For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಎಷ್ಟು ದೇವರ ವಿಗ್ರಹ ಇಟ್ಟರೆ ಮಂಗಳಕರ ಎನ್ನುವುದು ನಿಮಗೆ ಗೊತ್ತಾ?

|

ಮನೆಯಲ್ಲಿ ದೈವ ಶಕ್ತಿ ನೆಲೆಸಬೇಕಾದರೆ ಮೊದಲು ನೀವು ಎಷ್ಟು ದೇವರ ವಿಗ್ರಹವನ್ನಿಟ್ಟಿದ್ದೀರಿ ಎಂದು ನೋಡಿ. ಮನೆಯಲ್ಲಿರುವ ದೇವರ ವಿಗ್ರಹಗಳ ಸಂಖ್ಯೆಯಿಂದಲೂ ನಿಮಗೆ ಮಂಗಳವಾಗುವುದು. ದೈವ ಶಕ್ತಿ ಎನ್ನುವುದು ಪವಿತ್ರವಾದ ಭಾವನೆ. ದೇವರಿದ್ದಾನೆ ಎನ್ನುವ ಒಂದು ನಂಬಿಕೆಯನ್ನು ಹೊಂದಿದ್ದರೆ ಸಾಕು ಮನುಷ್ಯನಿಂದ ಅಹಿತಕರವಾದ ಘಟನೆಗಳು ನಡೆಯುವುದು ಕಡಿಮೆಯಾಗುತ್ತದೆ. ಕಣ್ಣಿಗೆ ಕಾಣದ ಆ ಮಹಾನ್ ಶಕ್ತಿಯಿಂದಲೇ ಇಂದು ಜನರಿಗೆ ಮಂಗಳವಾಗುತ್ತಿದೆ ಎನ್ನಬಹುದು. ಮನುಷ್ಯ ಇಂದು ಸಾಕಷ್ಟು ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮುಂದಿದ್ದಾನೆ, ತನ್ನ ಜೀವನದಲ್ಲಿ ವಿಕಾಸವನ್ನು ಹೊಂದಿದ್ದಾನೆ ಎಂದಾದರೆ ಅದು ದೈವ ಶಕ್ತಿಯ ಅನುಗ್ರಹದಿಂದಲೇ ಎಂದು ಹೇಳಬಹುದು. ಈ ನಿಟ್ಟಿನಲ್ಲೇ ಇಂದು ಅನೇಕ ಜನರು ಒಂದೊಂದು ಬಗೆಯಲ್ಲಿ ತಮ್ಮ ದೇವರನ್ನು ನೆನೆಯುತ್ತಾರೆ. ವಿವಿಧ ಅವತಾರಗಳಲ್ಲಿ ದೇವರನ್ನು ಕಾಣುತ್ತಾರೆ. ಇದು ಅವರಿಗೆ ಸಿಗುವ ಮಾನಸಿಕ ನೆಮ್ಮದಿಯ ಒಂದು ಪರಿಯೂ ಹೌದು.

idols of God

ಯಾವ ವ್ಯಕ್ತಿ ತಮ್ಮ ಕರ್ಮ ಫಲಗಳಿಗೆ ಅನುಗುಣವಾಗಿ ಭವಿಷ್ಯವನ್ನು ಅಥವಾ ಸನ್ನಿವೇಶಗಳನ್ನು ಅನುಭವಿಸುತ್ತಾ ಸಾಗುತ್ತಾನೆ. ತಪ್ಪು, ಮೋಸ, ವಂಚನೆ, ದ್ರೋಹಗಳಂತಹ ಕೆಟ್ಟ ಕೆಲಸಗಳನ್ನು ಎಸಗುವುದರಿಂದ ಸಾಕಷ್ಟು ನೋವನ್ನು ಅನುಭವಿಸುವನು. ಅದೇ ಸದಾಚಾರ ಮತ್ತು ಸದ್ಗುಣಿಯಾಗಿದ್ದರೆ ಅವನ ಜೀವನವು ಸಂತೋಷ ಹಾಗೂ ಸುಖದಿಂದ ಕೂಡಿರುತ್ತದೆ. ಜೀವನದಲ್ಲಿ ನೆಮ್ಮದಿ ಎನ್ನುವುದನ್ನು ಪಡೆದುಕೊಳ್ಳುವನು. ಯಾರು ದೈವ ಶಕ್ತಿಯ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುವನೋ ಅವನಿಗೆ ಜೀವನವು ಬೇಸರ ಹಾಗೂ ಚಿಂತೆಯಿಂದ ಕೂಡಿರುತ್ತದೆ.

