For Quick Alerts
ALLOW NOTIFICATIONS  
For Daily Alerts

ಈ ಎಂಟು ಹೂವುಗಳು ಹಿಂದೂ ದೇವತೆಗಳಿಗೆ ತುಂಬಾನೇ ಅಚ್ಚುಮೆಚ್ಚಂತೆ

|

ಹೂವು ಮನಸ್ಸನ್ನು ಹಗುರ ಗೊಳಿಸಿ ಸಂತೋಷದ ಭಾವನೆಯನ್ನು ಉಂಟುಮಾಡುತ್ತದೆ. ಸಮೃದ್ಧಿ ಹಾಗೂ ಸೌಂದರ್ಯದ ಪ್ರತೀಕವಾದ ಹೂವು ಪ್ರಪಂಚದ ಸೃಷ್ಟಿಯಲ್ಲೊಂದು ಅದ್ಭುತವಾದ ಸಂಗತಿ. ಸುಂದರ ಹಾಗೂ ಕೋಮಲತೆಯನ್ನು ಸಂಕೇತಿಸುವ ಹೂವುಗಳನ್ನು ದೇವರ ಪೂಜೆಗೆ, ಶುಭ ಸಮಾರಂಭಗಳ ಆಚರಣೆಗೆ ವಿಶೇಷವಾಗಿ ಬಳಸುತ್ತಾರೆ. ಹಿಂದೂ ಧರ್ಮದಲ್ಲಿ ದೇವರ ಆರಾಧನೆಗೆ ಅಥವಾ ಪ್ರಾರ್ಥನೆಗೆ ಹೂವುಗಳನ್ನು ಬಳಸಲಾಗುವುದು. ಹೂವನ್ನು ದೇವರ ಪಾದಗಳಿಗೆ ಅರ್ಪಿಸುವುದರ ಮೂಲಕ ದೇವರ ಪ್ರೀತಿಗೆ ಪಾತ್ರ ನಾಗುತ್ತಾನೆ.

ನಿರ್ಮಲವಾದ ಮನಸ್ಸಿನಿಂದ ದೇವರಿಗೆ ಹೂವನ್ನು ಅರ್ಪಿಸಿದರೆ ನಮ್ಮ ಪ್ರಾರ್ಥನೆ ಅಥವಾ ಕೋರಿಕೆಗಳು ದೇವರಿಗೆ ಕೇಳುತ್ತದೆ ಎಂದು ಹೇಳಲಾಗುವುದು. ಹಿಂದೂ ಧರ್ಮದಲ್ಲಿ ದೇವರ ಆರಾಧನೆ ಅಥವಾ ಪ್ರಾರ್ಥನೆ ಸಲ್ಲಿಸಲು ಹೂವು ಇರಬೇಕು. ಹೂವು ಇಲ್ಲದೆಯೇ ಪೂಜೆಯು ಸಂಪೂರ್ಣವಾಗದು. ವಿವಿಧ ಹೂವುಗಳಿಂದ ದೇವರ ಅಲಂಕಾರ ಮಾಡುವುದು, ಹೂವುಗಳಿಂದಲೇ ದೇವಸ್ಥಾನ ಹಾಗೂ ದೇವರ ಮನೆಯನ್ನು ಸಹ ಸಿಂಗರಿಸಲಾಗುವುದು. ಹೀಗೆ ಮಾಡುವುದರಿಂದ ದೇವರಿಗೆ ಸಂತೋಷವಾಗುವುದು. ಸಂತೋಷಗೊಂಡ ದೇವರು ಅಥವಾ ತೃಪ್ತನಾದ ದೇವರು ನಮ್ಮ ಆಸೆ, ಅಭಿಲಾಷೆಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆಯಿದೆ. ಹೂವಿನ ಅಲಂಕಾರ, ಪೂಜೆಯ ವಿಧಿ-ವಿಧಾನಗಳು ಸೂಕ್ತ ನಿಯಮದ ಅಡಿಯಲ್ಲಿ ನಡೆಯುತ್ತದೆ. ಹೂವಿನ ಅಲಂಕಾರದಲ್ಲೂ ವಿಶೇಷ ನಿಯಮಗಳನ್ನು ಅನುಸರಿಸಬೇಕಾಗುವುದು.

