For Quick Alerts
ALLOW NOTIFICATIONS  
For Daily Alerts

ಪ್ರತಿ ದಿನ ಮುಂಜಾನೆ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವ ವಿಧಾನ

|

ಪ್ರಪಂಚ ಬೆಳಕಿನಿಂದ ಎಲ್ಲರ ಕಣ್ಣನ್ನು ತುಂಬುವುದು ಎಂದರೆ ಅದು ಸೂರ್ಯನ ಪ್ರಕಾಶಮಾನವಾದ ಬೆಳಕಿನಿಂದ. ಪರಿಸರದಲ್ಲಿ ಇರುವ ಜೀವ ಸಂಕುಲಗಳು ಆರೋಗ್ಯವಾಗಿ ಬದುಕಬೇಕು ಎಂದರೆ ಅದು ಸಹ ಸೂರ್ಯನ ಸಹಾಯದಿಂದಲೇ. ಪ್ರತಿಯೊಂದು ಜೀವಿಗೂ ಜೀವ ಧಾರೆಯಾಗಿರುವುದು ಬಿಸಿಲು. ಸೂರ್ಯ ದೇವನ ಬೆಳಕಿಲ್ಲದೆ ಹೋದರೆ ರೋಗ ಹಾಗೂ ಸೋಂಕು ಕಾಯಿಲೆಗಳು ನಮ್ಮನ್ನು ಆವರಿಸುತ್ತವೆ. ಅಂತಹ ಅನೇಕ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿಗ್ರಹಿಸುವ ಶಕ್ತಿ ಇರುವುದು ಸೂರ್ಯನ ಕಿರಣದಿಂದ ಮಾತ್ರ.

ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ನಿತ್ಯವೂ ಹೊಸ ಬೆಳಕನ್ನು ನೀಡುವುದರ ಮೂಲಕ ಜೀವನಕ್ಕೆ ಸಂತೋಷ ಹಾಗೂ ನೆಮ್ಮದಿಯನ್ನು ನೀಡುವನು. ಸೃಷ್ಟಿಯ ಪಾಲಕನಾದ ಸೂರ್ಯದೇವನು ನಮಗೆ ಅಗತ್ಯವಾದ ಶಕ್ತಿ, ಬೆಳಕು ಮತ್ತು ಶಾಖವನ್ನು ನೀಡುತ್ತಾನೆ. ನಮ್ಮ ಕಣ್ಣಿಗೆ ಕಾಣುವ ದೇವರುಗಳು ಎಂದರೆ ಸೂರ್ಯ ಮತ್ತು ಚಂದ್ರ. ಇವರ ಪ್ರಭಾವದಿಂದಲೇ ಬದುಕಲ್ಲಿ ಸಾಕಷ್ಟು ಬದಲಾವಣೆಗಳು ಹಾಗೂ ಅದೃಷ್ಟಗಳು ಒದಗಿ ಬರುತ್ತವೆ ಎಂದು ಸಹ ಹೇಳಲಾಗುವುದು.

ಮುಂಜಾನೆ ಸೂರ್ಯನ ಆರಾಧನೆ

ಮುಂಜಾನೆ ಸೂರ್ಯನ ಆರಾಧನೆ

ನಿತ್ಯವೂ ಮುಂಜಾನೆ ಸೂರ್ಯನ ಆರಾಧನೆಯನ್ನು ಮಾಡಬೇಕು. ಅಲ್ಲದೆ ಪ್ರತಿ ಭಾನುವಾರ ಅಥವಾ ರವಿವಾರ ಸೂರ್ಯನಿಗೆ ಪೂಜೆ ಸಲ್ಲಿಸಿದರೆ ಅತ್ಯುತ್ತಮವಾದದ್ದು. ಜೊತೆಗೆ ಕುಂಡಲಿಯಲ್ಲಿ ಇರುವ ಅನೇಕ ದೋಷಗಳು ಪರಿಹಾರವಾಗುತ್ತವೆ ಎಂದು ಹೇಳಲಾಗು ವುದು. ಸೂರ್ಯ ದೇವನು ಶಕ್ತಿ, ಬೆಳಕು, ಹುರುಪು, ಹೃದಯ, ಕಣ್ಣು, ಖ್ಯಾತಿ, ಸ್ಥಿತಿ, ಗೌರವ ಹಾಗೂ ಅಹಂ ಅನ್ನು ಸೂಚಿಸುತ್ತದೆ.

Most Read: ಶನಿ ಮಹಿಮೆ: ಸೂರ್ಯ ದೇವ ತನ್ನ ಪುತ್ರ ಭಗವಾನ್ 'ಶನಿ'ಯನ್ನು ದೂರ ಮಾಡಿದ್ದೇಕೆ?

