For Quick Alerts
ALLOW NOTIFICATIONS  
For Daily Alerts

ಮಂಗಳವಾರ ಹನುಮನ ಪೂಜೆ ಹಾಗೂ ವ್ರತ ಹೀಗೆ ಮಾಡಿ- ಸಂಕಷ್ಟಗಳೆಲ್ಲಾ ನಿವಾರಣೆಯಾಗಲಿದೆ

|

ಭಾರತೀಯ ಸಂಪ್ರದಾಯದಲ್ಲಿ ವ್ರತಾಚರಣೆಗಳು, ಪೂಜೆ ಪುನಸ್ಕಾರಗಳು ಅದರದ್ದೇ ಆದ ಪ್ರತ್ಯೇಕತೆ ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸೋಮವಾರ ಶಿವನಿಗೆ, ಮಂಗಳವಾರ ಹನುಮನಿಗೆ, ಬುಧವಾರ ವೆಂಕಟೇಶ್ವರ ಸ್ವಾಮಿ, ಗುರುವಾರ ಸಾಯಿ ಬಾಬಾ ಮತ್ತು ರಾಘವೇಂದ್ರ ಸ್ವಾಮಿ, ಶುಕ್ರವಾರ ದೇವಿಗೆ ಹಾಗೂ ಶನಿವಾರವನ್ನು ಶನಿ ದೇವರಿಗೆ ಹೀಗೆ ಆಯಾಯ ದಿನಗಳಂದು ಆಯಾಯ ದೇವತೆಗಳನ್ನು ಪೂಜಿಸಲಾಗುತ್ತದೆ ಮತ್ತು ಅವರ ಅನುಗ್ರಹವನ್ನು ಪಡೆದುಕೊಳ್ಳಲು ವ್ರತವನ್ನು ಕೈಗೊಳ್ಳಲಾಗುತ್ತದೆ. ಈ ನಂಬಿಕೆಗಳು ನಮ್ಮಲ್ಲಿ ಆ ದೇವರ ಬಗೆಗಿನ ಭಕ್ತಿ ಭಾವವನ್ನು ಹೆಚ್ಚಿಸುತ್ತದೆ ಮತ್ತು ಆ ದೇವರುಗಳಲ್ಲಿ ನಮ್ಮ ನಂಬಿಕೆಯನ್ನು ದ್ವಿಗುಣಗೊಳಿಸುತ್ತದೆ.

ಮಂಗಳವಾರ ಶಕ್ತಿ ದೇವ ಹನುಮಂತನನ್ನು ಪೂಜಿಸಿದರೆ- ಕಷ್ಟ-ಕಾರ್ಪಣ್ಯ ದೂರವಾಗುತ್ತೆ

Tuesday Fasting

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ವ್ರತಾಚರಣೆಗಳು ಮತ್ತು ಪೂಜೆ ಪುನಸ್ಕಾರಗಳಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದ್ದು ಈ ಪೂಜೆ ಪುನಸ್ಕಾರಗಳಿಂದ ನಾವು ದೇವತಾ ಕೃಪೆಗೆ ಪಾತ್ರರಾಗುತ್ತೇವೆ ಎಂಬ ಅಂಶ ಮುಖ್ಯವಾದುದಾಗಿದೆ. ನಮ್ಮ ಇಂದಿನ ಲೇಖನದಲ್ಲಿ ಮಂಗಳವಾರದಂದು ವ್ರತವನ್ನು ಕೈಗೊಳ್ಳುವುದರಿಂದ ನಾವು ಪಡೆದುಕೊಳ್ಳಬಹುದಾದ ಪ್ರಯೋಜನಗಳೇನು ಎಂಬುದನ್ನು ಅರಿತುಕೊಳ್ಳೋಣ. ಗ್ರಹಗಳಿಗೆ ಅಧಿಪತಿಯಾಗಿರುವ ಮಂಗಳನನ್ನು ಈ ದಿನ ನೆನೆಯಲಾಗುತ್ತದೆ. ವ್ಯಕ್ತಿಯ ಜನ್ಮರಾಶಿಯಲ್ಲಿ ಮಂಗಳ ದುರ್ಬಲನಾಗಿದ್ದರೆ ಜೀವನದಲ್ಲಿ ಸಂಕಷ್ಟಗಳನ್ನು ಆ ವ್ಯಕ್ತಿ ಅನುಭವಿಸಬೇಕಾಗುತ್ತದೆ. ಮಂಗಳ ಗ್ರಹದ ಅಧಿಪತಿ ಹನುಮಂತನಾಗಿದ್ದು ಈ ದಿನ ಹನುಮನಿಗೆ ಪೂಜೆಯನ್ನು ಮಾಡುವುದರಿಂದ ಅವರ ಬಗೆಗೆ ವ್ರತವನ್ನು ಕೈಗೊಳ್ಳುವುದರಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬುದು ನಂಬಿಕೆಯಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಮಂಗಳವಾರದ ಪೂಜೆ ಮತ್ತು ವ್ರತವನ್ನು ಕೈಗೊಳ್ಳುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿತುಕೊಳ್ಳೋಣ....

