೆ ಉಡುಪು, ಗೆಜ್ಜೆ ವಸ್ತ್ರಗಳಿಂದ ಶೃಂಗರಿಸುವುದು
    8. ಅರ್ಪಣೆ: ಹರಿದ್ರ, ಕುಂಕುಮ, ಗಂಧ, ಅಕ್ಷತೆ - ಅರಿಶಿನ, ಕುಂಕುಮ, ಶ್ರೀಗಂಧ, ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು
    9. ಪುಷ್ಪ ಮಾಲ- ಹೂವು, ಬಿಲ್ವ ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು
    10. ಅರ್ಚನೆ/ಅಷ್ಟೋತ್ತರ- ಶಿವನಿಗೆ ಇರುವ ನೂರೆಂಟು ನಾಮಗಳಿಂದ ಅವನನ್ನು ಸ್ಮರಣೆ ಮಾಡುವುದು, ಮಂತ್ರ ಪಠಿಸುವುದು
    11. ಧೂಪ- ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು
    12. ದೀಪ- ದೇವರ ಮುಂದೆ ದೀಪ ಬೆಳಗಿಸುವುದು
    13. ನೈವೇದ್ಯ, ತಾಂಬೂಲ- ದೇವರಿಗೆ ವಿವಿಧ ಭಕ್ಷ್ಯಗಳನ್ನು ಅರ್ಪಿಸುವುದು. ವೀಳ್ಯದ ಎಲೆ, ಅಡಿಕೆ, ತೆಂಗಿನ ಕಾಯಿ ತಾಂಬೂಲ ಇಡುವುದು. ಹಣ್ಣುಗಳನ್ನು ದೇವರ ಮುಂದೆ ಇಡಬೇಕು.
    14. ನೀರಾಜನ- ಕರ್ಪೂರದಿಂದ ಮಂಗಳಾರತಿ ಮಾಡವುದು
    15. ನಮಸ್ಕಾರ- ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು
    16. ಪ್ರಾರ್ಥನೆ- ಶಿವನಲ್ಲಿ ತಮ್ಮ ಇಷ್ಟಗಳನ್ನು ನಡೆಸಿಕೊಡು ಎಂದು ಅರಿಕೆ ಅಥವಾ ಪ್ರಾರ್ಥನೆ ಮಾಡಬೇಕು. ಪೂಜೆಯ ನಂತರ ದೇವರು ಅನುಗ್ರಹಿಸಿರುವ ಅರಿಶಿನ ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕರಿಸಬೇಕು. ಹೀಗೆ ಕ್ರಮವಾಗಿ ಶಿವನ ಪೂಜೆ ಮಾಡಬೇಕು.
    4 ಜಾವದಲ್ಲಿ ಶಿವ ಪೂಜೆ

    4 ಜಾವದಲ್ಲಿ ಶಿವ ಪೂಜೆ

    • ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ.
    • ಶಿವ ರಾತ್ರಿ ಎಂಬ ಹೆಸರಿಗೆ ತಕ್ಕಂತೆ ಹಗಲಿನ ಜೊತೆಗೆ ರಾತ್ರಿಯೂ ಶಿವನ ಪೂಜೆ, ಆರಾಧನೆ ಮಾಡಬೇಕು.
    • ರಾತ್ರಿಯ 4 ಜಾವಗಳಲ್ಲೂ ಈಶ್ವರನಿಗೆ ಅಭಿಷೇಕ ಪೂಜೆ ಮಾಡುತ್ತಾರೆ. ಈಶ್ವರನ ಭಜನೆ, ಹಾಡು, ಸ್ತೋತ್ರಗಳನ್ನು ಹೇಳುತ್ತಾ ಜಾಗರಣೆ ಮಾಡುತ್ತಾರೆ. ಹೀಗೆ ದಿನವಿಡೀ ಶಿವನ ಧ್ಯಾನದಲ್ಲಿ ಕಳೆಯಬೇಕು.
    • ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು.
    • ಶಿವರಾತ್ರಿಯಂದು ಸಾಧ್ಯವಾದಷ್ಟು "ಓಂ ನಮಃ ಶಿವಾಯ" ಮಂತ್ರವನ್ನು ಪಠಿಸಿ
    • ಅಂದು ಸಾಧ್ಯವಾದಷ್ಟು ದೇವಾಲಯಗಳಿಗೆ ಭೇಟಿ ನೀಡಿ, ನೀವು ಎಷ್ಟು ದೇವಾಲಯಗಳಿಗೆ ಭೇಟಿ ನೀಡಿ ಲಿಂಗದ ದರ್ಶನ ಮಾಡುತ್ತಿರೋ ಅಷ್ಟು ಶಿವನ ಕೃಪೆಗೆ ಪಾತ್ರರಾಗುತ್ತೀರಿ ಎಂಬ ನಂಬಿಕೆ ಇದೆ.
    • ಮಹಾಶಿವರಾತ್ರಿ ವ್ರತದ ಮಹಿಮೆ ಮೃತ್ಯುವಿನಿಂದ ಅಮೃತತ್ವದೆಡೆಗೆ, ಹುಟ್ಟು, ಸಾವುಗಳಿಂದ ಭಗವಂತನ ಚಿರ ಸಾನ್ನಿಧ್ಯದೆಡೆಗೆ, ಬದುಕಿನ ನಿರಂತರ ಜಂಜಾಟಗಳಿಂದ ಮುಕ್ತರಾಗಿ ಶಿವನ ಪಾದಗಳಲ್ಲಿ ಲೀನವಾಗುವುದೇ ಈ ಮಹಾಶಿವರಾತ್ರಿ.

English summary

Maha Shivaratri 2020 Date, Subh Muhurat Time and Significance

Here we are discussing about Maha Shivaratri 2020 Date, Subh Muhurat Time ans Significance. Maha Shivratri 2020: According to popular beliefs, on this day, Lord Shiva drank the poison pot that came out from 'Samudra Manthan' between Gods and demons. read more.
X
Desktop Bottom Promotion