For Quick Alerts
ALLOW NOTIFICATIONS  
For Daily Alerts

ನವರಾತ್ರಿ 2021:ನವರಾತ್ರಿ ಆಚರಣೆ, ಪೂಜಾ ವಿಧಿ

|

ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಹಬ್ಬವನ್ನು ಹಿಂದೂ ಧರ್ಮದ ಪ್ರತಿಯೊಬ್ಬರ ಮನೆಯಲ್ಲೂ ಬಹಳ ಸಂಭ್ರಮ, ಅದ್ಧೂರಿಯಿಂದ ಆಚರಿಸುತ್ತಾರೆ. ನವರಾತ್ರಿಯ ದಿನಗಳಲ್ಲಿ ದುರ್ಗಾ ದೇವಿಯ ಭಕ್ತರು ಒಂಬತ್ತು ದಿನಗಳ ಕಾಲ ವಿವಿಧ ಆಚರಣೆಗಳನ್ನು ಅನುಸರಿಸುತ್ತಾರೆ. ಇದನ್ನು ಬಹಳ ಶಕ್ತಿಶಾಲಿ ಸಮಯ, ದುರ್ಗೆಯ ಕೃಪೆಗೆ ಪಾತ್ರರಾಗಲು ಇದು ಪೂಜ್ಯನೀಯ ಸಮಯ ಎಂದು ಭಾವಿಸಲಾಗುತ್ತದೆ.

ಶರದ್ ನವರಾತ್ರಿ ಸಾಮಾನ್ಯ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. 2021ನೇ ಸಾಲಿನಲ್ಲಿ ಅಕ್ಟೋಬರ್‌ 7ರಂದು ಆರಂಭವಾಗುವ ನವರಾತ್ರಿ ಅಕ್ಟೋಬರ್‌ 14ಕ್ಕೆ ಅಂತ್ಯವಾಗಿ 15ರಂದು ವಿಜಯ ದಶಮಿ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

Navratri 2020: Customs, Traditions, and Rituals of Navratri in Kannada

ನವರಾತ್ರಿಯ ದಿನಗಳು ದುರ್ಗೆಯ ಒಂಬತ್ತು ರೂಪಗಳ ಅಂತಿಮ ಶಕ್ತಿಯ ಮೂಲದ ಅಸ್ತಿತ್ವವನ್ನು ಆಚರಿಸಲಾಗುತ್ತದೆ. ನವರಾತ್ರಿಯ ಆಚರಣೆಗಳು ಹೇಗಿರುತ್ತದೆ, ಯಾವೆಲ್ಲಾ ಆಚರಣೆಗಳನ್ನು ಆಚರಿಸಲಾಗುತ್ತದೆ ಎಂದು ಮುಂದೆ ತಿಳಿಯೋಣ:

1. ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ, ಹತ್ತನೇ ದಿನ ವಿಜಯ ಸಂಕೇತವಾಗಿ ವಿಜಯ ದಶಮಿ ಆಚರಿಸುತ್ತೇವೆ. ದುರ್ಗಾ ದೇವಿಯ 9 ರೂಪಗಳ ಶಕ್ತಿಯನ್ನು ಪೂಜಿಸಲಾಗುತ್ತದೆ.

2. ನವರಾತ್ರಿಯ ಮೊದಲ ಮೂರು ದಿನಗಳು ದುರ್ಗಾ ದೇವಿಯ ಆರಾಧನೆ ಮಾಡಿ ಪೂಜಿಸಲಾಗುತ್ತದೆ. ಪ್ರತಿ ದಿನ ದುರ್ಗೆಯ ಅವತಾರಗಳು ಭಿನ್ನವಾಗಿರುತ್ತದೆ. ದುರ್ಗಾದ ಒಂಬತ್ತು ರೂಪಗಳು ಹೀಗಿವೆ:

1. ಶೈಲಪುತ್ರಿ

2. ಬ್ರಹ್ಮಚಾರಿಣಿ

3. ಚಂದ್ರಘಂಟ

4. ಕುಶ್ಮಾಂಡ

5. ಸ್ಕಂದಮಾತ

6. ಕಾತ್ಯಾಯನಿ

7. ಕಾಳರಾತ್ರಿ ಮಾಹಾಯಾಮ

8. ಮಹಾಗೌರಿ

9. ಸಿದ್ಧಿಧಾತ್ರಿ

3. ನಾಲ್ಕನೇ ಮತ್ತು ಆರನೇ ದಿನವನ್ನು ಲಕ್ಷ್ಮಿ ದೇವಿ (ಕುಶ್ಮಾಂಡ)ಗೆ ಮತ್ತು ಐದನೆಯದನ್ನು ಲಲಿತ ಪಂಚಮಿ ಎಂದು ಕರೆಯಲ್ಪಡುವ ಸರಸ್ವತಿ ದೇವಿ (ಸ್ಕಂದಮಾತ)ಗೆ ಅರ್ಪಿಸಲಾಗಿದೆ.

