For Quick Alerts
ALLOW NOTIFICATIONS  
For Daily Alerts

ಗುಪ್ತ ನವರಾತ್ರಿ 2022: ದುರ್ಗಾ ದೇವಿಯನ್ನು ಆರಾಧಿಸುವ ಆಷಾಢ ನವರಾತ್ರಿ ವಿಶೇಷತೆ ಏನು? ಎಂದಿನಿಂದ ಆರಂಭ?

|

ಹಿಂದೂ ಧರ್ಮದಲ್ಲಿ ನವರಾತ್ರಿಯನ್ನು ವರ್ಷಕ್ಕೆ ನಾಲ್ಕು ಬಾರಿ ಆಚರಿಸಲಾಗುತ್ತದೆ. ಶಾರದ ನವರಾತ್ರಿ, ಚೈತ್ರ ನವರಾತ್ರಿ, ಮಾಘ ನವರಾತ್ರಿ ಮತ್ತು ಆಷಾಢ ನವರಾತ್ರಿ ಭಾರತದಲ್ಲಿ ಆಚರಿಸಲಾಗುವ ನಾಲ್ಕು ವಿಧದ ನವರಾತ್ರಿಗಳು. ಶಾರದ ಮತ್ತು ಚೈತ್ರ ನವರಾತ್ರಿ ಎರಡು ಸಾಮಾನ್ಯವಾಗಿ ಆಚರಿಸಲಾಗುತ್ತದೆ ಮತ್ತು ಉಳಿದ ಎರಡನ್ನು ಗುಪ್ತ ನವರಾತ್ರಿ ಎಂದು ಕರೆಯಲಾಗುತ್ತದೆ. ಈ ಪವಿತ್ರ ಹಬ್ಬದಲ್ಲಿ ಒಂಬತ್ತು ದಿನಗಳ ಕಾಲ ದುರ್ಗಾ ದೇವಿ ಮತ್ತು ಅವಳ ಎಲ್ಲಾ ಒಂಬತ್ತು ಅವತಾರಗಳನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುವುದು ವಾಡಿಕೆ.

Ashada

ಇದೀಗ ಆಷಾಢ ನವರಾತ್ರಿ ಕಾಲ. ಜೂನ್‌ 30ರಿಂದ ಆಷಾಢ ನವರಾತ್ರಿ ಆರಂಭವಾಗಿದೆ. ಈ ಹಿನ್ನೆಲೆ ಆಷಾಢ ನವರಾತ್ರಿಯ ಪೂಜಾ ಸಮಯ, ಏನಿದು ಗುಪ್ತ ನವರಾತ್ರಿ, ದೇವಿ ಮಂತ್ರಗಳು, ಪೂಜಾ ವಿಧಾನ ಹೇಗೆ ಎಂಬುದನ್ನು ತಿಳಿಯೋಣ:

1. ಗುಪ್ತ ನವರಾತ್ರಿ 2022: ದಿನಾಂಕ, ಸಮಯ ಮತ್ತು ಮುಹೂರ್ತಗಳು

1. ಗುಪ್ತ ನವರಾತ್ರಿ 2022: ದಿನಾಂಕ, ಸಮಯ ಮತ್ತು ಮುಹೂರ್ತಗಳು

2022ರಲ್ಲಿ ಆಷಾಢ ನವರಾತ್ರಿಯು ಜೂನ್ 30ರಂದು ಆರಂಭವಾಗುತ್ತಿದೆ.

ಘಟಸ್ಥಾಪನ ಮುಹೂರ್ತ: 2022ರ ಜೂನ್ 30 ಬೆಳಗ್ಗೆ 05:30 ರಿಂದ 06:40 ರವರೆಗೆ

ಅಭಿಜಿತ್ ಮುಹೂರ್ತದ ಸಮಯ: ಮಧ್ಯಾಹ್ನ 12.00 ರಿಂದ 12:50 ರವರಗೆ

ಪ್ರತಿಪದ ತಿಥಿ ಆರಂಭ: 2022ರ ಜೂನ್ 29 ರಂದು ಬೆಳಗ್ಗೆ 08:30ಕ್ಕೆ

ಪ್ರತಿಪದ ತಿಥಿ ಕೊನೆಗೊಳ್ಳುವ ಸಮಯ: 2022ರ ಜೂನ್ 30ರಂದು 10:50ರವರೆಗೆ

2. ಗುಪ್ತ ನವರಾತ್ರಿ ಎಂದರೇನು?