ಹಿಂದೂ ಧರ್ಮದಲ್ಲಿ ಹೂವುಗಳು ಹಾಗೂ ದಳಗಳು ಅತ್ಯಂತ ಪ್ರಿಯವಾದ ವಸ್ತು

ಹಿಂದೂ ಧರ್ಮದಲ್ಲಿ ಹೂವುಗಳು ಹಾಗೂ ದಳಗಳು ಅತ್ಯಂತ ಪ್ರಿಯವಾದ ವಸ್ತು

ಹಿಂದೂ ಧರ್ಮದಲ್ಲಿ ವಿವಿಧ ಅವತಾರಗಳನ್ನು ನೋಡಬಹುದು. ಈ ವಿವಿಧ ದೇವತೆಗಳಿಗೂ ವಿಭಿನ್ನವಾದ ಹೂವುಗಳು ಹಾಗೂ ದಳಗಳು ಅತ್ಯಂತ ಪ್ರಿಯವಾದ ವಸ್ತುಗಳಾಗಿವೆ. ವಿಶೇಷ ಹೂವುಗಳ ಅಲಂಕಾರ ಹಾಗೂ ಪ್ರಿಯವಾದ ಸಂಗತಿಗಳ ಬಗ್ಗೆ ಪುರಾಣ ಇತಿಹಾಸಗಳಲ್ಲಿ ಮತ್ತು ಮಹಾಕಾವ್ಯಗಳಲ್ಲಿ ಉಲ್ಲೇಖ

ವಾಗಿರುವುದನ್ನು ನಾವು ನೋಡಬಹುದು. ಅಲ್ಲದೆ ಕೆಲವು ದೇವತೆಗಳು ಕುಳಿತುಕೊಳ್ಳುವ ಪೀಠವು ವಿಶೇಷ ಹೂವಿನಿಂದಲೇ ಕೂಡಿವೆ. ಅಲ್ಲದೆ ಪ್ರತಿಯೊಂದು ದೇವತೆಗಳ ಕೈಯಲ್ಲೂ ವಿವಿಧ ಹೂವನ್ನು ಹಿಡಿದಿರುವ ಚಿತ್ರಗಳನ್ನು ಸಹ ನಾವು ನೋಡಬಹುದು. ಮುಗ್ಧತೆ, ಸುಗಂಧ, ಸುಂದರ ಭಾವನೆ ಹಾಗೂ ವಿಭಿನ್ನತೆಯನ್ನು ಹೂವು ಪಡೆದುಕೊಂಡಿವೆ. ವಿಭಿನ್ನ ಬಣ್ಣಗಳು, ಆಕಾರ ಹಾಗೂ ಸುವಾಸನೆಯಿಂದ ಎಲ್ಲರನ್ನೂ ಮಂತ್ರಮುದ್ಧ ಗೊಳಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತವೆ. ಅಂತಹ ಹೂವುಗಳಲ್ಲಿ ಕೆಲವು ಹೂವುಗಳು ದೇವರ ಆರಾಧನೆಗೆ ಅತ್ಯಂತ ಶ್ರೇಷ್ಠವಾದವು ಹಾಗೂ ದೇವರಿಗೆ ಪ್ರಿಯವಾದವು ಎಂದು ಹೇಳಲಾಗುವುದು. ನೀವು ನಿಮ್ಮ ಮೆಚ್ಚಿನ ದೇವರಿಗೆ ಶ್ರೇಷ್ಠ ಹೂವುಗಳ ಅಲಂಕಾರ ಮಾಡಬೇಕು ಅಥವಾ ದೇವರ ಪಾದಕ್ಕೆ ಅರ್ಪಿಸಬೇಕು ಎನ್ನುವ ಹಂಬಲವಿದ್ದರೆ ಆ ಹೂವುಗಳ ಬಗ್ಗೆ ಇನ್ನಷ್ಟು ಸಂಗತಿಯನ್ನು ತಿಳಿಯಿರಿ.

