For Quick Alerts
ALLOW NOTIFICATIONS  
For Daily Alerts

ದುರ್ಗೆ ಪೂಜೆ 2021: ದಿನಾಂಕ, ಸಮಯ ಹಾಗೂ ಮಹತ್ವ

|

ನವರಾತ್ರಿಯಲ್ಲಿ ದುರ್ಗೆಯ ಒಂಭತ್ತು ಅವತಾರಗಳನ್ನು ಆರಾಧನೆ ಮಾಡಲಾಗುವುದು. ನವರಾತ್ರಿಯನ್ನು ದೇಶದೆಲ್ಲಡೆ ಭಕ್ತಿ, ಸಂಭ್ರಮದಿಂದ ಆಚರಿಸಲಾಗುವುದು. ಕರ್ನಾಟಕದಲ್ಲಿ ದಸರಾ ಹಬ್ಬದ ಸಡಗರ.

ಹಿಂದೂ ಪಂಚಾಗದ ಪ್ರಕಾರ ವರ್ಷದಲ್ಲಿ ಒಟ್ಟು 5 ನವರಾತ್ರಿಗಳು ಬರುತ್ತವೆ. ಚೈತ್ರ, ಆಷಾಢ, ಅಶ್ವಿನಿ, ಪುಷ್ಯಾ, ಮಘಾ ನವರಾತ್ರಿಗಳಲ್ಲಿ ಅಶ್ವಿನಿ ನವರಾತ್ರಿ ತುಂಬಾ ಮಹತ್ವವಾದದ್ದು.

Durga Puja 2021: Dates and Timings,, History and Significance in kannada

ನವರಾತ್ರಿಯ 9 ದಿನಗಳು ದುರ್ಗೆ ದೇವಿಗೆ ಮೀಸಲಾಗಿದೆ. ಈ ಒಂಭತ್ತು ದಿನಗಳಲ್ಲಿ ಅವಳ ಒಂಭತ್ತು ಅವತಾರಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರ ಘಂಟಾ ದೇವಿ, ಕೂಷ್ಮಾಂಡ ದೇವಿ, ಸ್ಕಂದ ಮಾತೆ, ಕಾತ್ಯಾಯನಿ, ಕಾಳಿ, ಮಹಾಗೌರಿ, ಸಿದ್ಧಿಧಾತ್ರಿ ಈ ಒಂಭತ್ತು ಅವತಾರಗಳನ್ನು ಪೂಜಿಸಲಾಗುವುದು.

ದುರ್ಗಾ ಪೂಜೆ 2021 ದಿನಾಂಕ ಮತ್ತು ಸಮಯ

ದುರ್ಗಾ ಪೂಜೆ 2021 ದಿನಾಂಕ ಮತ್ತು ಸಮಯ

ದುರ್ಗಾ ಪೂಜೆ ಪ್ರಾರಂಭ

ದುರ್ಗಾಪೂಜೆ ಅಕ್ಟೋಬರ್‌ 7ರಿಂದ ಪ್ರಾರಂಭ.

ಘಟಸ್ಥಾಪನೆಗೆ ಶುಭ ಮುಹೂರ್ತ: ಬೆಳಗ್ಗೆ 6.17 ರಿಂದ 7.07 ರವರೆಗೆ.

ಘಟಸ್ಥಾಪನೆಗೆ ಶುಭ ಮುಹೂರ್ತ: ಬೆಳಗ್ಗೆ 6.17 ರಿಂದ 7.07 ರವರೆಗೆ.

ಕಳಸ ಸ್ಥಾಪನೆ ಮಾಡಿ ದೇವಿಯನ್ನು ಆಹ್ವಾನಿಸಿದ ಬಳಿಕ ದುರ್ಗೆ ಪೂಜೆ ಮಾಡಲಾಗುವುದು.

* 1ನೇ ದಿನ ಪ್ರಥಮ ದಿನ , ಅಕ್ಟೋಬರ್‌ 7, ಗುರುವಾರದಂದು ಮಾತೆ ಶೈಲಪುತ್ರಿಯನ್ನು ಆರಾಧಿಸಲಾಗುವುದು.

* 2ನೇ ದಿನ ದ್ವಿತೀಯಾ, ಅಕ್ಟೋಬರ್‌ 8, ಶುಕ್ರವಾರ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುವುದು.

