For Quick Alerts
ALLOW NOTIFICATIONS  
For Daily Alerts

ಶಿವ ಮತ್ತು ಶ್ರಾವಣ ತಿಂಗಳು: ನೀವು ತಿಳಿಯಲೇಬೇಕಾಗಿರುವ ಆಸಕ್ತಿಕರ ಸಂಗತಿಗಳು

|

ಲೋಕಕಲ್ಯಾಣಕ್ಕಾಗಿ ಅವತರಿಸುವ ದೇವ ಶಿವ. ಸೃಷ್ಟಿಯ ಒಳಿತಿಗಾಗಿ ಹಾಗೂ ಅದರ ರಕ್ಷಣೆಗಾಗಿ ವಿಷವನ್ನು ಕುಡಿದು ತನ್ನ ಕಂಠದಲ್ಲಿಯೇ ಇರಿಸಿಕೊಂಡ ಮಹಾನ್ ದೇವ ಶಿವ. ಸರಳ ಹಾಗೂ ಸತ್ಯಕ್ಕೆ ಹೆಚ್ಚಿನ ಮಾನ್ಯತೆ ನೀಡುವ ದೇವರು ಎಂದು ಕರೆಯಲಾಗುತ್ತದೆ. ಆಷಾಢ ಮಾಸದ ಬಳಿಕ ಬರುವ ಶ್ರಾವಣ ತಿಂಗಳು ಅತ್ಯಂತ ಪವಿತ್ರ ಹಾಗೂ ಹಬ್ಬಗಳನ್ನು ಒಳಗೊಂಡಿರುವ ತಿಂಗಳು ಎಂದು ಹೇಳಲಾಗುವುದು. ಅದರಲ್ಲೂ ಶ್ರಾವಣ ಮಾಸವು ಶಿವನಿಗೆ ಅತ್ಯಂತ ಶ್ರೇಷ್ಠವಾದ ತಿಂಗಳು. ಶ್ರಾವಣ ಮಾಸವನ್ನು ಶಿವನಿಗೆ ಸಮರ್ಪಿಸಲಾಗುವುದು ಎಂದು ಹೇಳಲಾಗುತ್ತದೆ.

ಹಿಂದೂ ಪಂಚಾಂಗದ ಪ್ರಕಾರ ಚಾತುರ್ಮಾಸ ಮುಗಿದ ಬಳಿಕ ಬರುವ ಐದನೇ ತಿಂಗಳು ಶ್ರಾವಣ. ಶ್ರಾವಣ ತಿಂಗಳಲ್ಲಿ ಪ್ರಕೃತಿಯು ಹಸನಾಗಿರುತ್ತದೆ. ಹಿಂದೂಗಳ ಪಂಚಭೂತ ದೈವಗಳು ಹಾಗೂ ಪ್ರಕೃತಿ ದೇವತೆಯು ಅತ್ಯಂತ ಸಂತೋಷ ಹಾಗೂ ಸಮತೋಲನವನ್ನು ಹೊಂದುವಂತಹ ಸಮಯವಾಗಿರುತ್ತದೆ. ಈ ಸಮಯದಲ್ಲಿ ದೇವತೆಗಳ ಆರಾಧನೆ ಮಾಡಿದರೆ ದೇವತೆಗಳು ಹೆಚ್ಚು ಸಂತುಷ್ಟರಾಗುತ್ತಾರೆ. ಜೊತೆಗೆ ಭಕ್ತರ ಸಮಸ್ಯೆಗಳನ್ನು ಬಗೆಹರಿಸಿ ಸಂತೋಷ ಹಾಗೂ ಸುಖವನ್ನು ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ಇದೆ.

