For Quick Alerts
ALLOW NOTIFICATIONS  
For Daily Alerts

ಶಿವ ಮತ್ತು ಶನಿ ದೇವರ ಸಂಬಂಧ ಮನುಷ್ಯ ಜೀವನದ ಆಧಾರ ಸ್ತಂಭಗಳು

|

ಮೂರು ಲೋಕವನ್ನು ಕಾಯುವ ಶಿವ ಮತ್ತು ನಮ್ಮ ಪಾಪಗಳ ಲೆಕ್ಕಾಚಾರವನ್ನು ಕಲೆ ಹಾಕಿ ನಮಗೆ ಶಿಕ್ಷೆಯನ್ನು ವಿಧಿಸುವ ಶನಿ ದೇವರು ಅವಿನಾಭಾವವಾದ ಕೆಲವೊಂದು ವಿಶಿಷ್ಟತೆಗಳನ್ನು ಹೊಂದಿದ್ದಾರೆ. ಶಿವ ಭಕ್ತರನ್ನು ಸ್ಪರ್ಶಿಸಲೂ ಸ್ವತಃ ಯಮ ರಾಜ ಕೂಡ ಯೋಚಿಸುತ್ತಾರೆಯಂತೆ!, ಏಕೆಂದರೆ ಶಿವನ ನಾಮ ಸ್ಮರಣೆಯನ್ನು ಮಾಡುವವರು ಅಂತೆಯೇ ಶಿವನನ್ನು ಪೂಜಿಸುವ ಭಕ್ತರು ಶಿವನಿಗೆ ಅತಿ ಪ್ರಿಯರಾದವರು.

Lord Shiva and Shani Dev Relationship

ಅವರ ನೋವು ಶಿವನನ್ನು ಕಾಡುತ್ತದೆ, ಅವರ ಕಣ್ಣೀರು ಭಗವಂತನ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ. ಎಷ್ಟೋ ಕಥೆಗಳಲ್ಲಿ ಯಮ ದೇವರನ್ನೇ ಸ್ವತಃ ಶಿವನೇ ಕಟ್ಟಿ ಹಾಕಿದ ಸಂಗತಿಗಳಿವೆ. ಅದೇ ರೀತಿ ಶನಿ ದೇವ ಕೂಡ ಶಿವ ಭಕ್ತರನ್ನು ಮುಟ್ಟುವ ಧೈರ್ಯವನ್ನು ಯೋಚಿಸಿಯೇ ಮಾಡುತ್ತಾರೆ.

ಶನಿ ದೇವರು

ಶನಿ ದೇವರು

ಸ್ಕಂದ ಪುರಾಣದ ಕಾಶಿ ವಿಭಾಗವು ಶನಿ ದೇವರ ಮೂಲದ ಕುರಿತು ತಿಳಿಸುತ್ತದೆ. ಸೂರ್ಯ ದೇವ ಮತ್ತು ದೇವತೆ ಚಾಯಾ ದಂಪತಿಗಳ ಪುತ್ರನೇ ಶನಿ. ಯಮ ರಾಜನಿಗೆ ಶನಿ ದೇವರು ದೊಡ್ಡಣ್ಣ. ಇಬ್ಬರೂ ಸಹೋದರರನ್ನು ವಿಶ್ವದಲ್ಲಿ ಧರ್ಮ ಮತ್ತು ಶಾಂತಿಯ ಮೇಲ್ವಿಚಾರಣೆಗಾಗಿ ನೇಮಿಸಲಾಯಿತು. ಯಮನು ವ್ಯಕ್ತಿಯ ಮರಣದ ನಂತರ ಪಾಪಗಳನ್ನು ಲೆಕ್ಕಾಚಾರ ಮಾಡಿ ಶಿಕ್ಷೆ ವಿಧಿಸಿದರೆ ಶನಿಯು ಮನುಷ್ಯನು ಭೂಮಿಯಲ್ಲಿರುವಾಗಲೇ ಆತನ ಪಾಪವನ್ನು ಲೆಕ್ಕಾಚಾರ ಮಾಡಿ ಅತನಿಗೆ ಶಿಕ್ಷೆ ವಿಧಿಸುತ್ತಾರೆ.