Most Read: ಕನಸಿನ ಉದ್ಯೋಗ ಪಡೆಯಬೇಕೇ? ಈ ದೇವರನ್ನು ಪೂಜಿಸಿ

ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನ

ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನ

ಮಹಾಭಾರತದಲ್ಲಿ ಉಲ್ಲೇಖವಾಗಿರುವ ಮಾಹಿತಿಯಂತೆ, ಯಾರು ಶುದ್ಧವಾದ ಮನಸ್ಸಿನಿಂದ ಧಾರ್ಮಿಕ ವಿಧಿ-ವಿಧಾನದ ಮೂಲಕ ದೇವರಿಗೆ ಹೂವನ್ನು ಅರ್ಪಿಸುತ್ತಾನೆ, ಅಂತಹ ವ್ಯಕ್ತಿಗಳ ಬಗ್ಗೆ ದೇವರು ತೃಪ್ತನಾಗುತ್ತಾನೆ. ಆ ಹೂವನ್ನು ದೇವರು ಸ್ವೀಕರಿಸುತ್ತಾನೆ. ಇದರ ಪರಿಣಾಮವಾಗಿ ಆ ವ್ಯಕ್ತಿಗೆ ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುವುದು. ಹಿಂದೂ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಯಲ್ಲೂ ಹೂವುಗಳು ಮಹತ್ವದ ಪಾತ್ರವನ್ನು

ಪಡೆದುಕೊಳ್ಳುತ್ತವೆ. ಪ್ರಾಥನೆಯನ್ನು ಸಲ್ಲಿಸುವಾಗ, ದೇವರ ಮನೆಯ ಅಲಂಕಾರಕ್ಕೆ ಹಾಗೂ ದೇವರ ಪೂಜೆಗೆ ಹೂವುಗಳು ಅತ್ಯಗತ್ಯ. ಹೂವುಗಳಿಲ್ಲದೆ ಪೂಜೆಗಳು ಅಥವಾ ಆರಾಧನೆಗಳು ಅಪೂರ್ಣ ಎಂದು ಹೇಳಲಾಗುವುದು. ಹಾಗೆಯೇ ದೇವತೆಗಳಿಗೆ ಇಷ್ಟವಾಗುವ ಹೂವುಗಳನ್ನು ಸಮರ್ಪಿಸಿದರೆ ಅದೃಷ್ಟ ಹಾಗೂ ಸಮೃದ್ಧಿ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆಯಿದೆ.