ತಂದೆ ತಾಯಿಯ ರೂಪದಲ್ಲಿ, ಗುರುಗಳ ರೂಪದಲ್ಲಿ

ತಂದೆ ತಾಯಿಯ ರೂಪದಲ್ಲಿ, ಗುರುಗಳ ರೂಪದಲ್ಲಿ

ದೈವ ಶಕ್ತಿ ಕಣ್ಣಿಗೆ ಕಾಣದೆ ಇರಬಹುದು. ಆದರೆ ಎಲ್ಲೆಲ್ಲಿ ಸತ್ಯ, ಧರ್ಮ ಮುಗ್ಧತೆಯ ಪ್ರೀತಿ ಇರುತ್ತದೆಯೋ ಅಲ್ಲೆಲ್ಲವೂ ದೇವರಿರುತ್ತಾನೆ ಎಂದು ಹೇಳಲಾಗುವುದು. ತಂದೆ ತಾಯಿಯ ರೂಪದಲ್ಲಿ, ಗುರುಗಳ ರೂಪದಲ್ಲಿ, ಸ್ನೇಹಿತರ ರೂಪದಲ್ಲಿ ಋಷಿ ಮುನಿಗಳ ರೂಪದಲ್ಲಿ ನಾವು ದೇವರನ್ನು ಕಾಣಬಹುದು. ಅವರಲ್ಲಿರುವ ಸತ್ಯ, ಜ್ಞಾನ, ನಿಸ್ವಾರ್ಥ ಪ್ರೀತಿಯು ನಮಗೆ ದೇವರ ದರ್ಶನ ಮಾಡಿಸುವುದು. ದೇವರು ಒಬ್ಬನೆ. ಆತನ ರೂಪಗಳು ಹಲವಾರು ಎನ್ನುವುದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಸತ್ಯ ಸಂಗತಿ. ಹಾಗಾಗಿಯೇ ಸಾಕಷ್ಟು ಜನರು ದೇವರ ಆರಾಧನೆಯನ್ನು ವಿವಿಧ ರೂಪದಲ್ಲಿ ಕೈಗೊಳ್ಳುತ್ತಾರೆ.

ದೇವರ ಚಿತ್ರಗಳಿಗೆ ಅಥವಾ ವಿಗ್ರಹಗಳಿಗೆ ಪೂಜೆ

ದೇವರ ಚಿತ್ರಗಳಿಗೆ ಅಥವಾ ವಿಗ್ರಹಗಳಿಗೆ ಪೂಜೆ

ಮನೆಯಲ್ಲಿ ಹಬ್ಬ, ವ್ರತ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ದೇವರ ಪ್ರೀತಿಗೆ ಪಾತ್ರರಾಗಲು ಜನರು ಹಂಬಲಿಸುತ್ತಾರೆ. ಅಲ್ಲದೆ ತಮ್ಮ ತಪ್ಪುಗಳನ್ನು ಕ್ಷಮಿಸಿ, ಒಳಿತನ್ನು ಆಶೀರ್ವದಿಸು ಎಂದು ಕೇಳಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮನೆಯಲ್ಲಿ ದೇವರ ಚಿತ್ರಗಳಿಗೆ ಅಥವಾ ವಿಗ್ರಹಗಳಿಗೆ ಪೂಜೆಯನ್ನು ಕೈಗೊಳ್ಳುತ್ತಾರೆ. ದೇವರಿಗೆ ಸಂಬಂಧಿಸಿದಂತೆ ಹಲವಾರು ಧರ್ಮಗಳು ಹಾಗೂ ಆಚರಣೆಗಳು ಇರುವುದನ್ನು ನಾವು ಕಾಣಬಹುದು. ಅದರಲ್ಲಿ ಹಿಂದೂ ಧರ್ಮದವರು ದೇವರ ವಿಗ್ರಹ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ.

Most Read: ಪೂಜಾ ಕೋಣೆಯಲ್ಲಿ ಇಂತಹ ದೇವರ ಪ್ರತಿಮೆ ಇರಿಸಬೇಡಿ, ಇಲ್ಲಾಂದ್ರೆ ಕಷ್ಟದ ಮೇಲೆ ಕಷ್ಟ ಬರಬಹುದು!

