For Quick Alerts
ALLOW NOTIFICATIONS  
For Daily Alerts

ಭೂಮಿ, ಸೂರ್ಯನ ಮಧ್ಯೆ ಇರುವ ದೂರವೆಷ್ಟು? ಹನುಮಾನ್ ಚಾಲೀಸಾದಲ್ಲಿದೆ ನಿಖರ ಮಾಹಿತಿ..

|

ಭೂಮಿಯು ಸೂರ್ಯನ ಸುತ್ತ ಸುತ್ತುವ ಕಕ್ಷೆಯು ಸಂಪೂರ್ಣ ವೃತ್ತಾಕಾರವಾಗಿರದೆ ಅಂಡಾಕಾರವಾಗಿದೆ ಎಂಬುದು ಆಧುನಿಕ ಖಗೋಳ ಶಾಸ್ತ್ರ ಹಾಗೂ ವೈಜ್ಞಾನಿಕ ಸಂಶೋಧನೆಗಳಿಂದ ನಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ. ಇದೇ ಕಾರಣದಿಂದ ಭೂಮಿ ಹಾಗೂ ಸೂರ್ಯನ ನಡುವಿನ ಅಂತರವು ವರ್ಷದುದ್ದಕ್ಕೂ ಬದಲಾಗುತ್ತಲೇ ಇರುತ್ತದೆ.

ಸೂರ್ಯನ ಸುತ್ತ ಸುತ್ತುವ ಭೂಮಿಯ ಕಕ್ಷೆಯ ಸೂರ್ಯನಿಗೆ ಅತಿ ಹತ್ತಿರವಾದ ದೀರ್ಘವೃತ್ತವನ್ನು ಪರಿಗಣಿಸಿದಲ್ಲಿ ಭೂಮಿಯು ಸೂರ್ಯನಿಂದ 91,445,000 ಮೈಲು (147,166,462 ಕಿಮೀ) ದೂರದಲ್ಲಿದೆ. ಭೂಮಿಯ ಕಕ್ಷೆಯ ಈ ಬಿಂದುವನ್ನು ಉಪಸೌರ ಅಥವಾ ಪೆರಿಯಾಪ್ಸಿಸ್ ಅಥವಾ ಪೆರಿಹೆಲಿಯನ್ (ಗ್ರಹಪಥದಲ್ಲಿ ಸೂರ್ಯನಿಗೆ ಅತಿ ಸಮೀಪದ ಸ್ಥಾನ) ಎಂದು ಕರೆಯಲಾಗುತ್ತದೆ. ಈ ವಿದ್ಯಮಾನ ಪ್ರತಿವರ್ಷ ಸರಾಸರಿ ಜನೆವರಿ 3 ರಂದು ಘಟಿಸುತ್ತದೆ. ಹಾಗೆಯೇ ಸರಾಸರಿ ಪ್ರತಿವರ್ಷದ ಜುಲೈ 3 ರಂದು ಭೂಮಿಯು ಸೂರ್ಯನಿಂದ ಅತಿ ದೂರದಲ್ಲಿ ಅಂದರೆ 94,555,000 ಮೈಲು (152,171,522 ಕಿಮೀ) ಅಂತರದಲ್ಲಿ ಪರಿಭ್ರಮಿಸುತ್ತಿರುತ್ತದೆ. ಭೂ ಕಕ್ಷೆಯ ಈ ಬಿಂದುವನ್ನು ಅಪೊಯಾಪ್ಸಿಸ್ ಅಥವಾ ಅಫೆಲಿಯನ್ ಎಂದು ಕರೆಯಲಾಗುತ್ತದೆ.

ಪೆರಿಹೆಲಿಯನ್ ಹಾಗೂ ಅಫೆಲಿಯನ್ ಎರಡೂ ಬಿಂದುಗಳನ್ನು ಸರಾಸರಿ ಲೆಕ್ಕ ಮಾಡಿದಲ್ಲಿ ಭೂಮಿಯು ಸೂರ್ಯನಿಂದ 92,955,807 ಮೈಲು (149,597,870.691 ಕಿಮೀ) ದೂರದಲ್ಲಿರುತ್ತದೆ.

