For Quick Alerts
ALLOW NOTIFICATIONS  
For Daily Alerts

ಇಲ್ಲಿದೆ ಮಹಾಕಾಳಿಯ 10 ಅವತಾರಗಳು

|

ಭೂಮಿ ಮೇಲೆ ಅಧರ್ಮವು ಹೆಚ್ಚಾಗಿ, ರಾಕ್ಷಸರ ಕಾಟವು ಎಲ್ಲೆ ಮೀರಿದ ವೇಳೆ ಮಹಾದೇವಿಯು ಹಲವಾರು ಅವತಾರಗಳನ್ನು ತಾಳಿ ದುಷ್ಟ ಸಂಹಾರ ನಡೆಸುವರು. ಈ ರೀತಿ ದುಷ್ಟಸಂಹಾರ ಮಾಡುವ ವೇಳೆ ಅವರು ಧರಿಸಿದ ಒಂದು ಅವತಾರವೇ ಕಾಳಿ ಅವತಾರ. ಕಾಳಿಯು ಮಹಾದೇವಿಯ ಅತ್ಯಂತ ರುದ್ರ ಅವತಾರ ಎಂದು ಪರಿಗಣಿಸಲಾಗಿದೆ. ಕಾಳಿ ದೇವಿಯು ದುಷ್ಟರ ಸಂಹರಿಸುವಾಕೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಕಾಳಿ ಅವತಾರ ಇನ್ನಷ್ಟು ಇದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

ದೀಪಾವಳಿ ಹಬ್ಬದಲ್ಲಿ ಉತ್ತರ ಭಾರತದ ಬಹುತೇಕ ಕಡೆ ಹಾಗೂ ದಕ್ಷಿಣ ಭಾರತದ ಕೆಲವೆಡೆ ದುಷ್ಟ ಸಂಹಾರಕಿ ಕಾಳಿ ಮಾತೆಯನ್ನು ಪೂಜೆ ಮಾಡಲಾಗುತ್ತದೆ. 2019ರಲ್ಲಿ ಅಕ್ಟೋಬರ್ 25ರಿಂದ ಆರಂಭವಾಗಿ 29ರವರೆಗೆ ದೀಪವಾಳಿಯನ್ನು ಆಚರಿಸಲಾಗುತ್ತದೆ. 27ರಂದು ಪ್ರಮುಖವಾಗಿ ಕಾಳಿ ಮಾತೆಯನ್ನು ಆರಾಧಿಸಲಾಗುತ್ತದೆ. ಈ ಹಬ್ಬದ ಹಿನ್ನೆಲೆ ಕಾಳಿ ಮಾತೆಯ ಅವತಾರಗಳ ಬಗ್ಗೆ ಮತ್ತಷ್ಟು ತಿಳಿಯೋಣ.

Maha Kali

ಪುರಾಣಗಳು ಹೇಳುವ ಪ್ರಕಾರ ಕಾಳಿಯ ಹತ್ತು ಅವತಾರಗಳು ಇವೆ ಮತ್ತು ಇವುಗಳನ್ನು ಭಕ್ತರು ತುಂಬಾ ಶ್ರದ್ಧಾಭಕ್ತಿಯಿಂದ ಆರಾಧಿಸುವರು. ಇದನ್ನು ದಶ ಮಹಾವಿದ್ಯಾ ಕಾಳಿ' ಎಂದೂ ಕರೆಯುವರು. ಕಾಳಿಯ ಪ್ರತಿಯೊಂದು ಅವತಾರಕ್ಕೂ ತನ್ನದೇ ಆಗಿರುವ ಪ್ರಾಮುಖ್ಯತೆ ಇದೆ. ಕಾಳಿಯನ್ನು ಆದಿಶಕ್ತಿ ಅಥವಾ ಕುಂಡಲಿನಿ ಶಕ್ತಿ ಎಂದು ಕರೆಯುವರು. ಈ ಶಕ್ತಿಯು ಆತ್ಮಶಕ್ತಿ ಅಥವಾ ಬೆಳಕು ಎನ್ನಲಾಗುತ್ತದೆ. ಇದು ಭೂಮಿಗೆ ಜೀವ ನೀಡಬಹುದು ಅಥವಾ ಅದನ್ನು ದಹಿಸಬಹುದು. ಕಾಳಿ ಮಾತೆಯ ಹತ್ತು ಅವತಾರಗಳ ಬಗ್ಗೆ ನಾವು ಇಲ್ಲಿ ತಿಳಿಯುವ....

