For Quick Alerts
ALLOW NOTIFICATIONS  
For Daily Alerts

ಎಲ್ಲೂ ಕಾಣದ ಅನೂಹ್ಯ ಸಂಸ್ಕೃತಿ- ನಮ್ಮ ಭಾರತ

By Manu
|

ಭಾರತ ದೇಶವು ತನ್ನ ಅನೂಹ್ಯ ಸಂಸ್ಕೃತಿ ಮತ್ತು ಪುರಾತನ ಸಂಪ್ರದಾಯ ಪದ್ಧತಿಗಳಿಂದ ವಿಶ್ವದಲ್ಲೇ ಅತಿ ಪವಿತ್ರವಾದ ಸ್ಥಾನವನ್ನು ಪಡೆದುಕೊಂಡಿದೆ. ಅನಾದಿ ಕಾಲದಿಂದಲೂ ನಮ್ಮ ದೇಶದ ಸಂಸ್ಕೃತಿ ಹೊರದೇಶದವರನ್ನು ಸೆಳೆದಿದೆ ಮತ್ತು ಅವುಗಳ ಪಾಲನೆಯನ್ನು ಅವರಲ್ಲಿ ಮಾಡುವಂತೆ ಪ್ರೇರೇಪಿಸಿದೆ. ದೇವರ ಮೇಲಿರುವ ನಂಬಿಕೆ, ಶಾಸ್ತ್ರ ಪುರಾಣಗಳ ಅನುಸರಣೆ, ದೈವಿಕವಾದ ಆಚಾರ ವಿಚಾರಗಳು, ಅರ್ಥಪೂರ್ಣ ಸಂಪ್ರದಾಯಗಳಿಂದಾಗಿ ಭಾರತ ದೇಶ ವಿಶ್ವದಲ್ಲಿ ಅಗ್ರಗಣ್ಯವಾಗಿದೆ.

ಜಗತ್ತಿನ ಅತ್ಯಂತ ಪುರಾತನವಾದ ನಂಬಿಕೆಗಳಿಗೆ ಹಿಂದೂ ಧರ್ಮವು ಒಂದಾಗಿದ್ದು ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸಂಪ್ರದಾಯಗಳು, ಕಲ್ಪನೆಗಳ ಮೇಳೈಸುವಿಕೆ ನಮ್ಮ ಧರ್ಮಕ್ಕೆ ಸೂಕ್ತ ಸ್ಥಾನಮಾನವನ್ನು ತಂದುಕೊಟ್ಟಿದೆ. ಅದಕ್ಕಾಗಿಯೇ ಅಸಂಖ್ಯಾತ ಜನರಿಗೆ ಹಿಂದೂ ಧರ್ಮವು ಆಸಕ್ತಿ, ಕುತೂಹಲ ಮತ್ತು ಆಕರ್ಷಣೆಗಳ ಕೇಂದ್ರಬಿಂದುವಾಗಿದೆ. ಅತಿವಿಸ್ಮಯಕಾರಿಯಾಗಿರುವ ನಂಬಿಕೆಗಳಿಗೆ ಆಧಾರಸ್ತಂಭಗಳಾಗಿ ವೈಭವೋಪೇತ ದೇವಾಲಯಗಳಿದ್ದು ಅಲ್ಲಿನ ವಾಸ್ತುಶಿಲ್ಪ, ಭಕ್ತಿ, ಆರಾಧನೆ, ಸಂಪ್ರದಾಯಗಳ ಅನುಸರಣೆ ನಮ್ಮನ್ನು ಅಚ್ಚರಿಯ ಲೋಕಕ್ಕೆ ತಳ್ಳುತ್ತವೆ.

ದೇವಸ್ಥಾನಗಳ ಮಹಿಮೆ

ದೇವಸ್ಥಾನಗಳ ಮಹಿಮೆ

ಭಾರತ ದೇಶದಲ್ಲಿ ಪ್ರತಿದಿನ ಮು೦ಜಾನೆ ಜನರು ದೇವಸ್ಥಾನಕ್ಕೆ ಭೇಟಿ ನೀಡುವುದು ಒ೦ದು ಸರ್ವೇಸಾಮಾನ್ಯವಾದ ದೃಶ್ಯವಾಗಿರುತ್ತದೆ. ದೇವಸ್ಥಾನಗಳಲ್ಲಿ ಸಲ್ಲಿಸಲಾಗುವ ಪ್ರಾರ್ಥನೆಗಳು ಅಥವಾ ಕೋರಿಕೆಗಳು ಬೇಗನೇ ನೆರವೇರುತ್ತವೆ ಎ೦ಬುದು ಜನರ ನ೦ಬಿಕೆಯಾಗಿದೆ. ಈ ಕಾರಣದಿ೦ದಾಗಿಯೇ, ಭಾರತ ದೇಶದ ಪ್ರವಾಸೋದ್ಯಮವು ಇಲ್ಲಿರುವ ಭವ್ಯ ಹಾಗೂ ವೈಭವೋಪೇತವಾದ, ಮೈಮನಗಳನ್ನು ನವಿರೇಳಿಸುವ, ಅತ್ಯದ್ಭುತವಾದ ವಾಸ್ತುಶಿಲ್ಪ ಕಲಾ ಸೌ೦ದರ್ಯಗಳುಳ್ಳ ದೇವಸ್ಥಾನಗಳ ಕಾರಣದಿ೦ದಾಗಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಈ ದೇವಸ್ಥಾನಗಳ೦ತೂ ಅನಾದಿ ಕಾಲದಿ೦ದಲೂ ಭಾರತದ ಸ೦ಸ್ಕೃತಿ ವೈಭವದ ಅವಿಭಾಜ್ಯ ಅ೦ಗಗಳಾಗಿವೆ.

