For Quick Alerts
ALLOW NOTIFICATIONS  
For Daily Alerts

  ಕಾಲಭೈರವನ ಅನುಗ್ರಹಕ್ಕಾಗಿ ಭೈರವ ಮಂತ್ರಗಳು

  By Jaya subramanya
  |

  ಕಾಲಭೈರವ ಅವತಾರವು ಶಿವನ ಭಯಭೀತಗೊಳಿಸುವ ಅವತಾವೆಂದೇ ಪರಿಗಣಿಸಲಾಗಿದೆ. ಈ ರೂಪದಲ್ಲಿ ಶಿವನು ಕ್ರೋಧದಿಂದ ಕೂಡಿರುತ್ತಾರೆ ಮತ್ತು ಎದುರಿಗೆ ಬಂದವರನ್ನು ದಹಿಸಿಬಿಡುತ್ತಾರೇನೋ ಎಂಬಂತಹ ರೀತಿಯಲ್ಲಿ ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.

  ಕಾಲಭೈರವ ಎಂಬ ಹೆಸರಿನಲ್ಲಿ ಎರಡು ಅರ್ಥಗಳು ಅಡಗಿದ್ದು ಒಂದು ಭಯ ಭೀತಗೊಳಿಸುವ ದೇವರು ಭೈರವನ ಅರ್ಥವನ್ನು ಕಂಡುಕೊಂಡರೆ ಇನ್ನೊಂದೆಡೆ ಕಾಲ ಅಂದರೆ ಕಪ್ಪಿನ ಬಣ್ಣದ ದೇವರ ಅವತಾರವೆಂಬುದಾಗಿ ನಾವು ಗ್ರಹಿಸಿಕೊಳ್ಳಬಹುದಾಗಿದೆ. ಅಂತೆಯೇ ಸಮಯ ಮತ್ತು ಅದರ ಕಳೆದುಹೋಗುವಿಕೆಯನ್ನು ಕೂಡ ಕಾಲ ನಮಗೆ ತಿಳಿಸುತ್ತದೆ.

  ಭೈರವ ಅಷ್ಟಮಿಯನ್ನು ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸಲಾಗುತ್ತದೆ. ಶಿವನು ಕಾಲಭೈರವನ ಅವತಾರವನ್ನು ಎತ್ತಿರುವುದು ಈ ಸಮಯಲ್ಲಿ ಎಂಬುದಾಗಿ ನಂಬಲಾಗಿದೆ. ಇದಕ್ಕನುಗುಣವಾಗಿ ಕಾಲಭೈರವನ ಭಕ್ತರು ವ್ರತವನ್ನು ಆಚರಿಸುತ್ತಾರೆ ಅಂತೆಯೇ ಭೈರವನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಸಲುವಾಗಿ ನಾವು ನಿಮಗೆ ಕಾಲ ಭೈರವ ಮಂತ್ರವನ್ನು ಪ್ರಸ್ತುಪಡಿಸುತ್ತಿದ್ದೇವೆ. ದೇವಸ್ಥಾನಕ್ಕೆ ಹೋಗಿ ಈ ಮಂತ್ರವನ್ನು ಪಠಿಸಿದರೆ ಉತ್ತಮ ಫಲ ದೊರೆಯುತ್ತದೆ.  

