ಶ್ರಾವಣ ಮಾಸದಲ್ಲಿ ತಪ್ಪದೇ ಮಾಡಿ ಈ ಕೆಲಸವ, ಶಿವ ಖುಷಿ ಪಡುವನು

Posted By: manu
Subscribe to Boldsky

ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸವನ್ನು ಪವಿತ್ರ ತಿಂಗಳು ಎಂದು ಪರಿಗಣಿಸಿದ್ದಾರೆ. ಈ ತಿಂಗಳಲ್ಲಿ ಶಿವನ ಆರಾಧನೆ ಬಹಳ ಶ್ರೇಷ್ಠವಾದದ್ದು. ಸಾಮಾನ್ಯ ದಿನಗಳಲ್ಲಿ ಶಿವನ ಪೂಜೆ ಮಾಡುವುದಕ್ಕಿಂತ, ಶ್ರಾವಣ ಮಾಸದಲ್ಲಿ ಒಂದು ಸಾರಿ ಪೂಜೆ ಮಾಡುವುದು 108 ಪಟ್ಟು ಹೆಚ್ಚು ಶ್ರೇಷ್ಠವಾದದ್ದು ಎನ್ನಲಾಗುತ್ತದೆ. ಭಗವಂತನ ಆರಾಧನೆ ಮಾಡಿ ಪುಣ್ಯ ಗಳಿಸಿದರೆ ಮನಸ್ಸಿನ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎನ್ನುವ ನಂಬಿಕೆ ಇದೆ.

'ಶ್ರಾವಣ' ಎಂದರೆ ನಮ್ಮೆಲ್ಲರಿಗೂ ಶುಭವ ತರುವ ಮಾಸ 

ಅನೇಕ ಹಬ್ಬ ಹರಿದಿನಗಳು, ವ್ರತದ ಆಚರಣೆಯನ್ನು ಈ ತಿಂಗಳಲ್ಲೇ ನಡೆಯುತ್ತದೆ. ಕೆಲವು ಶಾಸ್ತ್ರ ಪುರಾಣಗಳ ಪ್ರಕಾರ ಶ್ರಾವಣ ತಿಂಗಳಲ್ಲಿ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ವಿಶೇಷವಾದ ಪುಣ್ಯ ಪ್ರಾಪ್ತಿಯಾಗುವುದು. ಜೊತೆಗೆ ಕುಟುಂಬ ಸದಸ್ಯರನ್ನು ರಕ್ಷಿಸಿ, ಎಲ್ಲರಿಗೂ ಶುಭವಾಗುವಂತೆ ಮಾಡುವುದು. ಮುಂದಿನ ತಿಂಗಳೇ ಶ್ರಾವಣ ಮಾಸವಾದ್ದರಿಂದ ಈ ವಿಷಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ...

ಭಸ್ಮ

ಭಸ್ಮ

ಭಸ್ಮ ಶಿವನಿಗೆ ಶ್ರೇಷ್ಠವಾದದ್ದು. ಶ್ರಾವಣ ಮಾಸದಲ್ಲಿ ದೇವಸ್ಥಾನ ಅಥವಾ ಮನೆಯಲ್ಲಿರುವ ಶಿವನ ಮೂರ್ತಿ/ಚಿತ್ರದ ಮುಂದೆ ಭಸ್ಮವನ್ನು ಇಡಬೇಕು. ಆಗ ಪುಣ್ಯ ಲಭಿಸುವುದು.

ಬೆಳ್ಳಿ ಅಥವಾ ತಾಮ್ರದ ಬಸವ

ಬೆಳ್ಳಿ ಅಥವಾ ತಾಮ್ರದ ಬಸವ

ಶ್ರಾವಣ ಮಾಸದಲ್ಲಿ ಬೆಳ್ಳಿ ಅಥವಾ ತಾಮ್ರದ ಬಸವನ ಮೂರ್ತಿಯನ್ನು ವಾರ್ಡ್ರೋಬ್‌ನಲ್ಲಿ ತಂದು ಇರಿಸಬೇಕು. ಹಣಕಾಸಿನ ಹರಿವು ಹೆಚ್ಚುವುದು. ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಫಲಿತಾಂಶ ದೊರೆಯುವುದು.