ದೇವರಿಗಾಗಿ ಒಂದು ಕೋಣೆ ಅಥವಾ ಪೀಠ

ದೇವರಿಗಾಗಿ ಒಂದು ಕೋಣೆ ಅಥವಾ ಪೀಠ

ವ್ಯಕ್ತಿ ತಾನು ವಾಸವಾಗಿರಲು ಕಟ್ಟುವ ಮನೆಯಲ್ಲಿ ತನ್ನನ್ನು ಕಾಯುವ ದೇವರಿಗಾಗಿ ಒಂದು ಕೋಣೆ ಅಥವಾ ಪೀಠವನ್ನು ನಿರ್ಮಿಸುವುದು ಸಹಜ. ಅಂತೆಯೇ ಅದರಲ್ಲಿ ತನ್ನ ಭಕ್ತಿಗೆ ಹಾಗೂ ಪೂರ್ವಜರು ಆಚರಿಸಿಕೊಂಡು ಬಂದ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲು ದೇವರ ಮೂರ್ತಿಯನ್ನು ಇಟ್ಟು ಆರಾಧನೆ ಮಾಡುತ್ತಾರೆ. ಹೀಗೆ ಮೂರ್ತಿಯ ಆರಾಧನೆ ಮಾಡುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಮನೆ ಮಂದಿಗೆ ಶ್ರೇಯಸ್ಸು ದೊರೆಯುವುದು. ಈ ಎಲ್ಲಾ ವಿಚಾರಗಳು ಸುಗಮವಾಗಿ ನಡೆಯಬೇಕು ಎಂದರೆ ಮೊದಲು ನಾವು ದೇವರ ಮನೆಯಲ್ಲಿ ಅಥವಾ ಕೋಣೆಯಲ್ಲಿ ಎಷ್ಟು ವಿಗ್ರಹಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಿದ್ದೇವೆ? ಎನ್ನುವುದು ಬಹಳ ಪ್ರಮುಖವಾದ ಸಂಗತಿಯಾಗಿರುತ್ತದೆ.

ವಾಸ್ತು ಶಾಸ್ತ್ರ ಹಾಗೂ ಧಾರ್ಮಿಕ ಚಿಂತನೆಗಳಿಗೆ ಅನುಗುಣವಾಗಿ ಹೇಳುವುದಾದರೆ

ವಾಸ್ತು ಶಾಸ್ತ್ರ ಹಾಗೂ ಧಾರ್ಮಿಕ ಚಿಂತನೆಗಳಿಗೆ ಅನುಗುಣವಾಗಿ ಹೇಳುವುದಾದರೆ

ವಾಸ್ತು ಶಾಸ್ತ್ರ ಹಾಗೂ ಧಾರ್ಮಿಕ ಚಿಂತನೆಗಳಿಗೆ ಅನುಗುಣವಾಗಿ ಹೇಳುವುದಾದರೆ ಮನೆಯಲ್ಲಿ ಸೂಕ್ತ ಸಂಖ್ಯೆಯಲ್ಲಿ ದೇವರ ವಿಗ್ರಹವನ್ನು ಇಟ್ಟು ಪೂಜೆಯನ್ನು ಸಲ್ಲಿಸಬೇಕು. ಅದು ಮನೆಯ ಅಭಿವೃದ್ಧಿ ಹಾಗೂ ಮನೆ ಮಂದಿಯ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಡುವುದು. ನಿಮಗೂ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಬೇಕು, ಮನೆ ಮಂದಿಗೆ ಶ್ರೇಯಸ್ಸು ದೊರೆಯಬೇಕು ಎನ್ನುವ ಬಯಕೆ ಇದ್ದರೆ ಮೊದಲು ದೇವರ ಮನೆಯಲ್ಲಿ ಯಾವ ದೇವರ ಮೂರ್ತಿ ಹಾಗೂ ಎಷ್ಟು ಮೂರ್ತಿಗಳನ್ನು ಅಥವಾ ವಿಗ್ರಹಗಳನ್ನು ಇಟ್ಟು ಪೂಜೆಯನ್ನು ನಡೆಸುತ್ತಿದ್ದೀರಿ ಎನ್ನುವುದರ ಬಗ್ಗೆ ಅರಿವನ್ನು ಹೊಂದಬೇಕು. ಈ ಸಂಗತಿಗೆ ಬೇಕಾದ ಕೆಲವು ಸೂಕ್ಷ್ಮ ಮಾಹಿತಿಯನ್ನು ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ.