ಹನುಮಾನ್ ಚಾಲೀಸಾದಲ್ಲಿಯೇ ಇದೆ ಸೂರ್ಯ ಹಾಗೂ ಭೂಮಿಯ ನಡುವಿನ ಅಂತರ

ಹನುಮಾನ್ ಚಾಲೀಸಾದಲ್ಲಿಯೇ ಇದೆ ಸೂರ್ಯ ಹಾಗೂ ಭೂಮಿಯ ನಡುವಿನ ಅಂತರ

ದಾಖಲೆಗಳ ಪ್ರಕಾರ 1672 ರಲ್ಲಿ ಮೊತ್ತ ಮೊದಲ ಬಾರಿಗೆ ಜೀನ್ ರಿಚರ್ ಹಾಗೂ ಗಿಯೊವನ್ನಿ ಡೊಮೆನಿಕೊ ಕ್ಯಾಸ್ಸಿನಿ ಎಂಬುವರು ಸೂರ್ಯ ಹಾಗೂ ಭೂಮಿಯ ನಡುವಿನ ಅಂತರವು ಭೂಮಿಯ ತ್ರಿಜ್ಯದ 22,000 ಪಟ್ಟು ಇದೆ ಎಂದು ಲೆಕ್ಕ ಹಾಕಿದ್ದರು. (ಭೂಮಿಯ ತ್ರಿಜ್ಯ 6,371 ಕಿಮೀ)

ಅಂದರೆ 22000 ಗುಣಿಸು 6321 ಕಿಮೀ = 140,162,000 ಕಿಮೀಗಳು (140 ಮಿಲಿಯನ್ ಮೈಲು) ಆದರೆ ಪುರಾತನ ಹಿಂದೂ ಧಾರ್ಮಿಕ ಮಂತ್ರ ಪಠಣ 'ಹನುಮಾನ ಚಾಲೀಸಾ'ದಲ್ಲಿ ಈ ಲೆಕ್ಕವನ್ನು ಎರಡೇ ಎರಡು ಸಾಲುಗಳಲ್ಲಿ ಅತಿ ಸರಳವಾಗಿ ಹೇಳಲಾಗಿದೆ ಎಂದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. ಈ ಕೆಳಗಿನ ವಾಕ್ಯವನ್ನು ಒಂದು ಸಲ ಓದಿ.

ಜುಗ ಸಹಸ್ರ ಯೋಜನಾ ಪರ ಭಾನು, ಲೀಯೊ ತಾಹಿ ಮಧುರ ಫಲ ಜಾನು !

ಜುಗ ಸಹಸ್ರ ಯೋಜನಾ ಪರ ಭಾನು, ಲೀಯೊ ತಾಹಿ ಮಧುರ ಫಲ ಜಾನು !

ಇದರ ಅರ್ಥ ಬಿಡಿಸಿದಲ್ಲಿ, ಸೂರ್ಯನು (ಭಾನು) ಜುಗ್ ಸಹಸ್ರ ಯೋಜನಗಳಷ್ಟು ದೂರದಲ್ಲಿದ್ದಾನೆ (ಜುಗ್ ಸಹಸ್ರ ಯೋಜನ್ ಎಂಬುದು ಹಿಂದಿಯಲ್ಲಿ ದೂರ ಅಳೆಯುವ ಸಾಧನವಾಗಿದೆ) ಎಂದು ತಿಳಿದು ಬರುತ್ತದೆ.

ಹಿಂದೂ ವೇದಶಾಸ್ತ್ರಗಳ ಪ್ರಕಾರ ಇದನ್ನು ಲೆಕ್ಕ ಹಾಕಿದಲ್ಲಿ

1 ಜುಗ್ = 12000

1 ಸಹಸ್ರ = 1000

1 ಯೋಜನ = 8 ಮೈಲಿ

ಆದ್ದರಿಂದ, 12000 * 1000 * 8 = 96,000,000 ಮೈಲುಗಳು

1 ಮೈಲು = 1.6 ಕಿಮೀ ಈ ಸಮೀಕರಣವನ್ನು ಮತ್ತಷ್ಟು ಬಿಡಿಸಿದಲ್ಲಿ ಈ ದೂರ 96,000,000 * 1.6 ಕಿಮೀ = 153,600,000 ಕಿಮೀ ಗಳಾಗುತ್ತದೆ.

Most Read: ಸಾವು ಸಮೀಪಿಸುತ್ತಿದೆ ಎಂದು ಎಚ್ಚರಿಸುವ ಅಚ್ಚರಿಯ ಚಿಹ್ನೆಗಳು!

