For Quick Alerts
ALLOW NOTIFICATIONS  
For Daily Alerts

ವಿಜಯದಶಮಿಯಂದು ಈ ತಿನಿಸುಗಳನ್ನು ತಿಂದರೆ ಅದೃಷ್ಟ

|

ದೇಶದ ಜನತೆ ಸಡಗರ-ಸಂಭ್ರಮದ ಆಚರಿಸಿದ ನವರಾತ್ರಿ ಆಗಸ್ಟ್‌ 15ರಂದು ಮುಕ್ತಾಯವಾಗುತ್ತಿದೆ. ಈ ದಿನವನ್ನು ವಿಜಯದಶಮಿಯೆಂದು ಆಚರಿಸಲಾಗುವುದು. ದುಷ್ಟ ಶಕ್ತಿಯ ವಿರುದ್ಧದ ಜಯವೇ ವಿಜಯದಶಮಿಯಾಗಿದೆ.

ನವರಾತ್ರಿಯಲ್ಲಿ ಹಲವಾರು ಆಚರಣೆಗಳಿವೆ. ನವ ದುರ್ಗೆಯರನ್ನು ಪೂಜಿಸಲು ಕೆಲವೊಂದು ನಿಯಮಗಳಿವೆ. ಅವುಗಳನ್ನು ಪಾಲಿಸಬೇಕು. ಇನ್ನು ನವರಾತ್ರಿ ಅದರಲ್ಲೂ ವಿಜಯ ದಶಮಿಯಂದು ಹಲವಾರು ಬಗೆಯ ತಿನಿಸುಗಳನ್ನು ಮಾಡಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ನವರಾತ್ರಿಗಾಗಿಯೇ ಕೆಲವೊಂದು ಸ್ಪೆಷಲ್‌ ತಿನಿಸುಗಳನ್ನು ಕೂಡ ಮಾಡಲಾಗುವುದು.

ಇನ್ನು ನವರಾತ್ರಿ ಅಡುಗೆಯಲ್ಲಿ ಕೆಲವೊಂದು ತಿನಿಸುಗಳಿದ್ದರೆ ಅದೃಷ್ಟವೆಂದು ಹೇಳಲಾಗುವುದು. ಆ ತಿನಿಸುಗಳು ಯಾವುವು ಎಂದು ನೋಡೋಣ ಬನ್ನಿ:

ಜಿಲೇಬಿ ಮತ್ತು ಫಫ್ದಾ

ಜಿಲೇಬಿ ಮತ್ತು ಫಫ್ದಾ

ಇದು ಗುಜರಾತಿ ಫೇಮಸ್‌ ತಿಂಡಿಗಳಾಗಿವೆ. ಈ ದಿನ ಈ ಎರಡು ತಿನಿಸು ತಿಂದರೆ ಒಳ್ಳೆಯದಂದು ಹೇಳಲಾಗುವುದು. ಇದಕ್ಕೆ ಕಾರಣಗಳೂ ಇವೆ. ಪೌರಾಣಿಕ ಕತೆಯ ಪ್ರಕಾತ ರಾಮ ಶಶ್ಕುಳಿ ಎಂಬ ತಿನಿಸು ತುಂಬಾ ಇಷ್ಟಪಡುತ್ತಿದ್ದ ಎನ್ನಲಾಗಿದೆ, ಅದುವೇ ಈಗೀನ ಜಿಲೇಬಿ. ರಾವಣನ ವಿರುದ್ಧ ರಾಮನ ಜಯವನ್ನು ಅವನ ಮೆಚ್ಚಿನ ಸಿಹಿ ತಿಂಡಿ ತಿನ್ನುವುದರ ಮೂಲಕ ಆಚರಿಸಲಾಗುವುದು. ಇದರ ಜೊತೆ ಫಫ್ದಾ ತಿನ್ನಲಾಗುವುದು. ಹಿಂದೂ ದಾರ್ಮಿಕ ನಂಬಿಕೆಗಳ ಪ್ರಕಾರ ಉಪವಾಸವನ್ನು ಯಾವುದಾದರೂ ಕಡಲೆ ಹಿಟ್ಟಿನ ತಿನಿಸು ತಿಂದು ಮುಕ್ತಾಯ ಮಾಡಬೇಕು ಎನ್ನುತ್ತಾರೆ. ಆದ್ದರಿಂದ ಕಡಲೆ ಹಿಟ್ಟಿನಿಂದ ಮಾಡಿದ ಇದನ್ನು ತಿನ್ನಲಾಗುವುದು. ಕರ್ನಾಟಕದಲ್ಲಿ ಉತ್ತರ ಭಾರತದ ಅಡುಗೆ ಕಮ್ಮಿ. ಜಿಲೇಬಿ ಮಾಡುತ್ತೇವೆ, ಆದರೆ ಫಫ್ದಾ ಮಾಡುವುದಿಲ್ಲ ಅದರ ಬದಲಿಗೆ ಜುನಕಾ ಮಾಡಿ ಸವಿಯಬಹುದು.