  Lord Kaal Bhairav

  ಕಾಲ ಭೈರವ ಅಷ್ಟಕಂ

  ದೇವ ರಾಜ ಸೇವಾ ಮಾನ ಪಾವಂಗರಿ ಪಂಕಜಂ

  ವ್ಯಾಲ ಯಗ್ನ ಶುತ್ರ ಮಿಂದು ಶೇಖರಂ ಕೃಪಾಕರಂ

  ನಾರದಾದಿ ಯೋಗಿ ವೃಂದ ವಂದಿತ ದಿಗಂಬರಂ

  ಕಾಶಿಕಾ ಪುರಾಧಿ ನಾಥ ಕಾಲಭೈರವ ಭಜೇ

  ಭಾನು ಕೋಟಿ ಭಾಸ್ವರಂ, ಭವಬ್ದಿ ತಾರಕಂ ಪರಂ

  ನೀಲಕಂಠ ಮೀಪ್ಸಿದಾರ್ತ ದಾಯಕಂ ತ್ರಿಲೋಚನಂ

  ಕಾಲಕಾಲ ಮಂಬುಜಾಕ್ಷ ಮಾಕ್ಷ ಶೂಲ ಮಕ್ಷರಂ

  ಕಾಶಿಕಾ ಪುರಾಧಿ ನಾದ ಕಾಲಭೈರಂ ಭಜೇ

  ಶೂಲ ತಂಗ ಪಾಶ ದಂಡ ಪಾನಿ ಮಧಿ ಕಾರಣಂ

  ಶ್ಯಾಮ ಕಾಯ ಮಧಿ ದೇವಮಕ್ಷರಂ ನಿರಾಮಯಂ

  ಭೀಮ ವಿಕ್ರಮಂ ಪ್ರಭುಂ ವಿಚಿತ್ರ ತಾಂಡವ ಪ್ರಿಯಂ

  ಕಾಶೀಕಾ ಪುರಾಧಿ ನಾದ ಕಾಲಭೈರವಂ ಭಜೇ

  ಭಕ್ತಿ ಮುಕ್ತಿ ದಾಯಕಂ ಪ್ರಶಾಂತ ಚಾರು ವಿಗ್ರಹಂ

  ಭಕ್ತ ವತ್ಸಲಂ ಶಿವಂ ಸಮಸ್ತ ಲೋಕ ವಿಗ್ರಹಂ

  ವಿನಿಕ್ವನಾನ್ ಮಂಗೋನಾ ಹೇಮ ಕಿಂಕಿಣಿ ಲಾಸ್ತ ಕಟೀಮ್

  ಕಾಶೀಕಾ ಪುರಾಧಿ ನಾಧ ಕಾಲಭೈರವಂ ಭಜೇ

  ಧರ್ಮ ಸೇತು ಪಾಲಕಂ ತವಾ ಧರ್ಮ ಮಾರ್ಗ ನಾಸಕಂ

  ಕರ್ಮ ಪಾಶ ಮೋಚಕಂ ಸುಶ್ರಾಮ ದಾಯಕಂ ವಿಭುಂ

  ಸ್ವರ್ಣ ವರ್ಣ ಸೇಶಾ ಪಾಶ ಶೋಭಿತಾಂಗ ಮಂಡಲಂ

  ಕಾಶಿಕಾ ಪುರಾಧಿ ನಾಥ ಕಾಲಭೈರವಂ ಭಜೇ

  ಧರ್ಮ ಸೇತು ಪಾಲಕಂ, ತವಾ ಧರ್ಮ ಮಾರ್ಗ ನಾಶಕಂ

  ಕರ್ಮ ಪಾಶ ಮೋಚಕಂ ಸುಶ್ರಾಮ ದಾಯಕಂ ವಿಭುಂ

  ಸ್ವರ್ಣ ವರ್ಣ ಶೇಷ ಪಾಶ ಶೋಭಿತಾಂಗ ಮಂಡಲಂ

  ಕಾಶಿಕಾ ಪುರಾಧಿ ನಾಥ ಕಾಲಭೈರವಂ ಭಜೇ

  ರತ್ನ ಪಾದುಕಾ ಪ್ರಬಾಭಿರಾಮ ಪಾದಯುಗಮುಖಂ

  ನಿತ್ಯಮ್ವಿತೀಯಮಿಷ್ಟ ದೈವತಮ್ ನಿರಂಜನಂ

  ಮೃತ್ಯು ದರ್ಪ ನಾಶನಂ ಕರಾಳ ದಮ್‌ಶ್ಟ್ರ ಮೋಕ್ಷಣಂ

  ಕಾಶಿಕಾ ಪುರಾಧಿ ನಾಥ ಕಾಲಭೈರಂ ಭಜೇ

  ಅಟ್ಟಹಾಸ ಬಿನ್ನ ಪದ್ಮ ಜಂಡ ಕೋಶ ಸಂತತೀಮ್

  ದೃಷ್ಟಿ ಪದಾ ನಷ್ಟ ಪಾಪ ಜಲ ಮಾರ್ಗ ಸಾಶನಂ

  ಅಷ್ಟಸಿದ್ಧಿ ದಾಯಕಂ ಕಪಾಲ ಮಲ್ಲಿಕಾದ್ರಂ

  ಕಾಶಿಕಾ ಪುರಾಧಿ ನಾಥ ಕಾಲಭೈರವಂ ಭಜೇ

  ಭೂತ ಸಂಗ ನಾಯಕಂ ವಿಶಾಲ ಕೀರ್ತಿ ದಾಯಕಂ

  ಕಾಶಿ ವಾಸ ಲೋಕ ಪುಣ್ಯ ಪಾಪ ಶೋಧಕಂ ವಿಭುಂ

  ನೀತಿ ಮಾರ್ಗ ಕೋವಿಧಂ ಪುರಾತನಂ ಜಗತ್‌ಪತಿಂ

  ಕಾಶಿಕಾ ಪುರಾಧಿ ನಾಥ ಕಾಲಭೈರವಂ ಭಜೇ

  ಕಾಲಭೈರವಷ್ಟಕಂ ಪಾಠಂದಿ ಯೇ ಮನೋಹರಂ

  ಜ್ಞಾನ ಮುಕ್ತಿ ಸಾಧನಂ ವಿಚಿತ್ರ ಪುಣ್ಯ ವರ್ಧನಂ

  ಶೋಕ ಮೋಹ ದೈನ್ಯ ಲೋಪ ಕೋಪ ತಾಪ ನಾಶನಂ

  ತೇಯ ಪ್ರಣಯಂತಿ ಕಾಲಭೈರವಂಗಿರಿ ಸನ್ನಿಧಿಂ ಧ್ರುವಂ.

