For Quick Alerts
ALLOW NOTIFICATIONS  
For Daily Alerts

ಧನುರ್ಮಾಸ 2021 – 2022: ದಿನಾಂಕ, ಮಹತ್ವ ಹಾಗೂ ಪೌರಾಣಿಕ ಹಿನ್ನೆಲೆ

|

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿ ಆಚರಣೆಗಳು ನಮಗೆ ದೈವತ್ವದತ್ತ ಕೊಂಡೊಯ್ಯುತ್ತದೆ, ಅಂಥಾ ಪವಿತ್ರ ಆಚರಣೆಗಳಲ್ಲಿ ಒಂದು ಧನುರ್ಮಾಸ. ಧನುರ್ಮಾಸದಲ್ಲಿ ಒಂದೇ ಒಂದು ದಿನ ಭಗವಾನ್ ವಿಷ್ಣುವನ್ನು ಪೂಜಿಸಿದರೆ ಸಾವಿರಾರು ವರ್ಷಗಳ ಕಾಲ ಪೂಜಿಸಿದಂತೆ ಎಂಬ ನಂಬಿಕೆ ಇದೆ. ಧನುರ್ಮಾಸವನ್ನು ಶೂನ್ಯ ಮಾಸ ಎಂದು ಸಹ ಕರೆಯುತ್ತಾರೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸ್ಥಳಾಂತರಗೊಳ್ಳುವ ಅವಧಿಯೇ ಧನುರ್ ಮಾಸ ಎನ್ನುತ್ತಾರೆ.

ಧನುರ್ಮಾಸದ ದಿನಾಂಕ

ಧನುರ್ಮಾಸದ ದಿನಾಂಕ

ಇಂಥಾ ವಿಶೇಷ ಮಹತ್ವವುಳ್ಳ ಧನುರ್ಮಾಸ 2021 -2022ರಲ್ಲಿ 2021 ಡಿಸೆಂಬರ್ 16ರಂದು ಪ್ರಾರಂಭವಾಗುತ್ತದೆ ಮತ್ತು 2022 ಜನವರಿ 13ರಂದು ಕೊನೆಗೊಳ್ಳುತ್ತದೆ. ಅಂದರೆ ಮಕರ ಸಂಕ್ರಾಂತಿಯಂದು ಕೊನೆಗೊಳ್ಳುತ್ತದೆ.

ಧನುರ್ ಸಂಕ್ರಾಂತಿ ಪೂಜಾ ಸಮಯ

ಧನುರ್ ಸಂಕ್ರಾಂತಿ ಪೂಜಾ ಸಮಯ

2021ರ ಡಿಸೆಂಬರ್‌ 16ರಂದು ಧನುರ್‌ ಸಂಕ್ರಾತಿಯಿಂದ ಧನುರ್ಮಾಸ ಆರಂಭವಾಗುತ್ತದೆ.

ಪುಣ್ಯಕಾಲ ಪೂಜಾ ಸಮಯ: ಬೆಳಿಗ್ಗೆ 7.07 ರಿಂದ ಮಧ್ಯಾಹ್ನ 12.17 ರವರೆಗೆ

ಧನುರ್‌ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಿಗ್ಗೆ 7.07 ರಿಂದ ಬೆಳಿಗ್ಗೆ 8.50ರವರೆಗೆ

ಧನುರ್ಮಾಸದ ಮಹತ್ವ

ಧನುರ್ಮಾಸದ ಮಹತ್ವ

* ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಬರುವ ಧನುರ್ಮಾಸ, ಧನುರ್ ಮಾಸವನ್ನು ಶೂನ್ಯ ಮಾಸಂ ಅಥವಾ ಕರ್ಮ ಎಂದು ಪರಿಗಣಿಸಲಾಗುತ್ತದೆ. ಧನುರ್ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳನ್ನು ಸಹ ಮಾಡುವುದಿಲ್ಲ.

