For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್‌ 2020ನೇ ಸಾಲಿನ ಹಬ್ಬಗಳು, ಶುಭ ದಿನ, ಮುಹೂರ್ತ ಹಾಗೂ ಆಶುಭ ದಿನಗಳು

|

ಹಿಂದೂ ಪಂಚಾಗದ ಪ್ರಕಾರ 2020ನೇ ಸಾಲಿನ ಅಕ್ಟೋಬರ್ ಮಾಸ ಆರಂಭವಾಗಿದೆ. ಈ ಮಾಸದಲ್ಲಿ ಸಾಲು ಹಬ್ಬಗಳಿವೆ. ಅದರಲ್ಲೂ 10 ದಿನಗಳ ಆಚರಿಸುವ ನಾಡಹಬ್ಬ ದಸರಾ ಇದೇ ಮಾಸದಲ್ಲಿ ಬರಲಿದೆ.

Hindu Auspicious Dates in the Month of October 2020

ಸಾಮಾನ್ಯ ನಾವು ಯಾವುದೇ ಒಳ್ಳೆಯ ಕೆಲಸ, ವ್ಯವಹಾರ, ವಹಿವಾಟು ನಡೆಸಲು ಉತ್ತಮ ದಿನಗಳನ್ನು ನೋಡುತ್ತೇವೆ. ನವರಾತ್ರಿ ಸೇರಿದಂತೆ ಅಕ್ಟೋಬರ್‌ ಮಾಸದಲ್ಲಿ ಯಾವೆಲ್ಲಾ ಶುಭ ದಿನಗಳಿಗೆ, ಯಾವ ದಿನಗಳಲ್ಲಿ ಶುಭ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿಯೋಣ.

2020ರ ಅಕ್ಟೋಬರ್ ನಲ್ಲಿ ಶುಭ ದಿನಗಳು ಮತ್ತು ಶುಭ ಸಮಯ

2020ರ ಅಕ್ಟೋಬರ್ ನಲ್ಲಿ ಶುಭ ದಿನಗಳು ಮತ್ತು ಶುಭ ಸಮಯ

ಅಕ್ಟೋಬರ್ 1 ಮಧ್ಯಾಹ್ನ 1:28ರ ನಂತರ ಉತ್ತಮ ಸಮಯ

ಅಕ್ಟೋಬರ್ 2

ಅಕ್ಟೋಬರ್ 4 ರವರೆಗೆ ರಾತ್ರಿ 8:44 ರವರೆಗೆ

ಅಕ್ಟೋಬರ್ 6 ನಂತರ 5:52 PM

ಅಕ್ಟೋಬರ್ 8 ನಂತರ 4:26 PM

ಅಕ್ಟೋಬರ್ 10, 11, 17

ಅಕ್ಟೋಬರ್ 18 ಬೆಳಿಗ್ಗೆ 8:50 ರವರೆಗೆ

ಅಕ್ಟೋಬರ್ 19

ಅಕ್ಟೋಬರ್ 23 ಬೆಳಿಗ್ಗೆ 6:4 ರವರೆಗೆ

ಅಕ್ಟೋಬರ್ 24, 25, 26, 29, 30

ಅಕ್ಟೋಬರ್ 31 ರಿಂದ 7:02 AM

5 ಅಕ್ಟೋಬರ್ - ವಿಭುವನ ಸಂಕಷ್ಟಿ ಚತುರ್ಥಿ

5 ಅಕ್ಟೋಬರ್ - ವಿಭುವನ ಸಂಕಷ್ಟಿ ಚತುರ್ಥಿ

ಈ ದಿನದ ವಿಶೇಷತೆ ಎಂದರೆ, ಇಂದು ಗಣೇಶನಿಗೆ ಪೂಜೆ ಮಾಡಿದರೆ ಅಡೆತಡೆಗಳನ್ನು ತೆಗೆದುಹಾಕುವುದು, ಸಮಸ್ಯೆಗಳನ್ನು ನಿವಾರಿಸುವುದು, ಜ್ಞಾನ ವೃದ್ಧಿಗೆ, ಹೊಸ ಪ್ರಯತ್ನಗಳ ಪ್ರಾರಂಭ, ಒಳ್ಳೆಯ ಯೋಗ ಸಿಗುತ್ತದೆ ಎಂದು ಹೇಳಲಾಗುತ್ತದೆ.