4. ಏಳು, ಎಂಟನೇ ದಿನ ಕಾಳರಾತ್ರಿ ಮಾಹಾಯಾಮ ಮತ್ತು ಮಹಾಗೌರಿ ಸೇರಿದಂತೆ ಸರಸ್ವತಿ ದೇವಿಗೆ ಅರ್ಪಿಸಿ, ಕಲೆ ಮತ್ತು ಜ್ಞಾನದ ದೇವಿಯನ್ನು ಎಂಟು ದಿನ ಪೂಜಿಸಲಾಗುತ್ತದೆ ಮತ್ತು ಯಜ್ಞವನ್ನೂ ಸಹ ಮಾಡಲಾಗುತ್ತದೆ.

5. ಒಂಬತ್ತನೇ ದಿನವನ್ನು ಸಿದ್ಧಿಯನ್ನು ಪ್ರಾಪ್ತಿ ಮಾಡುವ ಸಿದ್ಧಿಧಾತ್ರಿ ದೇವಿಗೆ ಅರ್ಪಿಸಲಾಗಿದೆ. ಒಂಬತ್ತನೇ ದಿನ ಕನ್ಯಾ ಪೂಜೆಯನ್ನು ನಡೆಸಲಾಗುತ್ತದೆ, ಅಲ್ಲಿ ಇನ್ನೂ ಪ್ರೌಢಾವಸ್ಥೆಯ ಹಂತವನ್ನು ತಲುಪದ ಒಂಬತ್ತು ಯುವತಿಯರನ್ನು ಪೂಜಿಸಲಾಗುತ್ತದೆ. ಈ 9 ಹುಡುಗಿಯರು ಒಂಬತ್ತು ದೇವತೆಗಳನ್ನು ಸಂಕೇತಿಸುತ್ತಾರೆ ಎಂದು ನಂಬಲಾಗಿದೆ. ಈ ಹುಡುಗಿಯರಿಗೆ ರುಚಿಯಾದ ಭಕ್ಷ್ಯಗಳು ಮತ್ತು ಧರಿಸಲು ಹೊಸ ಬಟ್ಟೆಗಳನ್ನು ನೀಡಲಾಗುತ್ತದೆ.

ಅಂದು ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ತಾವು ಬಳಸುವ ಪ್ರತಿಯೊಂದು ವಸ್ತುಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಮ್ಮ ಜೀವನಕ್ಕೆ ಅನುವು ಮಾಡಿಕೊಡುವ ವಸ್ತುಗಳಲ್ಲಿ ದೇವಿಯ ರೂಪವನ್ನು ಕಾಣುವುದು. ತನ್ನ ಬಾಳಿಗೆ ಬೆಳಕಾಗಿ ಯಶಸ್ಸನ್ನು ತಂದು ಕೊಡು ಎಂದು ದೇವಿಯಲ್ಲಿ ಮೊರೆಯಿಡುವ ವಿಧಾನವೂ ಹೌದು.

6. 10ನೇ ದಿನ ಅದ್ಧೂರಿಯಾಗಿ ದೊಡ್ಡ ದಸರಾ ಉತ್ಸವ ಅಥವಾ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ.

7. ಒಂಬತ್ತು ದಿನಗಳನ್ನು ದುರ್ಗಾ ದೇವಿಯ ವಿಭಿನ್ನ ಅವತಾರಗಳಿಗೆ ಸಮರ್ಪಿಸಲಾಗಿದೆ. ಅಂದಿನ ದೇವತೆಯನ್ನು ಸಂಕೇತಿಸುವ ಆಯಾ ಬಣ್ಣಗಳನ್ನು ಧರಿಸುವ ಪದ್ಧತಿಯನ್ನು ಜನರು ಅನುಸರಿಸುತ್ತಾರೆ.

- ಮೊದಲ ದಿನ, ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ ಆದ್ದರಿಂದ ಕೆಂಪು ಬಟ್ಟೆಗಳನ್ನು ಧರಿಸಲಾಗುತ್ತದೆ.

- ಎರಡನೇ ದಿನವನ್ನು ಬ್ರಹ್ಮಚಾರಿಣಿ ದೇವಿಗೆ ಅರ್ಪಿಸಲಾಗಿದೆ, ಇದಕ್ಕಾಗಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ.

- ಮೂರನೇ ದಿನ ಚಂದ್ರಘಂಟ ದೇವಿಯನ್ನು ಪೂಜಿಸಲಾಗುತ್ತದೆ ಇಂದು ಹಸಿರು ಬಟ್ಟೆ ಧರಿಸಲಾಗುತ್ತದೆ.

- ನಾಲ್ಕನೇ ದಿನ ಹಳದಿ ಬಣ್ಣವನ್ನು ಧರಿಸಿರುವ ಕುಶ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ.

- ಐದನೇ ದಿನ ಸ್ಕಂದಮಾತ ದೇವಿಯ ಗೌರವಾರ್ಥ ಬೂದು ಬಣ್ಣವನ್ನು ಧರಿಸಲಾಗುತ್ತದೆ.