ಆಷಾಢ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರವಣ ಎನ್ನುವ ನಕ್ಷತ್ರವು ಆಕಾಶವನ್ನು ಆಳುತ್ತದೆ. ಆದ್ದರಿಂದಲೇ ಈ ಮಾಸಕ್ಕೆ ಶ್ರಾವಣ ಮಾಸ ಎಂದು ಕರೆಯಲಾಯಿತು. ಈ ಮಾಸದಲ್ಲಿ ವಿವಿಧ ಹಬ್ಬ ಹರಿದಿನಗಳು ಹಾಗೂ ವ್ರತ ಆಚರಣೆಗಳು ಜರುಗುತ್ತವೆ. ಪ್ರತಿಯೊಂದು ಧಾರ್ಮಿಕ ಆಚರಣೆಗಳು ಹತ್ಯಂತ ಮಹತ್ವ ಹಾಗೂ ಪವಿತ್ರತೆಯಿಂದ ಕೂಡಿದೆ. ಅವುಗಳ ಆಚರಣೆ ಹಾಗೂ ಭಕ್ತಿಯಿಂದ ಆರಾಧನೆ ಮಾಡುವುದರಿಂದ ದೇವರು ನಮ್ಮ ಜೀವನಕ್ಕೆ ಯಶಸ್ಸು ಹಾಗೂ ನೆಮ್ಮದಿಯನ್ನು ತಂದುಕೊಡುವನು. ಈ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಬಹುತೇಕವಾಗಿ ಶಿವ-ಪಾರ್ವತಿ ದೇವರಿಗೆ ಮೀಸಲಾಗಿರುತ್ತದೆ.

ಈ ಮಾಸದಲ್ಲಿ ಬರುವ ಶ್ರಾವಣ ಸೋಮವಾರ ಹಾಗೂ ಮಂಗಳ ವಾರ ಕೈಗೊಳ್ಳುವ ಮಂಗಳ ಗೌರಿ ವ್ರತವು ಶಿವ ಹಾಗೂ ಪಾರ್ವತಿಯ ಆಶೀರ್ವಾದ ಪಡೆಯಲು ಕೈಗೊಳ್ಳಲಾಗುವುದು. ಸೋಮವಾರ ವ್ರತವನ್ನು ಕೈಗೊಳ್ಳುವುದರ ಮೂಲಕ ಕುಟುಂಬದ ಸದಸ್ಯರಿಗೆ ಒಳಿತಾಗಲಿ, ಕುಟುಂಬದ ಶ್ರೇಯಸ್ಸು ಉತ್ತಮವಾಗಿರಲಿ ಎಂದು ಕೈಗೊಳ್ಳಲಾಗುವುದು. ಅದೇ ಮಂಗಳವಾರ ಮಹಿಳೆಯರು ಉಪವಾಸ ಹಾಗೂ ವ್ರತವನ್ನು ಕೈಗೊಳ್ಳುವುದರ ಮೂಲಕ ಪತಿಯ ಆಯುಷ್ಯ, ಆರೋಗ್ಯ ಹಾಗೂ ಶ್ರೇಯಸ್ಸು ಹೆಚ್ಚುತ್ತಾ ಸಾಗಲಿ ಎಂದು ಕೋರಿಕೊಳ್ಳುವುದರ ಮೂಲಕ ವ್ರತವನ್ನು ಕೈಗೊಳ್ಳುತ್ತಾರೆ. ಇದು ಪರಸ್ಪರ ಪತಿ-ಪತ್ನಿಯ ನಡುವೆ ಪ್ರೀತಿ ಹಾಗೂ ಗೌರವನ್ನು ತಂದುಕೊಡುವುದು ಎಂದು ಹೇಳಲಾಗುತ್ತದೆ.

ಶ್ರಾವಣದ ಅರ್ಥ

ಶ್ರಾವಣದ ಅರ್ಥ ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸು ಎಂದಾಗಿದೆ. ಈ ಸಮಯದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಜನರು ಆಲಿಸಬೇಕು ಎಂದೇ ಇದರರ್ಥವಾಗಿದೆ. ಶಿವನ ಕುರಿತಾದ ಸ್ತ್ರೋತ್ರಗಳ ಪಠನೆ, ಶಿವನ ಧ್ಯಾನ ಮೊದಲಾದ ಸತ್ಕಾರ್ಯಗಳನ್ನು ಈ ತಿಂಗಳಿನಲ್ಲಿ ಭಕ್ತರು ನಡೆಸಬೇಕು.

ಭಕ್ತನು ಸುಖ-ಭೋಗವನ್ನು ತೊರೆಯಬೇಕು

ಶ್ರಾವಣ ಮಾಸದಲ್ಲಿ ಶಿವ ಪೂಜೆಯನ್ನು ನಡೆಸಿದರೆ ಅವರು ನಮ್ಮ ಸಂಕಷ್ಟವನ್ನು ಆಲಿಸಿ ನಮಗೆ ಅಭಯವನ್ನು ನೀಡುತ್ತಾರೆ ಎಂದು ಹೇಳಲಾಗಿದೆ. ಶ್ರಾವಣ ಮಾಸದಲ್ಲಿ 30 ದಿನಗಳ ಕಾಲ ಭಕ್ತನು ಎಲ್ಲಾ ಸುಖ ಭೋಗಗಳನ್ನು ತೊರೆದು ಉಪವಾಸವನ್ನು ಕೈಗೊಳ್ಳಬೇಕು.