ದತ್ತೂರ/ಉಮ್ಮತ್ತಿ ಹೂವು

ದತ್ತೂರ/ಉಮ್ಮತ್ತಿ ಹೂವು

ಹಿಂದೂ ಧರ್ಮದ ಪ್ರಕಾರ ಶ್ರೇಷ್ಠ ಪುರಾಣಗಳಲ್ಲಿ ಒಂದಾದ ದತ್ತೂರ ಅಥವಾ ಉಮ್ಮತ್ತಿ ಹೂವು ಶಿವನಿಗೆ ಅತ್ಯಂತ ಶ್ರೇಷ್ಠವಾದ ಹೂವು ಎಂದು ಪರಿಗಣಿಸಲಾಗಿದೆ. ರಾಕ್ಷಸರು ಹಾಗೂ ದೇವತೆಗಳು ಸಮುದ್ರ ಮಂಥನ ನಡೆಸುವಾಗ ಹಾಲಾಹಲ/ವಿಷವು ಹೊರ ಹೊಮ್ಮಿತು. ಆಗ ಸೃಷ್ಟಿಯ ರಕ್ಷಣೆಗಾಗಿ ಅದನ್ನು ಶಿವನೇ ಕುಡಿದನು ಎನ್ನಲಾಗುತ್ತದೆ. ನಂತರ ಆ ವಿಷವು ಶಿವನ ಕಂಠದಲ್ಲಿ ಇರಿಸಿ ಕೊಂಡನು. ಶಿವನ ರಕ್ಷಣೆಗಾಗಿ ದತ್ತೂರ ಹೂವು ಶಿವನ ಹೃದಯ ದಿಂದ ಹುಟ್ಟಿಕೊಂಡಿತು. ಹಾಗಾಗಿಯೇ ದತ್ತೂರ ಹೂವು ಅತ್ಯಂತ ವಿಷಕಾರಿಯಾದ ಗಿಡವೆಂದು ಪರಿಗಣಿಸಲಾಗುತ್ತದೆ. ಈ ಘಟನೆಯ ನಂತರದಿಂದ ದತ್ತೂರ/ಉಮ್ಮತ್ತಿ ಹೂವು ಶಿವನಿಗೆ ಇಷ್ಟವಾದ ಹೂವಾಯಿತು ಎನ್ನಲಾಗುತ್ತದೆ. ಈ ಹೂವನ್ನು ಅರ್ಪಿಸುವು ದರಿಂದ ವ್ಯಕ್ತಿ ತನ್ನಲ್ಲಿದ್ದ ಕೆಟ್ಟ ಅಹಂ ಹಾಗೂ ಕೆಟ್ಟ ಭಾವನೆಯಿಂದ ದೂರವಾಗುತ್ತಾನೆ ಎನ್ನಲಾಗುವುದು. ಈ ಹೂವಿನೊಂದಿಗೆ ಶಿವನನಿಗೆ ಇಷ್ಟವಾಗುವ ಇನ್ನಿತರ ಹೂವುಗಳು ಎಂದರೆ ಎಕ್ಕದ ಹೂವು, ಬಿಲ್ವ ಪತ್ರೆ ಹಾಗೂ ಕೇತಕಿಯ ಹೂವು. ಶಿವನ ಪೂಜೆಯನ್ನು ಮಾಡುವಾಗ ಈ ಹೂವುಗಳ ಬಳಕೆ ಮಾಡುವುದನ್ನು ಮರೆಯಬಾರದು.

ಕೆಂಪು ದಾಸವಾಳ ಹೂವು

ಕೆಂಪು ದಾಸವಾಳ ಹೂವು

ಕೆಂಪು ದಾಸವಾಳ ಹೂವನ್ನು ದೇವರ ಪೂಜೆಗೆ ವಿಶೇಷವಾಗಿ ಬಳಸಲಾಗುವುದು. ಈ ಹೂವು ವಿಶೇಷವಾಗಿ ಕಾಳಿ ದೇವರಿಗೆ ಅತ್ಯಂತ ಶ್ರೇಷ್ಠ ಹಾಗೂ ಪ್ರಿಯವಾದ ಹೂವು. ಈ ಹೂವಿನ ಬಣ್ಣ ಹಾಗೂ ಎಸಳಿನ ಆಕಾರವು ಕಾಳಿ ದೇವಿಯ ನಾಲಿಗೆಯನ್ನು ಹೋಲುತ್ತದೆ. ಕಾಳಿ ದೇವರಿಗೆ ಇಷ್ಟವಾಗುವ ಈ ಹೂವನ್ನು ಅರ್ಪಿಸುವುದರ ಮೂಲಕ ದೇವಿಯ ಆಶೀರ್ವಾದ ಪಡೆಯ ಬಹುದು. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಕಾಳಿ ದೇವರ ಪೂಜೆಯನ್ನು ಮಾಡುವಾಗ 108 ದಾಸವಾಳದ ಹೂವನ್ನು ಜೋಡಿಸುವುದರ ಮೂಲಕ ಹಾರವನ್ನು ತಯಾರಿಸುತ್ತಾರೆ. ಅದನ್ನು ದೇವಿಗೆ ಅರ್ಪಿಸಿ, ತಾಯಿಯ ಕೃಪೆಗೆ ಒಳಗಾಗುತ್ತಾರೆ

ಎನ್ನಲಾಗುವುದು.