ಮನೆಯಲ್ಲಿ ವಿಗ್ರಹದ ಪೂಜೆ ಮಾಡಬೇಕಾ? ಅಥವಾ ಮಾಡಬಾರದಾ?

ಮನೆಯಲ್ಲಿ ವಿಗ್ರಹದ ಪೂಜೆ ಮಾಡಬೇಕಾ? ಅಥವಾ ಮಾಡಬಾರದಾ?

ವಿವಿಧ ಧರ್ಮಗಳಲ್ಲಿ ಹಿಂದೂ ಧರ್ಮವು ತನ್ನದೇ ಆದ ಪವಿತ್ರತೆ ಹಾಗೂ ತತ್ವಗಳನ್ನು ಒಳಗೊಂಡಿದೆ. ಇತರ ಧರ್ಮಗಳಿಗೆ ಹೋಲಿಸಿದರೆ ಹಿಂದೂ ಧರ್ಮದಲ್ಲಿ ದೇವರನ್ನು ವಿಗ್ರಹದ ರೂಪದಲ್ಲಿ ಕಾಣುತ್ತಾರೆ. ಹಾಗಾಗಿ ವಿಗ್ರಹ ಪೂಜೆಯನ್ನು ನಂಬುತ್ತಾರೆ. ವಿಗ್ರಹವನ್ನು ಪೂಜಿಸುವುದು ಹಾಗೂ ಭೌತಿಕ ವಸ್ತುಗಳಲ್ಲೂ ದೇವರನ್ನು ಕಾಣಲು ಹಂಬಲಿಸುತ್ತಾರೆ. ಹಾಗಾಗಿಯೇ ದೇವಾಲಯದಲ್ಲಿ ಹಾಗೂ ಮನೆಯಲ್ಲಿರುವ ದೇವರ ಕೋಣೆಯಲ್ಲಿ ದೇವರ ವಿಗ್ರಹವನ್ನು ಇಟ್ಟು ಪೂಜೆಯನ್ನು ಕೈಗೊಳ್ಳುವರು. ವಿಗ್ರಹ ಪೂಜೆಯು ಒಂದು ಪವಿತ್ರತೆಯ ಸಂಕೇತ ಎಂದು ಭಾವಿಸುವರು. ದೇವರೊಂದಿಗೆ ಸಂಪರ್ಕ ಹೊಂದಲು ಇದೊಂದು ಉತ್ತಮವಾದ ಮಾರ್ಗ ಎಂದು ಪರಿಗಣಿಸಲಾಗುವುದು.

ಹಿಂದೂಗಳು ಮೂರ್ತಿ ಪೂಜೆಯನ್ನು ಏಕೆ ನಂಬುತ್ತಾರೆ?

ಹಿಂದೂಗಳು ಮೂರ್ತಿ ಪೂಜೆಯನ್ನು ಏಕೆ ನಂಬುತ್ತಾರೆ?

ನಮ್ಮ ಜೀವನದ ಅಭಿವೃದ್ಧಿ ಹಾಗೂ ಮುಂದುವರಿಯುವಿಕೆ ಎಲ್ಲವೂ ದೇವರ ಆಶೀರ್ವಾದದಿಂದಲೇ ನೆರವೇರುವುದು. ಆ ಒಂದು ಅದ್ಭುತ ಶಕ್ತಿಯು ಮೂರ್ತಿಯ ರೂಪದಲ್ಲಿರುವ ದೇವರು ಪ್ರೇರೇಪಿಸುತ್ತಾನೆ ಎನ್ನುವ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ. ಮೂರ್ತಿ ಆರಾಧನೆಯಿಂದ ನಮ್ಮ ಕಷ್ಟಗಳು ಕರಗುತ್ತವೆ. ಉತ್ತಮ ಮಾರ್ಗದಲ್ಲಿ ನಡೆಯಲು ನಮಗೆ ಉತ್ತೇಜನ ನೀಡುತ್ತದೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.

