For Quick Alerts
ALLOW NOTIFICATIONS  
For Daily Alerts

ವಿಘ್ನ ನಿವಾರಕ, ಅಷ್ಟ ನಾಮ 'ಗಣಪನಿಗೆ' ಇದೋ ನಮೋ ನಮಃ

By Manu
|

ದೇವರೊಬ್ಬನೆ ನಾಮ ಹಲವು ಎನ್ನುವ ಮಾತಿದೆ. ನಾವು ದೇವರನ್ನು ಯಾವುದೇ ವಿಧದಿಂದ ಪೂಜಿಸಿದರೂ ಅದು ಸಲ್ಲಿಕೆಯಾಗುವುದು ಒಬ್ಬನಿಗೆ ಮಾತ್ರ. ಅದರಲ್ಲೂ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತವೆ ಪುರಾಣಗಳು. ಮುಕ್ಕೋಟಿ ದೇವರಲ್ಲಿ ಪ್ರಥಮವಾಗಿ ಪೂಜೆ ಸಲ್ಲಿಕೆಯಾಗುವುದು ಗಣಪತಿಗೆ. ಯಾವುದೇ ಕೆಲಸವನ್ನು ಆರಂಭಿಸಲು ಗಣಪತಿಯನ್ನು ಮೊದಲು ಪೂಜಿಸಲಾಗುತ್ತವೆ. ಗಣಪತಿಗೆ ಹಲವಾರು ನಾಮಗಳು ಕೂಡ ಇವೆ.

ಸಂಕಷ್ಟಹರ ವಿನಾಯಕನ ಭಕ್ತಿಪೂರ್ಣ 32 ಅವತಾರಗಳು

ಗಣಪತಿಯನ್ನು ಗಣೇಶ, ಗಜಮುಖ, ವಿನಾಯಕ ಹೀಗೆ ನಾನಾ ಹೆಸರಿನಿಂದ ಕರೆಯುತ್ತಾರೆ. ಗಣಪತಿಯ ನಾಮಗಳ ಬಗ್ಗೆ ಇರುವ ಅರ್ಥಗಳು ಏನು ಎಂದು ಗಣೇಶ ಚತುದರ್ಶಿ ಸಂದರ್ಭದಲ್ಲಿ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಗಣಪತಿಯ ಎಂಟು ಅವತಾರಗಳನ್ನು ಬಗ್ಗೆ ತಿಳಿದುಕೊಂಡು ಪೂಜಿಸಿದರೆ ಭಕ್ತರಿಗೆ ಸುಖ, ಸಮೃದ್ಧಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ...

ಏಕದಂತ

ಏಕದಂತ

ಸೊಕ್ಕು ಅಥವಾ ಮದವನ್ನು ಮುರಿದ ಗಣಪತಿ ದೇವರ ಅವತಾರವೇ ಏಕದಂತ. ನೀಲಿ ಬಣ್ಣದಲ್ಲಿ ದೊಡ್ಡ ಹೊಟ್ಟೆಯ ಗಣಪತಿ ದೇವರ ಒಂದು ದಂತವು ಅರ್ಧ ತುಂಡಾಗಿರುವುದು. ಕೈಯಲ್ಲಿರುವ ಕೊಡಲಿಯು ಅಜ್ಞಾನದ ಬಂಧಗಳನ್ನು ಭೇದಿಸಲು ಇರುವಂತದ್ದಾಗಿದೆ. ಜಪ, ಮಂತ್ರೋಚ್ಛಾರ, ಸಿಹಿ ಲಡ್ಡು ಅಥವಾ ಮೋದಕದಿಂದ ಗಣಪತಿ ದೇವರನ್ನು ಒಲಿಸಿಕೊಳ್ಳಬಹುದು.

ಧನ ಮದದ ಪ್ರತಿರೂಪ ಕುಬೇರನ ಸೊಕ್ಕಡಗಿಸಿದ ಬಾಲ ಗಣೇಶನ ಕಥಾನಕ

ಧೂರ್ಮವರ್ಣ

ಧೂರ್ಮವರ್ಣ

ಧೂರ್ಮವೆಂದರೆ ಹೊಗೆ ಎಂದರ್ಥ. ಧೂರ್ಮವರ್ಣವೆಂದರೆ ಹೊಗೆಯ ಬಣ್ಣದವನೆಂದು ಅರ್ಥ. ಧೂಮವು ಅಪ್ರಜ್ಞಾಪೂರ್ವಕ ನಡುವಿನ ಸಂವೇದನಶೀಲ ಸ್ಥಿತಿ. ಇದರ ಅರ್ಥವೇನೆಂದರೆ ದೇವರು ಎನ್ನುವುದು ಮೂಲ. ಸ್ಪಷ್ಟ ಅಥವಾ ಅಸ್ಪಷ್ಟತೆ ಎನ್ನುವುದು ಮಾತ್ರ ವಾಸ್ತವತೆ. ಈ ರೂಪದಲ್ಲಿ ಗಣಪತಿ ದೇವರು ಹೆಮ್ಮೆಯ ಮೇಲೆ ಆಳ್ವಿಕೆ ಮಾಡುವರು.