Most Read:ಹಿಂದೂ ದೇವಸ್ಥಾನಗಳಲ್ಲಿ ಪುರುಷರು ಪ್ರವೇಶಿಸುವ ಮುನ್ನ ಯಾಕೆ ಶರ್ಟ್‍ಗಳನ್ನು ತೆಗೆದು ಹೋಗಬೇಕು?

ಪಾರಿಜಾತ ಹೂವು

ಪಾರಿಜಾತ ಹೂವು

ಅತ್ಯಂತ ಸುಗಂಧದಿಂದ ಕೂಡಿರುವ ಪಾರಿಜಾತ ಹೂವು ದೇವರ ಆರಾಧನೆಗೆ ಶ್ರೇಷ್ಠವಾದದ್ದು. ಈ ಹೂವು ರಾತ್ರಿ ಸಮಯದಲ್ಲಿ ಅರಳುತ್ತದೆ ಎಂದು ಹೇಳಲಾಗುವುದು. ಈ ಹೂವಿನ ಗಿಡದ ಬೇರು ಸ್ವರ್ಗದಿಂದ ಬಂದಿರುತ್ತದೆ ಎಂದು ಹೇಳಲಾಗುವುದು. ಸುಗಂಧ ಭರಿತವಾದ ಈ ಹೂವು ವಿಷ್ಣು ಹಾಗೂ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ಹೂವು ಎನ್ನಲಾಗುವುದು. ಹಿಂದೂ ಕಥೆ ಪುರಾಣಗಳ ಪ್ರಕಾರ, ದೇವರು ಹಾಗೂ ರಾಕ್ಷಸರು ಸಮುದ್ರ ಮಂಥನ ಮಾಡುವಾಗ ಪಾರಿಜಾತದ ಮರವು ಉದ್ಭವ ಆಯಿತು. ಆಗ ಅದನ್ನು ಇಂದ್ರ ದೇವನು ಸ್ವರ್ಗಕ್ಕೆ ತಂದು ಇಟ್ಟನು. ಇದರ ಹೂವು ಅತ್ಯಂತ ಸುಂದರ ಹಾಗೂ ಪರಿಮಳ ಭರಿತವಾಗಿದ್ದರಿಂದ ದೇವತೆಗಳಿಗೆ ಅತ್ಯಂತ ಪ್ರಿಯವಾದ ಹೂವಾಯಿತು ಎನ್ನಲಾ ಗುವುದು.

Most Read:ಹಿಂದೂ ಧರ್ಮದಲ್ಲಿ ಇವರು 'ಕೋಪಿಷ್ಠ ದೇವರು' ಎಂದೇ ಪ್ರಸಿದ್ಧಿ!

ಕಮಲದ ಹೂವು

ಕಮಲದ ಹೂವು

ಕಮಲದ ಹೂವು ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುವ ಲಕ್ಷ್ಮಿ ದೇವಿಯ ಪ್ರಿಯವಾದ ಹೂವು. ದೀಪಾವಳಿ, ಲಕ್ಷ್ಮಿ ಪೂಜೆ ಹಾಗೂ ದೇವಾಲಯಕ್ಕೆ ತೆರಳುವಾಗ ಕಮಲದ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ದೇವಿಗೆ ಭಕ್ತಿ ಹಾಗೂ ಪರಿ ಶುದ್ಧ ಭಾವನೆ ಯಿಂದ ಕಮಲದ ಹೂವನ್ನು ಅರ್ಪಿಸಿದರೆ ಅತ್ಯಂತ ತೃಪ್ತ ಳಾಗುತ್ತಾಳೆ. ಜೊತೆಗೆ ಅದಕ್ಕೆ ಪ್ರತಿಯಾಗಿ ನಿಮ್ಮ ಜೀವನದಲ್ಲಿ ಸಮೃದ್ಧಿ ಹಾಗೂ ಸಂಪತ್ತು ದೊರೆಯುವುದು. ಭವಿಷ್ಯದಲ್ಲಿ ಜೀವನವು ಸಂತೋಷದಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ.