Most Read: ಹಾಸಿಗೆ ಅಡಿಯಲ್ಲಿ ಈ ವಸ್ತುಗಳನ್ನು ಇಟ್ಟರೆ ನಿಮ್ಮ ಅದೃಷ್ಟವೇ ಬದಲಾಗಬಹುದು

ಶಾಸ್ತ್ರ ಏನನ್ನು ಹೇಳುತ್ತದೆ?

ಶಾಸ್ತ್ರ ಏನನ್ನು ಹೇಳುತ್ತದೆ?

ಹಿಂದೂ ಶಾಸ್ತ್ರದ ಪ್ರಕಾರ ಹಿಂದೂಗಳು ತಮ್ಮ ಪ್ರತಿಯೊಂದು ಮನೆಯಲ್ಲೂ ದೇವರ ಮನೆಯನ್ನು ಅಥವಾ ಕೋಣೆಯನ್ನು ಹೊಂದಿರಬೇಕು. ಅದರಲ್ಲಿ ವಿಗ್ರಹ ಪೂಜೆಯು ನಡೆಯಬೇಕು. ಅದಕ್ಕಾಗಿ ಕೆಲವು ನೇಮ ನಿಷ್ಠೆಗಳು ಅಥವಾ ನೀತಿ-ನಿಯಮಗಳ ಪ್ರಕಾರ ಪೂಜೆ ನಡೆಯಬೇಕು ಎಂದು ಹೇಳುತ್ತದೆ. ಇದರಿಂದ ಮನೆ ಮಂದಿಗೆ ಹಾಗೂ ಮನೆಗೆ ಶ್ರೇಯಸ್ಸು ದೊರೆಯುವುದು ಎಂದು ಹೇಳಲಾಗುವುದು.

ನೆನಪಿಟ್ಟುಕೊಳ್ಳಬೇಕಾದ ವಿಷಯಗಳು

ನೆನಪಿಟ್ಟುಕೊಳ್ಳಬೇಕಾದ ವಿಷಯಗಳು

ಮನೆಯ ವಾಸ್ತು ಹಾಗೂ ದೇವರ ಮನೆ, ಅಲ್ಲಿ ಪೂಜೆಯ ಸಂಗತಿಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿರಬೇಕು. ಆಗಲೇ ನಾವು ಸೂಕ್ತ ರೀತಿಯಲ್ಲಿ ದೇವರ ಪೂಜೆ ಹಾಗೂ ಶ್ರೇಯಸ್ಸನ್ನು ಹೊಂದಲು ಸಾಧ್ಯ. ಅದಕ್ಕೆ ಸಂಬಂಧಿಸಿದಂತೆ ಕೆಲವು ವಿಶೇಷ ಮಾಹಿತಿಗಳು ಈ ಮುಂದೆ ನೀಡಲಾಗಿದೆ.

ಪ್ರತ್ಯೇಕವಾದ ಪೂಜಾ ಕೋಣೆ

ಪ್ರತ್ಯೇಕವಾದ ಪೂಜಾ ಕೋಣೆ

ಮನೆಯ ನಿರ್ಮಾಣದ ಸಂದರ್ಭದಲ್ಲಿ ಅದರ ಸೌಂದರ್ಯ ಹಾಗೂ ಪೀಠೋಪಕರಣಗಳ ಆಯ್ಕೆ ಬಹಳ ಪ್ರಮುಖವಾದದ್ದು ಎಂದು ಎಲ್ಲರೂ ಭಾವಿಸುತ್ತಾರೆ. ಅಂತೆಯೇ ಅದರಲ್ಲಿ ವಾಸ್ತು ಹಾಗೂ ದೇವರ ಮನೆಯ ನಿರ್ಮಾಣಕ್ಕೂ ಸೂಕ್ತ ಗಮನ ಹಾಗೂ ಪ್ರಾಶಸ್ತ್ಯ ನೀಡಬೇಕಾಗುವುದು. ಏಕೆಂದರೆ ಅದು ಮನೆಯ ಅಭಿವೃದ್ಧಿಗೆ ಪ್ರಮುಖವಾದ ಸಂಗತಿಯಾಗಿರುತ್ತದೆ. ಹಾಗಾಗಿ ಎಷ್ಟೇ ದೊಡ್ಡ ಅಥವಾ ಸಣ್ಣ ಮನೆಯನ್ನು ಹೊಂದಿದ್ದರೂ ಸಹ ದೇವರಿಗಾಗಿ ಒಂದು ಪೂಜಾ ಕೋಣೆ ಅಥವಾ ಪೀಠವನ್ನು ಇಡಬೇಕು. ಅದರಲ್ಲಿ ಇಡುವ ದೇವರ ವಿಗ್ರಹವು ಪೂರ್ವ ಮುಖವಾಗಿ ಇಡಬೇಕು. ಕಾರಣ ಏನೆಂದರೆ ಧನಾತ್ಮಕ ಶಕ್ತಿಯ ಆಗಮನವು ಉತ್ತಮವಾಗಿರುತ್ತದೆ. ಇದರಿಂದ ಮನೆ ಮಂದಿಗೆ ಒಳಿತಾಗುವುದು.