ರುದ್ರಾಕ್ಷಿ ಮಣಿ

ರುದ್ರಾಕ್ಷಿ ಮಣಿ

ಯಾವುದೇ ಆಕಾರದಲ್ಲಿರುವ ಒಂದು ರುದ್ರಾಕ್ಷಿ ಮಣಿಯನ್ನು ಮನೆಯ ಮುಖ್ಯ ಶಯನ ಕೋಣೆಯಲ್ಲಿ ಇರಿಸಬೇಕು. ಅದೃಷ್ಟವು ಒಲಿಯುವುದು.

ಶಿವನ ಕಣ್ಣೀರಿನಲ್ಲಡಗಿದೆ ಜಗದ ದುಃಖವನ್ನು ನೀಗಿಸುವ ಶಕ್ತಿ!

ಗಂಗಾ ಜಲ

ಗಂಗಾ ಜಲ

ಗಂಗಾ ಜಲದ ಗಿಂಡಿ ಅಥವಾ ಬಾಟಲ್‍ ಅನ್ನು ಅಡುಗೆ ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುವುದು.

ನಾಗರ ಹೆಡೆ

ನಾಗರ ಹೆಡೆ

ಶಿವನ ಕುತ್ತಿಗೆಯಲ್ಲಿ ಹಾವು ಇರುವುದನ್ನು ನಾವು ನೋಡುತ್ತೇವೆ. ನಾಗರ ಹಾವಿನ ತಾಮ್ರ ಅಥವಾ ಬೆಳ್ಳಿ ನಾಗರ ಹೆಡೆಯನ್ನು ಮನೆಯ ಪ್ರಧಾನ ಗೇಟಿನ ಕೆಳಗೆ ಹೂತಿಡಬೇಕು. ಹೀಗೆ ಮಾಡುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುವುದು.

ತಾಮ್ರ ಚೊಂಬು

ತಾಮ್ರ ಚೊಂಬು

ಮನೆಯಲ್ಲಿ ಸದಸ್ಯರೊಂದಿಗೆ ಕುಳಿತು, ಹೆಚ್ಚು ಸಮಯ ಕಳೆಯುವ ಜಾಗದಲ್ಲಿ ನೀರು ತುಂಬಿದ ತಾಮ್ರದ ಚೊಂಬನ್ನು ಇಡಬೇಕು. ಇದು ಸುತ್ತಲು ಪ್ರೀತಿ ಮತ್ತು ಸಂತೋಷದ ವಾತಾವರಣವಿರುವಂತೆ ಮಾಡುತ್ತದೆ.

ಡಮರು

ಡಮರು

ಮಕ್ಕಳ ಕೋಣೆಯಲ್ಲಿ ಡಮರನ್ನು ಇಡಬೇಕು. ಅದು ಮಕ್ಕಳಿಗೆ ಜೀವನದ ಬಗ್ಗೆ ಹೆಚ್ಚು ಏಕಾಗ್ರತೆ ಬೆಳೆಯುವಂತೆ ಮಾಡುತ್ತದೆ. ಅಲ್ಲದೆ ಮಕ್ಕಳನ್ನು ಸದಾ ರಕ್ಷಿಸುತ್ತದೆ.

ತ್ರಿಶೂಲ

ತ್ರಿಶೂಲ

ಬೆಳ್ಳಿ ಅಥವಾ ತಾಮ್ರದ ತ್ರಿಶೂಲವನ್ನು ಮನೆಯ ಪ್ರವೇಶಾಂಗಣದಲ್ಲಿ ಇಡಬೇಕು. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸದಂತೆ ಕಾಯುತ್ತದೆ. ಜೊತೆಗೆ ಮನೆಯ ತೇಜಸ್ಸನ್ನು ಹೆಚ್ಚಿಸುತ್ತದೆ.

ಅಚ್ಚರಿಯ ಲೋಕ: ಕನಸಿನಲ್ಲಿ ತ್ರಿಶೂಲ, ಶಿವಲಿಂಗ ಕಂಡುಬಂದರೆ...

English summary

Lord shiva blessings: Bring these to your home during Shravan Month

The Shravan or Savan month in the Hindu calendar is dedicated to Lord Shiva. During this month, it is believed that worshipping Lord Shiva is 108 times more powerful than worshipping on normal days. Here's a quick fix solution for you. Out of these 8 things, you can place as many as you can in your house or puja room as per the instructions given in the following slides...