ಶಕ್ತಿಶಾಲಿಯಾದ ಸೂರ್ಯ ದೇವನನ್ನು ಆರಾಧಿಸಿದರೆ

ಶಕ್ತಿಶಾಲಿಯಾದ ಸೂರ್ಯ ದೇವನನ್ನು ಆರಾಧಿಸಿದರೆ

ಕಣ್ಣಿಗೆ ಕಾಣುವ ಹಾಗೂ ಶಕ್ತಿಶಾಲಿಯಾದ ಸೂರ್ಯ ದೇವನನ್ನು ಆರಾಧಿಸಿದರೆ ಅಥವಾ ನಿತ್ಯವೂ ಪೂಜೆ ಕೈಗೊಳ್ಳುವುದರಿಂದ ಸಾಕಷ್ಟು ಉತ್ತಮ ಫಲಗಳು ಲಭ್ಯವಾಗುತ್ತವೆ. ಸೂರ್ಯನ ಆರಾಧನೆಯಿಂದ ನಮ್ಮ ವಿಶ್ವಾಸದ ಮಟ್ಟವು ಹೆಚ್ಚುವುದು. ಅಲ್ಲದೆ ನಮ್ಮ ಸಂವಹನ ಕೌಶಲ್ಯವು ಸುಧಾರಣೆಯಾಗುತ್ತದೆ. ನಮ್ಮ ಕುಂಡಲಿಯಲ್ಲಿ ಯಾವುದಾದರೂ ಗ್ರಹ ದೋಷಗಳಿದ್ದರೆ ಅದು ನಮ್ಮ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ವೈಯಕ್ತಿಕ ಜೀವನ ಹಾಗೂ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಹಿನ್ನಡೆ ಉಂಟಾ ಗುವುದು. ನಿತ್ಯವೂ ಸೂರ್ಯನ ಆರಾಧನೆ ಕೈಗೊಂಡರೆ ಇಂತಹ ಅನೇಕ ಸಮಸ್ಯೆಗಳು ಪರಿಹಾರ ಕಾಣುವುದು. ಜೊತೆಗೆ ಕುಂಡಲಿಯಲ್ಲಿರುವ ಗ್ರಹ ದೋಶಗಳು ದೂರವಾಗುತ್ತವೆ.

ಸೂರ್ಯ ದೇವನ ಪೂಜೆಯ ಫಲ

ಸೂರ್ಯ ದೇವನ ಪೂಜೆಯ ಫಲ

ಸೂರ್ಯನ ಆರಾಧನೆಯ ಫಲವಾಗಿ ಆರೋಗ್ಯ ಮತ್ತು ಸಂಪತ್ತು ಸಮೃದ್ಧಿಯನ್ನು ಕಾಣುವುದು. ಯಶಸ್ಸು, ಧೈರ್ಯ, ಶಕ್ತಿ, ಒಳ್ಳೆಯ ದೃಷ್ಟಿಯನ್ನು ಪಡೆದುಕೊಳ್ಳುವರು. ಈ ರೀತಿಯ ಒಂದು ಒಳ್ಳೆಯ ಸಂಗತಿಗಳನ್ನು ಪಡೆದುಕೊಳ್ಳಬೇಕು ಎನ್ನುವ ಆಸೆ ಇರುವವರು ಸೂರ್ಯ ದೇವರಿಗೆ ಪೂಜೆ ಸಲ್ಲಿಸುವುದನ್ನು ಮರೆಯಬಾರದು.

ಸೂರ್ಯ ದೇವನ ಪೂಜೆಯ ವಿಧಾನ

ಸೂರ್ಯ ದೇವನ ಪೂಜೆಯ ವಿಧಾನ

ಸೂರ್ಯ ದೇಔನಿಗೆ ಪೂಜೆ ಸಲ್ಲಿಸುವ ಮೊದಲು ಮುಂಜಾನೆ ಎದ್ದ ಬಳಿಕ ಮೊದಲು ಸ್ನಾನ ಮಾಡಬೇಕು. ಸೂರ್ಯ ದೇವನ ಆರಾಧನೆಗೆ ದಿನ ಪೂರ್ತಿ ಉಪವಾಸವನ್ನು ಸಹ ಕೈಗೊಳ್ಳಬಹುದು. ಉಪವಾಸ ಕೈಗೊಳ್ಳುವ ಮೊದಲು ಗಣೇಶನ ಪೂಜೆ ಹಾಗೂ ಸೂರ್ಯನಿಗೆ ಪಾರ್ಥನೆ ಸಲ್ಲಿಸಿ ಕೈಗೊಳ್ಳಬೇಕು. ಸೂರ್ಯ