ಹನುಮಾನ ಚಾಲೀಸಾದಲ್ಲಿರುವ 18ನೇ ಸಾಲನ್ನು ಗಮನವಿಟ್ಟು ಈಗ ಓದಿ..

ಹನುಮಾನ ಚಾಲೀಸಾದಲ್ಲಿರುವ 18ನೇ ಸಾಲನ್ನು ಗಮನವಿಟ್ಟು ಈಗ ಓದಿ..

ಜೈ ಹನುಮಾನ ಗ್ಯಾನ ಗುಣಸಾಗರಾ, ಜೈ ಕಪೀಸಾ ತಿಹು ಲೋಕ ಉಜಾಗರಾ

ರಾಮಾ ದೂತಾ ಅತುಲಿತಾ ಬಾಲಧಾಮಾ, ಅಂಜನೀ ಪುತ್ರ ಪವನಸುತ ನಾಮ

ಮಹಾಬೀರ ಬಿಕ್ರಮ ಬಜರಂಗೀ, ಕುಮತೀ ನಿವಾರಾ ಸುಮತೀ ಕೆ ಸಂಗೀ

ಕಾಂಚನ ಬರನ ಬಿರಾಜಾ ಸುಬೇಶಾ, ಕಾನನ ಕುಂಡಲ ಕುಂಚಿತ ಕೇಶಾ

ಹಾಥಾ ವಜ್ರಾ ಔರ ಧ್ವಜ ಬಿರಾಜಯ, ಕಾಂಧೆ ಮೂಂಜ ಜಾನೆಯು ಸಾಜೆ

ಶಂಕರಾ ಸುವನಾ ಕೇಸರೀ ನಂದನಾ, ತೇಜ ಪ್ರತಾಪ ಮಹಾ ಜಗ ವಂದನಾ

ವಿದ್ಯಾವಾನ ಗುಣಿ ಅತೀ ಚತುರ, ರಾಮಾಕಾಜಾ ಕರೀಬಿ ಕೊ ಔತಾರ

ಪ್ರಭು ಚರಿತ್ರ ಸುನೀಬಿ ಕೊ ರಸಿಯಾ, ರಾಮ ಲಖನ ಸೀತಾ ಮನ ಬಸಿಯಾ

Most Read: ಗರುಡ ಪುರಾಣ ಪ್ರಕಾರ ನೀವು ಇಂಥವರ ಮನೆಯಲ್ಲಿ ಆಹಾರ ಸೇವಿಸಲೇಬಾರದು!

ಹನುಮಾನ ಚಾಲೀಸಾದಲ್ಲಿರುವ 18ನೇ ಸಾಲನ್ನು ಗಮನವಿಟ್ಟು ಈಗ ಓದಿ..

ಹನುಮಾನ ಚಾಲೀಸಾದಲ್ಲಿರುವ 18ನೇ ಸಾಲನ್ನು ಗಮನವಿಟ್ಟು ಈಗ ಓದಿ..