ಅಡುಗೆ ಮನೆಯ ವಿರುದ್ಧ ದಿಕ್ಕಿನಲ್ಲಿ ಇಡಬಾರದು

ಅಡುಗೆ ಮನೆಯ ವಿರುದ್ಧ ದಿಕ್ಕಿನಲ್ಲಿ ಇಡಬಾರದು

ಅಡುಗೆ ಮನೆಯು ಮನೆಯೊಳಗೆ ಶುದ್ಧವಾಗಿರುವ ಸ್ಥಳ ಎಂದು ಪರಿಗಣಿಸಲಾಗುವುದು. ಅಲ್ಲಿ ಎಲ್ಲವೂ ಸ್ವಚ್ಛ ಹಾಗೂ ಆರೋಗ್ಯಕರವಾಗಿರಬೇಕು ಎಂದು ಪರಿಗಣಿಸಲಾಗುವುದು. ಕೆಲವರು ಕಸದ ಬುಟ್ಟಿಯನ್ನು ಅಡುಗೆ ಮನೆಯ ಒಳಗೆ ಇರಿಸಿಕೊಳ್ಳುತ್ತಾರೆ. ಇದು ಅತ್ಯುತ್ತಮವಾದ ವಿಧಾನ ಆಗಿರುವುದಿಲ್ಲ. ಅದು ಸಾಕಷ್ಟು ಅಶುದ್ಧತೆ ಹಾಗೂ ಋಣಾತ್ಮಕ ಶಕ್ತಿಗೆ ಆಹ್ವಾನ ನೀಡುವುದು. ಅಲ್ಲದೆ ಅಡುಗೆ ಮನೆಯ ವಿರುದ್ಧ ದಿಕ್ಕಿಗೆ ದೇವರ ಮನೆ ಅಥವಾ ಪೂಜೆಯ ಸ್ಥಳವನ್ನು ಮಾಡಬಾರದು. ಏಕೆಂದರೆ ಅಡುಗೆ ಮಾಡುವಾಗ ಉಂಟಾಗುವ ಹೊಗೆಯು ನೇರವಾಗಿ ದೇವರ ಮನೆಯನ್ನು ಪ್ರವೇಶಿಸುವುದು. ಇದು ದೇವರ ಮನೆಯ ಶುದ್ಧತೆ ಹಾಗೂ ಪವಿತ್ರತೆಯನ್ನು ಕಳೆಯುವುದು ಎಂದು ಹೇಳಲಾಗುವುದು.

ದೇವರ ಮನೆಯ ಸ್ಥಳ

ದೇವರ ಮನೆಯ ಸ್ಥಳ

ನಾವು ದೇವರನ್ನು ಪೂಜಿಸುವ ಸ್ಥಳ ಶುದ್ಧ ಹಾಗೂ ಪವಿತ್ರತೆಯಿಂದ ಕೂಡಿರಬೇಕು. ಹಾಗಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಟಾಯ್ಲೆಟ್ ಬಳಿಯಲ್ಲಿ ದೇವರ ಮನೆಯನ್ನು ನಿರ್ಮಿಸ ಬಾರದು. ಎರಡು ಅಂತಸ್ತಿನ ಮನೆಯನ್ನು ನಿರ್ಮಿಸುತ್ತೀರಿ ಎಂದಾದರೆ ಕೆಳಗಡೆ ದೇವರ ಮನೆ ಇರುವ ಸ್ಥಳದ ಮೇಲ್ಭಾಗದಲ್ಲಿ ಟಾಯ್ಲೆಟ್ ಅನ್ನು ನಿರ್ಮಿಸಬಾರದು. ಹೀಗೆ ನಿರ್ಮಾಣ ಮಾಡಿದರೆ ದೇವರ ಸ್ಥಾನವನ್ನು ಅಪವಿತ್ರ ಗೊಳಿಸಿದಂತೆ ಆಗುವುದು. ಆಗ ಮನೆಯಲ್ಲಿ ಧನಾತ್ಮಕ ಶಕ್ತಿ ಅಥವಾ ದೈವ ಶಕ್ತಿ ನೆಲೆಸದು. ಈ ಹಿನ್ನೆಲೆಯಲ್ಲಿಯೇ ದೇವರ ಮನೆಯು ಶುದ್ಧ ಹಾಗೂ ಪವಿತ್ರವಾಗಿರುವಂತೆ ನೋಡಿಕೊಳ್ಳಬೇಕು.

