For Quick Alerts
ALLOW NOTIFICATIONS  
For Daily Alerts

ಸೂರ್ಯ ದೇವರ ಪ್ರಾರ್ಥನೆಗೆ ನೀವು ಪಠಿಸಬೇಕಾದ ಐದು ಶಕ್ತಿಶಾಲಿ ಮಂತ್ರಗಳು

|

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರಿದ್ದಾರೆ ಎನ್ನುವ ನಂಬಿಕೆಯಿದೆ. ಇದರಲ್ಲಿ ಪ್ರತ್ಯಕ್ಷವಾಗಿ ಕಾಣುವವರು ಸೂರ್ಯ ದೇವರು. ಪ್ರತಿನಿತ್ಯ ನಮ್ಮ ಕಣ್ಣಿಗೆ ಕಾಣಿಸುವಂತಹ ದೇವರೆಂದರೆ ಸೂರ್ಯದೇವರು. ಇದರಿಂದಾಗಿ ಇತರೆಲ್ಲಾ ದೇವರಿಗಿಂತ ಸೂರ್ಯ ದೇವರು ತುಂಬಾ ಭಿನ್ನ. ಸೂರ್ಯ ದೇವರನ್ನು ಶನಿ ದೇವರ ತಂದೆಯೆಂದು ಪುರಾಣಗಳು ಹೇಳುತ್ತವೆ. ಸೂರ್ಯ ದೇವರು ನಮಗೆ ಯಶಸ್ಸು ಹಾಗೂ ಆರೋಗ್ಯವನ್ನು ಕರುಣಿಸುವರು.

five Surya Mantras To Enlighten Yourself

ಸೂರ್ಯ ದೇವರು ನಮ್ಮನ್ನು ಅಪಮಾನ ಮತ್ತು ದೈಹಿಕ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುವರು. ಇದರಲ್ಲಿ ಪ್ರಮುಖವಾಗಿ ಕಣ್ಣಿಗೆ ಸಂಬಂಧಿಸಿರುವಂತಹ ಸಮಸ್ಯೆಗಳು. ಭಾನುವಾರ ಸೂರ್ಯದೇವರನ್ನು ಪೂಜಿಸಲು ಸೂಕ್ತ ದಿನ. ಛತ್ ಪೂಜೆಯು ಸೂರ್ಯದೇವರಿಗೆ ಮೀಸಲಾಗಿಟ್ಟಿರುವ ಹಬ್ಬವಾಗಿದೆ. ದಿನ ಬೆಳಗ್ಗೆ ಸೂರ್ಯ ದೇವರನ್ನು ಪ್ರಾರ್ಥಿಸಿ ಅವರಿಗೆ ನೀರನ್ನು ಅರ್ಪಿಸಬೇಕು. ಸೂರ್ಯದೇವರನ್ನು ಪ್ರಾರ್ಥಿಸುವ ವೇಳೆ ನೀವು ಪಠಿಸಬಹುದಾದ ಐದು ಶಕ್ತಿಶಾಲಿ ಮಂತ್ರಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

1.ಓಂ ಅಶ್ವ ಧ್ವಜಯಾ ವಿಷ್ಮಾ ಪಾಶಾ ಹಸ್ತಾಯೆ ಧಿಮಾಹಿ ತನ್ನೋಹ್ ಸೂರ್ಯ ಪ್ರಚೋದಯಾತ್

1.ಓಂ ಅಶ್ವ ಧ್ವಜಯಾ ವಿಷ್ಮಾ ಪಾಶಾ ಹಸ್ತಾಯೆ ಧಿಮಾಹಿ ತನ್ನೋಹ್ ಸೂರ್ಯ ಪ್ರಚೋದಯಾತ್

ವಿವರಣೆ: ಕುದುರೆಯ ಧ್ವಜವನ್ನು ಹಿಡಿದುಕೊಂಡು ಮತ್ತು ಪಾಶವನ್ನು ಕೈಯಲ್ಲಿ ಹಿಡಿದಿರುವ ದೇವರು. ಸೂರ್ಯ ದೇವರು ನನ್ನ ಜಾಣ್ಮೆಯನ್ನು ಬೆಳಗಲಿ.

2.ಓಂ ಭಾಸ್ಕರಾಯೇ ವಿದ್ಮಯೆ ಮಹದಿಯುದಿಕಾರಯ ಧಿಮಾಹಿ ತನ್ನೋ ಆದಿತ್ಯ ಪ್ರಚೋದಯಾತ್

2.ಓಂ ಭಾಸ್ಕರಾಯೇ ವಿದ್ಮಯೆ ಮಹದಿಯುದಿಕಾರಯ ಧಿಮಾಹಿ ತನ್ನೋ ಆದಿತ್ಯ ಪ್ರಚೋದಯಾತ್

ವಿವರಣೆ: ಬೆಳಕಿನ ಏಕೈಕ ಮೂಲವಾಗಿರುವಂತಹ ಭಾಸ್ಕರ ದೇವರನ್ನು ನಾನು ಪ್ರಾರ್ಥಿಸುವೆನು. ಜಗತ್ತನ್ನು ಬೆಳಗುವವನ ಪ್ರಾರ್ಥಿಸುವೆನು. ಆದಿತ್ಯ ದೇವರು ನನ್ನ ಜಾಣ್ಮೆಯನ್ನು

Most Read: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!