  ಅನುವಾದ

  ನಾನು ಕಾಲಭೈರವನನ್ನು ಕುರಿತು ಹಾಡುತ್ತೇನೆ ದೇವರನ್ನು ಪೂಜಿಸುತ್ತೇನೆ, ಕಾಶಿಯನ್ನು ಆಳುವ ದೇವನೇ ಇಂದ್ರನಿಂದ ಪೂಜಿತನಾಗಿರುವ ಕಮಲದ ಪಾದವನ್ನು ಹೊಂದಿದವರೇ, ಹಾವಿನಿಂದ ಮಾಡಿದ ಯಗ್ಯ ನೂಲನ್ನು ಹೊಂದಿದವರೇ, ಶಿರದಲ್ಲಿ ಚಂದ್ರನನ್ನು ಇರಿಸಿಕೊಂಡವರೇ, ದಯೆಯ ಮೂಲವೇ, ನಾರದ ಮತ್ತು ಇತರ ಋಷಿವರ್ಯರಿಂದ ಪೂಜಿತರಾದವರೇ ಇವರ ದಿರಿಸುಗಳೇ ದಿಕ್ಕುಗಳಾಗಿವೆ.

  ನಾನು ಕಾಲಭೈರವನ ಕುರಿತು ಹಾಡುತ್ತೇನೆ ಮತ್ತು ಅವರನ್ನು ಪೂಜಿಸುತ್ತೇನೆ ಕಾಶಿಯನ್ನು ಆಳುವ ದೇವನೇ, ಮಿಲಿಯಗಟ್ಟಲೆ ಸೂರ್ಯನ ಪ್ರಕಾಶಕ್ಕೆ ಸರಿಹೊಂದಿದವರೇ, ಜನ್ಮಜನ್ಮದ ಲೆಕ್ಕಾಚಾರಗಳನ್ನು ಬಲ್ಲವರೇ, ಸುಪ್ರೀಂ ಶಕ್ತಿಯನ್ನು ಪಡೆದುಕೊಂಡವರೇ, ನೀಲಕಂಠ, ನಮ್ಮ ಆಸೆಗಳನ್ನು ಈಡೇರಿಸುವವರೇ, ಮೂರು ಕಣ್ಣುಗಳನ್ನು ಹೊಂದಿದವರೇ, ಅಂತ್ಯದ ಸೂತ್ರಧಾರನೇ, ಕಮಲದಂತಹ ಕಣ್ಣುಗಳನ್ನು ಹೊಂದಿದವರೇ, ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡವರೇ ಅಮರ ದೇವನೇ

  ನಾನು ಕಾಲಭೈರವನ ಕುರಿತು ಹಾಡುತ್ತೇನೆ ಮತ್ತು ಅವರನ್ನು ಪೂಜಿಸುತ್ತೇನೆ ಕಾಶಿಯನ್ನು ಆಳುವ ದೇವನೇ, ತನ್ನ ಕೈಯಲ್ಲೇ ಶಿಕ್ಷಿಸುವ ದೇವನೇ, ಆರಂಭದ ಮೂಲವೇ, ಭಸ್ಮದಿಂದ ಕೂಡಿದ ದೇಹವನ್ನು ಹೊಂದಿದವರೇ, ರೋಗವನ್ನು ತಾಕದವರೇ, ಪ್ರಬಲರಾಗಿರಯವವರೇ, ದೇವಾನುದೇವರೇ, ತಾಂಡವ ನೃತ್ಯವನ್ನು ಮೆಚ್ಚಿವರೇ.

  ನಾನು ಕಾಲಭೈರವನ ಕುರಿತು ಹಾಡುತ್ತೇನೆ ಮತ್ತು ಅವರನ್ನು ಪೂಜಿಸುತ್ತೇನೆ ಕಾಶಿಯನ್ನು ಆಳುವ ದೇವನೇ, ಆಸೆಗಳು ಮತ್ತು ಮೋಕ್ಷವನ್ನು ನೆರವೇರಿಸುವವರೇ, ಆಕರ್ಷಕ ರೂಪವನ್ನು ಹೊಂದಿರುವವರೇ, ಭಕ್ತರನ್ನು ಪರಿಪಾಲಿಸುವವರೇ, ಲೋಕವನ್ನು ರೂಪಿಸುವ ಸೃಷ್ಟಿಕರ್ತನೇ, ಚಿನ್ನದ ಸಣ್ಣ ಗಂಟೆಗಳೊಂದಿಗೆ ಸೊಂಟದಲ್ಲಿ ದಾರವನ್ನು ಹೊಂದಿರುವವರೇ.

