For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2019: ತಿಳಿದುಕೊಳ್ಳಬೇಕಾದ ವಿಚಾರಗಳು

|
Krishna Janmashtami 2018 : ಶ್ರೀ ಕೃಷ್ಣ ಹುಟ್ಟಿದ್ದು ಹೇಗೆ? ಶ್ರೀ ಕೃಷ್ಣನ ಪೂಜೆಯನ್ನ ಮಾಡೋದು ಹೇಗೆ?

ಜಗತ್ ಪಾಲಕನಾದ ವಿಷ್ಣುವಿನ 8ನೇ ಅವತಾರವೇ ಶ್ರೀಕೃಷ್ಣನ ಅವತಾರ. ಅಜೇಯ ದೈವಿಕ ರೂಪನಾದ ಶ್ರೀಕೃಷ್ಣನು ಸೃಷ್ಟಿಯಲ್ಲಿರುವ ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಟರ ಪಾಲನೆಗಾಗಿ ಅವತರಿಸಿ ಬಂದ ಎಂದು ಹೇಳಲಾಗುವುದು. ಭಾದ್ರಪದ ಮಾಸ ಕೃಷ್ಣ ಪಕ್ಷದ 8ನೇ ದಿನ ಕೃಷ್ಣನು ಜನಿಸಿದನು. ಈ ಪವಿತ್ರ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುವ ಪದ್ಧತಿ ಇದ್ದು, 2019ರಲ್ಲಿ ಆಗಸ್ಟ್ 24ರ ಶನಿವಾರದಂದು ಜನ್ಮಾಷ್ಟಮಿ ಆಚರಿಸಲಾಗುತ್ತಿದೆ.

ಕೃಷ್ಣನ ಜನನದ ನಂತರ ತಂದೆತಾಯಿಂದ ದೂರವಾಗಿ, ನಂದಗೋಕುಲದಲ್ಲಿ ಬೆಳೆದ ಕೃಷ್ಣನ ಬಾಲ್ಯದಿಂದಲೇ ಅನೇಕ ಕಥೆಗಳು ಹಾಗೂ ಸಾಹಸ ಗೈದಿರುವನು. ಕೃಷ್ಣನ ಬಾಲ ಲೀಲೆಗಳು ಹಾಗೂ ಸಾಹಸ ಕಥೆಗಳು ಇಂದಿಗೂ ಮನುಕುಲಕ್ಕೊಂದು ಆದರ್ಶ ಮಾರ್ಗವನ್ನು ತೋರಿಸಿಕೊಡುವುದು.

ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನನ್ನು ಪ್ರಾಥಮಿಕ ದೇವತೆಯನ್ನಾಗಿ ಆರಾಧಿಸಲಾಗುವುದು. ಕೃಷ್ಣ ಜನ್ಮಿಸಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ಅದನ್ನು ಕೃಷ್ಣಾಷ್ಟಮಿ, ಕೃಷ್ಣ ಜನ್ಮಾಷ್ಟಮಿ, ಭಡೋ ಅಷ್ಟಮಿ, ರೋಹಿಣಿ ಅಷ್ಟಮಿ, ಕೃಷ್ಣ ಜಯಂತಿ ಎಂದೂ ಸಹ ಕರೆಯುತ್ತಾರೆ.

ದಕ್ಷಿಣ ಭಾರತೀಯರ ಪ್ರಕಾರ ಕೃಷ್ಣನು ಶ್ರಾವಣ ಮಾಸದಲ್ಲಿ ಜನಿಸಿದ್ದನು ಎಂದು ಹೇಳಲಾಗುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಮಾಸಗಳ ವ್ಯತ್ಯಾಸ ಬಿಟ್ಟರೆ ಒಂದೇ ದಿನದಂದು ಆಚರಣೆ ಮಾಡಲಾಗುವುದು. ಪವಿತ್ರ ಹಬ್ಬಗಳಲ್ಲಿ ಒಂದಾದ ಜನ್ಮಾಷ್ಟಮಿಯ ಹಿಂದೆ ಇದ್ದ ಕಥೆಯನ್ನು ತಿಳಿದುಕೊಳ್ಳೋಣ ಬನ್ನಿ.