ದೇವರ ಮನೆಯ ಸ್ವಚ್ಛತೆ

ದೇವರ ಮನೆಯ ಸ್ವಚ್ಛತೆ

ಮನೆಯಲ್ಲಿ ನಿರ್ಮಿಸುವ ದೇವರ ಮನೆಗೆ ಶುದ್ಧವಾದ ಗಾಳಿ ಹಾಗೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮೂರ್ತಿಯನ್ನು ಇಟ್ಟು ಪೂಜೆ ಮಾಡುವುದಾದರೆ ಮೂರ್ತಿಯ ಸ್ನಾನ ಹಾಗೂ ಸ್ವಚ್ಛಗೊಳಿಸುವುದನ್ನು ಮರೆಯಬಾರದು. ಒಂದು ವಾರ ಅಥವಾ ತಿಂಗಳುಗಳ ಕಾಲ ಹೊರಗಡೆ ಹೋಗುವುದಾದರೆ ದೇವರ ಮನೆಗೂ ಬೀಗ ಹಾಗೂ ಪೂಜೆ ಮಾಡದೆ ಇರಬಾರದು.

ಮನೆಯಲ್ಲಿ ವಿಗ್ರಹಗಳ ಸಂಖ್ಯೆ

ಮನೆಯಲ್ಲಿ ವಿಗ್ರಹಗಳ ಸಂಖ್ಯೆ

ಮನೆ ಮತ್ತು ದೇವಸ್ಥಾನ ಎರಡು ಭಿನ್ನವಾದ ಸಂಗತಿ. ಮನೆಯಲ್ಲಿ ದೇವರ ಮನೆಯು ಒಂದು ಭಾಗವಾಗಿರುತ್ತದೆ. ಆದರೆ ದೇವಸ್ಥಾನವು ಮನೆಯಾಗಿರುವುದಿಲ್ಲ. ಏಕೆಂದರೆ ಮನುಷ್ಯ ತನ್ನ ನಿತ್ಯ ಚಟುವಟಿಕೆಗಳಿಗೆ ಮನೆಯು ಸೂಕ್ತವಾಗಿರುತ್ತದೆ. ಅವೆಲ್ಲವೂ ದೆವಸ್ಥಾನದಲ್ಲಿ ನಡೆಯ ಬಾರದು. ಭೌತಿಕ ಪ್ರಪಂಚವನ್ನು ಆನಂದಿಸಲು ಒಂದು ಸ್ಥಳವಾಗಿರಬೇಕು. ಅಂತೆಯೇ ದೇವರನ್ನು ಆರಾಧಿಸಲು ಅಥವಾ ನೆನೆಯಲು ಒಂದು ಪವಿತ್ರವಾದ ಸ್ಥಳ ಪ್ರತ್ಯೇಕವಾಗಿರಬೇಕು. ಒಂದು ದೇವಸ್ಥಾನದಲ್ಲಿ ದೇವರ ವಿಗ್ರಹಗಳು ಮತ್ತು ಫೋಟಗಳು ಹಲವಾರು ಇರಬಹುದು. ಆದರೆ ಮನೆಯೊಳಗೆ ಇರುವ ದೇವರ ಮನೆಯಲ್ಲಿ ದೇವರ ವಿಗ್ರಹ ಇಡಲು ಒಂದು ಮಿತಿ ಇರುತ್ತದೆ.