  ನಾನು ಕಾಲಭೈರವನ ಕುರಿತು ಹಾಡುತ್ತೇನೆ ಮತ್ತು ಅವರನ್ನು ಪೂಜಿಸುತ್ತೇನೆ ಕಾಶಿಯನ್ನು ಆಳುವ ದೇವನೇ, ಚಿನ್ನದಿಂದ ಮಾಡಿದ ಪಾದುಕೆಗಳನ್ನು ಧರಿಸಿದವರೇ, ಶಾಶ್ವತರಾಗಿರುವವರೇ, ಅಸ್ಪಷ್ಟರಾಗಿರುವವರೇ, ನಮ್ಮ ಕೋರಿಕೆಗಳನ್ನು ಈಡೇರಿಸುವವರೇ, ಅಪೇಕ್ಷೆಗಳೇ ಇಲ್ಲದವರೇ, ಮರಣವನ್ನು ಮಟ್ಟಹಾಕುವವರೇ, ತಮ್ಮ ಹಲ್ಲುಗಳಿಂದ ಆತ್ಮವನ್ನು ಮುಕ್ತಿಗೊಳಿಸುವವರೇ.

  ನಾನು ಕಾಲಭೈರವನ ಕುರಿತು ಹಾಡುತ್ತೇನೆ ಮತ್ತು ಅವರನ್ನು ಪೂಜಿಸುತ್ತೇನೆ ಕಾಶಿಯನ್ನು ಆಳುವ ದೇವನೇ, ಬಹ್ಮನು ರಚಿಸಿರುವ ಎಲ್ಲಾ ಅಭಿವ್ಯಕ್ತಿಗಳನ್ನು ನಾಶಪಡಿಸಲು ಘರ್ಜನೆಯನ್ನು ಹೊಂದಿರುವವರೇ, ಎಲ್ಲಾ ಪಾಪಗಳನ್ನು ನಾಶಪಡಿಸುವ ಮಹಾ ಮಹಿಮನೇ, ಶಕ್ತಿಯುತ ಆಡಳಿತಗಾರನೇ, ಎಂಟು ಶಕ್ತಿಗಳನ್ನು ದಯಪಾಲಿಸುವವರೇ, ತಲೆಬುರುಡೆಯ ಹಾರವನ್ನು ಧರಿಸಿದವರೇ

  ನಾನು ಕಾಲಭೈರವನ ಕುರಿತು ಹಾಡುತ್ತೇನೆ ಮತ್ತು ಅವರನ್ನು ಪೂಜಿಸುತ್ತೇನೆ ಕಾಶಿಯನ್ನು ಆಳುವ ದೇವನೇ, ಆತ್ಮಗಳ ನಾಯಕನೇ, ತಮ್ಮ ಆಶೀರ್ವಾದವನ್ನು ಭಕ್ತರ ಮೇಲೆ ಸುರಿಸುವವರೇ, ಕಾಶಿಯಲ್ಲಿರುವ ಜನರ ಪಾಪಗಳನ್ನು ನೀಗಿಸುವವರೇ, ದುಃಖಗಳನ್ನು ಹೋಗಲಾಡಿಸುವವರೇ, ಬ್ರಹ್ಮಾಂಡದ ನಿಯಂತ್ರಕರೇ, ಸರಿಯಾದ ದಾರಿಯನ್ನು ತೋರಿಸುವವರೇ,

  ಕಾಲಭೈರವನ ಈ ಎಂಟು ಪದ್ಯಗಳನ್ನು ಅಭ್ಯಸಿಸುವವರಿಗೆ ಜ್ಞಾನ ಮತ್ತು ವಿಮೋಚನೆಯ ಹಾದಿ ದೊರೆಯುತ್ತದೆ. ದುಃಖ, ಖಿನ್ನತೆ, ದುರಾಸೆ, ಕೋಪವನ್ನು ಇದು ದೂರಮಾಡುತ್ತದೆ. ಕಾಲಭೈರವನ ಚರಣಗಳಿಗೆ ಬಿದ್ದು ಎಲ್ಲಾ ದುಃಖಗಳನ್ನು ನೀಗಿಸಿಕೊಳ್ಳೋಣ.

  English summary

  Kaal Bhairav Mantra Benefits & Meaning

  Kala Bhairava is a fearsome form of Lord Shiva. It is said that Kala Bhairava was born out of Lord Shiva's anger. The name 'Kala Bhairava' has two meanings, both of which define the character of the terrifying deity. One meaning suggests that the word 'Kala' refers to the black or dark coloured appearance of Lord Kala Bhairava.
  Story first published: Monday, June 19, 2017, 23:45 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more