ಸೂಕ್ಷ್ಮರೂಪಧಾರಿ ಸಿಯಾಹಿ ದಿಖಾವಾ, ವಿಕಟರೂಪಧಾರಿ ಲಂಕಾ ಜರಾವಾ

ಭೀಮ ರೂಪ ಧಾರಿ ಅಸುರ ಸಂಹಾರೆ, ರಾಮಚಂದ್ರ ಕೆ ಕಾಜಾ ಸಾಂವರೆ

ಲಾಯೆ ಸಂಜೀವನ ಲಖನಾ ಜಿಯಾಯೆ, ಶ್ರೀ ರಘುಬೀರಾ ಹರಾಶೀಯುರಾ ಲಾಯೆ

ರಘುಪತಿ ಕೀನ್ಹಿ ಬಹುತಾ ಬದಾಯೀ, ತುಮ್ ಮಮ ಪ್ರಿಯ ಭಾರತ ಭಾಯೀ

ಸಾಹಸ ಬದನ ತುಮ್ಹಾರೊ ಜಸ ಗಾವೆ, ಅಸಾ ಕಹೆ ಶ್ರೀಪತಿ ಕಾಂತಾ ಲಗಾವೆ

ಸನಕಾ ದಿಕ್ ಬ್ರಹ್ಮಾ ದೀ ಮುನೀಸಾ, ನಾರದಾ ಶಾರದಾ ಸಹಿತಾ ಅಹೀಸಾ

ಯಮ ಕುಬೇರ ದಿಗಪಾಲ ಜಹಾಂ ಥೆ, ಕವಿ ಕೋವಿದ ಕಹೀ ಸಕಾಯ ಕಹಾಂ ಥೆ

ತುಮ್ ಉಪಕಾರಾ ಸುಗ್ರೀವಾಹೀನ ಕೀನ್ಹಾ, ರಾಮ ಮಿಲಾಯಾ ರಾಜಪದ ದೀನ್ಹಾ

ತುಮ್ಹಾರೊ ಮಂತ್ರ ವಿಭೀಷಣ ಮಾನಾ, ಲಂಕೇಶ್ವರ ಭಾಯೆ ಸಬಾ ಜಗಾ ಜಾನಾ

ಜುಗ ಸಹಸ್ರ ಯೋಜನಾ ಪರ ಭಾನು, ಲೀಯೊ ತಾಹಿ ಮಧುರ ಫಲ ಜಾನು

ಪ್ರಭು ಮುದ್ರಿಕಾ ಮೆಲಿ ಮುಖ ಮಾಯೀ, ಜಲಧಿ ಲಾಂಘಿ ಗಯೆ ಅಚರಜ ನಾಹೀ

ದುರ್ಗಮಾ ಕಾಜಾ ಜಗತಕೆ ಜೇಥೆ, ಸುಗಮ ಅನುಗ್ರಹ ತುಮ್ಹಾರೆ ತೇತೆ

ರಾಮ ದುಯಾರೆ ತುಮ ರಖವಾಲೆ, ಹೋತಾ ನ ಅಗ್ಯಾನ ಬಿನಾ ಪಾಸಾರೆ

ಸಬ್ ಸುಖ ಲಹಾಯಿ ತುಮ್ಹಾರಿ ಸರಾನಾ, ತುಮ ರಕ್ಷಕ ಕಹೂ ಕೊ ಡರನಾ

ಆಪಣ ತೇಜ ಸಂಹಾರಾವೊ ಆಪೆ, ತೀನೊ ಲೋಕ ಹಾಂಕತೆ ಕಾಪೆ

ಭೂತಾ ಪಿಶಾಚಾ ನಿಕಟ ನಾಹೀ ಆವೆ, ಮಹಾಬೀರಾ ಜಬಾ ನಾಮಾ ಸುನಾವಯ

ನಾಶಾಯಿ ರೋಗ ಹಾರೆ ಸಬ ಪೀರಾ, ಜಪತಾ ನಿರಂತರಾ ಹನುಮಥಾ ಬೀರಾ

ಸಂಕಟ ಸೆ ಹನುಮಾನ ಛೋಡಾವೆ, ಮನ ಕ್ರಮಾ ಬಚನಾ ಧ್ಯಾನ ಜೊ ಲಾವೆ

ಗೋಸ್ವಾಮಿ ತುಳಸೀದಾಸರು ರಚಿಸಿದ ಹನುಮಾನ ಚಾಲೀಸಾ

ಗೋಸ್ವಾಮಿ ತುಳಸೀದಾಸರು ರಚಿಸಿದ ಹನುಮಾನ ಚಾಲೀಸಾ

15 ನೇ ಶತಮಾನದಲ್ಲಿ ಗೋಸ್ವಾಮಿ ತುಳಸಿದಾಸರು ಅವಧಿ ಭಾಷೆಯಲ್ಲಿ ಹನುಮಾನ ಚಾಲೀಸಾವನ್ನು ಬರೆದರು. ಆಗಲೇ 17 ನೇ ಶತಮಾನದ ವಿಜ್ಞಾನಿಗಳಿಗಿಂತಲೂ 2 ಶತಮಾನಗಳ ಮುಂಚೆಯೇ ನಿಖರವಾಗಿ ಹನುಮಾನ ಚಾಲೀಸಾದಲ್ಲಿ ಸೂರ್ಯ ಹಾಗೂ ಭೂಮಿಯ ನಡುವಿನ ಅಂತರವನ್ನು ತಿಳಿಸಿದ್ದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ.

