For Quick Alerts
ALLOW NOTIFICATIONS  
For Daily Alerts

ಸ್ವಾತಂತ್ರ್ಯ ದಿನಾಚರಣೆ 2020: ನಾವು ಮರೆತ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕದ ಕಾರ್ನಾಡ್ ಸದಾಶಿವ ರಾವ್

|

ನಾವು 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಪಾತ್ರ ಎಲ್ಲರಿಗೂ ಗೊತ್ತು. ಆದರೆ ಈ ಪೀಳಿಗೆಯವರಲ್ಲಿ ಅನೇಕರಿಗೆ ನಮ್ಮ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಲ್ಲಿ
ಅದರಲ್ಲೂ ದಕ್ಷಿಣ ಭಾರತದ ಗಾಂಧಿ ಎಂದೇ ಕರೆಸಿಕೊಂಡ ಕಾರ್ನಾಡ್ ಸದಾಶಿವ ರಾವ್ ಬಗ್ಗೆ ಎಷ್ಟು ಗೊತ್ತಿದೆ?

ನಾವು ಮರೆತ ಸ್ವಾತಂತ್ರ್ಯ ಹೋರಾಟಗಾರ: ಕರ್ನಾಟಕದ ಕಾರ್ನಾಡ್ ಸದಾಶಿವ ರಾವ್ | KS Rao | Boldsky Kannada

ಬಹುಶಃ ಅನೇಕರಿಗೆ ಇವರ ಬಗ್ಗೆ ಗೊತ್ತೇ ಇರುವುದಿಲ್ಲ ಕಾರಣ ನಮಗೆ ಪಠ್ಯದಾಗಲಿ ಅಥವಾ ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳಲ್ಲಿ ಆಗಲಿ ಇಂಥ ಮಹಾನ್‌ ನಾಯಕರ ಬಗ್ಗೆ ಹೇಳುವುದೇ ಇಲ್ಲ. ಪ್ರಮುಖ ನಾಯಕರ ಹೆಸರುಗಳನ್ನಷ್ಟೇ ಹೇಳುತ್ತಾರೆ. ನಮ್ಮ ಕರ್ನಾಟಕದಲ್ಲಿ ಕೂಡ ಅನೇಕ ಮಹಾನ್‌ರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ನಾವಿಲ್ಲಿ ನಾವು ಮರೆಯಲೇಬಾರದ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ ರಾವ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದೇವೆ ನೋಡಿ:

ಕಾರ್ನಾಡ್‌ ಸದಾಶಿವ ರಾವ್‌ ಅವರನ್ನು ದಕ್ಷಿಣ ಭಾರತದ ಗಾಂಧಿ ಎಂದೇ ಕರೆಯುತ್ತಾರೆ. ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ಕೊಟ್ಟ ಮಹಾನ್‌ ದೇಶ ಪ್ರೇಮಿ. ಇವರು 1881ರಲ್ಲಿ ಮಂಗಳೂರಿನಲ್ಲಿ ಹುಟ್ಟದರು. ಅತ್ಯಂತ ಶ್ರೀಮಂತ ಮನೆತನದಲ್ಲಿ ಹುಟ್ಟಿದರು. ಇವರ ತಂದೆ ಪ್ರಸಿದ್ಧ ವಕೀಲರಾಗಿದ್ದ ರಾಮಚಂದ್ರರಾಯರು, ತಾಯಿ ರಾಧಾಬಾಯಿ. ಈ ದಂಪತಿಯ ಏಕೈಕ ಪುತ್ರನಾಗಿರುವ ಕಾರ್ನಾಡ್‌ ಸದಾಶಿವ ರಾವ್‌ ಚಿನ್ನದ ಚಮಚ ಬಾಯಿಯಲ್ಲಿ ಇಟ್ಟು ಹುಟ್ಟಿದರೂ ಬಡವರನ್ನು ಕಂಡರೆ ಮರುಗುವ ಗುಣ ಚಿಕ್ಕ ಹುಡುಗನಾಗಿರುವಾಗಲೇ ಇತ್ತು. ತಮ್ಮ ಆಟದ ಸಾಮಾನುಗಳನ್ನು ಬಡ ಮಕ್ಕಳ ಜೊತೆ ಹಂಚಿಕೊಂಡು ಆಡುತ್ತಿದ್ದರು.

ಸದಾಶಿವ ರಾವ್‌ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ, ಮುಂಬೈನಲ್ಲಿ ವಕೀಲ ಶಿಕ್ಷಣ ಪೂರೈಸಿದರು. ಈ ಸಮಯದಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ಬಿರುಗಾಳಿ ಬೀಸಲಾರಂಭಿಸಿತ್ತು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆಕೊಟ್ಟಿದ್ದರು, ಗಾಂಧೀಜಿಯವರ ಚಳವಳಿಗೆ ಓಗೊಟ್ಟು ತಮ್ಮ ಜೀವನದ ಕೊನೆಯವರೆಗೂ ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟ ಮಹಾನ್‌ಭಾವರು.

