ಶನಿ ಮಂತ್ರ: 108 ಸಲ ಈ ಮಂತ್ರ ಜಪಿಸಿದರೆ, ಕಷ್ಟ-ಕಾರ್ಪಣ್ಯ ದೂರವಾಗುತ್ತೆ

Posted By: Deepu
Subscribe to Boldsky

ಮಾನವರಿಗೆ ನ್ಯಾಯ ನೀಡುವಂತಹ ಕೆಲಸವನ್ನು ಶನಿ ಮಾಡುವನು. ಹಿಂದೂ ಧರ್ಮದ ಪ್ರಕಾರ ಶನಿಯು ಮಾನವ ದುರಾಸೆಯ ಮೇಲೆ ಕಣ್ಣಿಟ್ಟಿರುತ್ತಾನೆ. ಅದೇ ರೀತಿ ಕರ್ಮಗಳ ಅನುಸಾರ ಶಿಕ್ಷೆ ನೀಡುವನು. ಶನಿ ಎಲ್ಲಾ ದೇವರಲ್ಲಿ ತುಂಬಾ ಭಯ ಹುಟ್ಟಿಸುವಾತ. ಯಾಕೆಂದರೆ ರಾಜನನ್ನು ಭಿಕ್ಷುಕನಾಗಿ ಮಾಡುವಂತಹ ಶಕ್ತಿಯು ಆತನಲ್ಲಿದೆ. ರಾಜ ವಿಕ್ರಮಾದಿತ್ಯನು ಶನಿಯ ತಾಪದಿಂದ ಬಳಲಿದಾತ.

ಶನಿಯು ಏಳನೇ ಮನೆಯಲ್ಲಿದ್ದಾಗ ತುಂಬಾ ಪ್ರಬಲನಾಗಿರುವನು. ಮಕರ ಮತ್ತು ಕುಂಭ ರಾಶಿಗಳಿಗೆ ಶನಿಯು ಅಧಿಪತಿಯಾಗಿರುವನು. ಶನಿಯು ತುಲಾ ರಾಶಿಯಲ್ಲಿ ಏಳುತ್ತಾನೆ ಮತ್ತು ಮೇಷ ರಾಶಿಯಲ್ಲಿ ಬೀಳುತ್ತಾನೆ. ಶನಿಯು ತುಲಾ ಮತ್ತು ವೃಷಭ ರಾಶಿಯವರಿಗೆ ತುಂಬಾ ಲಾಭಕಾರಿಯಾಗಿರುವನು.

ಶನಿಯ ಉಪದ್ರವವೆಂದರೆ ಸಂಧಿವಾತ, ಅಸ್ತಮಾದಂತಹ ಕಾಯಿಲೆಗಳು. ಒಬ್ಬನ ಜಾತಕದಲ್ಲಿ ಸಾಡೇಸಾತಿ(71/2) ಅಥವಾ ಅಷ್ಟಮ(21/2)ದ ಪ್ರಭಾವವು ಆರಂಭವಾದಾಗ ವ್ಯತಿರಿಕ್ತ ಪರಿಣಾಮಗಳು ಉಂಟಾಗುವುದು. ಶನಿಪೂಜೆ ಮತ್ತು ಗ್ರಹಶನಿಶಾಂತಿ ಪೂಜೆಗಳು ಕೆಲವೊಂದು ಪರಿಹಾರಗಳು. ಇದರಿಂದ ಶನಿದೇವರನ್ನು ಶಾಂತಗೊಳಿಸಬಹುದು ಮತ್ತು ಕಠಿಣ ಸಮಯದಲ್ಲಿ ಬರುವಂತಹ ಸಂಕಷ್ಟಗಳನ್ನು ಕಡಿಮೆ ಮಾಡಬಹುದು.

ಇದನ್ನು ಹೊರತುಪಡಿಸಿ ಹಲವಾರು ರೀತಿಯ ಪರಿಹಾರಗಳನ್ನು ನೀವು ಪಾಲಿಸಿಕೊಂಡು ಹೋಗಬಹುದು. ಶನಿಮಂತ್ರ ಜಪಿಸುವುದು ಇದರಲ್ಲಿ ಪ್ರಮುಖವಾಗಿದೆ. ಪಶ್ಚಿಮಾಭಿಮುಖವಾಗಿ ನಿಂತುಕೊಂಡು ಶನಿಮಂತ್ರ ಜಪಿಸಬೇಕು. ದಿನದಲ್ಲಿ ಏಳು ಸಲ ಇದನ್ನು ಜಪಿಸಬೇಕು. ರುದ್ರಾಕ್ಷ ಮಾಲೆಯನ್ನು ಹಿಡಿದುಕೊಂಡು 108 ಸಲ ಈ ಮಂತ್ರ ಜಪಿಸಬಹುದು. ಶನಿಯಂತ್ರ ಮನೆಯಲ್ಲಿಟ್ಟರೆ ಒಳ್ಳೆಯದು...

ಶನಿಮಂತ್ರ ಮತ್ತು ಅರ್ಥಗಳು

ಶನಿಮಂತ್ರ ಮತ್ತು ಅರ್ಥಗಳು

ಶನಿದೇವರನ್ನು ಒಲೈಸಿಕೊಳ್ಳಲು ಮತ್ತು ಸಂಕಷ್ಟ ಕಡಿಮೆ ಮಾಡಲು ಕೆಳಗಡೆ ಕೆಲವು ಶನಿಮಂತ್ರಗಳನ್ನು ನೀಡಲಾಗಿದೆ.