Most Read:ತನ್ನ ಕೈಬಿಟ್ಟ ಮಾಜಿ ಪ್ರಿಯತಮೆಗೆ ಆತ ಹೀಗೆ ಬುದ್ಧಿ ಕಲಿಸಿದ!

ಗೋಸ್ವಾಮಿ ತುಳಸೀದಾಸರು ರಚಿಸಿದ ಹನುಮಾನ ಚಾಲೀಸಾ

ಗೋಸ್ವಾಮಿ ತುಳಸೀದಾಸರು ರಚಿಸಿದ ಹನುಮಾನ ಚಾಲೀಸಾ

ತುಳಸೀದಾಸರು ಆಗಿನ ಕಾಲದಲ್ಲಿಯೇ ಭೂಮಿ ಹಾಗೂ ಸೂರ್ಯನ ನಡುವಿನ ಅಂತರವನ್ನು ಹೇಗೆ ಅಳೆದಿದ್ದರು ಎಂಬುದು ಇಂದಿನವರಿಗೆ ತಿಳಿಯದ ಸಂಗತಿ. ಈಗಿನ ಆಧುನಿಕ ತಂತ್ರಜ್ಞಾನವನ್ನೂ ಮೀರಿಸುವಂಥ ಯಾವ ರೀತಿಯ ಸಾಧನಗಳು ಅವರ ಬಳಿ ಇದ್ದವು ಎಂಬುದು ಕುತೂಹಲದ ವಿಷಯವಾಗಿಯೇ ಉಳಿಯುತ್ತದೆ. ಅಂದಿನ ಜನ ಈಗಿನದಕ್ಕಿಂತ ಹೆಚ್ಚು ಮುಂದುವರಿದ, ನಿಖರ ಜ್ಞಾನ ಹಾಗೂ ತಂತ್ರಜ್ಞಾನವನ್ನು ಹೊಂದಿದ್ದರು ಎಂಬುದು ಮಾತ್ರ ಸತ್ಯ.

ಪ್ರಾಚೀನ ಇತಿಹಾಸವನ್ನು ಕೆದಕಿದಷ್ಟೂ

ಪ್ರಾಚೀನ ಇತಿಹಾಸವನ್ನು ಕೆದಕಿದಷ್ಟೂ

ಇತಿಹಾಸವನ್ನು ನಮಗೆ ಸರಿಯಾಗಿ ಕಲಿಸಲಿಲ್ಲ ಎಂಬುದು ಕೂಡ ಅಷ್ಟೆ ಸತ್ಯವಾಗಿದೆ. ಇದು ಮಾತ್ರವಲ್ಲದೆ ಇನ್ನೂ ಹಲವಾರು ವಿಷಯಗಳು ನಮಗೆ ತಿಳಿದೇ ಇಲ್ಲ. ಪ್ರಾಚೀನ ಇತಿಹಾಸವನ್ನು ಕೆದಕಿದಷ್ಟೂ ಅದರಲ್ಲಿ ಅಡಗಿರುವ ಜ್ಞಾನದ ಪರಿಧಿ ಮುಗಿಯಲಾರದು. ಭಾರತೀಯ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿ ಆಗಿನ ಸಂಶೋಧನಾತ್ಮಕ ಮಾಹಿತಿಗಳನ್ನು ಬೆಳಕಿಗೆ ತಂದಲ್ಲಿ ದೇಶದ ತಂತ್ರಜ್ಞಾನಕ್ಕೆ ಇನ್ನಷ್ಟು ಮಹತ್ವದ ಕೊಡುಗೆ ನೀಡಲು ಸಾಧ್ಯ. ಪುರಾತನ ಸಂಗತಿಗಳಲ್ಲಿ ಜ್ಞಾನ ಭಂಡಾರವೇ ಅಡಗಿದ್ದು ಅದನ್ನು ಅಗೆದು ತಿಳಿದುಕೊಳ್ಳುವುದು ಆಗಬೇಕಿದೆ.

English summary

Distance between Sun and Earth is Mentioned in “Hanuman Chalisa!

According to Modren Astronomy and Science , we know that the earth’s orbit around the sun is not a circle and is slightly elliptical. Therefore, the distancebetween the earth and the sun varies throughout the year. At its nearest point on the ellipse that is the earth’s orbit around the sun, the earth is 91,445,000 miles (147,166,462 kms) from the sun. This point in the earth’s orbit is known as Periapsis (perihelion) and it occurs around January 3.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more