ಶ್ರಾವಣ ಸೋಮವಾರ

ಪವಿತ್ರವಾದ ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಸೋಮವಾರವನ್ನು ಶ್ರಾವಣ ಸೋಮವಾರ ಎಂದು ಕರೆಯಲಾಗುವುದು. ಅಂದು ಶಿವನಿಗೆ ಸಂಬಂಧಿಸಿದಂತೆ ವಿಶೇಷ ಆರಾಧನೆ ಹಾಗೂ ವ್ರತವನ್ನು ಕೈಗೊಳ್ಳಲಾಗುವುದು. ಶಿವನ ದೇವಾಲಯಗಳಲ್ಲಿ ಈ ದಿನವನ್ನು ಅತ್ಯಂತ ಶ್ರೇಷ್ಠ ಹಾಗೂ ವಿಶೇಷ ದಿನ ಎಂದು ಪರಿಗಣಿಸುತ್ತಾರೆ. ಶಿವಲಿಂಗ ಹಾಗೂ ಶಿವನ ಮೂರ್ತಿಯ ತಲೆಯ ಮೇಲ್ಭಾಗದಲ್ಲಿ ಧರ್ಮನಾತ್ರ ಎನ್ನುವುದರಲ್ಲಿ ಶುದ್ಧ ನೀರನ್ನು ತುಂಬಿ ತೂಗುಬಿಡಲಾಗುವುದು. ಅದು ಲಿಂಗ ಹಾಗೂ ಮೂರ್ತಿಯ ಮೇಲೆ ಆ ನೀರು ನಿಧಾನವಾಗಿ ದಿನ ಪೂರ್ತಿ ಬೀಳುತ್ತಿರುತ್ತದೆ. ಭಕ್ತರು ಬಿಲ್ವ ಪತ್ರೆ ಹಾಗೂ ಹೂವುಗಳನ್ನು ದೇವರಿಗೆ ಅರ್ಪಿಸುವುದರ ಮೂಲಕ ವ್ರತವನ್ನು ಕೈಗೊಳ್ಳುತ್ತಾರೆ. ಸೂರ್ಯಾಸ್ತ ಆಗುವ ತನಕ ಉಪವಾಸವನ್ನು ಕೈಗೊಳ್ಳುತ್ತಾರೆ. ಜೊತೆಗೆ ದಿನ ಪೂರ್ತಿ ನಂದಾದೀಪ ಬೆಳಗುತ್ತಿರುವಂತೆ ನೋಡಿಕೊಳ್ಳಲಾಗುವುದು.

ದಂತಕಥೆಯ ಪ್ರಕಾರ

ದಂತಕಥೆ ಹಾಗೂ ಪುರಾಣ ಇತಿಹಾಸಗಳ ಪ್ರಕಾರ ಸಮುದ್ರ ಮಂಥನವು ಶ್ರಾವಣ ತಿಂಗಳಲ್ಲಿ ನಡೆಯಿತು. ಆಗ ಹದಿನಾಲ್ಕು ಬಗೆಯ ಮಾಣಿಕ್ಯಗಳು ಹೊರಬಂದವು. ಅದರಲ್ಲಿ ಹದಿಮೂರನೆಯದು ಹಾಲಹಲ(ವಿಷ) ಆಗಿತ್ತು. ಆಗ ಆ ವಿಷವು ಯಾರಿಗೂ ವಿಪತ್ತನ್ನು ತರಬಾರದು ಎಂದು ಶಿವನು ಕುಡಿದು ತನ್ನ ಕಂಠದಲ್ಲಿ ಇರಿಸಿಕೊಂಡನು. ಭಯಂಕರವಾದ ಆ ವಿಷವು ಶಿವನ ಕತ್ತನ್ನು ನೀಲಿ ಬಣ್ಣಕ್ಕೆ ತಿರುಗುವಂತೆ ಮಾಡಿತು. ಆದ್ದರಿಂದಲೇ ಶಿವನಿಗೆ ನೀಲಕಂಠ ಎಂಬ ಹೆಸರು ಬಂತು ಎನ್ನಲಾಗುವುದು.