1. ಕಾಳಿ

1. ಕಾಳಿ

ಇದು ಕಾಳಿಯ ತುಂಬಾ ಜನಪ್ರಿಯ ಅವತಾರವಾಗಿದ್ದು, ಇದನ್ನು ಮೂಲ ಅವತಾರವೆಂದು ಕರೆಯುವರು. ರಾಕ್ಷಸರ ರಕ್ತದಿಂದ ಕಾಳಿ ಮಾತೆಯ ದೇಹದಲ್ಲಿ ವಿಷ ಆವರಿಸಿದ ವೇಳೆ ಆಕೆ ಈಶ್ವರ ದೇವರನ್ನು ತುಳಿಯುವರು(ಆಕೆಯ ಪತಿ) ಮತ್ತು ಅವಮಾನದಿಂದ ತನ್ನ ನಾಲಗೆ ಹೊರಚಾಚುವರು. ಈ ವೇಳೆ ಕಾಳಿಯ ಮುಖವು ದಕ್ಷಿಣಾಭಿಮುಖವಾಗಿದ್ದ ಕಾರಣದಿಂದಾಗಿ ಆಕೆಯನ್ನು ದಕ್ಷಿಣ ಕಾಳಿ, ಮಹಾ ಕಾಳಿ ಮತ್ತು ರಾಕ್ಷಸರಾದ ಚಂಡಮುಂಡರ ವಧಿಸಿದ ಕಾರಣದಿಂದಾಗಿ ಆಕೆಯನ್ನು `ಚಾಮುಂಡಿ' ಎಂದು ಕರೆಯುವರು. ಮಹಾಕಾಳಿಯ ತುಂಬಾ ರುದ್ರ ರೂಪವೆಂದರೆ ಆಕೆಯ ಬಾಯಿಯಿಂದ ರಕ್ತವು ಹರಿದುಬರುವುದು. ಮಹಾಕಾಳಿಯು ರಾಕ್ಷಸರ ವಧೆ ಮಾಡುತ್ತಿರುವ ವೇಳೆ ಈಶ್ವರನು ತುಂಬಾ ಶಾಂತ ಸ್ವರೂಪನನಾಗಿ ಆಕೆಯೊಂದಿಗೆ ಇರುವನು.

2. ಮಾತಂಗಿ ಕಾಳಿ

2. ಮಾತಂಗಿ ಕಾಳಿ

ಜ್ಞಾನದ ದೇವತೆ ಸರಸ್ವತಿಯ ಮರುಜನ್ಮ ಇದಾಗಿದ್ದು, ತಂತ್ರವಿದ್ಯೆಯ ದೇವಿ ಎಂದು ಹೇಳಲಾಗುತ್ತದೆ. ಮಾತಂಗಿ ಕಾಳಿಗೆ ಅರ್ಧ ತಿಂದ ಊಟ ಅಥವಾ ಹಳಸಿದ ಆಹಾರವನ್ನು ಎಡ ಕೈಯಿಂದ ಬಡಿಸಲಾಗುತ್ತದೆ. ಈಕೆಯನ್ನು ಚಂಡಾಲಿನಿ ಎಂದು ಕರೆಯುವರು. ಚಂಡಾಲ ಎಂದರೆ ಅಸ್ಪರ್ಶ ಎಂದು ಹೇಳಲಾಗುತ್ತದೆ. ಮಾತಂಗಿ ಕಾಳಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲಾಗುವುದಿಲ್ಲ.

3. ಚಿನ್ನ ಮಸ್ತ

3. ಚಿನ್ನ ಮಸ್ತ

ಇದು ಕಾಳಿ ಮಾತೆಯ ತುಂಬಾ ವಿಚಿತ್ರ ಅವತಾರವಾಗಿದೆ. ಚಿನ್ನ ಮಸ್ತ ಎಂದರೆ ರುಂಡವಿಲ್ಲದೆ ಇರುವುದು. ಈ ಕಾಳಿ ಅವತಾರದಲ್ಲಿ ತನ್ನದೇ ಶಿರವನ್ನು ಕೈಯಲ್ಲಿ ಹಿಡಿದುಕೊಂಡಿರುವರು ಮತ್ತು ಕುತ್ತಿಗೆಯಿಂದ ಬರುತ್ತಿರುವ ರಕ್ತವನ್ನು ಈ ಶಿರವು ಕುಡಿಯುತ್ತಿರುವುದು. ಇಂತಹ ರೌದ್ರವತಾರದಲ್ಲಿಯೂ ಕಾಳಿ ಮಾತೆಯ ಕಾಲ ಬುಡದಲ್ಲಿ ದಂಪತಿಯ(ರಾಧೆ ಮತ್ತು ಕೃಷ್ಣ) ಮೂರ್ತಿಯಿದೆ. ಇದು ಜನನ ಹಾಗೂ ಮರಣದ ಸಂಕೇತವಾಗಿದೆ.

4. ಸ್ಮಶಾನ ಕಾಳಿ

4. ಸ್ಮಶಾನ ಕಾಳಿ

ಈಕೆ ಸ್ಮಶಾನದಲ್ಲಿ ಎಲ್ಲವನ್ನು ನೋಡಿಕೊಳ್ಳೂವಂತಹ ದೇವಿ. ಈ ಅವತಾರದ ದೇವಿಯನ್ನು ಕೇವಲ ರುದ್ರಭೂಮಿ ಹಾಗೂ ಸ್ಮಶಾನದಲ್ಲಿ ಮಾತ್ರ ಪೂಜಿಸಲಾಗುತ್ತದೆ. ಚಾಚಿಕೊಂಡಿರುವಂತಹ ನಾಲಗೆಯು ಈ ಕಾಳಿ ಅವತಾರಕ್ಕಿಲ್ಲ ಮತ್ತು ಕೇವಲ ಎರಡು ಕೈಗಳು ಮಾತ್ರ ಇದೆ. ಇದು ಮನುಷ್ಯರ ಅವತಾರದಂತೆ ಇದೆ.

5. ಬಾಗಲ ಕಾಳಿ

5. ಬಾಗಲ ಕಾಳಿ

ಇದು ಕಾಳಿಯ ತುಂಬಾ ರುದ್ರ ರೂಪವಾಗಿದೆ. ಆದರೂ ಆಕೆಯ ಸೌಂದರ್ಯವು ಇಲ್ಲಿ ಪ್ರಜ್ವಲಿಸುವುದು. ಇಲ್ಲಿ ಆಕೆಯ ಮೈಬಣ್ಣವು ಬಿಳಿಯಾಗಿದೆ ಮತ್ತು ರಾಕ್ಷಸರ ನಾಲಗೆಯನ್ನು ಎಳೆಯುತ್ತಿರುವುದನ್ನು ತೋರಿಸಲಾಗಿದೆ.

6. ಭೈರವಿ ಕಾಳಿ

6. ಭೈರವಿ ಕಾಳಿ

ಆಕೆಯು ಸಾವಿನ ಮುನ್ನುಡಿ ಎಂದು ಪುರಾಣಗಳಲ್ಲಿ ಬಣ್ಣಿಸಲಾಗಿದೆ. ಆದರೆ ಈ ಅವತಾರದಲ್ಲಿನ ಕಾಳಿ ಮಾತೆಯು ರಾಕ್ಷಸರಿಂದ ತನ್ನ ಮಕ್ಕಳನ್ನು ರಕ್ಷಿಸುವಳು. ತ್ರಿಪುರದಲ್ಲಿ ಕಾಳಿ ಮಾತೆಯ ಈ ಅವತಾರವನ್ನು ಪೂಜಿಸಲಾಗುತ್ತದೆ.