Lord Krishna

2019ರ ಜನ್ಮಾಷ್ಟಮಿ

2019ರಲ್ಲಿ ಆಗಸ್ಟ್ 24ರ ಶನಿವಾರದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು. 24ರ ಶನಿವಾರ ಮಧ್ಯಾಹ್ನ 12ರಿಂದ 12.46ರ ಒಳಗೆ 45 ನಿಮಿಷಗಳ ಕಾಲ ಕೃಷ್ಣನ ಪೂಜೆ ಶುಭ ಮುಹೂರ್ತವಿದೆ.

ದುಷ್ಟ ಶಿಶುಪಾಲನ 100 ತಪ್ಪುಗಳು ದಾಟಿದ ಬಳಿಕ-ಭಗವಾನ್ ಕೃಷ್ಣ ಏನು ಮಾಡಿದ ಗೊತ್ತೇ?

ದೈವ ಶಕ್ತಿಯ ಮಗುವಿನ ಜನನ: ಕೃಷ್ಣ ಹುಟ್ಟಿದ ಕಥೆ

ದುಷ್ಟರ ಶಿಕ್ಷೆಗಾಗಿ ಜನಿಸಿದ ಕೃಷ್ಣ ಪರಮಾತ್ಮನು ತನ್ನ ಭಕ್ತರನ್ನು ಹಾಗೂ ಶಿಷ್ಟರನ್ನು ರಕ್ಷಿಸುತ್ತಲೇ ಬಂದನು. ದ್ವಿಪೂರ್ವ ಯುಗದಲ್ಲಿ ಭೂಮಿಯ ಮೇಲೆ ಅಲೌಕಿಕ ಶಕ್ತಿಯೊಂದಿಗೆ ದೈವಿಕ ಅವತಾರದಲ್ಲಿ ಹುಟ್ಟಿಬಂದವನು ಶ್ರೀಕೃಷ್ಣನು.

Krishna

ಮಥುರ ರಾಜನಾದ ಕಂಸನು ದಬ್ಬಾಳಿಕೆಯ ರೂಪದಲ್ಲಿ ಆಳ್ವಿಕೆಯನ್ನು ನಡೆಸಿಕೊಂಡು ಬರುತ್ತಿದ್ದನು. ಅವನ ದಬ್ಬಾಳಿಕೆಯನ್ನು ಜನರು ಸಹಿಸಲು ಕಷ್ಟವಾಗುತ್ತಿತ್ತು. ಆದರೆ ಇವನು ತನ್ನ ತಂಗಿ ದೇವಕಿಯನ್ನು ತುಂಬಾ ಪ್ರೀತಿಸುತ್ತಿದ್ದ. ದೇವಕಿಯನ್ನು ವಾಸುದೇವನಿಗೆ ಕೊಟ್ಟು ವಿವಾಹ ಮಾಡಿಸಿದನು. ನಂತರ ದಂಪತಿಯನ್ನು ಕರೆದೊಯ್ಯುತ್ತಿರುವಾಗ ದೇವಕಿ ಮತ್ತು ವಾಸುದೇವನ 8ನೇ ಮಗುವಿನಿಂದ ಕಂಸನ ಮರಣ ಉಂಟಾಗುವುದು ಎಂದು ಆಕಾಶವಾಣಿ ಆಯಿತು.

ಅದನ್ನು ಕೇಳುತ್ತಿದ್ದಂತೆ ಕಂಸನು ಕೋಪಗೊಂಡನು. ದೇವಕಿಗೆ ಹುಟ್ಟಿದ ಎಲ್ಲಾ ಶಿಶುಗಳನ್ನು ಕೊಲ್ಲಲು ನಿರ್ಧರಿಸಿದನು. ಜೊತೆಗೆ ತನ್ನ ತಂಗಿ ಹಾಗೂ ಬಾವನನ್ನು ಸೆರೆಮನೆಗೆ ತಳ್ಳಿದನು. ಏಳನೇ ಮಗು (ಬಲರಾಮ್) ದೈವಿಕ ಶಕ್ತಿಯಿಂದ ರೋಹಿಣಿ ಗರ್ಭಕ್ಕೆ ಅತೀಂದ್ರಿಯವಾಗಿ ವರ್ಗಾವಣೆಗೊಳ್ಳುವವರೆಗೂ ಕಂಸನು ದೇವಕಿಯ ಎಲ್ಲಾ ಶಿಶುಗಳನ್ನು ಕೊಂದನು. ಕಂಸನನ್ನು ಕೊಲ್ಲುವ 8ನೇ ಮಗು ಹುಟ್ಟಿದಾಗ ವಾಸುದೇವನು ಅವನನ್ನು ಗೋಕುಲ ಗ್ರಾಮದ ಮುಖ್ಯಸ್ಥ ನಂದನ ಮನೆಗೆ ರಹಸ್ಯವಾಗಿ ಕರೆದೊಯ್ದು, ಅಲ್ಲಿಯ ಮಗು ಮತ್ತು ತನ್ನ ಮಗನನ್ನು ಬದಲಾಯಿಸಿಕೊಂಡು ಬಂದನು.