- ಆರನೇ ದಿನ ಕಾತ್ಯಾಯನಿ ದೇವಿಗೆ ಸಮರ್ಪಿಸಿ ಕಿತ್ತಳೆ ಬಣ್ಣದ ವಸ್ತ್ರವನ್ನು ಧರಿಸಲಾಗುತ್ತದೆ.

- ಏಳನೇ ದಿನ ಎಂದರೆ ಕಾಳರಾತ್ರಿ ಮಾಹಾಯಾಮ ದೇವಿಗಾಗಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ

- ಎಂಟನೇ ದಿನ ಮಹಾಗೌರಿ ದೇವಿಯನ್ನು ಗೌರವಿಸುತ್ತದೆ ಬಿಳಿ ಬಣ್ಣದ ಬಟ್ಟೆ ಶುಭ ಎನ್ನಲಾಗುತ್ತದೆ.

- ಒಂಬತ್ತನೇ ದಿನವನ್ನು ಸಿದ್ಧಿಧಾತ್ರಿ ಪೂಜೆಗೆ ಅರ್ಪಿಸಲಾಗಿದೆ ತಿಳಿ ಹಸಿರು ಫಲಪ್ರದ ಬಣ್ಣ.

8. ಜನರು ವಾಸಿಸುವ ಪ್ರದೇಶವನ್ನು ಅವಲಂಬಿಸಿ ಇನ್ನೂ ಅನೇಕ ಆಚರಣೆಗಳಿವೆ. ಆದ್ದರಿಂದ, ನವರಾತ್ರಿಯ ಆಚರಣೆ ಜಿಲ್ಲೆಯಿಂದ ಜಿಲ್ಲೆಗೆ ಹಾಗೂ ರಾಜ್ಯದಿಂದ ರಾಜ್ಯಕ್ಕ ಬಹಳ ಭಿನ್ನವಾಗಿದೆ. ಎಲ್ಲರೂ ಬೇರೆ ಬೇರೆ ವಿಧಾನಗಳಲ್ಲಿ ಮಾಡುತ್ತಾರೆ.

9. ಆಚರಣೆಗಳು ಪ್ರಾರಂಭವಾಗುವ ಮೊದಲು, ಅವರ ಮನೆಯಲ್ಲಿ ದೇವಿಯನ್ನು ಸ್ವಾಗತಿಸಲು ಮನೆಯನ್ನು ಸಂಪೂರ್ಣ ಶುದ್ಧಗೊಳಿಸಲಾಗುತ್ತದೆ. ಪೂಜೆ ನಡೆಸುವ ಭಕ್ತರು ಎಲ್ಲಾ ಒಂಬತ್ತು ದಿನಗಳವರೆಗೆ ಉಪವಾಸ ಆಚರಿಸುತ್ತಾರೆ. ಉಪವಾಸ ಮಾಡುವಾಗ ಆಲೂಗಡ್ಡೆ, ಮೊಸರು ಮತ್ತು ಹಣ್ಣುಗಳಂತಹ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಲಾಗುತ್ತದೆ. ಮಾಂಸಾಹಾರಿ ಆಹಾರ ಸೇವನೆ ಮತ್ತು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.

10. ನವರಾತ್ರಿ ಅವಧಿಯಲ್ಲಿ, ಆಹಾರದಲ್ಲಿ ಕಟ್ಟುನಿಟ್ಟಿನ ಶಿಸ್ತು ನಡೆಸುವಾಗ, ಒಬ್ಬ ವ್ಯಕ್ತಿಯು ಅವರ ನಡವಳಿಕೆಯನ್ನು ಸಹ ಗಮನಿಸಬೇಕು. ಭಕ್ತರು ದೇವಿಯನ್ನು ಪೂಜಿಸಿ ನವರಾತ್ರಿ ಮಂತ್ರಗಳನ್ನು ಪಠಿಸುತ್ತಾ ತಮ್ಮ ದಿನವನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ.

11. ನವರಾತ್ರಿ ಸಮಯದಲ್ಲಿ ಉಗುರು ಕತ್ತರಿಸುವುದು, ತಲೆಗೂದಲು ಕತ್ತರಿಸುವುದು, ಮನೆಯ ಧೂಳು ಹೊಡೆಯುವುದು, ಕೊಳೆಯಾದ ಬಟ್ಟೆ ಧರಿಸುವುದು, ಹಗಲಿನಲ್ಲಿ ಮಲಗುವುದು, ಮನೆಯಲ್ಲಿ ಚಪ್ಪಲಿ, ಶೂ ಧರಿಸುವುದು ನಿಶಿದ್ಧ.

English summary

Navratri 2021: Customs, Traditions, and Rituals of Navratri in Kannada

Here we are discussing about Navratri 2020: Customs, Traditions, and Rituals of Navratri in Kannada. In the auspicious and awe-inspiring occasion, divine love pervades through all the devotees who indulge in the rituals and customs. Read more.
X
Desktop Bottom Promotion