ಶನಿ ದೇವರು

ಶನಿ ದೇವರು

ಮರಣದ ನಂತರದ ಶಿಕ್ಷೆಯ ಅನುಭವಿಸುವಿಕೆ ಒಂದು ರೀತಿಯ ಕಲ್ಪನೆಯಾಗಿದ್ದರೆ ಬದುಕಿದ್ದಾಗಲೇ ಜೀವನದಲ್ಲಿ ಬಂದೊದಗುವ ಕಷ್ಟವನ್ನು ಅನುಭವಿಸುವುದು ಅದು ಭಯವನ್ನುಂಟು ಮಾಡುತ್ತದೆ. ಯಮನಿಗಿಂತಲೂ ಜನರು ಶನಿ ದೇವರಿಗೆ ಭಯಪಡುತ್ತಾರೆ. ನವಗ್ರಹಗಳಲ್ಲಿ ಒಂಭತ್ತನೆಯ ಸ್ಥಾನವನ್ನು ಶನಿಯು ಅಲಂಕರಿಸಿದ್ದಾರೆ. ಶನಿಯ ನೇರ ನೆರಳು ವಿಪರೀತ ಹಾನಿಕರ ಎಂದು ಕೂಡ ಹೇಳಲಾಗುತ್ತದೆ. ಆದ್ದರಿಂದಲೇ ಶನಿ ಮಹಾದೋಷ ಸಂದರ್ಭದಲ್ಲಿ ವ್ಯಕ್ತಿಯು ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಒಳಗಾಗುತ್ತಾನೆ.

Most Read: ಶನಿ ದೇವರಿಗೆ ತನ್ನ ಪತ್ನಿಯೇ ಶಾಪ ನೀಡಿದಳು! ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ

ಶನಿ ದೇವರನ್ನು ಪೂಜಿಸದ ಹೊರತು ಕಷ್ಟಗಳಿಗೆ ಹೊರಬರಲು ಸಾಧ್ಯವಿಲ್ಲ

ಶನಿ ದೇವರನ್ನು ಪೂಜಿಸದ ಹೊರತು ಕಷ್ಟಗಳಿಗೆ ಹೊರಬರಲು ಸಾಧ್ಯವಿಲ್ಲ

ಶನಿಯು ಭಕ್ತರನ್ನು ನಾನಾ ವಿಧದಲ್ಲಿ ಕಷ್ಟಗಳಿಗೆ ಒಳಪಡಿಸುತ್ತಾರೆ. ಸಿರಿವಂತನನ್ನು ಬಡವನನ್ನಾಗಿಸುತ್ತಾನೆ, ಸುಖ ಪುರುಷನಿಗೆ ಕಷ್ಟವನ್ನು ಒಡ್ಡುತ್ತಾರೆ, ಅಂತೂ ಈ ಕಷ್ಟಗಳ ಗುರಿ ಸೀಮಾತೀತವಾಗಿರುತ್ತದೆ ಎಂದು ಹೇಳಬಹುದು. ಅಹಂಕಾರಿಗಳಿಗೆ ಶನಿಯು ವೈರಿಯಾಗಿದ್ದಾರೆ. ಶನಿ ದೇವರನ್ನು ಪೂಜಿಸದ ಹೊರತು ಕಷ್ಟಗಳಿಗೆ ಹೊರಬರಲು ಸಾಧ್ಯವಿಲ್ಲ ಎಂಬುದು ಶನಿ ಭಕ್ತರ ನಂಬಿಕೆಯಾಗಿದೆ.

ಶಿವ ಮತ್ತು ಶನಿಯ ಸಂಬಂಧ

ಶಿವ ಮತ್ತು ಶನಿಯ ಸಂಬಂಧ

ಇಂದಿನ ಲೇಖನದಲ್ಲಿ ನಾವು ಶಿವ ಮತ್ತು ಶನಿಯ ಸಂಬಂಧದ ಕುರಿತು ಹೇಳಲಿದ್ದೇವೆ. ಮಹಾರಾಷ್ಟ್ರದ ಶನಿ ಸಿಂಗಾಪೂರದ ಕಥೆ ಇದಾಗಿದೆ. ಈ ಭಾಗದಲ್ಲಿ ಹಿಂದೆ ಜನರು ಮನೆಯ ಬಾಗಿಲುಗಳನ್ನು ಮುಚ್ಚದೆಯೇ ನಿದ್ರಿಸುತ್ತಿದ್ದರು. ಸುಖ, ಸಂಪತ್ತು ತಾಂಡವವಾಡುತ್ತಿತ್ತು. ಸ್ವಯಂ ಆಗಿ ನೆಲೆಗೊಂಡ ಶನಿ ದೇವರ ಮೂರ್ತಿ ಆ ಊರಿನಲ್ಲಿತ್ತು. ಶನಿಯು ಶಿವನ ಬಾವನಾಗಿದ್ದಾರೆ ಕಾಳಿಮಾತೆಯನ್ನು ಶಿವನು ವಿವಾಹವಾಗಿದ್ದರೆ ಕಾಳಿ ಮಾತೆಯು ಶನಿ ಮತ್ತು ಯಮ ಧರ್ಮರಾಜನ ಸಹೋದರಿಯಾಗಿದ್ದಾರೆ. ಶನಿ ದೇವರು ಪಾಪ ಪುಣ್ಯಗಳ ಲೆಕ್ಕಾಚಾರವನ್ನು ಮಾಡಿ ಮನುಷ್ಯನಿಗೆ ಕಷ್ಟವನ್ನು ನೀಡುತ್ತಾರೆ, ಅಂತೆಯೇ ಶಿವ ಕೂಡ ಕಷ್ಟವೆಂದು ಬಂದ ಭಕ್ತರನ್ನು ತಳ್ಳಿ ಹಾಕುವುದಿಲ್ಲ. ಅವರನ್ನು ಪೊರೆದು ಕಾಪಾಡುತ್ತಾರೆ.