9 ಅಕ್ಟೋಬರ್ - ಅಧಿಕಾರ ಕಲಾಷ್ಟಮಿ

9 ಅಕ್ಟೋಬರ್ - ಅಧಿಕಾರ ಕಲಾಷ್ಟಮಿ

ಈ ದಿನದ ವಿಶೇಷತೆ ಎಂದರೆ, ಅಧಿಕಾರ ಕಲಾಷ್ಟಮಿಯು ನಮ್ಮ ಜೀವನದಲ್ಲಿ ಪೂರ್ಣತೆ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ, ಮಾನಸಿಕ ಭಯವನ್ನು ತೆಗೆದುಹಾಕುತ್ತದೆ, ವೈವಾಹಿಕ ಜೀವನದಲ್ಲಿ ಸಾಮರಸ್ಯ, ಉತ್ತಮ ಸಂಗಾತಿಯನ್ನು ಪಡೆಯುವ ಅವಕಾಶಗಳು ಹೆಚ್ಚಿವೆ, ಗಂಭೀರ ಅನಾರೋಗ್ಯವನ್ನು ತೆಗೆದುಹಾಕುವುದು, ಸಂಪತ್ತು ವೃದ್ಧಿ ಆಗ ಬಯಸುವವರು ಈ ದಿನ ವಿಶೇಷ ಪೂಜೆ ಸಲ್ಲಿಸಿದರೆ ಒಳಿತು.

14 ಅಕ್ಟೋಬರ್ - ಪ್ರದೋಷ

14 ಅಕ್ಟೋಬರ್ - ಪ್ರದೋಷ

ಈ ದಿನದ ವಿಶೇಷತೆ ಎಂದರೆ, ಆಧ್ಯಾತ್ಮಿಕ ಮತ್ತು ಪ್ರಗತಿ, ಪ್ರತಿರೋಧಗಳು, ಸಮಸ್ಯೆಗಳನ್ನು ತೆಗೆದುಹಾಕುವುದು, ಸಂತೋಷ, ಆರೋಗ್ಯ ಮತ್ತು ಸಕಾರಾತ್ಮಕ ಬೆಂಬಲ ಸಿಗುತ್ತದೆ.

15 ಅಕ್ಟೋಬರ್ - ಮಾಸಿಕ ಶಿವರಾತ್ರಿ

15 ಅಕ್ಟೋಬರ್ - ಮಾಸಿಕ ಶಿವರಾತ್ರಿ

ಈ ದಿನ ಶಿವನ್ನು ಆರಾಧಿಸಿದರೆ, ಜೀವನದಲ್ಲಿ ಪ್ರಗತಿ ಸಿಗುತ್ತದೆ, ಪ್ರತಿರೋಧಗಳು ಮತ್ತು ಸಮಸ್ಯೆಗಳನ್ನು ತೆಗೆದುಹಾಕುತ್ತೀರಿ, ಸಂತೋಷ, ಆರೋಗ್ಯ ಮತ್ತು ಸಕಾರಾತ್ಮಕ ಬೆಂಬಲ ನಿಮ್ಮದಾಗುತ್ತದೆ.

17 ಅಕ್ಟೋಬರ್ - ಶಾರ್ದಿಯಾ ನವರಾತ್ರಿ ಪ್ರಾರಂಭ (ಮಾತೃ ದೈವದ ಒಂಬತ್ತು ದಿನಗಳು)

17 ಅಕ್ಟೋಬರ್ - ಶಾರ್ದಿಯಾ ನವರಾತ್ರಿ ಪ್ರಾರಂಭ (ಮಾತೃ ದೈವದ ಒಂಬತ್ತು ದಿನಗಳು)