ದೇವನ ಪೂಜೆ ಸಲ್ಲಿಸಿದ ಬಳಿಕ ಬ್ರಾಹ್ಮಣರಿಗೆ ಬಟ್ಟೆಯನ್ನು ದಾನಮಾಡಬೇಕು. ಇದರಿಂದ ಹೆಚ್ಚಿನ ಪುಣ್ಯ ಲಭ್ಯವಾಗುವುದು. ಉಪವಾಸ ಕೈಗೊಳ್ಳುವುದರ ಪರಿ ಹೇಗಿರಬೇಕು ಎಂದರೆ ಇಂದು ಮುಂಜಾನೆ ಉಪವಾಸ ಕೈಗೊಂಡರೆ ಮರುದಿನ ಮುಂಜಾನೆಯ ತನಕ ಉಪವಾಸ ಮುಂದುವರಿಯಬೇಕು. ಅಂದರೆ ಒಂದು

ಸೂರ್ಯೋದಯದ ಆರಂಭದಿಂದ ಇನ್ನೊಂದು ಸೂರ್ಯೋದ ಯದ ಆರಂಭಕ್ಕೆ ಮುಕ್ತಾಯಗೊಳಿಸುವುದು ಎಂದು ಹೇಳಲಾಗುತ್ತದೆ.

ಸೂರ್ಯ ದೇವನ ಪೂಜೆಗೆ ಅಗತ್ಯ ವಸ್ತುಗಳು

ಸೂರ್ಯ ದೇವನ ಪೂಜೆಗೆ ಅಗತ್ಯ ವಸ್ತುಗಳು

ಸೂರ್ಯ ದೇವನ ವಿಶೇಷ ಪೂಜೆ ಕೈಗೊಂಡ ಬಳಿಕ ಬ್ರಾಹ್ಮಣರಿಗೆ ಮತ್ತು ಪೂಜಾರಿಗಳಿಗೆ ಭೋಜನವನ್ನು ನೀಡಬಹುದು. ಪೂಜೆಗೆ ರುದ್ರಾಕ್ಷೆಯ ಮಾಲೆ, ಕುಂಕುಮ, ಮೌಲಿ, ಸೂರ್ಯ ಯಂತ್ರ, ಹವನ ಕುಂಡ ಹಾಗೂ ಸಾಮಾಗ್ರಿಗಳು, ಪ್ರಸಾದ, ತುಪ್ಪ, ಹಣ್ಣುಗಳು, ಬೆಲ್ಲ, ಬಾಳೆ ಎಲೆಗಳು, ವೀಳ್ಯದೆಲೆ ಮತ್ತು ತೆಂಗಿನಕಾಯಿ.

Most Read: ಮುಂಜಾನೆ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವ ವಿಧಾನಗಳು

ಪೂಜೆಯ ವಿಧಿ-ವಿಧಾನ

ಪೂಜೆಯ ವಿಧಿ-ವಿಧಾನ

* ಮೊದಲು ಸ್ನಾನ ಮಾಡಬೇಕು.

* ಪೂಜೆಗಾಗಿಯೇ ಮಡಿ ಬಟ್ಟೆ ಅಥವಾ ಶುದ್ಧವಾದ ಬಟ್ಟೆಯನ್ನು ಧರಿಸಬೇಕು.

* ಸೂರ್ಯ ದೇವನ ಪೂಜೆಯು ಸೂರ್ಯೋದಯದ ಸಮಯದಲ್ಲಿಯೇ ಅರ್ಪಿಸಬೇಕು.

* ಪೂಜೆ ಮಾಡುವವರ ಮುಖವು ಪೂರ್ವದಿಕ್ಕಿಗೆ ಅಥವಾ ಸೂರ್ಯನ ಬೆಳಕಿನ ದಿಕ್ಕಿಗೆ ಇರಬೇಖು.

* ತಲೆಯ ಮೇಲೆ ಪ್ರೋಕ್ಷಿಣ್ಯ ಅಥವಾ ಸ್ವಲ್ಪ ನೀರನ್ನು ಸಿಂಪಡಿಸಿಕೊಳ್ಳಿ.

* ಮೊದಲು ಗಣೇಶನ ಪ್ರಾರ್ಥನೆ ಮಾಡಿ, ಬಳಿಕ ಸೂರ್ಯ ದೇವನ ಪೂಜೆಯನ್ನು ಆರಂಭಿಸಿ.