ನಂದನ ನವಜಾತ ಹೆಣ್ಣು ಮಗು

ಕಂಸನು ಹೆಣ್ಣು ಮಗುವಿನ ಮೇಲೆ ಯಾವುದೇ ದಾಳಿ ಮಾಡುವುದಿಲ್ಲ ಎಂದು ತಿಳಿದುಕೊಂಡಿದ್ದರು. ದೇವಕಿಗೆ ಎಂಟನೇ ಮಗುವಾಗಿದೆ ಎಂದು ತಿಳಿದ ತಕ್ಷಣ ಅಲ್ಲಿಗೆ ಕಂಸನು ಬಂದನು. ಆ ಹೆಣ್ಣು ಮಗುವನ್ನು ತನ್ನ ಕೈಲಿ ಎತ್ತಿಕೊಂಡು ಎಸೆದನು. ಆಗ ಆ ಮಗು ಆಕಾಶಕ್ಕೆ ಹೋಯಿತು. ಅದು ದುರ್ಗಾದೇವಿಯ ದೈವ ರೂಪವಾಗಿತ್ತು. ಕೃಷ್ಣನನ್ನು ಅಲ್ಲಿಂದ ರಕ್ಷಿಸುವ ಉದ್ದೇಶಕ್ಕೆ ಈ ಅವತಾರವನ್ನು ಹೊಂದಿದ್ದರು ಎನ್ನಲಾಗುತ್ತದೆ. ನಿನ್ನನ್ನು ಕೊಲ್ಲುವ ಮಗು ಗೋಕುಲದಲ್ಲಿ ಸುರಕ್ಷಿತವಾಗಿದೆ ಎಂದು ಹೇಳಿ ದೇವಿ ಮಾಯವಾದಳು.

ನಂದ ಮತ್ತು ಯಶೋದೆ ತಮಗೆ ಹುಟ್ಟಿದ ಮಗುವನ್ನು ಗೋಕುಲದ ಮನೆಯಲ್ಲಿಯೇ ಕೃಷ್ಣ ಎನ್ನುವ ಹೆಸರು ಇಡುವುದರ ಮೂಲಕ ನಾಮಕರಣ ಮಾಡಿದರು. ನಂತರ ಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿ ಎಂದು ಆಚರಿಸಲಾಯಿತು.

Krishna

ಜನ್ಮಾಷ್ಟಮಿಯನ್ನು ಹೇಗೆ ಆಚರಿಸಲಾಗುವುದು?

ಹಬ್ಬದ ದಿನದಂದು ಜನರು ಹಣ್ಣು ಮತ್ತು ನೀರನ್ನು ಕುಡಿಯುವುದರ ಮೂಲಕ ಉಪವಾಸವನ್ನು ಕೈಗೊಳ್ಳುತ್ತಾರೆ. ಕೃಷ್ಣ ಪರಮಾತ್ಮನಿಗೆ ಹಾಲು, ತುಪ್ಪ, ಜೇನುತುಪ್ಪ ಮತ್ತು ನೀರಿನಿಂದ ಸ್ನಾನ ಮಾಡಿಸುತ್ತಾರೆ. ಜನ್ಮಾಷ್ಟಮಿಯ ನಂತರದ/ಮರುದಿನವನ್ನು ದಹಿ ಹಂಡಿ ಧಾರ್ಮಿಕ ಕ್ರಿಯೆಯನ್ನು ಕೈಗೊಳ್ಳುತ್ತಾರೆ. ಜನರು ಮನುಷ್ಯರಿಂದಲೇ ಪಿರಾಮಿಡ್‍ಅನ್ನು ನಿರ್ಮಿಸುತ್ತಾರೆ. ