For Quick Alerts
ALLOW NOTIFICATIONS  
For Daily Alerts

ಸಂಕಷ್ಟ ನಿವಾರಣೆಗೆ ಇಂತಹ ದೇವರುಗಳ ಮುಂದೆ ದೀಪ ಹಚ್ಚಿಡಿ

|

ಸಂಕಟ ಬಂದಾಗ ವೆಂಕಟ ರಮಣ ಎನ್ನುವ ಮಾತೇ ಇದೆ. ನಾವು ಅತಿಯಾಗಿ ಖುಷಿಯಲ್ಲಿ ಅಥವಾ ಸುಖದಲ್ಲಿ ಇರುವಾಗ ಖಂಡಿತವಾಗಿಯೂ ನಮಗೆ ದೇವರ ನೆನಪು ಬರುವುದಿಲ್ಲ. ಆದರೆ ಸಂಕಷ್ಟಗಳ ಸರಮಾಲೆಗಳು ಬಂದಾಗ ಮೊದಲಿಗೆ ನೆನಪಿಗೆ ಬರುವುದು ದೇವರು. ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸಂಕಷ್ಟದ ಸಮಯದಲ್ಲಿ ನಾವು ದೇವರ ಮೊರೆ ಹೋಗುತ್ತೇವೆ.

ಹೆಚ್ಚಿನವರು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದು ಅಲ್ಲಿ ತಮ್ಮ ಮನದ ಇಂಗಿತ ಹೇಳಿಕೊಳ್ಳುವರು. ಇನ್ನು ಕೆಲವರು ಮನದಲ್ಲೇ ಏನಾದರೂ ಹರಕೆ ಹೊತ್ತುಕೊಳ್ಳುವರು. ತಮ್ಮ ಬೇಡಿಕೆಯು ಈಡೇರಿದರೆ ಆಗ ಹರಕೆ ತೀರಿಸುವರು. ದೇವರಲ್ಲಿ ನಮ್ಮ ದುಃಖವನ್ನು ಯಾವಾಗಲೂ ಹೋಗಿ ಹೇಳಿಕೊಳ್ಳುತ್ತೇವೆ. ಆದರೆ ನಾವು ಯಾವತ್ತೂ ಸಂತೋಷವಾಗಿದ್ದಾಗ ದೇವರ ಬಳಿ ಹೋಗಿದ್ದೇವೆಯಾ? ಇಲ್ಲ ಎನ್ನುವ ಉತ್ತರವೇ ಬರುವುದು. ಆದರೆ ಇಲ್ಲಿ ನಿಮಗೆ ಸಂಕಷ್ಟ ಬಂದಾಗ ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ. ಯಾಕೆಂದರೆ ದೇವರು ಎಲ್ಲಾ ಕಡೆಯಲ್ಲೂ ಇರುತ್ತಾನೆ. ಆತನನ್ನು ಒಲಿಸಿಕೊಳ್ಳಲು ನೀವು ಒಂದು ದೀಪ ಹಚ್ಚಿಟ್ಟರೆ ಸಾಕು. ಈ ಬಗ್ಗೆ ನೀವು ಮತ್ತಷ್ಟು ಓದುತ್ತಾ ಸಾಗಿ...

ದೀಪ ಹಚ್ಚುವುದು

ದೀಪ ಹಚ್ಚುವುದು

ದೇವರ ಮುಂದೆ ದೀಪ ಹಚ್ಚದೆ ಯಾವುದೇ ರೀತಿಯ ಪ್ರಾರ್ಥನೆಯು ಈಡೇರದು ಎಂದು ಹೇಳಲಾಗುತ್ತದೆ. ಅದಾಗ್ಯೂ, ದೇವರ ಮುಂದೆ ಯಾವ ದೀಪ ಹಚ್ಚಬೇಕು ಮತ್ತು ಹೇಗೆ ಹಚ್ಚಬೇಕು ಎಂದು ನಿಮಗೆ ತಿಳಿದಿದೆಯಾ? ಇಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಅನಾರೋಗ್ಯವನ್ನು ನೀವು ದೂರವಿಡಿ

ಅನಾರೋಗ್ಯವನ್ನು ನೀವು ದೂರವಿಡಿ

ರೋಗವನ್ನು ದೂರವಿಡಬೇಕಾದರೆ ಅಥವಾ ನೀವು ದೀರ್ಘಕಾಲದಿಂದ ಬಳಲುತ್ತಿರುವ ರೋಗದಿಂದ ಮುಕ್ತಿ ಪಡೆಯಬೇಕು ಎಂದು ಆಗಿದ್ದರೆ ಆಗ ನೀವು ಪ್ರತಿ ನಿತ್ಯವು ಸೂರ್ಯ ದೇವರ ಫೋಟೊದ ಮುಂದೆ ದೀಪ ಹಚ್ಚಬೇಕು.

ಜೀವನ ಸಂಗಾತಿಗಾಗಿ

ಜೀವನ ಸಂಗಾತಿಗಾಗಿ

ನೀವು ಮದುವೆಯಾಗಲು ಬಯಸುತ್ತಲಿದ್ದರೆ ಅಥವಾ ವೈವಾಹಿಕ ಜೀವನದ ಸಂಬಂಧವನ್ನು ಸುಧಾರಣೆ ಮಾಡಬೇಕು ಎಂದು ಬಯಸಿದ್ದರೆ ಆಗ ನೀವು ಪ್ರತೀ ದಿನ ಸಂಜೆ ವೇಳೆ ರಾಧಾ ಮತ್ತು ಕೃಷ್ಣ ದೇವರ ಫೋಟೊದ ಮುಂದೆ ದೀಪ ಹಚ್ಚಿ.

ದುಸ್ವಪ್ನಗಳ ದೂರ ಮಾಡಲು

ದುಸ್ವಪ್ನಗಳ ದೂರ ಮಾಡಲು

ನಿಮಗೆ ಪದೇ ಪದೇ ದುಸ್ವಪ್ನಗಳು ಕಾಡುತ್ತಲಿದ್ದರೆ ಆಗ ನೀವು ಪಂಚಮುಖಿ ಹನುಮಂತ ದೇವರ ಫೋಟೊದ ಮುಂದೆ ದೀಪ ಹಚ್ಚಿ. ಇದರಿಂದ ನೀವು ರಾತ್ರಿ ಒಳ್ಳೆಯ ಮತ್ತು ಭೀತಿಯಿಲ್ಲದೆ ನಿದ್ರೆ ಮಾಡಬಹುದು.

ಆರ್ಥಿಕತೆ ಸುಧಾರಣೆಗೆ

ಆರ್ಥಿಕತೆ ಸುಧಾರಣೆಗೆ

ನೀವು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಇದ್ದರೆ ಆಗ ನೀವು ಮನೆಯ ಉತ್ತರ ಭಾಗದಲ್ಲಿ ಕುಬೇರ ದೇವರ ಫೋಟೊವನ್ನು ಇಟ್ಟು ಅಲ್ಲಿ ಪ್ರತಿನಿತ್ಯ ದೀಪ ಹಚ್ಚಬೇಕು. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುವುದು. ಆರ್ಥಿಕ ಪರಿಸ್ಥಿತಿಯು ಸುಧಾರಣೆ ಆಗುವ ತನಕ ಹೀಗೆ ಮಾಡಿ.

ಉದ್ಯೋಗದ ಕಡೆ

ಉದ್ಯೋಗದ ಕಡೆ

ನಿಮ್ಮ ಮನೆ ಹಾಗೂ ಉದ್ಯೋಗದ ಕಡೆಯಲ್ಲಿ ಗಣಪತಿ ದೇವರ ವಿಗ್ರಹವನ್ನು ಇಟ್ಟುಬಿಡಿ. ನೀವು ಪ್ರತಿನಿತ್ಯ ಉದ್ಯೋಗದ ಕಡೆ ತೆರಳಿದಾಗ ಮತ್ತು ಮನೆಗೆ ಬಂದಾಗ ಗಣಪತಿ ಮೂರ್ತಿ ಮುಂದೆ ಒಂದು ದೀಪ ಹಚ್ಚಿಬಿಡಿ. ಇದರಿಂದ ಮನೆ ಹಾಗೂ ಕಚೇರಿಯಲ್ಲಿ ಶಾಂತಿ ಹಾಗೂ ಸಮೃದ್ಧಿಯು ಉಂಟಾಗುವುದು.

ಮನೆಯಲ್ಲಿನ ಕಲಹ ನಿವಾರಣೆಗೆ

ಮನೆಯಲ್ಲಿನ ಕಲಹ ನಿವಾರಣೆಗೆ

ಮನೆಯಲ್ಲಿ ನಿಮಗೆ ಹೆಚ್ಚಿನ ಶಾಂತಿ ಬೇಕಿದ್ದರೆ ಮತ್ತು ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದ್ದರೆ ಆಗ ನೀವು ಪ್ರತಿನಿತ್ಯವು ರಾಮ ದರ್ಬಾರ್ ಫೋಟೊ(ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ಇರುವ ಫೋಟೊ) ಮುಂದೆ ದೀಪ ಹಚ್ಚಿಬಿಡಿ. ದೀಪ ಹಚ್ಚುವ ವೇಳೆ ನೀವು ಮಾಡಬೇಕಾದ ಮತ್ತು ಮಾಡಲೇಬಾರದ ಕೆಲವು ವಿಚಾರಗಳು

ಬತ್ತಿಗಳು

ಬತ್ತಿಗಳು

ನೀವು ದೀಪ ಹಚ್ಚುವ ವೇಳೆ ಒಂದು ಬತ್ತಿ ಬಳಸಬೇಡಿ. ಯಾವಾಗಲೂ ಎರಡು ಅಥವಾ ಗರಿಷ್ಠ ಮೂರು ಬತ್ತಿಗಳನ್ನು ಬಳಸಿಕೊಳ್ಳಿ. ಮೂರು ಬತ್ತಿಯು ದೇವಿ ದುರ್ಗೆ, ಲಕ್ಷ್ಮೀ ಮತ್ತು ಸರಸ್ವತಿಯ ಪ್ರತೀಕವಾಗಿದೆ.

ಒಂದು ಬಟ್ಟೆ ಇಡಿ

ಒಂದು ಬಟ್ಟೆ ಇಡಿ

ದೀಪ ಹಚ್ಚುವ ವೇಳೆ ಹೆಚ್ಚಾಗಿ ನಮ್ಮ ಕೈಯ ಮೇಲೆ ಎಣ್ಣೆಯು ಇರುವುದು. ಇದನ್ನು ನೀವು ಬಟ್ಟೆ ಅಥವಾ ತಲೆಗೆ ಒರೆಸಿಕೊಳ್ಳಬೇಡಿ. ಇದರಿಂದ ನೀವು ಸಂಪತ್ತನ್ನು ಕಳೆದುಕೊಳ್ಳುವಿರಿ. ಇದರ ಬದಲಿಗೆ ಎಣ್ಣೆ ಒರಸಲು ನೀವು ಒಂದು ತುಂಡು ಬಟ್ಟೆಯನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ.

 ತಲೆ ಮುಚ್ಚಿಕೊಳ್ಳಬೇಡಿ

ತಲೆ ಮುಚ್ಚಿಕೊಳ್ಳಬೇಡಿ

ನೀವು ಸ್ನಾನ ಮಾಡಿಕೊಂಡು ಬಂದು ನೇರವಾಗಿ ದೀಪ ಹಚ್ಚುತ್ತಲಿದ್ದರೆ ಆಗ ನೀವು ದೀಪ ಹಚ್ಚಿಕೊಳ್ಳುವ ಮೊದಲು ತಲೆಗೆ ಕಟ್ಟಿಕೊಂಡಿರುವ ಟವೆಲ್ ನ್ನು ತೆಗೆಯಲು ಮರೆಯಬೇಡಿ. ನೀವು ದೀಪ ಹಚ್ಚುವ ವೇಳೆ ಹತ್ತಿ ಬಟ್ಟೆಯನ್ನು ಧರಿಸಿದರೆ ತುಂಬಾ ಒಳ್ಳೆಯದು.

 ಎಣ್ಣೆ

ಎಣ್ಣೆ

ದೀಪ ಹಚ್ಚಲು ಯಾವಾಗಲೂ ಸಾಸಿವೆ ಎಣ್ಣೆ ಅಥವಾ ತುಪ್ಪ ಬಳಸಿಕೊಳ್ಳಿ. ನೆಲಗಡಲೆ ಅಥವಾ ಸೂರ್ಯಕಾಂತಿ ಎಣ್ಣೆ ಬಳಸುವುದರಿಂದ ದೊಡ್ಡ ಮಟ್ಟದಲ್ಲಿ ಆರ್ಥಿಕ ಸಂಕಷ್ಟವು ತಲೆದೋರಬಹುದು. ದೀಪ ಹಚ್ಚಲು ಯಾವುದು ಪ್ರಸಕ್ತವಾದ ಸ್ಥಳ ಎಂದು ನೋಡುವ....

ಉತ್ತರ ದಿಕ್ಕು

ಉತ್ತರ ದಿಕ್ಕು

ಮನೆಯ ಉತ್ತರ ಭಾಗದಲ್ಲಿ ದೀಪವನ್ನು ಹಚ್ಚಿಟ್ಟರೆ ಆಗ ಆ ಮನೆಗೆ ಎಂಟು ದಿಕ್ಕುಗಳಿಂದ ಸಂಪತ್ತು ಅಥವಾ ಲಕ್ಷ್ಮೀ ದೇವಿಯಿಂದ ಅಷ್ಟೈಶ್ವರ್ಯವು ಸಿಗುವುದು ಎಂದು ಹೇಳಲಾಗುತ್ತದೆ. ಆತ ಆರ್ಥಿಕವಾಗಿ ಸ್ಥಿರವಾಗಿ ಇರುವನು.

ಪೂರ್ವ

ಪೂರ್ವ

ನೀವು ಪ್ರತಿನಿತ್ಯವು ಮನೆಯ ಪೂರ್ವ ದಿಕ್ಕಿನಲ್ಲಿ ದೀಪ ಹಚ್ಚಿಟ್ಟರೆ ಆಗ ನಿಮಗೆ ಆರೋಗ್ಯ ಹಾಗೂ ಮನಸ್ಸಿಗೆ ಶಾಂತಿಯು ಸಿಗುವುದು. ಇದರಿಂದ ಜೀವನವು ಸರಾಗವಾಗಿ ಸಾಗುವುದು.

ಪಶ್ಚಿಮ

ಪಶ್ಚಿಮ

ಮನೆಯ ಪಶ್ಚಿಮ ದಿಕ್ಕಿನಲ್ಲಿ ದೀಪ ಹಚ್ಚಿಟ್ಟರೆ ಆಗ ಎಲ್ಲಾ ರೀತಿಯ ಸಾಲದಿಂದ ನೀವು ಮುಕ್ತರಾಗಲಿದ್ದೀರಿ ಮತ್ತು ಶತ್ರುಗಳ ವಿರುದ್ಧ ಗೆಲ್ಲಲು ನಿಮಗೆ ನೆರವಾಗುವುದು. ಇದು ವ್ಯಾಪಾರ ಮತ್ತು ವೈಯಕ್ತಿಕ ಶತ್ರುತ್ವವನ್ನು ನಿವಾರಣೆ ಮಾಡುವುದು.

ದಕ್ಷಿಣ

ದಕ್ಷಿಣ

ಮನೆಯ ದಕ್ಷಿಣ ದಿಕ್ಕಿನಲ್ಲಿ ಯಾರೂ ದೀಪವನ್ನು ಹಚ್ಚಬಾರದು ಎಂದು ಹೇಳಲಾಗುತ್ತದೆ. ಇದರಿಂದ ಆರ್ಥಿಕವಾಗಿ ನಷ್ಟವಾಗುವುದು ಎಂದು ಹೇಳಲಾಗುತ್ತದೆ. ಅನಾರೋಗ್ಯ ಮತ್ತು ಮನೆಯ ಸದಸ್ಯರಲ್ಲಿ ಖಿನ್ನತೆಯು ಕಾಣಿಸಿಕೊಳ್ಳುವಂತಹ ಸಾಧ್ಯತೆಯು ಇರುವುದು. ಇದರಿಂದ ಈ ದಿಕ್ಕನ್ನು ಆದಷ್ಟು ಮಟ್ಟಿಗೆ ಕಡೆಗಣಿಸಿ.

English summary

Light an lamp in front of these Gods to get rid of all your problems!

While some of us are strong believers, a majority of us only turn to God when we are in any sort of trouble --- financial, emotional or physical. And apart from praying to God directly, there are many other ways to please him and lighting an earthern lamp (diya) in front of him is one such way. Read on to know more..
X
Desktop Bottom Promotion