ಮಂಗಳವಾರ ವ್ರತದ ಪ್ರಾಮುಖ್ಯತೆ

ಮಂಗಳವಾರ ವ್ರತದ ಪ್ರಾಮುಖ್ಯತೆ

ಈ ದಿನ ಮಂಗಳ ಗ್ರಹವನ್ನು ನೆನೆಯುವುದು ಈ ದಿನ ವಿಶೇಷತೆಯಾಗಿದೆ. ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಮಂಗಳ ದುರ್ಬಲನಾಗಿದ್ದರೆ ಆ ವ್ಯಕ್ತಿ ನಾನಾ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಈ ದಿನ ಹನುಮನನ್ನು ನೆನೆಯುವುದರಿಂದ ಅವರನ್ನು ಪೂಜಿಸುವುದರಿಂದ ಕಷ್ಟಗಳು ಪರಿಹಾರವಾಗಲಿದೆ.

ಮಂಗಳವಾರದ ಪೂಜೆಯನ್ನು ಮಾಡುವುದು ಹೇಗೆ

ಮಂಗಳವಾರದ ಪೂಜೆಯನ್ನು ಮಾಡುವುದು ಹೇಗೆ

ಮನೆಯ ಸದಸ್ಯರು ಪ್ರಾತಃ ಕಾಲದಲ್ಲಿಯೇ ಎದ್ದು ಗಂಗಾ ಜಲದಲ್ಲಿ ಸ್ನಾನವನ್ನು ಮಾಡಬೇಕು. ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ವ್ರತವನ್ನು ಮಾಡಬೇಕು. ಪವಿತ್ರ ಜಲದಿಂದ ಪೂಜಾ ಸ್ಥಳವನ್ನು ಶುದ್ಧೀಕರಿಸಬೇಕು ಮತ್ತು ಎಂಟು ದಳದ ತಾವರೆಯನ್ನು ಅಲ್ತರ್‌ನ ಮುಂದಿರಿಸಿ ಕೆಂಪು ಬಣ್ಣದ ಅಕ್ಕಿಯನ್ನು ಜೊತೆಗಿರಿಸಬೇಕು. (ಕುಂಕುಮ ಮಿಶ್ರಿತ ಅಕ್ಕಿ)

ಎಂಟು ದಳದ ತಾವರೆಯಲ್ಲಿ ಹನುಮನ ಮೂರ್ತಿ ಇಲ್ಲವೇ ಫೋಟೋವನ್ನು ಇರಿಸಿ ಮತ್ತು ಕುಟುಂಬದ ಒಳಿತಿಗಾಗಿ ಭಗವಂತನನ್ನು ಪ್ರಾರ್ಥಿಸಿ. ಕೆಂಪು ಹೂಗಳು, ಕೆಂಪು ಬಟ್ಟೆ ಮತ್ತು ಸಿಹಿತಿಂಡಿಗಳನ್ನು ಹನುಮನಿಗೆ ಅರ್ಪಿಸಿ.

ಮಂಗಳವಾರ ವ್ರತದ ನಿಯಮಗಳೇನು

ಮಂಗಳವಾರ ವ್ರತದ ನಿಯಮಗಳೇನು

ಪೂಜೆಯ ಸಮಯದಲ್ಲಿ 21 ಲಾಡುಗಳನ್ನು ಹನುಮನಿಗೆ ಅರ್ಪಿಸಬೇಕು ಮತ್ತು ಪೂಜೆಯ ನಂತರ ಈ ಲಾಡುಗಳನ್ನು ಬ್ರಾಹ್ಮಣರಿಗೆ ನೀಡಬೇಕು. ವ್ರತವನ್ನು ಕೈಗೊಳ್ಳುವವರು ಈ ದಿನ ಒಂದು ಹೊತ್ತು ಊಟ ಮಾಡಬೇಕು. ಉಪ್ಪು, ಖಾರದ ಆಹಾರಗಳನ್ನು ಸೇವಿಸಬಾರದು. 21 ವಾರಗಳ ಕಾಲ ಮಂಗಳವಾರ ವ್ರತವನ್ನು ಕೈಗೊಳ್ಳಬೇಕು. ಕೊನೆಯ ದಿನ 21 ಬ್ರಾಹ್ಮಣರಿಗೆ ಉಪನಯನ ಮಾಡಬೇಕು ಹಾಗೂ ದೇವಾಲಯದಲ್ಲಿ ದಾನ ಮಾಡಬೇಕು.