2. ಗುಪ್ತ ನವರಾತ್ರಿ ಎಂದರೇನು?

ಗುಪ್ತ ನವರಾತ್ರಿಯ ಸಮಯದಲ್ಲಿ, ದುರ್ಗಾ ದೇವಿಯ ವಿವಿಧ ಅವತಾರಗಳನ್ನು ರಹಸ್ಯವಾಗಿ ಪೂಜಿಸಲಾಗುತ್ತದೆ. ಈ ನವರಾತ್ರಿಯಲ್ಲಿ ಮಾಂತ್ರಿಕರು ಮತ್ತು ಸಾಧುಗಳು ದುರ್ಗಾ ದೇವಿಯ ವಿವಿಧ ರೂಪಗಳನ್ನು ಪೂಜಿಸಿ ಸಮಾಧಾನಪಡಿಸುತ್ತಾರೆ ಎಂದು ಹೇಳಲಾಗುತ್ತದೆ. ದುರ್ಗಾ ದೇವಿಯನ್ನು ಎಷ್ಟು ರಹಸ್ಯವಾಗಿ ಪೂಜಿಸುತ್ತಾರೋ ಅಷ್ಟು ಹೆಚ್ಚು ಪ್ರಯೋಜನಗಳನ್ನು ಸಾಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಗುಪ್ತ ನವರಾತ್ರಿಯ ಸಮಯದಲ್ಲಿ ಪೂಜಿಸುವ ದುರ್ಗಾ ದೇವಿಯ ವಿವಿಧ ಅವತಾರಗಳು ಈ ಕೆಳಗಿನಂತಿವೆ:

ಕಾಳಿ ದೇವಿ, ತಾರಾ ದೇವತೆ, ಚಿತ್ರಮಸ್ತ ದೇವತೆ, ತ್ರಿಪುರ ಸುಂದರಿ, ಭುವನೇಶ್ವರಿ ದೇವಿ, ತ್ರಿಪುರ ಭೈರವಿ, ಧೂಮ್ರಾವತಿ ದೇವಿ, ಬಗ್ಲಾಮುಖಿ ದೇವಿ, ಮಾತಂಗಿ ದೇವಿ,

ಕಮಲಾ ದೇವಿ.

ದಿನ 1: ಪ್ರತಿಪದ ತಿಥಿ - ಘಟಸ್ಥಾಪನೆ ಮತ್ತು ಶೈಲಪೂರ್ತಿ ಪೂಜೆ

ದಿನ 2: ದ್ವಿತೀಯ ತಿಥಿ - ಬ್ರಹ್ಮಚಾರಿಣಿ ಪೂಜೆ

ದಿನ 3: ತೃತೀಯಾ ತಿಥಿ - ಚಂದ್ರಘಂಟ ಪೂಜೆ

ದಿನ 4: ಚತುರ್ಥಿ ತಿಥಿ - ಕೂಷ್ಮಾಂಡ ಪೂಜೆ

ದಿನ 5: ಪಂಚಮಿ ತಿಥಿ - ಸ್ಕಂದಮಾತಾ ಪೂಜೆ

ದಿನ 6: ಷಷ್ಠಿ ತಿಥಿ - ಕಾತ್ಯಾಯನಿ ಪೂಜೆ

ದಿನ 7: ಸಪ್ತಮಿ ತಿಥಿ - ಕಾಳರಾತ್ರಿ ಪೂಜೆ

ದಿನ 8: ಅಷ್ಟಮಿ ತಿಥಿ - ಮಹಾ ಗೌರಿ ಪೂಜೆ

ದಿನ 9: ನವಮಿ ತಿಥಿ - ಸಿದ್ಧಿದಾತ್ರಿ ಪೂಜೆ

10 ನೇ ದಿನವನ್ನು ವಿಜಯ ದಶಮಿ ಪೂಜೆ ಎಂದು ಆಚರಿಸಲಾಗುತ್ತದೆ ಮತ್ತು ನವರಾತ್ರಿ ಉತ್ಸವದ ಕೊನೆಯ ದಿನ.