ಗೊಂಡೆ ಹೂವು/ಚೆಂಡು ಹೂವು

ಗೊಂಡೆ ಹೂವು/ಚೆಂಡು ಹೂವು

ಕೆಂಪು ಬಣ್ಣದ ಚೆಂಡು ಹೂವು ಮತ್ತು ಕೇಸರಿ ಬಣ್ಣದ ಚೆಂದು ಹೂವು ಗಣೇಶನಿಗೆ ಅತ್ಯಂತ ಶ್ರೇಷ್ಠವಾದ ಹೂವು ಎಂದು ಹೇಳಲಾಗುವುದು. ಈ ಹೂವು ಮಾತ್ರ ಅನೇಕ ದಳದಿಂದ ಕೂಡಿದ್ದು, ಅದನ್ನು ಬಿಡಿಬಿಡಿಯಾಗಿ ಮಾಡಿದಾಗಲೂ ಸಾಕಷ್ಟು ದಳವನ್ನು ನೀಡುವುದು ಎಂದು ಹೇಳಲಾಗುವುದು. ಈ ಹೂವನ್ನು ಗಣೇಶನ ಪೂಜೆಗೆ ಬಳಸುವುದರಿಂದ ಗಣೇಶನು ತೃಪ್ತನಾಗುವನು. ಜೊತೆಗೆ ತನ್ನ ಭಕ್ತರ ಜೀವನದಲ್ಲಿ ಇರುವ ವಿಘ್ನಗಳನ್ನು ನಿವಾರಿ ಸುವನು ಎನ್ನಲಾಗುವುದು. ಈ ಹೂವಿನ ಜೊತೆಗೆ ಎಕ್ಕದ ಹೂವು, ಗರಿಕೆ ಹುಲ್ಲು ಸಹ ಗಣೇಶನಿಗೆ ಅತ್ಯಂತ ಪ್ರಿಯವಾದ ಹೂವುಗಳು.

 ಪಲಾಶ ಹೂವು

ಪಲಾಶ ಹೂವು

ಬಿಳಿ ಸೀರೆಯನ್ನು ತೊಟ್ಟು, ಬಿಳಿ ಬಣ್ಣದ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುವ ದೇವತೆ ಸರಸ್ವತಿ. ಬಿಳಿ ಬಣ್ಣದಲ್ಲಿರುವ ಎಲ್ಲಾ ಹೂವುಗಳು ಸಹ ದೇವಿ ಸರಸ್ವತಿಗೆ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಇವುಗಳೊಂದಿಗೆ ದೇವಿ ಶಾರದೆಗೆ ಇಷ್ಟವಾಗುವ ಇನ್ನೊಂದು ಹೂವು ಎಂದರೆ ಪಲಾಶ ಹೂವು. ಈ ಹೂವು ಇಲ್ಲದೆಯೇ ಶಾರದಾ ದೇವಿಯನ್ನು ಪೂಜಿಸಿದರೆ ಪೂಜೆಯು ಅಪೂರ್ಣವಾಗುತ್ತದೆ ಎಂದು ಹೇಳಲಾಗುವುದು. ಈ ಹೂವಿನೊಂದಿಗೆ ಶಾರದಾ ದೇವಿಯ ಆರಾಧನೆ ಮಾಡಿದರೆ ಹೆಚ್ಚಿನ ಜ್ಞಾನ ಪ್ರಾಪ್ತಿಯಾಗುವುದು.