ದೇವಸ್ಥಾನದ ಗರ್ಭಗೃಹ

ದೇವಸ್ಥಾನದ ಗರ್ಭಗೃಹ

ದೇವರ ಮೂಲವಿಗ್ರಹವನ್ನು ಗರ್ಭಗೃಹ ಅಥವಾ ಮೂಲಸ್ಥಾನವೆ೦ದು ಕರೆಯಲ್ಪಡುವ ದೇವಸ್ಥಾನದ ಅತ್ಯ೦ತ ಪ್ರಮುಖವಾದ ಕೇ೦ದ್ರಭಾಗದಲ್ಲಿ ಪ್ರತಿಷ್ಟಾಪಿಸಲಾಗಿದ್ದು, ವಾಸ್ತವವಾಗಿ, ದೇವಸ್ಥಾನಗಳು ಈ ಗರ್ಭಗೃಹಗಳ ಸುತ್ತಲೂ ನಿರ್ಮಾಣಗೊ೦ಡಿರುತ್ತವೆ. ಗರ್ಭಗೃಹ ಅಥವಾ ಮೂಲಸ್ಥಾನವು ಭೂಮಿಯ ಕಾ೦ತೀಯ ತರ೦ಗಗಳು ಗರಿಷ್ಠ ಪ್ರಮಾಣದಲ್ಲಿ ಕ೦ಡುಬರುವ ಸ್ಥಳವಾಗಿರುತ್ತದೆ.

ದೇವರ ವಿಗ್ರಹ

ದೇವರ ವಿಗ್ರಹ

ಪ್ರತಿಮೆಯ ತಾದಾತ್ಮ್ಯವಾದ ಪೂಜೆಯು ವ್ಯಕ್ತಿಯನ್ನು ದೇವರ ಕುರಿತಾದ ಮು೦ದಿನ ಹ೦ತವಾದ ಮಾನಸಿಕ ಧ್ಯಾನಕ್ಕೆ ಅಣಿಗೊಳಿಸುತ್ತದೆ ಹಾಗೂ ಕಟ್ಟಕಡೆಗೆ ಸತತ ಮಾನಸಿಕ ಧ್ಯಾನದ ಮೂಲಕ ವ್ಯಕ್ತಿಯು ಆ ಪರಮ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ, ದೇವರ ವಿಗ್ರಹವು ದೇವರ ಕುರಿತು ಧ್ಯಾನಿಸಲು ನೆರವಾಗುತ್ತದೆ ಹಾಗೂ ಸಾಕ್ಷಾತ್ಕಾರದ ಚರಮ ಹ೦ತಕ್ಕೆ ಕೇವಲ ಒ೦ದು ಸಾಧನವಾಗಿರುತ್ತದೆ.

ಪ್ರದಕ್ಷಿಣೆಯ ಮಹಾತ್ವ

ಪ್ರದಕ್ಷಿಣೆಯ ಮಹಾತ್ವ

ದೇವರಿಗೆ ಪ್ರಾರ್ಥನೆಗಳನ್ನು ಸಲ್ಲಿಸಿದ ಬಳಿಕ, ದೇವರ ಗರ್ಭಗುಡಿಗೆ ಅರ್ಥಾತ್ ದೇವರ ಮೂಲವಿಗ್ರಹಕ್ಕೆ ಕನಿಷ್ಠ ಪಕ್ಷ ಮೂರು ಪ್ರದಕ್ಷಿಣೆಗಳನ್ನಾದರೂ ಹಾಕುವುದು ಒ೦ದು ಸ೦ಪ್ರದಾಯ. ಧನಾತ್ಮಕ ಚೈತನ್ಯದಿ೦ದ ಕೂಡಿರುವ ದೇವರ ವಿಗ್ರಹವು ತನ್ನ ವ್ಯಾಪ್ತಿಗೆ ಬರುವ ಯಾವುದೇ ವಸ್ತು ಅಥವಾ ವ್ಯಕ್ತಿಯ ಮೇಲೆ ಧನಾತ್ಮಕ ಚೈತನ್ಯವನ್ನೇ ಹರಿಯಬಿಡುತ್ತದೆ ಇದರಿಂದ ಪರೋಕ್ಷವಾಗಿ ಧನಾತ್ಮಕ ಚಿಂತನೆಯನ್ನು ಪಡೆದುಕೊಂಡಂತೆ ಆಗುತ್ತದೆ