3. ದುರ್ಗಾ ದೇವಿಯನ್ನು ಸಮಾಧಾನಪಡಿಸುವ ಮಂತ್ರಗಳು

3. ದುರ್ಗಾ ದೇವಿಯನ್ನು ಸಮಾಧಾನಪಡಿಸುವ ಮಂತ್ರಗಳು

ಆಷಾಢ ಗುಪ್ತ ನವರಾತ್ರಿಯು ದುರ್ಗಾ ದೇವಿಯ ಆಶೀರ್ವಾದವನ್ನು ಪಡೆಯಲು ಅತ್ಯಂತ ಪ್ರಶಸ್ತ ಸಮಯವಾಗಿದೆ. ವೈದಿಕ ಆಚರಣೆಗಳನ್ನು ಮಾಡುವುದು ಮತ್ತು ದುರ್ಗಾ ದೇವಿಯನ್ನು ಪೂಜಿಸುವುದು ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಈ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ಮಂತ್ರಗಳನ್ನು ಪಠಿಸುವುದು ಅತ್ಯಂತ ಮಂಗಳಕರ ಮತ್ತು ಶುಭ ಎಂದು ಪರಿಗಣಿಸಲಾಗಿದೆ. ದುರ್ಗಾ ದೇವಿಯನ್ನು ಸಮಾಧಾನಪಡಿಸಲು ಕೆಲವು ಮಂತ್ರಗಳನ್ನು ಕೆಳಗೆ ನೀಡಲಾಗಿದೆ:

(1) ಓಂ ಶ್ರೀ ಮಹಾಲಕ್ಷ್ಮಿಯ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕತ್ ॥

(2) ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸಾದ ಪ್ರಸೀದ ಶ್ರೀಂ ಶ್ರೀಂ ಶ್ರೀಮಹಾಲಕ್ಷ್ಮೈ ॥

4. ಗುಪ್ತ ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಹೇಗೆ ಪೂಜಿಸಬೇಕು?

4. ಗುಪ್ತ ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಹೇಗೆ ಪೂಜಿಸಬೇಕು?

* ಶರದ್ ನವರಾತ್ರಿ ಮತ್ತು ಚೈತ್ರ ನವರಾತ್ರಿಯಲ್ಲಿ ಮಾಡುವಂತೆ ಗುಪ್ತ ನವರಾತ್ರಿಯಲ್ಲಿ ಸಹ ಕಲಶ ಸ್ಥಾಪನೆ ಮಾಡಲಾಗುತ್ತದೆ.

* ಕಲಶ ಸ್ಥಾಪನಾ ಸಮಯದಲ್ಲಿ ದುರ್ಗಾ ಚಾಲೀಸಾ ಅಥವಾ ದುರ್ಗಾ ಸಪ್ತಶತಿ ಪಠಿಸಿ.

* ಗುಪ್ತ ನವರಾತ್ರಿಯ ಸಮಯದಲ್ಲಿ, ದುರ್ಗಾ ದೇವಿಗೆ ಲವಂಗ ಮತ್ತು ಬತಾಸುಗಳನ್ನು ಅರ್ಪಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

* ಗುಪ್ತ ನವರಾತ್ರಿಯ ಸಮಯದಲ್ಲಿ ಶುದ್ಧ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.

English summary

Ashadha Gupt Navratri: How To Worship Goddess Durga

Here we are discussing about Ashadha Gupt Navratri: How To Worship Goddess Durga. Read more.
X
Desktop Bottom Promotion