For Quick Alerts
ALLOW NOTIFICATIONS  
For Daily Alerts

ರಾಮನವಮಿ ಹಿನ್ನೆಲೆ ರಾಮನ ಕುರಿತ ಆಸಕ್ತಿಕರ ಸಂಗತಿಗಳು

|

ಸೂರ್ಯವಂಶ, ರಘುವಂಶ ಅಥವಾ ಇಕ್ಷ್ವಾಕು ವಂಶದ ಶ್ರೀರಾಮಚಂದ್ರ ಅಂದರೆ ಶ್ರೀಮಹಾವಿಷ್ಣುವಿನ ಅವತಾರ.ಹಿಂದೂಗಳಿಗೆ ಪವಿತ್ರ ಗ್ರಂಥಗಳಲ್ಲಿ ರಾಮಾಯಣವು ಒಂದು. ಅಯೋಧ್ಯೆಯಲ್ಲಿ ನಡೆದದ್ದೆಲ್ಲವೂ ಕೂಡ ಇತಿಹಾಸ ಮತ್ತು ಇಂದಿಗೂ ಜನಜನಿತ. ರಾಮನ ಬಗ್ಗೆ ಹೆಚ್ಚಿನವರಿಗೆ ಕೆಲವು ಕುತೂಹಲಕಾರಿ ವಿಚಾರಗಳು ತಿಳಿದೇ ಇಲ್ಲ.

Interesting Facts About Rama

ನಾವಿಲ್ಲಿ ರಾಮನ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ 10 ಪ್ರಮುಖ ಅಂಶಗಳನ್ನು ತಿಳಿಸಿಕೊಡುತ್ತಿದ್ದೇವೆ. ಈ ವಿಚಾರಗಳನ್ನು ನೀವು ತಿಳಿದು ನಿಮ್ಮವರಿಗೆ ತಿಳಿಸುವುದನ್ನು ಮರೆಯಬೇಡಿ.


1) ಹಿಂದೂ ದೇವರಾದ ಭಗವಾನ್ ಶ್ರೀರಾಮ ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಸಿದ್ಧ ಮತ್ತು ರಾಮಾಯಣ ಪುಸ್ತಕದ ನಾಯಕ. ಲಿಖಿತ ರೂಪದಲ್ಲಿ ಈ ಕಥೆಯು ಜನಜನಿತವಾಗುವ ಮೊದಲೇ ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ.ಹಾಗಾಗಿ ಹಿಂದೂ ಧರ್ಮದಲ್ಲಿ ರಾಮಾಯಣವು ಎಲ್ಲರೂ ಭಕ್ತಿಯಿಂದ ಪೂಜಿಸುವ ಗ್ರಂಥವೆನಿಸಿದೆ.

2) ವಿಷ್ಣುವಿನ 7ನೇ ಅವತಾರ ಶ್ರೀರಾಮ ಮತ್ತು ನಂತರ ಕೃಷ್ಣ. ರಾಮನ ಅವತಾರವು ಶ್ರೀವಿಷ್ಣುವಿನ ಪ್ರಮುಖವಾದ ಅವತಾರ ಎಂದು ಪರಿಗಣಿಸಲಾಗುತ್ತದೆ. (ದೇವತೆಯ ಅಭಿವ್ಯಕ್ತಿ).

3) ರಾಮನನ್ನು ಪರಿಪೂರ್ಣ ವ್ಯಕ್ತಿ ಎಂದು ಹೇಳಲಾಗುತ್ತದೆ. ಅದು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಕೂಡ ಆತನೊಬ್ಬ ಪರಿಪೂರ್ಣ ವ್ಯಕ್ತಿ.


4) ಹೆಚ್ಚಿನ ಹಿಂದೂಗಳು ರಾಮನು 1.2 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಎಂದು ನಂಬುತ್ತಾರೆ. ಅಂದ್ರೆ ತ್ರೇತಾಯುಗ. ಆದರೆ ಪುಸ್ತಕವು 7th-4th BC ಎಂದು ನಮೂದಿಸುತ್ತದೆ.

5) ರಾಮನ ತತ್ವ ಭಕ್ತ ಹನುಮಂತ.ಇದು ಭಕ್ತಿ ಮತ್ತು ಸರಿಯಾದ ಕ್ರಿಯೆಯ ಸಂಕೇತವಾಗಿದೆ.

6) ತಂದೆಯನ್ನು ಗೌರವಿಸುವ ಸಲುವಾಗಿ ರಾಮನು ತನ್ನ ಹೆಂಡತಿ ಸೀತೆಯ ಮತ್ತು ಸಹೋದರ ಲಕ್ಷ್ಮಣ ಸಹಿತ 14 ವರ್ಷಗಳ ವನವಾಸವನ್ನು ಸ್ವೀಕರಿಸಿದ.


7) ರಾಮಾಯಣದ ಸಂಪೂರ್ಣ ಕಥೆ ಲಂಕಾದ ಅಧಿಪತಿ ದುಷ್ಟ ರಾಜ ರಾವಣನಿಂದ ಕದ್ದ ತನ್ನ ಹೆಂಡತಿಯನ್ನು ವಾಪಸ್ ತೆಗೆದುಕೊಳ್ಳುವ ರಾಮನ ಪ್ರಯಾಣವಾಗಿರುತ್ತದೆ. ರಾಮ (ವಿಷ್ಣು) ಮತ್ತು ಸೀತಾ (ಲಕ್ಷ್ಮಿಯ ಅವತಾರ) ಸಾರ್ವಕಾಲಿಕ ಹಳೆಯ ಮತ್ತು ಪ್ರಸಿದ್ಧ ಪ್ರೇಮಕಥೆಗಳಲ್ಲಿ ಒಂದಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ.

8) ರಾಮನ ಬಿಲ್ಲು ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಸಂಪೂರ್ಣ ಸೈನ್ಯವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿತ್ತು ಮತ್ತು ಅದು ಹಾಗೆಯೇ ಮಾಡಿದ್ದೂ ಕೂಡ ನಿಜ.

9) ದುಷ್ಟ ರಾವಣನನ್ನು ವಧಿಸಿದ ನಂತರ ರಾಮನು 11,000 ವರ್ಷಗಳ ಸಂಪೂರ್ಣ ಶಾಂತಿ ಮತ್ತು ಸಮೃದ್ಧಿಗಾಗಿ ತನ್ನ ರಾಜ್ಯ ಅಯೋಧ್ಯೆಯನ್ನು ಆಳಿದ.

10) ರಾವಣನ ಮೇಲೆ ರಾಮನು ವಿಜಯ ಸಾಧಿಸಿದ ದಿನವನ್ನು ದಸರಾ ಎಂದು ಕರೆಯಲ್ಪಡುವ 10 ದಿನಗಳ ಉತ್ಸವದಲ್ಲಿ ಆಚರಿಸಲಾಗುತ್ತದೆ. ರಾಮನು ರಾಜ್ಯಕ್ಕೆ ವಾಪಾಸಾದ ಮತ್ತು ಪಟ್ಟಾಭಿಷೇಕಕ್ಕೆ ಮರಳಿದ ದಿನವನ್ನು ದೀಪಾವಳಿ ದೀಪಗಳ ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ.

English summary

Interesting Facts About Lord Rama

Here we are discussing about Interesting Facts About Rama. Rama is considered to be the ideal man and a perfect human; not only physically, but mentally and spiritually. Read more.
X
Desktop Bottom Promotion