ಸಾಮಾಜಿಕ ಕ್ರಾಂತಿಕಾರಿ

ಜಾತಿ ತಾರತಮ್ಯಗಳ ವಿರುದ್ಧ ಧ್ವನಿ ಎತ್ತಿದರು, ಮೂಢನಂಬಿಕೆ ವಿರುದ್ಧ ಹೋರಾಡಿದರು, ಸಾಮಾಜಿಕ ಕ್ಷೇತ್ರಗಳಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಕೊನೆಯವರೆಗೂ ಹೋರಾಟ ನಡೆಸುತ್ತಿದ್ದರು. ಇವರ ಹೋರಾಟಕ್ಕೆ ಪತ್ನಿ ಶಾಂತಾಭಾಯಿ ಕೂಡ ಬೆಂಬಲ ನೀಡಿದ್ದರು. ಇವರು ವಿಧವೆ ಮಹಿಳೆಯರಿಗೆ ನೆರವು ನೀಡುವ ಸಲುವಾಗಿ ಮಹಿಳಾ ಸಭಾ ಸ್ಥಾಪಿಸಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು.

ಹಿಂದುಳಿದ ವರ್ಗದವರು ಕೂಡ ದೇವಾಲಯಕ್ಕೆ ಹೋಗುವಂತಾಗಬೇಕು, ಅವರಿಗೆ ಪ್ರವೇಶ ನೀಡಬೇಕು ಎಂದು ಹೋರಾಟ ನಡೆಸಿದ್ದರು. ಕಾಳಿ ದೇವಾಲಯಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ವಿರೋಧಿಸಿದ್ದರು.

ಜಲಿಯನ್ ವಾಲಾಬಾಗ್‌ ಹತ್ಯಾಕಾಂಡ ವಿರೋಧಿಸಿದ್ದರು

1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದವರು ಕಾರ್ನಾಡ್. ಇವರ ಹೋರಾಟದ ಫಲವಾಗಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿತು. ಇವರ ಮನೆ ಕಾಂಗ್ರೆಸ್ ಕಾರ್ಯಚಟುವಟಿಕೆಯ ಕೇಂದ್ರ ಬಿಂದುವಾಗಿತ್ತು. ದೇಶದ ಪ್ರಮುಖ ನಾಯಕರಾದ ಮಹತ್ಮಾ ಗಾಂಧಿ, ಜವಹರಲಾಲ್‌ ನೆಹರು, ಸಿ. ಆರ್ ದಾಸ್, ಕಸ್ತೂರಿ ಬಾ ಮುಂತಾದ ನಾಯಕರು ಕಾರ್ನಾಡ್ ಮನೆಗೆ ಭೇಟಿ ನೀಡಿದ್ದರು.

ಬದುಕಿನಲ್ಲಿ ಉಂಟಾದ ಆಘಾತ

ಸ್ವಾತಂತ್ರ್ಯ ಹೋರಾಟವನ್ನು ನಡೆಸುತ್ತಿರುವಾಗ ಇವರ ಬದುಕಿನಲ್ಲಿ ಒಂದು ಕೆಟ್ಟ ಘಟನೆ ನಡೆಯಿತು. ಇವರ ಏಕೈಕ ಪುತ್ರಿ ಸಾವನ್ನಪ್ಪಿದರು. ಇದರಿಂದಾಗಿ ಕಾರ್ನಾಡ್‌ರು ತುಂಬಾ ನೊಂದುಕೊಂಡು ಅಹಮದಾಬಾದ್‌ಗೆ ಹೋಗಿ ಗಾಂಧೀಜಿ ಜೊತೆ ಕಾಲ ಕಳೆದರು. ಆ ಸಂದರ್ಭದಲ್ಲಿ ಕರ್ನಾಟಕದ ಜನರು ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗಿತ್ತು, ಇದನ್ನು ಕೇಳಿ ತನ್ನ ಜನರ ನೆರವಿಗೆ ಧಾವಿಸಿ ಬಂದು ಸಮಾಜ ಸೇವೆಯಲ್ಲಿ ಮತ್ತೆ ತೊಡಗಿಸಿಕೊಂಡರು.

ಅವರ ಶವಸಂಸ್ಕಾರಕ್ಕೂ ಹಣವಿರಲಿಲ್ಲ

ಹುಟ್ಟಿದಾಗ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಸದಾಶಿವ ರಾವ್‌ ಅವರು ಸಾಯುವಾಗ ಅವರ ಶವ ಸಂಸ್ಕಾರಕ್ಕೂ ಹಣವಿರಲಿಲ್ಲ. ತಮ್ಮ ಸಮಸ್ತ ಹಣವನ್ನು ಬಡವರಿಗಾಗಿ ಖರ್ಚು ಮಾಡಿದ್ದರು. ದಂಡಿ ನಡಿಗೆ, ಉಪಾವಾಸ ಸತ್ಯಾಗ್ರಹದ ಬಳಿಕ ಅವರ ಆರೋಗ್ಯ ಹದಗೆಡಲು ಆರಂಭಿಸಿತ್ತು. 1936ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬೈಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9ರಂದು ಸಾವನ್ನಪ್ಪಿದ್ದರು.

English summary

Independence Day 2020: Do You Remember This Freedom Fighter Karnad Sadashiva Rao

Karnad Sadashiva Rao is one of the noted freedom fighters from Karnataka who founded Mahila Sabha to help widows and poor women.He is known as Karnataka gandhi...
X