Most Read: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!

ತಮ್ಮ ವೈರಾಗ್ಯ ನೀತಿ

ತಮ್ಮ ವೈರಾಗ್ಯ ನೀತಿ

ಶಿವನು ತಮ್ಮ ವೈರಾಗ್ಯ ನೀತಿಯನ್ನು ಪಾಲಿಸಿಕೊಂಡು ಸುಖ ಭೋಗಗಳ ಬಂಧನದಿಂದ ತಪ್ಪಿಸಿಕೊಳ್ಳುತ್ತಾರೆ. ಅದೇ ರೀತಿ ಮಾನವನು ಇಂತಹ ಸುಖ ಭೋಗಗಳಿಗೆ ಹೆಚ್ಚು ಒಳಗಾಗಬಾರದೆಂದೇ ಶನಿಯು ಆಗಾಗ್ಗೆ ಕಷ್ಟವನ್ನು ನೀಡುತ್ತಿರುತ್ತಾರೆ. ಶನಿ ಮತ್ತು ಶಿವ ದೇವರ ಬಾಂಧವ್ಯ ಕಲಿಯುಗದ ಈ ಸಮಯದಲ್ಲಿ ಹೆಚ್ಚು ಮೌಲ್ಯಯುತವಾಗಿರುವಂತಹ್ದು. ಮೌಲ್ಯಗಳನ್ನು ಸೃಷ್ಟಿಸಿ ಅದನ್ನು ಕಾಪಾಡುವ ಕೆಲಸವನ್ನು ಶಿವ ಮತ್ತು ಶನಿ ದೇವರು ಮಾಡುತ್ತಿದ್ದಾರೆ.

ನಾವು ನಮ್ಮ ಹೃದಯವನ್ನು ಮೊದಲು ಬದಲಾಯಿಸಬೇಕು

ನಾವು ನಮ್ಮ ಹೃದಯವನ್ನು ಮೊದಲು ಬದಲಾಯಿಸಬೇಕು

ಯಾವುದೇ ಬದಲಾವಣೆಯನ್ನು ಮಾಡುವುದಿದ್ದರೂ ನಾವು ನಮ್ಮ ಹೃದಯವನ್ನು ಮೊದಲು ಬದಲಾಯಿಸಬೇಕು ನಂತರ ವಿಶ್ವದಲ್ಲಿ ಆ ಪರಿವರ್ತನೆಯನ್ನು ಕಾಣಬೇಕು. ಅದಕ್ಕಾಗಿಯೇ ಶನಿ ಮತ್ತು ಶಿವ ದೇವರು ಭಕ್ತರನ್ನು ಕಷ್ಟಕ್ಕೆ ಒಳಪಡಿಸಿ ಅವರನ್ನು ಸಾಣೆ ಹಿಡಿಸಿ ತಯಾರಿ ಮಾಡಿ ನಂತರವೇ ಸುಖವನ್ನು ನೀಡುತ್ತಾರೆ. ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೆ ಸಮತೋಲನವುಳ್ಳ ಜೀವನನ್ನು ಮಾನವನು ನಡೆಸಲಿ ಎಂಬುದೇ ಇದರ ಉದ್ದೇಶವಾಗಿದೆ.

English summary

Lord Shiva and Shani Dev Relationship

In Hinduism Shani Dev is largely revered and considered a significant part of people’s daily life, mainly due to his association with evil foreboding. Unlike Lord Shiva, a huge number of Shani Dev’s followers are influenced by the desire to ensure they do not ire the deity and attempt to perform pujas to propitiate the God.Almost all ancient religions of the past had this element of having to propitiate the unknown forces that affected their lives significantly.
X
Desktop Bottom Promotion