7. ತಾರ

7. ತಾರ

ಈ ಅವತಾರದಲ್ಲಿ ದೇವಿಯು ತಿಳಿನೀಲಿ ಮೈಬಣ್ಣದಲ್ಲಿ ಕಾಣಿಸಿಕೊಳ್ಳುವರು. ಆಕೆ ಇಲ್ಲಿ ಹುಲಿಯ ಚರ್ಮ ಧರಿಸಿಕೊಂಡಿರುವಳು.

8. ಷೋಡೊಶಿ

8. ಷೋಡೊಶಿ

ಈ ಅವತಾರದಲ್ಲಿ ಕಾಳಿ ದೇವಿಯನ್ನು ಪ್ರಲೋಭನಕಾರಿ ಎಂದು ಬಣ್ಣಿಸಲಾಗಿದೆ. ಆಕೆ ಶಿವನ ನಾಭಿಯಿಂದ ಜನ್ಮ ಹೊರಬಂದ ಹದಿಹರೆಯದ ಹುಡುಗಿಯಾಗಿದ್ದು, ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರ ಆಕೆಗೆ ಗೌರವ ಸೂಚಿಸುವರು.

9. ಕಮಲ ಕಾಳಿ

9. ಕಮಲ ಕಾಳಿ

ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುವಂತಹ ಲಕ್ಷ್ಮೀ ದೇವಿಯ ಅವತಾರ ಇದಾಗಿದೆ. ದಕ್ಷಿಣ ಭಾರತದಲ್ಲಿ ಕಾಳಿಯ ಈ ಅವತಾರವನ್ನು `ಗಜ ಕಾಳಿ' ಎಂದು ಪೂಜಿಸುವರು. ಆಕೆಯ ಪಕ್ಕದಲ್ಲಿ ಎರಡು ಆನೆಗಳು ಇವೆ.

10. ಧೂಮಾವತಿ

10. ಧೂಮಾವತಿ

ಇದು ಕಾಳಿ ಮಾತೆಯ ವಿಧವೆಯ ರೂಪವನ್ನು ತೋರಿಸುವುದು. ಹಿಂದೂ ಪುರಾಣದಲ್ಲಿ ಈಕೆ ಮಾತ್ರ ವಿಧವೆ ದೇವಿ ಎಂದು ಹೇಳಲಾಗುತ್ತದೆ. ಈಕೆಯನ್ನು `ಧೂಮ ದೇವಿ' ಅಥವಾ `ಹೊಗೆಯ ಆತ್ಮ' ಎಂದು ಪರಿಗಣಿಸಲಾಗಿದೆ. ಶುಭ ಹಾಗೂ ಒಳ್ಳೆಯದನ್ನು ನೀಡುವ ಲಕ್ಷ್ಮೀಗೆ ವಿರುದ್ಧವಾಗಿ ಬಿಂಬಿಸಲಾಗಿದೆ. ನಾವು ಧೂಮಾವತಿ ಅಥವಾ ಅಲ್ಕಶ್ಮಿಯನ್ನು ಪೂಜಿಸುವ ವೇಳೆ ಆಕೆಯನ್ನು ನಮ್ಮ ಮನೆಯಿಂದ ಹೋಗುವಂತೆ ಪ್ರಾರ್ಥಿಸುತ್ತೇವೆ. ಈ ಹತ್ತು ಪ್ರಮುಖ ಅವತಾರದ ಜತೆಗೆ ಇನ್ನು ಕೆಲವು ಸಣ್ಣ ಅವತಾರಗಳು ಇವೆ. ಇದರಲ್ಲಿ ಮುಖ್ಯವಾಗಿ ಡಕತ್ ಕಾಳಿ(ಡಕಾಯಿತರ ದೇವಿ), ಭದ್ರ ಕಾಳಿ(ಭೈರವಿ ದೇವಿಗೆ ಸಮಾನ) ಇತ್ಯಾದಿ.

Read more about: festival ಹಬ್ಬ
English summary

Forms Of Maha Kali

There are 10 forms of kali avatra. Each avatar has it's own significance. Each avatar will be known for different name. Here we have explained about diiferent forms of kali avtar, read on...
Story first published: Saturday, October 26, 2019, 16:28 [IST]
X
Desktop Bottom Promotion