 ವಕ್ರತುಂಡ

ವಕ್ರತುಂಡ

ವಕ್ರತುಂಡವೆಂದರೆ ವಕ್ರವಾಗಿರುವ ಸುಂಡಿಲು ಎಂದರ್ಥ. ಗಣಪತಿ ದೇವರು ಅಥವಾ ವಕ್ರತುಂಡ ಅಸೂಯೆಯನ್ನು ಪರಾಜಿತಗೊಳಿಸವರು. ತಪ್ಪು ಹಾಗೂ ಕೆಡುಕನ್ನು ಮಾಡುವವರನ್ನು ಅವರು ಸರಿ ದಾರಿಗೆ ತರುವರು.

ಮೋಹದರ

ಮೋಹದರ

ಮೋಹದರನೆಂದರೆ ದೊಡ್ಡ ಹೊಟ್ಟೆಯ ಗಣಪತಿ ದೇವರು. ಅವರ ಹೊಟ್ಟೆಯಲ್ಲಿ ಸಂಪೂರ್ಣ ಭೂಮಿಯೇ ಇದೆಯೆಂತೆ. ಗಣಪತಿ ದೇವರು ಸತ್ಯವನ್ನು ಮರೆಮಾಚುವಂತಹ ಮೋಹವನ್ನು ತೊಡೆದು ಹಾಕುವರು.

ಗಜಾನನ

ಗಜಾನನ

ಆನೆಯ ಮುಖ ಹೊಂದಿರುವ ಗಣಪತಿ ದೇವರು ಮನಸ್ಸಿಗೆ ಶಾಂತಿ ಹಾಗೂ ತೃಪ್ತಿ ತರಲು ಅಡ್ಡಿ ಮಾಡುವಂತಹ ಲೋಭ ಅಥವಾ ದುರಾಸೆಯನ್ನು ನಿವಾರಣೆ ಮಾಡುವರು.

ಲಂಬೋಧರ

ಲಂಬೋಧರ

ದೊಡ್ಡ ಹೊಟ್ಟೆಗೆ ಹಾವನ್ನು ಸುತ್ತಿಕೊಂಡಿರುವಂತಹ ಗಣಪತಿ ದೇವರು ಕ್ರೋಧ ಅಥವಾ ಕೋಪವನ್ನು ದೂರ ಮಾಡುವರು. ಗಣಪತಿ ದೇವರು ನಕಾರಾತ್ಮಕ ಭಾವನೆಯನ್ನು ತೆಗೆದು ಹಾಕುವರು.

ವಿಕಟ

ವಿಕಟ

ವಿಕಟ ಎಂದರೆ ವಿಕಾರಗೊಂಡಿರುವ ರೂಪವೆಂದರ್ಥವಿದೆ. ಗಣಪತಿ ದೇವರ ದೊಡ್ಡ ಹೊಟ್ಟೆ, ಆನೆಯ ಮುಖದಂತಹ ಒಂದು ಅಸಾಮಾನ್ಯ ದೇಹವನ್ನು ವಿಕಟವೆಂದು ಕರೆಯಲಾಗುತ್ತದೆ. ಈ ಅಸಹಜ ರೂಪವು ಭಕ್ತರು ದೇವರನ್ನು ಒಂದೇ ರೂಪದಲ್ಲಿ ನೋಡಲು ಸಾಧ್ಯವಿಲ್ಲ. ಇದಕ್ಕಾಗಿ ಭಕ್ತರು ತುಂಬಾ ತಪಸ್ಸು ಮಾಡಬೇಕು ಎಂದು ಸೂಚಿಸುತ್ತದೆ. ಗಣಪತಿ ದೇವರು ಕರ್ಮದ ಮೇಲೆ ಜಯ ಪಡೆದಿರುವರು.

ವಿಘ್ನರಾಜ

ವಿಘ್ನರಾಜ

ವಿಘ್ನಗಳನ್ನು ದೂರ ಮಾಡುವ ಗಣಪತಿ ದೇವರನ್ನು ವಿಘ್ನರಾಜನೆಂದು ಕರೆಯುತ್ತಾರೆ. ಮನುಷ್ಯರು ತಮ್ಮ ಜೀವನದಲ್ಲಿ ಹಲವಾರು ರಿತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನೇ ದೊಡ್ಡ ಸಮಸ್ಯೆಗಳೆಂದು ಭಾವಿಸಲಾಗುತ್ತದೆ. ಆದರೆ ಅಹಂನ್ನು ದೂರ ಮಾಡಬೇಕು. ಗಣಪತಿ ದೇವರಿಗೆ ಶರಣಾದರೆ ನಮ್ಮ ಜೀವನದಲ್ಲಿ ಎದುರಾಗುವಂತಹ ಹಲವಾರು ಸಮಸ್ಯೆಗಳು ದೂರವಾಗುವುದು ಮತ್ತು ಯಶಸ್ಸು ಸಿಗುವುದು.

English summary

Ganesha's Eight Forms-Names-Recall On Ganesh Chaturthi festival

The Lord is one but His forms are many. The formless reality assumes a form owing to one's own identification with a form. Hence the formless Lord is attributed with a form owing to one's association and identification with a form and name. The eight formsand are manifestations to quell the eight human weaknesses by understanding them and worshipping the Lord.
X
Desktop Bottom Promotion