ಮಂಗಳವಾರ ವ್ರತದ ಕಥೆ

ಮಂಗಳವಾರ ವ್ರತದ ಕಥೆ

ಒಂದೂರಿನಲ್ಲಿ ನಂದ ಮತ್ತು ಅವರ ಪತ್ನಿ ಸುನಂದ ಎಂಬ ಬ್ರಾಹ್ಮಣ ದಂಪತಿಗಳು ವಾಸಿಸುತ್ತಿದ್ದರು. ಅವರು ಶ್ರೀಮಂತರಾಗಿದ್ದು ಯಾವುದೇ ಸಮಸ್ಯೆಗಳನ್ನು ಹೊಂದಿರಲಿಲ್ಲ. ಮಂಗಳವಾರದಂದು ಸುನಂದ ವ್ರತವನ್ನು ಕೈಗೊಂಡು ಹನಮಂತನನ್ನು ಪೂಜಿಸುತ್ತಿದ್ದರು ಮತ್ತು ಹನುಮಂತನ ಮೇಲೆ ಆಕೆಗೆ ಅಪಾರ ನಂಬಿಕೆ ಹಾಗೂ ಭಕ್ತಿ ಇತ್ತು.

ಹನಮಂತನಿಗೆ ಪೂಜಿಸುವುದನ್ನು ಮರೆತರು

ಹನಮಂತನಿಗೆ ಪೂಜಿಸುವುದನ್ನು ಮರೆತರು

ಒಂದು ದಿನ ಹೆಚ್ಚಿನ ಕೆಲಸದ ಕಾರಣದಿಂದ ಆಕೆ ಹನಮಂತನಿಗೆ ಪೂಜಿಸುವುದನ್ನು ಮರೆತಿದ್ದರು, ತನ್ನ ತಪ್ಪಿನ ಅರಿವು ಆಕೆಗೆ ಆಯಿತು ಮತ್ತು ವಾರ ಪೂರ್ತಿ ಪ್ರಾಯಶ್ಚಿತ್ತವಾಗಿ ವ್ರತವನ್ನು ಕೈಗೊಂಡು ಮುಂದಿನ ಮಂಗಳವಾರ ಹನುಮನಿಗೆ ಪೂಜೆಯನ್ನು ಅರ್ಪಿಸಿದರು.

ಆಕೆಯ ಭಕ್ತಿಗೆ ಹನುಮಂತನು ಸಂತುಷ್ಟನಾದನು

ಆಕೆಯ ಭಕ್ತಿಗೆ ಹನುಮಂತನು ಸಂತುಷ್ಟನಾದನು

ಆಕೆಯ ಭಕ್ತಿಗೆ ಹನುಮಂತನು ಮೆಚ್ಚಿ ಆಕೆಗೆ ಸ್ವರ್ಣಲತಾ ಹೆಸರಿನ ಕುವರಿಯನ್ನು ವರವಾಗಿ ನೀಡುತ್ತಾರೆ ಹಾಗೂ ಆಕೆ ಬಂಗಾರವನ್ನು ನೀಡಲು ಸಮರ್ಥಳಾಗಿರುತ್ತಾಳೆ. ನಂದನು ಚಿನ್ನದ ಆಸೆಯಿಂದ ಮಗಳ ವಿವಾಹವನ್ನು ಮಾಡಿರಲಿಲ್ಲ.

