For Quick Alerts
ALLOW NOTIFICATIONS  
For Daily Alerts

ಬಾಲ ಗಂಗಾಧರ್ ತಿಲಕ್‌ 165ನೇ ಜನ್ಮ ದಿನಾಚರಣೆ: ಅವರ ಪ್ರಸಿದ್ಧ ಕೋಟ್ಸ್‌ ಇಲ್ಲಿವೆ

|

'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡದೇ ತೀರುತ್ತೇನೆ' ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ ಹುಲಿ ಬಾಲ ಗಂಗಾಧರ್ ತಿಲಕ್‌. ಇವರ ಈ ಮಾತುಗಳನ್ನು ಇಂದಿಗೂ ಕೇಳಿದಾಗ ನಮ್ಮೆಲ್ಲರ ಮನದಲ್ಲಿ ಒಂದು ರೀತಿಯ ಆವೇಶ, ದೇಶ ಭಕ್ತಿ ಉಕ್ಕಿ ಬರುವುದು.

ಬಾಲ ಗಂಗಾಧರ್‌ ತಿಲಕರು ಭಾರತೀಯ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರರು.

1856 ಜುಲೈ 23ರಂದು ಬಾಲ ಗಂಗಾಧರ್‌ ತಿಲಕರು ಮಹಾರಾಷ್ಟ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇಂದು ಅವರ 165ನೇ ಜನ್ಮ ದಿನಾಚರಣೆ. ನಾವಿಲ್ಲಿ ಈ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ನುಡಿದ ಮುತ್ತಿನಂಥ ಮಾತುಗಳ ಕೋಟ್ಸ್ ಇಲ್ಲಿ ನೀಡಿದ್ದೇವೆ ನೋಡಿ:

Bal Gangadhar Tilak Birth Anniversary: Quotes By Indian Freedom Fighter

1. 'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಹಾಗೂ ಅದನ್ನು ನಾನು ಪಡದೇ ತೀರುತ್ತೇನೆ'
ಬಾಲ ಗಂಗಾಧರ್ ತಿಲಕ್

2. 'ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದು ನನಗೆ ಸಿಗಲೇಬೇಕು'
ಬಾಲ ಗಂಗಾಧರ್ ತಿಲಕ್

3. 'ಸಮಸ್ಯೆಯೆಂಬುವುದು ಸಂಪನ್ಮೂಲ ಅಥವಾ ಸಾಮರ್ಥ್ಯದ ಕೊರತೆಯಲ್ಲ, ಬದಲಿಗೆ ಇಚ್ಛಾಶಕ್ತಿಯ ಕೊರತೆಯಾಗಿದೆ'
ಬಾಲ ಗಂಗಾಧರ್ ತಿಲಕ್

4. 'ಅಸ್ಪೃಶ್ಯತೆ ಎಂಬುವುದು ದೇವರಿಗಿದ್ದರೆ, ಅವನನ್ನು ದೇವರು ಎಂದು ನಾನು ಕರೆಯಲ್ಲ'
ಬಾಲ ಗಂಗಾಧರ್ ತಿಲಕ್

5. 'ಧರ್ಮ ಹಾಗೂ ಜೀವನ ಬೇರೆಯಲ್ಲ. ಸನ್ಯಾಸವನ್ನು ಸ್ವೀಕರಿಸುವುದು ಎಂದರೆ ಜೀವನವನ್ನೇ ಬಿಟ್ಟಂತೆ ಅಲ್ಲ. ನಾನು ಎಂಬ ಸ್ವಾರ್ಥದ ಬದಲಿಗೆ ದೇಶ, ಕುಟುಂಬ ಎಂದು ಎಲ್ಲರೂ ಒಟ್ಟಾಗಿ ದುಡಿಯುವುದೇ ನಿಜವಾದಸ್ಪೂರ್ತಿಯಾಗಿದೆ, ಮಾನವೀಯತೆಯಿಂದ ಮಾಡುವ ಕಾರ್ಯಗಳನ್ನು ಮಾಡಿದರೆ ದೇವರ ಕಾರ್ಯಕ್ಕೆ ಸಮ'
ಬಾಲ ಗಂಗಾಧರ್ ತಿಲಕ್

6. 'ಜೀವನ ಎಂಬುವುದು ಕಾರ್ಡ್‌ ಗೇಮ್‌ನಂತೆ. ಯಾವ ಕಾರ್ಡ್‌ ಸಿಗುತ್ತೆ ಎಂಬುವುದು ನಮ್ಮ ಕೈಯಲ್ಲಿಲ್ಲ, ಆದರೆ ಸಿಕ್ಕ ಕಾರ್ಡ್‌ ಅನ್ನು ಬಳಸಿಕೊಂಡು ಹೇಗೆ ಆಡುತ್ತೇವೆ ಎಂಬುವುದರಲ್ಲಿ ಯಶಸ್ಸು ಅಡಗಿದೆ'
ಬಾಲ ಗಂಗಾಧರ್ ತಿಲಕ್

7. 'ಧೈರ್ಯ ಎಂಬುವುದು ನಿಮ್ಮೊಳಗಿದ್ದರೆ ಅದೇ ನಿಮ್ಮ ವ್ಯಕ್ತಿತ್ವದ ಆಸ್ತಿ'
ಬಾಲ ಗಂಗಾಧರ್ ತಿಲಕ್

English summary

Bal Gangadhar Tilak Birth Anniversary: Quotes By Indian Freedom Fighter

Bal Gangadhar Tilak 165th Birth Anniversary: quotes by Indian freedom fighter, read on...
Story first published: Friday, July 23, 2021, 13:18 [IST]
X
Desktop Bottom Promotion