* 3ನೇ ದಿನ ತೃತೀಯಾ, ಚತುರ್ಥಿ, ಅಕ್ಟೋಬರ್‌ 9, ಶನಿವಾರ ಮಾತೆ ಚಂದ್ರಘಂಟೆಯನ್ನು ಆರಾಧಿಸಲಾಗುವುದು.

* 4ನೇ ದಿನ ಪಂಚಮಿ, ಅಕ್ಟೋಬರ್ 10, ಭಾನುವಾರ ಸ್ಕಂದ ಮಾತೆಯನ್ನು ಪೂಜಿಸಲಾಗುವುದು.

* 5ನೇ ದಿನ, ಷಷ್ಠಿ, ಅಕ್ಟೋಬರ್‌ 11, ಸೋಮವಾರ ಕಾತ್ಯಾಯಿನಿ ದೇವಿಯಯನ್ನು ಆರಾಧಿಸಲಾಗುವುದು.

* 6ನೇ ದಿನ, ಸಪ್ತಮಿ, ಅಕ್ಟೋಬರ್‌ 12, ಮಂಗಳವಾರ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುವುದು.

* 7ನೇ ದಿನ, ಅಷ್ಟಮಿ ಅಕ್ಟೋಬರ್ 13, ಬುಧವಾರ ಮಹಾಗೌರಿಯನ್ನು ಪೂಜಿಸಲಾಗುವುದು.

* 8ನೇ ದಿನ, ನವಮಿ ಅಕ್ಟೋಬರ್‌ 14, ಮಹಾ ಸಿದ್ಧಿಧಾತ್ರಿ ದೇವಿಯನ್ನು ಆರಾಧಿಸಲಾಗುವುದು.

* 9ನೇ ದಿನ, ದಶಮಿ ಅಕ್ಟೋಬರ್‌ 15ರಂದು ದುರ್ಗಾ ವಿಸರ್ಜನೆ ಮಾಡಲಾಗುವುದು.

ದುರ್ಗೆ ಪೂಜೆಯ ಬಗ್ಗೆ ಇತಿಹಾಸ

ದುರ್ಗೆ ಪೂಜೆಯ ಬಗ್ಗೆ ಇತಿಹಾಸ

ದುರ್ಗೆ ಪೀಜೆಯ ಮಹತ್ವದ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿದೆ. ಶ್ರೀರಾಮನು ಲಂಕೆಯ ರಾಜ ರಾವಣನ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ದೇವಿಯ ಆಶೀರ್ವಾದ ಪಡೆಯಲು ಇಚ್ಛಿಸಿದನು. ಆದರೆ ದುರ್ಗಾ ಪೂಜೆ 6 ತಿಂಗಳು ಸಮಯವಿತ್ತು, ಅಷ್ಟು ಹೊತ್ತು ಕಾಯಲು ಸಮಯವಿರಲಿಲ್ಲ, ಹಾಗಾಗಿ ತಪ್ಪಾದ ಮಾಸದಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾರಂಭಿಸಿದರು. ಆದ್ದರಿಂದ ರಾಮನು ಮಾಡಿದ ದುರ್ಗಾ ಪೂಜೆಯ ಮಾಸವನ್ನು 'ಅಕಾಲ್ ಬೋಧಾನ್' ಅಥವಾ ತಪ್ಪು ಮಾಸದಲ್ಲಿ ಮಾಡಿದ ಪೂಜೆ ಎಂದು ಉಲ್ಲೇಖಿಸಲಾಗಿದೆ. ಅವನು ಪೂಜೆಯನ್ನು ಆಚರಿಸಲು ದುರ್ಗಾದೇವಿಗೆ 108 ಕಮಲ ಹೂವುಗಳನ್ನು ಅರ್ಪಿಸಿ 108 ದೀಪಗಳನ್ನು ಹಚ್ಚಿದನು. ಶ್ರೀರಾಮನು ಪೂಜೆಮಾಡುವ ಸಮಯದಲ್ಲಿ ರಾಕ್ಷಸನೊಬ್ಬನು ಒಂದು ಕಮಲವನ್ನು ಕದ್ದುಬಿಟ್ಟನು. ಆದ್ದರಿಂದ ಪೂಜೆಯನ್ನು ಸಂಪೂರ್ಣಗೊಳಿಸಲು ಶ್ರೀರಾಮನು ಕಮಲದ ಬದಲಿಗೆ ತನ್ನ ಎರಡು ಕಣ್ಣುಗಳಲ್ಲಿ ಒಂದು ಕಣ್ಣನ್ನು ಅರ್ಪಿಸಲು ಸಿದ್ಧನಾದನು. ಆದರೆ ಅವನು ಹಾಗೆ ಮಾಡುವ ಮೊದಲೇ ದೇವಿಯು ಶ್ರೀರಾಮನ ಮುಂದೆ ಪ್ರತ್ಯಕ್ಷ್ಯಳಾಗಿ ಅವನು ಯುದ್ಧದಲ್ಲಿ ವಿಜಯಶಾಲಿಯಾಗಲೆಂದು ಹರಸಿದಳು. ದುರ್ಗಾ ಪೂಜೆಯ ಮಹತ್ವವನ್ನು ಸಾರುವ ನವರಾತ್ರಿಯ ಹತ್ತನೇ ದಿವಸ ಶ್ರೀರಾಮನು ರಾವಣನನ್ನು ಸಂಹರಿಸಿದನು. ಈಗಲೂ ಕೂಡ ದಸರಾ ಹಬ್ಬದ ಹತ್ತನೆಯ ದಿವಸ ಶ್ರೀರಾಮನ ಐತಿಹಾಸಿಕ ವಿಜಯವನ್ನು ಆಚರಿಸಲು ರಾವಣನ ವಿಗ್ರಹವನ್ನು ಸೃಷ್ಟಿಸಿ ಸುಡುತ್ತಾರೆ. ಆದ್ದರಿಂದ ಪೌರಾಣಿಕ ದೃಷ್ಟಿಯಿಂದ ದುರ್ಗಾ ಪೂಜೆಯ ಮೂಲವು ಲಂಕೆಯ ಮೇಲೆ ಮಾಡಿದ ಮಹಾ ಯುದ್ಧದಲ್ಲಿ ಅಡಗಿದೆ.