ಮಗಳ ಮದುವೆಗೆ ಸುನಂದ ಬೇಡಿಕೊಳ್ಳುತ್ತಾಳೆ

ಮಗಳ ಮದುವೆಗೆ ಸುನಂದ ಬೇಡಿಕೊಳ್ಳುತ್ತಾಳೆ

ತಮ್ಮ ಮಗಳಿಗಾಗಿ ಉತ್ತಮ ವರನನ್ನು ಹುಡುಕುವಂತೆ ಸುನಂದಾ ಪತಿಯನ್ನು ವಿನಂತಿಸುತ್ತಾರೆ. ಸೋಮೇಶ್ವರ ಹೆಸರಿನ ಹುಡುಗನನ್ನು ಅವರು ಮಗಳಿಗಾಗಿ ಹುಡುಕುವಲ್ಲಿ ಸಫಲರಾಗುತ್ತಾರೆ. ಮದುವೆಯ ನಂತರ ನಂದ ಚಿನ್ನದಾಸೆಗೆ ಅಳಿಯನನ್ನು ಕೊಲೆ ಮಾಡಿಸುತ್ತಾನೆ ಇದರಿಂದ ಸ್ವರ್ಣಲತ ಪುನಃ ಮನೆಗೆ ಬಂದು ಚಿನ್ನವನ್ನು ಕೊಡಬೇಕು ಎಂಬುದು ಆತನ ಆಗ್ರಹವಾಗಿರುತ್ತದೆ. ಪತಿಯ ವಿಯೋಗದಿಂದ ದುಃಖಿತಳಾದ ಸ್ವರ್ಣಲತ ತನ್ನ ಜೀವನವನ್ನು ಆತನೊಂದಿಗೆ ತ್ಯಜಿಸಲು ಬಯಸುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿದ ಮಂಗಳ ದೇವ ಆಕೆಯ ಮುಂದೆ ಪ್ರತ್ಯಕ್ಷಗೊಂಡು ಆಕೆಗೆ ಎರಡು ವರವನ್ನು ನೀಡುತ್ತಾರೆ. ಸ್ವರ್ಣಲತ ಮದುವೆಯಾದ ನಂತರ ತನಗೆ ವರವಾಗಿ ಬರುತ್ತಿದ್ದ ಚಿನ್ನವನ್ನು ತನ್ನ ಗಂಡನಿಗೆ ನೀಡಲು ಬಯಸುತ್ತಾಳೆ. ತಮ್ಮ ಮುಂದಿನ ಜೀವನಕ್ಕಾಗಿ ಈ ಚಿನ್ನ ಅವರಿಗೆ ಅಗತ್ಯವಾಗಿತ್ತು.

ಎರಡು ವರಗಳು

ಎರಡು ವರಗಳು

ತನ್ನ ಪತಿಗೆ ಮರಳಿ ಜೀವ ಬರುವಂತೆ ಆಕೆ ಒಂದು ವರದಲ್ಲಿ ಕೇಳುತ್ತಾಳೆ. ಮಂಗಳವಾರ ವ್ರತ ಮಾಡುವುದರಿಂದ ಆಕೆ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಂಡಿರುತ್ತಾಳೆ ಮತ್ತು ವ್ರತ ಕೈಗೊಳ್ಳುವವರಿಗೆ ಉತ್ತಮ ಪ್ರಯೋಜನಗಳು ದೊರೆಯಲಿ ಎಂದು ಮಂಗಳನಲ್ಲಿ ಬೇಡಿಕೊಳ್ಳುತ್ತಾಳೆ. ಹೀಗೆ ಮಂಗಳನು ಆಕೆಯ ಇಚ್ಛೆಯನ್ನು ಈಡೇರಿಸುತ್ತಾರೆ. ಸ್ವರ್ಣಲತಾ ತನ್ನ ಪತಿಯೊಂದಿಗೆ ಸಂತಸಕರ ಜೀವನವನ್ನು ನಡೆಸುತ್ತಾಳೆ ಮತ್ತು ಇವರಿಬ್ಬರೂ ಜೊತೆಯಾಗಿ ಸ್ವರ್ಗವನ್ನು ಪ್ರವೇಶಿಸುತ್ತಾರೆ.

ಮಂಗಳವಾರ ವ್ರತದ ಪ್ರಯೋಜನಗಳು

ಮಂಗಳವಾರ ವ್ರತದ ಪ್ರಯೋಜನಗಳು

ಈ ದಿನ ವ್ರತವನ್ನು ಮಾಡುವವರು ಆರೋಗ್ಯ ಮತ್ತು ಸುಖ ಸಂಪತ್ತನ್ನು ಪಡೆದುಕೊಂಡು ಜೀವನದಲ್ಲಿ ಸುಖದಿಂದಿರುತ್ತಾರೆ. ಈ ದಿನ ವ್ರತವನ್ನು ನಡೆಸುವವರು ಕೆಲಸ ಕಾರ್ಯದಲ್ಲಿ ಕೂಡ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಮತ್ತು ವ್ರತ್ತಿಯಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳುತ್ತಾರೆ.

English summary

Everything you Need To Know about Tuesday Fasting

Tuesday fast vrat is meant for propitiating the planet Mars (Mangal). In a person’s kundali if Mars is weak, then he shall invite unforeseen miseries in life. Hanuman is said to be the god of Mangal planet and therefore doing puja and propitiating Hanuman shall help win the blessings of Mangal and lead a happy and prosperous life.
X
Desktop Bottom Promotion