* ಧನುರ್ಮಾಸದಲ್ಲಿ ಬೆಳಗಿನ ಸಮಯದಲ್ಲಿ ವಿಷ್ಣುವಿನ ಆರಾಧನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಲಾಗುತ್ತದೆ. ಪಠಿಸುವ ಇತರ ಪ್ರಮುಖ ಮಂತ್ರಗಳು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿವೆ.

* ಧನುರ್ಮಾಸದ ಅವಧಿಯಲ್ಲಿ ಬರುವ ಏಕಾದಶಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಧನುರ್ಮಾಸದಲ್ಲಿ ಚಂದ್ರನ ಬೆಳವಣಿಗೆಯ ಹಂತದಲ್ಲಿ ಬರುವ ವೈಕುಂಠ ಏಕಾದಶಿಯು ಮೋಕ್ಷ ದ್ವಾರಂ ಎಂದೆ ಹೆಸರುವಾಸಿಯಾಗಿದೆ. ಈ ದಿನ ದೇವಾಲಯದ ಏಳು ಬಾಗಿಲುಗಳನ್ನು ಹಾದುಹೋಗಲು ಭಕ್ತರಿಗೆ ಮೋಕ್ಷ ದೊರಕದಂತೆ ಎಂಬ ನಂಬಿಕೆ ಇದೆ.

* ಧನುರ್ ಸಂಕ್ರಮಣ ಎಂದು ಕರೆಯಲ್ಪಡುವ ಧನುರ್ ರಾಶಿಯಲ್ಲಿ ಸೂರ್ಯನ ಪ್ರವೇಶದಿಂದ ಧನುರ್ಮಾಸಂದ ಆರಂಭವನ್ನು ಗುರುತಿಸಲಾಗಿದೆ, ಆದ್ದರಿಂದ ಆ ಕಾಲಕ್ಕೆ ಧನುರ್ಮಾಸ ಎಂದು ಹೆಸರು. ಈ ತಿಂಗಳಲ್ಲಿ ಸೂರ್ಯ ಧನುರ್ ರಾಶಿಯನ್ನು ತಿಂಗಳ ಕೊನೆಯಲ್ಲಿ ಮಕರ ರಾಶಿಯನ್ನು ಪ್ರವೇಶಿಸುವವರೆಗೆ ಧನುರ್‌ಮಾಸ ಇರುತ್ತದೆ.

* ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು. ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.

* ತೆಲುಗು, ಕನ್ನಡ, ಗುಜರಾತಿ ಮತ್ತು ಮರಾಠಿ ಕ್ಯಾಲೆಂಡರ್‌ನಲ್ಲಿ ಧನುರ್ಮಾಸವು ಮಾರ್ಗಶೀರ್ಷ ಮಾಸದಲ್ಲಿ ಪ್ರಾರಂಭವಾಗುತ್ತದೆ. ಉತ್ತರ ಭಾರತದ ಕ್ಯಾಲೆಂಡರ್‌ಗಳಲ್ಲಿ ಇದು ಮಾರ್ಗಶೀರ್ಷ ಅಥವಾ ಪೌಷ್ ಮಾಸದಲ್ಲಿ ಪ್ರಾರಂಭವಾಗುತ್ತದೆ. ತಮಿಳುನಾಡಿನಲ್ಲಿ ಇದನ್ನು ಮಾರ್ಗಜಿ ಮಾಸ ಎಂದು ಆಚರಿಸುತ್ತಾರೆ.