ಘಂಟೆಗಳ ನೀನಾದ

ಘಂಟೆಗಳ ನೀನಾದ

ಸ್ಕಂದ ಪುರಾಣದಂತೆ ದೇವಾಲಯಗಳಲ್ಲಿ ಘಂಟೆಗಳನ್ನು ಬಾರಿಸುವುದರಿಂದ ಮಾನವನ ನೂರು ಜನ್ಮಗಳ ಪಾಪ ಕರ್ಮಗಳು ನಿವಾರಣೆಯಾಗುತ್ತವೆಯಂತೆ. ಘಂಟೆಗಳು ಕಾಲನ ಪ್ರತಿರೂಪ. ಧರ್ಮ ಶಾಸ್ತ್ರದ ಪ್ರಕಾರ ಪ್ರಳಯ ಕಾಲದಲ್ಲಿ ಕೋಟಿ ಘಂಟೆಗಲ ನಿನಾದವು ಕೇಳಿ ಬರುತ್ತದೆಯಂತೆ. ದೇವಾಲಯಗಳಲ್ಲಿ ಘಂಟೆಗಳನ್ನು ನೇತು ಹಾಕುವುದರ ಹಿಂದೆ ವೈಜ್ಞಾನಿಕ ಕಾರಣಗಳು ಸಹ ಇವೆ. ಘಂಟೆಯನ್ನು ಬಾರಿಸಿದಾಗ ಆ ವಾತಾವರಣದಲ್ಲಿ ಒಂದು ಕಂಪನವು ಸೃಷ್ಟಿಯಾಗುತ್ತದೆ. ಅದು ಗಾಳಿಯ ಜೊತೆಗೆ ತುಂಬಾ ದೂರದವರೆಗೆ ತಲುಪುತ್ತದೆ. ಈ ಕಂಪನವು ಸಾಗುವ ಹಾದಿಯಲ್ಲಿ ಬರುವ ಕೀಟಗಳು ಮತ್ತು ಅಪಾಯಕಾರಿ ಅಂಶಗಳು ನಿವಾರಣೆಯಾಗುತ್ತದೆ. ಇದರಿಂದ ಇಡೀ ವಾತಾವರಣವು ಸ್ವಚ್ಛ ಮತ್ತು ಆರೋಗ್ಯಕರವಾಗುತ್ತದೆ.

ಶಂಖ ನಾದ

ಶಂಖ ನಾದ

ಹಿ೦ದೂ ಧರ್ಮದಲ್ಲಿ ಶ೦ಖದಿ೦ದ ಹೊರಹೊಮ್ಮುವ ಧ್ವನಿಯು ಒ೦ದು ಅತ್ಯ೦ತ ಪವಿತ್ರವಾದ ಅಕ್ಷರದೊ೦ದಿಗೆ ತಳಕು ಹಾಕಿಕೊ೦ಡಿದೆ. ಈ ಅಕ್ಷರವು "ಓ೦" ಕಾರವಾಗಿದ್ದು, ಈ ಅಕ್ಷರವು ಸೃಷ್ಟಿಯ ಮೊಟ್ಟಮೊದಲ ಧ್ವನಿಯೆ೦ದು ನ೦ಬಲಾಗಿದೆ. ಶ೦ಖನಾದವು ಯಾವುದೇ ಒ೦ದು ಶುಭಕಾರ್ಯದ ಆರ೦ಭದ ಸ೦ಕೇತವಾಗಿರುತ್ತದೆ. ಶ೦ಖನಾದವು ಧ್ವನಿಯ ಅತ್ಯ೦ತ ಶುದ್ಧರೂಪವೆ೦ದು ನ೦ಬಲಾಗಿದ್ದು, ಹೊಸ ಆಶಾಭಾವನೆ ಹಾಗೂ ಭರವಸೆಯನ್ನು ಶ್ರೋತೃವಿನಲ್ಲಿ ತು೦ಬುತ್ತದೆ.

English summary

Interesting facts Behind Hindu Temples in Kannada

Hinduism is one of the oldest faiths of world. An amalgamation of various rituals, concepts, customs and practices, Hinduism has always been a fascinating faith. The glorious temples of India are the pillars of this amazing faith. If you travel through the length and breadth of India, you will find one thing in huge numbers and of different varieties: temples.
Story first published: Thursday, November 26, 2015, 17:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more