* ಒಂದು ತಾಮ್ರದ ತಂಬಿಗೆ ಅಥವಾ ಬಿಂದಿಗೆಯಲ್ಲಿ ನೀರನ್ನು ತುಂಬಿಸಿ. ಅದಕ್ಕೆ ಜೇನು ಅಥವಾ ಸಕ್ಕರೆಯನ್ನು ಸೇರಿಸಬಹುದು.

* ಸೂರ್ಯ ದೇವನ ಕಡೆಗೆ ಮುಖಮಾಡಿ ನಿಂತು, ತುಂಬಿದ ಬಿಂದಿಗೆ ಅಥವಾ ತಂಬಿಗೆಯ ನೀರನ್ನು ಸೂರ್ಯ ದೇವನನ್ನು ನೋಡುತ್ತಾ ಅಥವಾ ದೃಷ್ಟಿಯನ್ನು

ಸೂರ್ಯನ ಮೇಲೆ ಕೇಂದ್ರೀಕರಿಸುವುದರ ಮೂಲಕ ನೀರನ್ನು ಸುರಿಯಬೇಕು. ಈ ವಿಧಾನವನ್ನು ಸೂರ್ಯೋದಯವಾಗಿ ಒಂದು ಗಂಟೆಯೊಳಗೆ ನಡೆಯಬೇಕು.

* ಸೂರ್ಯ ದೇವನಿಗೆ ಕಮಲ ಅಥವಾ ಯಾವುದಾದರೂ ಹೂವನ್ನು ಅರ್ಪಿಸಿ.

ಪೂಜೆಯ ವಿಧಿ-ವಿಧಾನ

ಪೂಜೆಯ ವಿಧಿ-ವಿಧಾನ

* ಚಂದನ ಅಥವಾ ಕೆಂಪು ತಿಲಕವನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಿ.

* ಹೃದ್ಯ ಸ್ತೋತ್ರವನ್ನು ಕೇಳಿ ಅಥವಾ ಗಾಯತ್ರಿ ಮಂತ್ರವನ್ನು ಜಪಿಸುತ್ತಾ ವಿಧಾನವನ್ನು ಕೈಗೊಳ್ಳಬಹುದು.

* ಸೂರ್ಯನಿಗೆ ಅಘ್ಯ ನೀಡುವಾಗ ಅಥವಾ ನೀರನ್ನು ಚಲ್ಲುತ್ತಾ "ಓಂ ಗ್ರಿನಿಮ್ ಸೂರ್ಯ ಆದಿತ್ಯಮ್" ಎನ್ನುವ ಮಂತ್ರವನ್ನು 11 ಬಾರಿ ಹೇಳಿ.

* 5-7 ನಿಮಿಷಗಳ ಕಾಲ ಧ್ಯಾನವನ್ನು ಮಾಡಿ.

* ಸೂರ್ಯ ದೇವನಿಗೆ ಕೇಂದ್ರೀಕರಿಸುವುದರ ಮೂಲಕ ಎರೆದ ನೀರನ್ನು ಬಲಗೈಗಳಲ್ಲಿ ಮುಟ್ಟಿ ಹಣೆಗೆ ಹಾಗೂ ಕಣ್ಣಿಗೆ ಹಚ್ಚಿಕೊಳ್ಳುಬೇಕು.

* ನಿಮ್ಮ ಪಾದಗಳನ್ನು ಅಥವಾ ಕಾಲಿನಿಂದ ಆ ನೀರನ್ನು ಮೆಟ್ಟಬಾರದು.

* ಭಾನುವಾರ ಸೂರ್ಯದೇವನಿಗಾಗಿ ವ್ರತ ಅಥವಾ ಉಪವಾಸವನ್ನು ಕೈಗೊಂಡಿದ್ದರೆ ಕೇವಲ ಹಣ್ಣುಗಳನ್ನು ತಿನ್ನಬಹುದು.

English summary

How to worship to Suryadev in the morning?

Suryadev is also known as Atmakarma, where Atma means the soul and the Karma mean indicator. Surya is vital to our survival and bestows us with energy, light, and heat. Along with the Moon, it is the only deity that we can see every day. Suryadev is deliberated as giving life to the entire universe and puja is performed on Sunday. Suryadev is one of the prominent deities when it comes to Hindu religion and it is a major factor behind the influence of life on Earth. Sun indicates power, respect, vitality, the eyes, the heart, fame, status, honor and our ego.
Story first published: Saturday, March 16, 2019, 16:34 [IST]
X
Desktop Bottom Promotion