ಸಿಹಿ ದೋಸೆ

ಸಿಹಿ ದೋಸೆ

ದಸರಾ ಹಬ್ಬದಲ್ಲಿ ಕರ್ನಾಟಕದಲ್ಲಿ ಸಿಹಿ ದೋಸೆ ಮಾಡಿ ಸವಿಯುತ್ತಾರೆ. ಬೆಲ್ಲ, ತೆಂಗಿನಕಾಯಿ, ಅಕ್ಕಿ ಹಿಟ್ಟು ಹಾಕಿ ರುಬ್ಬಿ ಮಾಡಿದ ದೋಸೆ ಸವಿಯಲಾಗುವುದು.

ಸಿಹಿ ಪಾನ್‌/ಬೀಡಾ

ಸಿಹಿ ಪಾನ್‌/ಬೀಡಾ

ದಸರಾ ಹಬ್ಬದಲ್ಲಿ ಸಿಹಿ ಪಾನ್‌ ತಿನ್ನುವ ಪದ್ಧತಿ ಇದೆ, ಅಲ್ಲದೆ ಹನುಮಂತನಿಗೂ ಇದನ್ನು ಇಡಲಾಗುವುದು. ಪಾನ್ ಎಂಬುವುದು ಗೌರವ ಹಾಗೂ ಪ್ರೀತಿಯ ಪ್ರತೀಕವಾಗಿದೆ. ಪೌರಾಣಿಕ ಕತೆಯ ಪ್ರಕಾರ ಕುಂಭಕರ್ಣ ಹಾಗೂ ಮೇಘನಾಥ ವಿಜಯದಶಮಿಯಂದು ಪಾನ್‌ ತಿಂದು ತಮ್ಮ ಸಂಭ್ರಮ ವ್ಯಕ್ತಪಡಿಸಿದರು ಎನ್ನಲಾಗಿದೆ.

ಮೊಸರಿಗೆ ಸಿಹಿ ಹಾಕಿ ತಿನ್ನುವುದು

ಮೊಸರಿಗೆ ಸಿಹಿ ಹಾಕಿ ತಿನ್ನುವುದು

ಏನಾದರೂ ಶುಭ ಕಾರ್ಯ ಮಾಡುವ ಮುನ್ನ ಮೊಸರಿಗೆ ಸಿಹಿ ಹಾಕಿ ತಿನ್ನುವ ರೂಢಿ ಹಿಂದಿನಿಂದಲೂ ಇದೆ. ಇದನ್ನು ವಿಜಯದಶಮಿಯಂದೂ ಹಬ್ಬದ ಅಡುಗೆ ಜೊತೆ ನೀಡಲಾಗುವುದು. ದೇವಿಗೆ ನೈವೇದ್ಯ ಇಡುವಾಗ ಇದನ್ನು ಇಡಲಾಗುವುದು.

ರಸಗುಲ್ಲ

ರಸಗುಲ್ಲ

ಪಶ್ಚಿಮ ಬಂಗಾಳದಲ್ಲಿ ರಸಗುಲ್ಲ ಮಾಡಲಾಗುವುದು. ಇನ್ನು ಬೆಂಗಾಳಿಯರು ವಿಜಯದಶಮಿಯಂದು ರಸಗುಲ್ಲ ತಿಂದು ಸಂಭ್ರಮಿಸುತ್ತಾರೆ. ದಸರಾ ಹಾಗೂ ನವರಾತ್ರಿಗಳಲ್ಲಿ ಈ ಸಿಹಿ ತಿಂಡಿ ಮಾಡಲಾಗುವುದು.

English summary

Dasara: Eat These Food Items on Vijayadashmi to Bring Good Luck in Kannada

Dasara 2021: Eat These Food Items on Vijayadashmi to Bring Good Luck in Kannada, read on...
Story first published: Thursday, October 14, 2021, 17:58 [IST]
X
Desktop Bottom Promotion