3.ಓಂ ಆದಿತ್ಯ ವಿದ್ಮಯೆ ಸಹಸ್ರ ಕಿರಣಾಯೆ ಧಿಮಾಹಿ ತನ್ನೋ ಸೂರ್ಯ ಪ್ರಚೋದಯಾತ್

3.ಓಂ ಆದಿತ್ಯ ವಿದ್ಮಯೆ ಸಹಸ್ರ ಕಿರಣಾಯೆ ಧಿಮಾಹಿ ತನ್ನೋ ಸೂರ್ಯ ಪ್ರಚೋದಯಾತ್

ವಿವರಣೆ: ನಾನು ಆದಿತ್ಯ ದೇವರನ್ನು ಪ್ರಾರ್ಥಿಸುವೆನು. ಸಹಸ್ರ ಕಿರಣಗಳನ್ನು ಹೊಂದಿರುವವರು. ಸೂರ್ಯ ದೇವರು ನನ್ನ ಜಾಣ್ಮೆಯನ್ನು ಬೆಳಗಲಿ.

4.ನಮಃ ಸೂರ್ಯ ಶಾಂತಯ ಸರ್ವ ರೋಗ ನಿವಾರಣೆ ಆಯುರಾರೋಗ್ಯಂ ಐಶ್ವರ್ಯಂ ದೇಹಿ ದೇವಹ ಜಗತ್ಪತೇ

4.ನಮಃ ಸೂರ್ಯ ಶಾಂತಯ ಸರ್ವ ರೋಗ ನಿವಾರಣೆ ಆಯುರಾರೋಗ್ಯಂ ಐಶ್ವರ್ಯಂ ದೇಹಿ ದೇವಹ ಜಗತ್ಪತೇ

ವಿವರಣೆ: ಪ್ರೀತಿಯ ಸೂರ್ಯ ದೇವರೇ, ಎಲ್ಲಾ ರೀತಿಯ ರೋಗಗಳನ್ನು ನಿವಾರಣೆ ಮಾಡಿ, ಶಾಂತಿ, ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂಪತ್ತು ಕರುಣಿಸಿ.

Most Read: ಹಣ ಅಥವಾ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಲಕ್ಷ್ಮೀ ಮತ್ತು ಹನುಮಂತನ ಆರಾಧನೆ ಮಾಡಿ

5.ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ ಸಿಧಿ ಸಿದ್ಧ ಕರಾಯ ಮನ ವಂಚಿತ್ ಪುರಾಯ ಕಶ್ಮತಾಮ್ ಚುರಾಯಾಮ್ ಓಂ ಹ್ರೆಮ್ ಸೂರ್ಯ ನಮೋ ನಮಃ

5.ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ ಸಿಧಿ ಸಿದ್ಧ ಕರಾಯ ಮನ ವಂಚಿತ್ ಪುರಾಯ ಕಶ್ಮತಾಮ್ ಚುರಾಯಾಮ್ ಓಂ ಹ್ರೆಮ್ ಸೂರ್ಯ ನಮೋ ನಮಃ

ವಿವರಣೆ: ಸಹಸ್ರ ಕಿರಣಗಳನ್ನು ಹೊಂದಿರುವ, ಯಶಸ್ಸು ತಂದುಕೊಡುವ, ನಮ್ಮ ಬೇಡಿಕೆಗಳನ್ನು ಈಡೇರಿಸುವ, ಸಂಕಷ್ಟಗಳನ್ನು ನಿವಾರಿಸುವ ಶ್ರೀ ಸೂರ್ಯ ದೇವರಿಗೆ ನಾನು ನಮಸ್ಕರಿಸುವೆನು. ಇಂತಹ ದೇವರಿಗೆ ನಾನು ಶಿರಭಾಗಿ ನಮಿಸುವೆನು.

English summary

five Surya Mantras To Enlighten Yourself

One thing that distinguishes Surya Dev from many other deities is that he is known as Pratyaksha Devta since he is visible to the common man. Surya Dev is actually the father of Shani Dev and is known as the deity who blesses us with success and health both. He saves one from defamation and physical problems, such as those related to the eyes. Sunday is dedicated to the worship of Surya Dev; similarly, there is a festival called Chhath Puja, also dedicated to him.
X
Desktop Bottom Promotion