ಚಂದ್ರನು ಶಿವನ ಮುಡಿ ಏರಿದನು

ವಿಷದ ಬಲವಾದ ಪರಿಣಾಮವನ್ನು ಕಡಿಮೆ ಮಾಡಲು ಶಿವನು ಅರ್ಧ ಚಂದ್ರನನ್ನು ತನ್ನ ತಲೆಯ ಮೇಲೆ ಧರಿಸಿದ್ದನು. ಎಲ್ಲಾ ದೇವರುಗಳು ನಂತರ ಶಿವನಿಗೆ ಗಂಗಾ ನೀರನ್ನು ಶಿವನಿಗೆ ಅರ್ಪಿಸಲು ಪ್ರಾರಂಭಿಸಿದರು. ಅಂದಿನಿಂದಲೇ ಶ್ರಾವಣ ಮಾಸ ಸಂಭವಿಸಿತು. ಭಕ್ತರು ಶಿವನಿಗೆ ಈ ತಿಂಗಳಲ್ಲಿ ಗಂಗಾ ನೀರನ್ನು ಎರೆಯುವುದರ ಮೂಲಕ ಭಕ್ತಿಯನ್ನು ಮೆರೆಯುವರು ಎಂದು ಹೇಳಲಾಗುವುದು.

ರುದ್ರಾಕ್ಷಿಯನ್ನು ಧರಿಸುವುದು ಶುಭ

ಶ್ರಾವಣ ತಿಂಗಳಲ್ಲಿ ರುದ್ರಾಕ್ಷಿಯ ಹಾರ ಹಾಗೂ ಕಿವಿ ಓಲೆಯನ್ನು ಧರಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುವುದು. ಶ್ರಾವಣ ಮಾಸದ ಸೋಮವಾರ ವ್ರತ ಕೈಗೊಳ್ಳುವುದು, ರುದ್ರಾಕ್ಷಿಯ ಹಾರ ಧರಿಸುವುದು ಅತ್ಯಂತ ಶ್ರೇಷ್ಠವಾದದ್ದು. ಈ ವಾರದ ವ್ರತವನ್ನು ಅತ್ಯಂತ ಸಂಯಮದಿಂದ ಆಚರಿಸಬೇಕು. ಇತರ ತಿಂಗಳಲ್ಲಿ ಬರುವ ಸೋಮವಾರಗಳಿಗಿಂತ ಈ ತಿಂಗಳ ಸೋಮವಾರ ಅತ್ಯಂತ ಶ್ರೇಷ್ಠವಾದದ್ದು. ಈ ವಾರದಂದು ಉಪವಾಸ ಹಾಗೂ ವ್ರತವನ್ನು ಕೈಗೊಂಡರೆ ಶಿವನ ಪ್ರೀತಿಗೆ ಒಳಗಾಗುತ್ತಾರೆ. ಪುಣ್ಯ ಪ್ರಾಪ್ತಿಯಾಗುವುದರ ಜೊತೆಗೆ ಎಲ್ಲಾ ಬಗೆಯ ಇಷ್ಟಾರ್ಥಗಳು ನೆರವೇರುವುದು ಎನ್ನಲಾಗುವುದು.

