For Quick Alerts
ALLOW NOTIFICATIONS  
For Daily Alerts

ಝೆನ್ ಕಥೆ: ನನ್ನ ತಪ್ಪನ್ನು ತಿನ್ನುತ್ತಿದ್ದೇನೆ!

|
Kannada Zen story
ಒಮ್ಮೆ ರಾಜ್ಯದ ಝೆನ್ ಗುರು ಫುಗೈ ಮತ್ತು ಅವರ ಅನುಯಾಯಿಗಳಿಗೆ ಭೋಜನ ತಡವಾಗಿ ದೊರೆಯಿತು. ಅಡುಗೆ ತಯಾರಾಗಲಿಲ್ಲ, ಈಗಾಗಲೇ ತುಂಬಾ ತಡವಾಗಿದೆ ಎಂದು ಅಡುಗೆಯವನು ಹಸಿರು ತರಕಾರಿಗಳನ್ನು ತರಲು ಅವಸರ-ಅವಸರವಾಗಿ ತೋಟಕ್ಕೆ ಹೋದನು. ತೋಟದಲ್ಲಿ ತರಕಾರಿಗಳನ್ನು ಕುಯ್ಯುವಾಗ, ತೋಟವನ್ನು ಹೀಗಳೆಯುತ್ತಾ , ಅಲ್ಲಿನ ಹಸಿರು ತರಕಾರಿಗಳ ಮೇಲ್ಭಾಗಗಳನ್ನು ಕತ್ತರಿಸಿ ತಂದನು.

ಹೀಗೆ ತರಕಾರಿಗಳನ್ನು ಕತ್ತರಿಸುವಾಗ ಗೊತ್ತಿಲ್ಲದೆಯೇ ಅಲ್ಲೇ ಇದ್ದ ಹಸಿರು ಬಣ್ಣದ ಹಾವಿನ ತಲೆಯನ್ನು ಕತ್ತರಿಸಿ ಜೊತೆಗೆ ತಂದನು. ಸೊಪ್ಪು ಮತ್ತು ಹಾವಿನ ತಲೆಯನ್ನು ಒಟ್ಟಿಗೆ ತುಂಡರಿಸಿ ಸೂಪ್ ತಯಾರಿಸಿ ಜೆನ್ ಗುರು ಫುಗೈ ಮತ್ತು ಅವರ ಅನುಯಾಯಿಗಳಿಗೆ ನೀಡಿದನು. ಅವನಿಗೆ ಹಾವಿನ ತಲೆ ಆ ಸೂಪಿನಲ್ಲಿರುವುದು ತಿಳಿಯಲೇ ಇಲ್ಲ.

ಈ ಸೂಪ್ ಕುಡಿಯುತ್ತಿದ್ದ ಫುಗೈಯ ಅನುಯಾಯಿಗಳಿಗೆ ಸೂಪ್ ಸ್ವಾದಿಷ್ಟವಾದ ಮತ್ತು ಅಸಾಮಾನ್ಯ ರುಚಿ ಉಳ್ಳದ್ದೆನಿಸಿತು. ಫುಗೈ ಸೂಪ್ ಕುಡಿಯುತ್ತಿದ್ದಾಗ ತನ್ನ ಸೂಪ್ ಬಟ್ಟಲಿನಲ್ಲಿ ಹಾವಿನ ತಲೆ ಕಂಡು ಬಂದಾಗ ಬೆಚ್ಚಿ ಬಿದ್ದು, ಅಡುಗೆಯವನನ್ನು ಕರೆದರು. ಅವರು ಕರೆದ ರೀತಿ ಕೇಳಿಯೇ ಏನೊ ಅನಾಹುತವಾಗಿದೆ ಎಂದು ಅಡುಗೆಯವನು ಬೆದರಿದನು. ಫುಗೈ ಅಡುಗೆಯವನಿಗೆ ಹಾವಿನ ತಲೆಯನ್ನು ಎತ್ತಿ ತೋರಿಸಿ "ಏನಿದು?," ಎಂದು ಕೇಳಿದರು,

ತನ್ನ ತಪ್ಪಿನ ಅರಿವಾದ ತಕ್ಷಣ ಅಡುಗೆವನು "ಓಹ್, ಧನ್ಯವಾದಗಳು ಗುರುಗಳೇ ಎನ್ನುತ್ತಾ ಆ ಹಾವಿನ ತುಣುಕನ್ನು ತೆಗೆದುಕೊಂಡು, ಲಗು-ಬಗೆಯಿಂದ ಮೆಲ್ಲ ತೊಡಗಿದನು .

ಇದನ್ನು ನೋಡಿ ಹೌಹಾರಿದ ಫುಗೈ ಗುರು "ಏನು ಮಾಡುತ್ತಿರುವೆ"? ಎಂದು ಕೇಳಿದಾಗ "ತನ್ನ ತಪ್ಪನ್ನು ತಿನ್ನುತ್ತಿದ್ದೇನೆ" ಎಂದು ಉತ್ತರಿಸಿದನು.

English summary

Kannada Zen story | Useless life | Inspirational short stories | ಝೆನ್ ಕಥೆ : ನನ್ನ ತಪ್ಪನ್ನು ತಿನ್ನುತ್ತಿದ್ದೇನೆ!

The cook in a hurry scurried to the garden and cut the tops of green vegetables, chopped them together and prepared soup.When Fugai found the head of the snake in his bowl of soup, he called the cook and demanded, “Whats this?," cook realize his mistake, so he eat his mistake.
Story first published: Wednesday, July 4, 2012, 11:36 [IST]
X
Desktop Bottom Promotion