"ಓಂ ಹಿಲ್ಮ್ ಶಾಮ್ ಶನಾಯ ನಮ"

"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"

"ಓಂ ಶಾಮ್ ಶನೇಶ್ಚಾರ ನಮಃ"

"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"

ಶನಿ ಗಾಯತ್ರಿ ಮಂತ್ರ

ಶನಿ ಗಾಯತ್ರಿ ಮಂತ್ರ

ಓಂ ಶನೈಶ್ಚರಾಯ ವಿದ್ಮಯೇ

ಸೂರ್ಯಪುತ್ರಾಯ ದಹಿಮಹಿ

ತನ್ನೊ ಮಂಡಾ ಪ್ರಚೋದಾಯತ್

ಶನಿ ಧ್ಯಾನ ಮಂತ್ರ

ಶನಿ ಧ್ಯಾನ ಮಂತ್ರ

ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ

ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ

ಅರ್ಥ: ನಾನು ಕಪ್ಪು ಬಣ್ಣ ಹೊಂದಿರುವ, ಸೂರ್ಯ ಮತ್ತು ಛಾಯೆಯ ಮಗ, ಯಮನ ಸೋದರ, ನಿಧಾನವಾಗಿ ಚಲಿಸುವ ಶನಿಗೆ ನಮಸ್ಕರಿಸುತ್ತೇನೆ.

ಶನಿ ಧ್ಯಾನ ಮಂತ್ರ

ಶನಿ ಧ್ಯಾನ ಮಂತ್ರ

ಶನಿ ದೇವರು ದಯಪಾಲಿಸುವ ಮತ್ತು ನಾಶ ಮಾಡುವವರೆಂದು ನಂಬಲಾಗಿದೆ. ಶನಿ ದೇವರನ್ನು ತುಂಬಾ ಭಕ್ತಿ ಹಾಗೂ ನಿಷ್ಕಲ್ಮಶವಾಗಿ ಪೂಜಿಸುವವರು ಎಲ್ಲಾ ಸಂಕಷ್ಟದಿಂದ ಪಾರಾಗಿ ಅವರಿಗೆ ಬೇಕಾಗುವ ಜೀವನ ಸಾಗಿಸುವರು.

ಶನಿದೇವರ ಪ್ರಕೋಪ ಕಡಿಮೆ ಮಾಡಲು ಕೆಲವೊಂದು ಪರಿಹಾರಗಳು ಇವೆ

ಶನಿದೇವರ ಪ್ರಕೋಪ ಕಡಿಮೆ ಮಾಡಲು ಕೆಲವೊಂದು ಪರಿಹಾರಗಳು ಇವೆ

51 ಶನಿವಾರದಂದು ಉಪವಾಸ ಮಾಡಿ, ಸಂಜೆ ಸೂರ್ಯಾಸ್ತದ ಬಳಿಕ ಅಕ್ಕಿ ಮತ್ತು ಕಪ್ಪು ಉದ್ದಿನಿಂದ ಮಾಡಿರುವ ಕಿಚಡಿ ಸೇವಿಸಬೇಕು.

ನೀಲಮಣಿ ಧರಿಸಿ.

14 ಮುಖಿ ರುದ್ರಾಕ್ಷಿ ಅಥವಾ ಸಪ್ತಮುಖಿ ರುದ್ರಾಕ್ಷಿಯ ಮಾಲೆ ಧರಿಸಿ ಅಥವಾ 36 ಮುಖಿ ಮಣಿ ಇರುವಂತಹ ಶನಿಮಾಲೆ ಧರಿಸಿ.

ಶನಿವಾರ ಹನುಮಂತ ದೇವರ ಮಂತ್ರವನ್ನು ಪಠಿಸಿಕೊಳ್ಳಿ ಮತ್ತು ಹನುಮಂತ ದೇವರ ಮೂರ್ತಿ ಮುಂದೆ ತುಪ್ಪದಲ್ಲಿ ದೀಪ ಹಚ್ಚಿ.

ಶನಿವಾರದಂದು ಎಳ್ಳು ದಾನ ಮಾಡಿ.

ಶನಿದೇವರ ಪ್ರಕೋಪ ಕಡಿಮೆ ಮಾಡಲು ಕೆಲವೊಂದು ಪರಿಹಾರಗಳು ಇವೆ

ಶನಿದೇವರ ಪ್ರಕೋಪ ಕಡಿಮೆ ಮಾಡಲು ಕೆಲವೊಂದು ಪರಿಹಾರಗಳು ಇವೆ

ಶನಿಯಂತ್ರವಿರುವ ಪದಕ ಧರಿಸಿ.

ಶನಿಯ ಉಂಗುರ ಧರಿಸಿ(ಶನಿಸಿಂಗಾಪುರದಲ್ಲಿ ಸಿಗುವುದು)

ಶಿವನನ್ನು ಜಪಿಸಿ ಮತ್ತು ಮಹಾಮೃತ್ಯುಂಜಯ ಮಂತ್ರ ಜಪಿಸಿ.

English summary

Effective Home Remedies for Shani Dosha

Shani or Saturn is the most fiery planet, according to Vedic astrology. Saturn is the slowest moving planet in the solar system. Due to this, it is a cold, barren, dry, secretive planet and its effects are felt with greater intensity and for longer periods than any other planet.