ಶ್ರಾವಣ ಮಾಸದಲ್ಲಿ ತಪ್ಪದೆ ಮಾಡಬೇಕಾದ ಸಂಗತಿಗಳು

ಶ್ರಾವಣ ಮಾಸದಲ್ಲಿ ಶಿವನ ವ್ರತ ಕೈಗೊಂಡಾಗ ರುದ್ರಾಕ್ಷಿ ಹಾರವನ್ನು ಧರಿಸಬೇಕು. ಜಪಕ್ಕೆ ರುದ್ರಾಕ್ಷಿ ಮಾಲೆಯನ್ನು ಬಳಸಬೇಕು. ಶಿವನಿಗೆ ವಿಭೂತಿಯನ್ನು ಅರ್ಪಿಸಿ. ನೀವು ಹಣೆಯ ಮೇಲೆ ವಿಭೂತಿಯನ್ನು ಇರಿಸಿಕೊಳ್ಳಬೇಕು. ಶಿವನಿಗೆ ಪತ್ರೆ ಎಲೆಯನ್ನು ಅರ್ಪಿಸಲು ಮರೆಯ ಬಾರದು. ಹಾಲು, ಮೊಸರು, ಬೆಲ್ಲ, ಜೇನುತುಪ್ಪ ಬಾಳೆ ಹಣ್ಣುಗಳಿಂದ ಮಿಶ್ರಣ ಗೊಂಡ ಪಂಚಾಮೃತವನ್ನು ದೇವರಿಗೆ ಅರ್ಪಿಸಬೇಕು. ಶಿವ ಚಾಲಿಸ ಹಾಗೂ ಮಂತ್ರವನ್ನು ಪಠಿಸುವುದರ ಮೂಲಕ ಆರತಿಯನ್ನು ಬೆಳಗಬೇಕು. ಮಹಾ ಮೃತ್ಯುಂಜಯ ಮಂತ್ರ ಜಪಿಸುವುದರ ಮೂಲಕ ಜೀವನವು ದೀರ್ಘ ಹಾಗೂ ಸಂತೋಷದಿಂದ ಕೂಡಿರುತ್ತದೆ. ಅವಿವಾಹಿತ ಮಹಿಳೆಯರು ಸೋಮವಾರದಂದು ಉಪವಾಸ ವ್ರತ ಕೈಗೊಂಡು ಶಿವನ ಆರಾಧನೆ ಮಾಡುವುದರಿಂದ ಉತ್ತಮ ಗುಣವನ್ನು ಹೊಂದಿರುವ ಗಂಡು ಪತಿಯಾಗಿ ಸಿಗುತ್ತಾನೆ ಎನ್ನಲಾಗುತ್ತದೆ.

ಶಿವನ ಹೆಸರಿನಲ್ಲಿ ವಿಶೇಷತೆ

ಶಿವನಿಗೆ ಸೋಮಶೇಖರ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿವನ ತಲೆಯ ಮೇಲೆ ಚಂದ್ರನು ಇರುವುದರಿಂದ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಿಂದ ಆರಂಭವಾಗುವ ಸೋಮವಾರದ ವ್ರತವನ್ನು ಕೆಲವರು ಕಾರ್ತಿಕ ಸೋಮವಾರದ ವರೆಗೂ ಆಚರಿಸುತ್ತಾರೆ ಎನ್ನಲಾಗುವುದು. ಅದು ನವೆಂಬರ್ ತಿಂಗಳವರೆಗೆ ಇರುತ್ತದೆ ಎಂದು ಹೇಳಲಾಗುವುದು. ಈ ವ್ರತದ ಬಗ್ಗೆ ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ ಎಂದು ಹೇಳಲಾಗುವುದು.

ಗಮನಿಸಬೇಕಾದ ಕೆಲವು ಸಂಗತಿಗಳು

ಶ್ರಾವಣ ಮಾಸದ ಸೋಮವಾರ ವ್ರತದಂದು ಮೊದಲು ಸ್ನಾನ ಮಾಡಿ ಶುಭ ಮತ್ತು ಕೃಪೆಯ ಆಶಯಕ್ಕಾಗಿ ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿ. ಪಂಚ ಅಮೃತ ಮತ್ತು ಇತರ ಆಹ್ಲಾದಕರ ಪದಾರ್ಥಗಳಿಮದ ಶಿವನಿಗೆ ಅಭಿಷೇಕ ಮಾಡಬೇಕು. ನಂತರ ಬಿಲ್ವ ಪತ್ರೆ ಹಾಗೂ ಹೂವುಗಳಿಮದ ಅಲಂಕರಿಸಿ. ಹಗಲಿನಲ್ಲಿ ಯಾವುದೇ ಘನ ಆಹಾರವನ್ನು ಸೇವಿಸಬಾರದು. ಹಾಲು, ಮಜ್ಜಿಗೆ, ಹಣ್ಣಿನ ರಸ ಮತ್ತು ಹಣ್ಣುಗಳನ್ನು ಸೇವಿಸಬಹುದು. ಕೇವಲ ಶುದ್ಧ ನೀರನ್ನು ಕುಡಿಯುವುದರ ಮೂಲಕವೂ ವ್ರತವನ್ನು ಕೈಗೊಳ್ಳಬಹುದು. ಸೂರ್ಯಾಸ್ತದ ನಂತರ ಶಿವನಿಗೆ ಪೂಜೆ ಸಲ್ಲಿಸಿ ಅಥವಾ ಪ್ರಾರ್ಥನೆ ಮಾಡುವುದರ ಮೂಲಕ ಉಪವಾಸವನ್ನು ಮುರಿಯಬಹುದು. ಅಂದು ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸಬಾರದು. ನಿಮ್ಮ ಉಪವಾಸವು ಮಧ್ಯರಾತ್ರಿ 12 ರಿಂದ ಪ್ರಾರಂಭವಾಗಿ ಸೋಮವಾರದ ಸೂರ್ಯಾಸ್ತದ ವರೆಗೆ ಇರಬೇಕು.