Most Read: ಹುಟ್ಟಿದ ದಿನಾಂಕ, ವರ್ಷ, ತಿಂಗಳು ಗೊತ್ತಿದ್ದರೆ ಸಾಕು, ವ್ಯಕ್ತಿತ್ವ ತಿಳಿಯುವುದು

ಮನೆಯಲ್ಲಿ ವಿಗ್ರಹಗಳ ಪೂಜೆ

ಮನೆಯಲ್ಲಿ ವಿಗ್ರಹಗಳ ಪೂಜೆ

ಮನೆಯಲ್ಲಿರುವ ದೇವರ ಕೋಣೆಯಲ್ಲಿ ಒಂದೇ ದೇವತೆಯ ಮೂರು ವಿಗ್ರಹವನ್ನು ಇಡಬಾರದು. ಅದೇ ದುರ್ಗಾ, ಲಕ್ಷ್ಮಿ, ಸರಸ್ವತಿಯ ಮೂರು ವಿಗ್ರಹವನ್ನು ಇಡಬಹುದು. ಒಂದೇ ದೇವಿಯ ಮೂರು ವಿಗ್ರಹವನ್ನು ಇಟ್ಟರೆ ಮನೆಯೊಳಗೆ ಕೆಟ್ಟ ಶಕ್ತಿಯ ಆಹ್ವಾನವಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಯು ಕೆಳಮುಖವಾಗುವುದು.

ಗಣೇಶನ ಮೂರು ವಿಗ್ರಹಗಳು

ಗಣೇಶನ ಮೂರು ವಿಗ್ರಹಗಳು

ಮನೆಯೊಳಗೆ ಮೂರು ಗಣೇಶನ ವಿಗ್ರಹ ಅಥವಾ ಚಿತ್ರಗಳನ್ನು ಇಟ್ಟು ಪೂಜೆ ನಡೆಸಬಾರದು. ಅದು ಮನೆಯೊಳಗೆ ಅಸಭ್ಯ ಘಟನೆಯನ್ನು ಆಹ್ವಾನಿಸುತ್ತದೆ ಎಂದು ಧರ್ಮ ಗ್ರಂಥಗಳು ಹೇಳುತ್ತವೆ.

ಎರಡು ಶಿವಲಿಂಗ

ಎರಡು ಶಿವಲಿಂಗ

ಮನೆಯಲ್ಲಿ ಒಂದು ಶೀವಲಿಂಗವನ್ನು ಇಟ್ಟು ಪೂಜೆ ಮಾಡಬೇಕು. ಎರಡು ಶಿವಲಿಂಗದ ಪೂಜೆ ನಡೆಸಬಾರದು. ಒಂದು ಶಿವಲಿಂಗವನ್ನು ಇಟ್ಟು ಪೂಜೆ ಮಾಡುವುದಾದರೂ ಅನೇಕ ನಿಯಮಗಳನ್ನು ಅನುಸರಿಸುವುದರ ಮೂಲಕ ಪೂಜೆಯನ್ನು ಸಲ್ಲಿಸಬೇಕಾಗುವುದು. ಆಗಲೇ ಉತ್ತಮ ಫಲಗಳು ದೊರೆಯುವುದು.

ವಿಗ್ರಹಗಳು ಮತ್ತು ಭಾವಚಿತ್ರಗಳು

ವಿಗ್ರಹಗಳು ಮತ್ತು ಭಾವಚಿತ್ರಗಳು

ಮನೆಯೊಳಗೆ ದೇವರ ಭಾವಚಿತ್ರವನ್ನು ಇಟ್ಟಿದ್ದರೆ ಅದರ ಕೆಳಗೆ ಆಯಾ ದೇವರ ವಿಗ್ರಹವನ್ನು ಇಟ್ಟು ಪೂಜೆ ಮಾಡಬಹುದು. ಅನುಚಿತ ರೀತಿಯಲ್ಲಿ ವಿಗ್ರಹಳ ಜೋಡಣೆ ಹಾಗೂ ಪೂಜೆ ಕೈಗೊಳ್ಳುವುದು ಮನೆ ಮಂದಿಯ ನಡುವೆ ಅಪಶ್ರುತಿಯನ್ನು ಸೃಷ್ಟಿಸುತ್ತದೆ.

English summary

How many idols of God are auspicious to be kept in home?

God is the manifestation of endless strength and power that motivates them to keep going in their lives. Faith in God not only helps us over come difficulties, but also instills fear that keeps us from doing evil. What do shastras say? Going by Hindu shastras, every household must place a temple or build a puja room, and certain set of rules must be followed for idol worshiping or else await reverse effect.
X
Desktop Bottom Promotion