ನವರಾತ್ರಿ ಆರಂಭದ ಈ ದಿನದಿಂದ ದೇವಿಯನ್ನು ಆರಾಧಿಸಲಾಗುತ್ತದೆ, ಪ್ರತಿ ದಿನ ಒಂದೊಂದು ದೇವಿಯ ಆರಾಧನೆಯು ಸಕಲ ಸನ್ಮಂಗಳವನ್ನುಂಟು ಮಾಡುತ್ತದೆ. 17ರಂದು ಮೊದಲ ದಿನದ ಪೂಜೆಯಿಂದ ಸಂಪತ್ತು, ಸಮೃದ್ಧಿ, ಆರೋಗ್ಯ, ದೀರ್ಘಾಯುಷ್ಯ, ಜ್ಞಾನ, ಸಂಪತ್ತು, ಆಧ್ಯಾತ್ಮಿಕ ಪ್ರಗತಿ, ಆರೋಗ್ಯದ ಸುಧಾರಣೆ, ವ್ಯವಹಾರದಲ್ಲಿ ಯಶಸ್ಸು, ವೈವಾಹಿಕ ಜೀವನದಲ್ಲಿ ಸಾಮರಸ್ಯ ನಿಮ್ಮದಾಗಲು ಈ ದಿನದಿಂದ ಪೂಜೆ ಆರಂಭಿಸಬೇಕು.

21 ಅಕ್ಟೋಬರ್ - ಸ್ಕಂದ ಶಷ್ಟಿ

21 ಅಕ್ಟೋಬರ್ - ಸ್ಕಂದ ಶಷ್ಟಿ

ಈ ದಿನ ದೈವದ ಮೊರೆ ಹೋಗುವುದರಿಂದ ನಾಯಕತ್ವ ಗುಣ, ಮಾನಸಿಕ ಭಯದ ನಿರ್ಮೂಲನೆ, ಹೆಚ್ಚಿದ ದೈಹಿಕ ಮತ್ತು ಮಾನಸಿಕ ಶಕ್ತಿ ನಮ್ಮದಾಗುತ್ತದೆ.

24 ಅಕ್ಟೋಬರ್ - ದುರ್ಗಾ ಅಷ್ಟಮಿ

24 ಅಕ್ಟೋಬರ್ - ದುರ್ಗಾ ಅಷ್ಟಮಿ

ಈ ದಿನ ದುರ್ಗೆಯ ಆರಾಧನೆ ಮಾಡುವುದರಿಂದ ಅವಳು ನಮ್ಮನ್ನು ರಕ್ಷಿಸುತ್ತಾಳೆ, ಆಸೆಗಳನ್ನು ಈಡೇರಿಸುತ್ತಾಳೆ, ಮನಸ್ಸಿನ ಶಾಂತಿ, ವೈವಾಹಿಕ ಜೀವನದಲ್ಲಿ ಸಾಮರಸ್ಯ,

ಸಂಪತ್ತು, ಅನಾರೋಗ್ಯದಿಂದ ವೇಗವಾಗಿ ಚೇತರಿಸಿಕೊಳ್ಳುವುದು, ಅಡೆತಡೆಗಳಿಂದ ಸ್ವಾತಂತ್ರ್ಯ, ಆಧ್ಯಾತ್ಮಿಕ ಪ್ರಗತಿ ನಮ್ಮದಾಗುತ್ತದೆ.

ಅಶುಭ ದಿನಗಳು

ಅಶುಭ ದಿನಗಳು

ಅಕ್ಟೋಬರ್ 3, 7, 8, 16, 20 ಮತ್ತು ಅಕ್ಟೋಬರ್ 23 ಈ ದಿನಗಳು ಯಾವುದೇ ಶುಭ ಕಾರ್ಯ, ವ್ಯಾಪಾರ ನಡೆಸುವುದನ್ನು ತಪ್ಪಿಸಿ.

English summary

Hindu Festivals, Auspicious Dates in the Month of October 2020

Here we are discussing about Hindu Auspicious Dates in the Month of October 2020. Hindu auspicious days are looked for buying selling and various other purposes. Good dates in October 2020 in Hindu calendar given below are based on India Standard Time. Read more.
X
Desktop Bottom Promotion