ಮಹತ್ವ

ಮಹತ್ವ

* ದುರ್ಗೆ ಪೂಜೆ ಎನ್ನುವುದು ದುಷ್ಟರ ವಿರುದ್ಧ ಸತ್ಯ ಸಂದ ಜಯವಾಗಿದೆ.

* ದುರ್ಗೆಯ ಆಶೀರ್ವಾದ ಪಡೆಯಲು ಈ ದುರ್ಗಾ ಪೂಜೆ ಮಾಡಲಾಗುವುದು. ಮನದ ಬಯಕೆಗಳು ಈಡೇರಲು, ಕಷ್ಟಗಳಿಂದ ಮುಕ್ತಿ ದೊರೆಯಲು, ವೈವಾಹಿಕ ಜೀವದಲ್ಲಿರುವ ಕಷ್ಟಗಳು ದೂರವಾಗಲು, ಆರೋಗ್ಯ ವೃದ್ಧಿಸಲು, ಐಶ್ವರ್ಯ ಹೆಚ್ಚಲು ದುರ್ಗೆಯನ್ನು ಪೂಜಿಸಲಾಗುವುದು. ದುರ್ಗೆಯ ಕೃಪೆಯಿದ್ದರೆ ಸಕಲ ಸಿದ್ಧಿಯೂ ದೊರೆಯುವುದು, ಬದುಕಿನಲ್ಲಿ ಕಷ್ಟವಿರಲ್ಲ ಎಂಬ ನಂಬಿಕೆ ದುರ್ಗೆಯನ್ನು ಪೂಜಿಸುವ ಭಕ್ತರಲ್ಲಿದೆ.

* ದುರ್ಗೆಯ ಆರಾಧನೆ ಮಾಡುವುದರಿಂದ ಋಣಾತ್ಮಕ ಶಕ್ತಿಯಿಂದ ತೊಂದರೆಯಾಗುತ್ತಿದ್ದರೆ ಅದು ದೂರವಾಗುವುದು, ಮಾಟ-ಮಂತ್ರಗಳು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ದೇವಿಯು ತಡೆಗಟ್ಟುತ್ತಾಳೆ.

* ದುರ್ಗಾ ಮಾತೆಯನ್ನು ಪೂಜಿಸುವುದರಿಂದ ಆಧ್ಯಾತ್ಮದ ದಾರಿಯನ್ನು ತೋರಿಸಿಕೊಡುತ್ತಾಳೆ. ಬದುಕಿನಲ್ಲಿ ನೆಮ್ಮದಿ, ಸಂತೋಷವಿರುತ್ತದೆ.

English summary

Durga Puja 2021: Dates and Timings,, History and Significance in kannada

Durga Puja 2021: Dates and Timings, History and Significance in kannada.Read on...
X
Desktop Bottom Promotion