ಕೆಲವು ತರಕಾರಿಗಳನ್ನು ತಿನ್ನಬಾರದು

ಶ್ರಾವಣ ಮಾಸದಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು. ಅವುಗಳಲ್ಲಿ ಬದನೆಕಾಯಿಯೂ ಒಂದು. ಈ ತಿಂಗಳಲ್ಲಿ ಇದನ್ನು ತಿನ್ನುವುದರಿಂದ ದುರಾದೃಷ್ಟ ಉಂಟಾಗುವುದು ಎನ್ನಲಾಗುತ್ತದೆ. ನಮ್ಮ ಗ್ರಂಥದಲ್ಲಿ ಬದನೆಕಾಯಿಯನ್ನು ಅಶುದ್ಧ ತರಕಾರಿ ಎಂದು ಪರಿಗಣಿಸಲಾಗಿದೆ. ಅಲ್ಲದೆ ಮಳೆಗಾಲದ ಸಮಯದಲ್ಲಿ ಬದನೆ ಕಾಯಿಯಲ್ಲೂ ಕೂಡ ಕೀಟಗಳು ಮತ್ತು ಸೂಕ್ಷ್ಮಜೀವಿಗಳು ಸಾಕಷ್ಟು ಕಂಡು ಬರುವ ಕಾರಣ ವೃತಧಾರಿಗಳು ಬದನೆಯನ್ನು ಸೇವಿಸಬಾರದು. ಅಷ್ಟೇ ಅಲ್ಲದೆ ಶ್ರಾವಣ ಮಾಸದಲ್ಲಿ ಹಾಲನ್ನು ಕುಡಿಯುವ ಮುನ್ನ ಅದನ್ನು ಕುದಿಸಿ ಆರಿಸಿ ಕುಡಿಯಬೇಕೆಂಬ ನಿಯಮ ಇದೆ. ಅಂತೆಯೇ ಹಸಿ ಹಾಲನ್ನು ಸೇವಿಸಬಾರದು ಎಂಬುದು ಶ್ರಾವಣ ಮಾಸದ ನಿಯಮವಾಗಿದೆ.

ಈ ನಡತೆಯನ್ನು ತೋರಬಾರದು

ಶಾಸ್ತ್ರಗಳಲ್ಲಿ ವಿವರಿಸಿರುವಂತೆ ಈ ಸಮಯದಲ್ಲಿ ಶಿವಪುರಾಣದಲ್ಲಿ ತಿಳಿಸಿರುವ ನಿಯಮಗಳನ್ನು ಭಕ್ತರು ಅನುಸರಿಸಬೇಕು. ಈ ಮಾಸದಲ್ಲಿ ವಿಶೇಷವಾಗಿ ಮಾಂಸಹಾರ ಮತ್ತು ಮದ್ಯವನ್ನು ತ್ಯಜಿಸಬೇಕು ಅಂತೆಯೇ ನಕಾರಾತ್ಮಕ ಚಿಂತನೆಗಳನ್ನು ಮನಸ್ಸಿನಿಂದ ದೂರಾಗಿಸಬೇಕು. ಈ ತಿಂಗಳಿನಲ್ಲಿ ಸಸ್ಯಹಾರವನ್ನು ಮಾತ್ರ ಸೇವಿಸಬೇಕು.