ತುಳಸಿ

ತುಳಸಿ

ತುಳಸಿಯ ಹೂವು ಹಾಗೂ ಎಲೆಯನ್ನು ದೇವರ ಪೂಜೆಗೆ ಬಳಸಲಾಗುವುದು. ತುಳಸಿಯ ದಳವು ಅಥವಾ ತುಳಸಿ ಎಲೆಯು ಶ್ರೀಕೃಷ್ಣ ಹಾಗೂ ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದ ಹೂವು. ಇದರಲ್ಲಿ ಕೃಷ್ಣ ತುಳಸಿ ಹಾಗೂ ರಾಮ ತುಳಸಿ ಎನ್ನುವ ಎರಡು ವಿಧಗಳಿರುವುದನ್ನು ಪರಿಗಣಿಸಬಹುದು. ಎರಡು ತುಳಸಿಯ

ಎಲೆಗಳು ದೇವರಿಗೆ ಅರ್ಪಿಸಬಹುದು. ಅತ್ಯಂತ ಪವಿತ್ರ ಹಾಗೂ ಶುದ್ಧತೆಯನ್ನು ಬಿಂಬಿಸುವ ತುಳಸಿಯನ್ನು ದೇವರಿಗೆ ಅರ್ಪಿಸಿದರೆ ಜೀವನದಲ್ಲಿ ಅದ್ಭುತದ ದಿನಗಳನ್ನು ಕಾಣಬಹುದು ಎಂದು ಹೇಳಲಾಗುತ್ತದೆ.

ಮಲ್ಲಿಗೆ ಹೂವು

ಮಲ್ಲಿಗೆ ಹೂವು

ಮಲ್ಲಿಗೆ ಹೂವು ಸೌಂದರ್ಯ ಹಾಗೂ ಸುಗಂಧಕ್ಕೆ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದನ್ನು ಎಲ್ಲಾ ದೇವಾನು ದೇವತೆಗಳ ಪೂಜೆಗೆ ಬಳಸಲಾಗುತ್ತದೆ. ಅತ್ಯಂತ ಸುಗಂಧದಿಂದ ಕೂಡಿರುವ ಹೂವು ಎಂದು ಪರಿಗಣಿಸಲಾಗುತ್ತದೆ. ಇದನ್ನು ಔಷಧ ಸಸ್ಯ ಎಂದು ಸಹ ಪರಿಗಣಿಸಲಾಗುತ್ತದೆ. ಈ ಹೂವು ಹನುಂತ ದೇವರಿಗೆ ಅತ್ಯಂತ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಈ ಹೂವಿನಿಂದ ತಯಾರಿಸಲಾಗುವ ಎಣ್ಣೆಯನ್ನು ಬಳಸಿ, ಸಿಂಧೂರವನ್ನು ಮಿಶ್ರಗೊಳಿಸುತ್ತಾರೆ. ಅದನ್ನು ಹನುಮಂತ ದೇವರಿಗೆ ಅರ್ಪಿಸುತ್ತಾರೆ. ಈ ಹೂವನ್ನು ಹನುಮಂತ ದೇವರಿಗೆ ಅರ್ಪಿಸುವುದರಿಂದ ದೇವನು ನಮ್ಮ ಜೀವನದಲ್ಲಿ ಇರುವ ಕಷ್ಟಗಳನ್ನು ದೂರಗೊಳಿಸುತ್ತಾನೆ ಎನ್ನುವ ನಂಬಿಕೆಯಿದೆ.

English summary

Flowers Which Are Favorites Of Hindu Gods

According to this verse from the epic Mahabharata, when a pious man with a pure heart offers flowers to the deities, the deities become gratified and as a result bestow prosperity upon him. Yes, flowers play a significant role in almost every religious ritual in Hinduism. Any religious ceremony, be it offering prayers or performing Aarti, is incomplete without flowers. Worshiping Hindu Gods and Goddesses with flower offerings is not only considered auspicious but has its own importance too. Although, any type of flower can be offered to any God yet, there are certain ones which happen to be the favorite flowers of Hindu Gods that can bring you good fortune if offered to Hindu Gods and Goddesses.
Story first published: Friday, March 15, 2019, 17:41 [IST]
X
Desktop Bottom Promotion