ಧನುರ್ಮಾಸದ ಪೌರಾಣಿಕ ಹಿನ್ನೆಲೆ

ಧನುರ್ಮಾಸದ ಪೌರಾಣಿಕ ಹಿನ್ನೆಲೆ

ಒಮ್ಮೆ ಸೃಷ್ಟಿಕರ್ತರಾದ ಬ್ರಹ್ಮದೇವರು ಹಂಸಪಕ್ಷಿಯ ಅವತಾರ ಮಾಡುತ್ತಾ ಲೋಕ ಸಂಚಾರ ಮಾಡುತ್ತಿರುವಾಗ ಸೂರ್ಯದೇವರು ಹಂಸರೂಪಿ ಬ್ರಹ್ಮದೇವರ ಮೇಲೆ ಹೆಚ್ಚಿನ ಶಾಖ ಮತ್ತು ಬೆಳಕನ್ನು ಬಿಡುತ್ತಾರೆ. ಇದರಿಂದ ಕೋಪಗೊಂಡ ಬ್ರಹ್ಮ ದೇವರು ಸೂರ್ಯದೇವರಿಗೆ ನಿನ್ನ ತೇಜಸ್ಸು ಕ್ಷೀಣಿಸಲಿ ಎಂಬ ಶಾಪ ನೀಡುತ್ತಾರೆ. ಸೂರ್ಯದೇವರು ಕಾಂತಿಹೀನರಾಗಿ ತನ್ನ ಪ್ರಕಾಶ ಕಳೆದುಕೊಂಡರು.

ಇದರಿಂದ ಇಡೀ ಭೂಮಂಡಲ ಅಲ್ಲೋಲ ಕಲ್ಲೋಲವಾಯಿತು. ಸೂರ್ಯದೇವರಿಲ್ಲದೆ ಋಷಿ-ಮುನಿಗಳಿಗೆ ನಿತ್ಯ-ಪೂಜೆ ಹಾಗೂ ಹೋಮ-ಹವನಗಳಿಗೆ ಬಹಳ ತೊಂದರೆಯಾಗಿ ನಿಲ್ಲಿಸುವಂತಾಯಿತು. ಆಗ ದೇವಾನುದೇವತೆಗಳು ಹಾಗೂ ಮುನಿವೃಂದದೊಂದಿಗೆ ಬ್ರಹ್ಮದೇವರ ಕುರಿತು ತಪಸ್ಸು ಆಚರಿಸಿದರು. ಇವರ ತಪಸ್ಸಿಗೆ ಬ್ರಹ್ಮದೇವರು ಪ್ರತ್ಯಕ್ಷನಾಗಿ ಸ್ಥಿತಿ ಅರಿತು, ಒಂದು ಪರಿಹಾರ ಸೂಚಿಸುತ್ತಾರೆ. ಸೂರ್ಯದೇವ ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಜಗದೊಡೆಯನಾದ ಶ್ರೀ ಮಹಾವಿಷ್ಣುವನ್ನು ಕುರಿತು ಪೂಜಿಸಿದರೆ ಆತನ ಶಾಪ ವಿಮೋಚನೆಯಾಗಲಿದೆ ಎಂಬ ಅಭಯ ಬ್ರಹ್ಮ ದೇವರಿಂದ ಬಂತು.

ಅಂತೆಯೇ ಶ್ರೀ ಸೂರ್ಯದೇವರು ಧನುರ್ಮಾಸದ ಪೂಜೆಯನ್ನು ಮೊದಲ ಜಾವದಲ್ಲಿ ಸತತವಾಗಿ ಹದಿನಾರು ವರುಷ ಮಾಡಿ ಶ್ರೀ ಮಹಾವಿಷ್ಣುವಿನ ಪೂರ್ಣಾನುಗ್ರಹದಿಂದ ಎಂದಿನಂತೆಯೇ ತೇಜಸ್ಸು ಹಾಗೂ ಕಾಂತಿ ಹೊಂದಿ ಜಗತ್ತಿಗೆ ಬೆಳಕು ನೀಡಿದರು ಎಂದು ಪುರಾಣದಿಂದ ತಿಳಿದು ಬರುತ್ತದೆ. ಸೂರ್ಯದೇವರೇ ಈ ಧನುರ್ಮಾಸ ಪೂಜೆ ಮಾಡಿ ಜಗತ್ತಿಗೆ ಈ ಆಚರಣೆಯ ಮಹತ್ವ ತಿಳಿಯುವಂತೆ ಮಾಡಿದರು.

English summary

Dhanurmas 2021-22 Dates, History, and Significance of Dhanur Month in Kannada

Here we are discussing about Dhanurmas 2021-22 Dates, History, and Significance of Dhanur Month in Kannada. Read more.
Story first published: Tuesday, December 14, 2021, 19:30 [IST]
X