ಶ್ರಾವಣ ಮಾಸದ ವಿಶೇಷ ದಿನಗಳು

ಶ್ರಾವಣ ತಿಂಗಳಲ್ಲಿ ಪ್ರತಿ ದಿನವೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ತನ್ನದೇ ಆದ ಆಚರಣೆಯನ್ನು ಹೊಂದಿದೆ. ಸೋಮವಾರ: ಶಿವ ಪೂಜೆಯ ದಿನ. ಮಂಗಳವಾರ: ಗೌರಿಯವರನ್ನು ಪ್ರತಿ ಮನೆಯಲ್ಲೂ, ಮಹಿಳೆಯರು ತಮ್ಮ ಕುಟುಂಬದ ಉತ್ತಮ ಆರೋಗ್ಯಕ್ಕಾಗಿ ಪೂಜಿಸುತ್ತಾರೆ. ಬುಧವಾರ: ವಿಷ್ಣು ಅಥವಾ ಕೃಷ್ಣನ ರೂಪವಾದ ವಿಠಲಕ್ಕೆ ಸಮರ್ಪಿಸಲಾಗಿದೆ. ಗುರುವಾರ: ಬುದ್ಧ ಮತ್ತು ಗುರುಗಳನ್ನು ಪೂಜಿಸುವ ದಿನಗಳು. ಶುಕ್ರವಾರ: ಪ್ರತಿ ಮನೆ ಲಕ್ಷ್ಮಿ ಮತ್ತು ತುಳಸಿಯನ್ನು ಸಲಾಗುತ್ತದೆ.

ಸಂಪತ್ತು ಶನಿವಾರ

ಶ್ರಾವಣ ತಿಂಗಳಲ್ಲಿ ಪ್ರತಿ ಶನಿವಾರ: ಶನಿ ದೇವನಿಗಾಗಿ ಮೀಸಲಾಗಿದೆ. ಅಂದು ಶನಿ ದೇವನಿಗೆ ಪೂಜಿಸಲಾಗುವುದು. ಸಂಪತ್ತನ್ನು ಪಡೆಯುವ ವಸ್ತುವಿನೊಂದಿಗೆ ಇದನ್ನು ಶ್ರಾವಣ ಶನಿವಾರ ಎಂದೂ ಕರೆಯುತ್ತಾರೆ. ಈ ದಿನಗಳನ್ನು ಸಂಪತ್ತು ಶನಿವಾರ ಎಂದು ಕರೆಯಲಾಗುತ್ತದೆ. ಭಾನುವಾರಗಳು: ಸೂರ್ಯ ದೇವರನ್ನು ಆರಾಧಿಸುವುದು ಎಂದರ್ಥ. ವೈದಿಕ ಕಾಲದಲ್ಲಿ ಸೂರ್ಯನ ಆರಾಧನೆಯು ಸಾಮಾನ್ಯವಾಗಿತ್ತು ಮತ್ತು ಈಗಲೂ ಅದು ಹಾಗೆ ನಡೆದುಕೊಂಡು ಬಂದಿದೆ. ವಿಶೇಷವಾಗಿ ಶ್ರಾವಣದಲ್ಲಿ ಪ್ರತಿ ಭಾನುವಾರ ಸೂರ್ಯನನ್ನು ತಪ್ಪದೆ ಪೂಜಿಸಲಾಗುತ್ತದೆ.

ಶ್ರಾವಣ ತಿಂಗಳಲ್ಲಿ ಹಬ್ಬಗಳು

ನಾಗ-ಪಂಚಮಿ, ಕಲ್ಕ್ಯವ-ತಾರಾ, ಪುತ್ರದೈಕಡಶಿ, ಹಿಂದೋಲಾ- ಅಥವಾ ಸ್ವಿಂಗಿಂಗ್, ನಾರಾಲಿ ಪೂರ್ಣಿಮಾ, ಶ್ರಾವಣ ಪೂರ್ಣಿಮಾ, ಪವಿತ್ರೋಪನ, ರಕ್ಷಾ ಬಂಧನ್, ವರ ಲಕ್ಷ್ಮಿ ವ್ರತ, ರಿಷಿ ಪಂಚಮಿ, ಓಂ ಓಂ ಗೋವತ್ಸ ಮತ್ತು ಬಹುಲಾ, ಸೀತಾಲ ಸಪ್ತಮಿ, ಜನ್ಮಾಷ್ಟಮಿ, ಅಜೈಕಡಸಿ, ಪಿಥೋರಿ, ಪೋಲಾ ಎನ್ನುವ ವಿವಿಧ ಹಬ್ಬಗಳ ಆಚರಣೆಯನ್ನು ಮಾಡಲಾಗುವುದು.

English summary

Lord Shiva and Shravan month:Interesting facts you must know

The month of Shravan is the fifth month of the Hindu calender beginning from Chaitra, and is the most auspicious month of the Chaturmas. On Purnima or fullmoon day, or during the course of the month the star 'Shravan' rules the sky, hence the month is called Shravan. This month is spread out with innumerably religious festivals and ceremonies and almost all the days of this month are auspicious.
Story first published: Tuesday, July 23, 2019, 13:16 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X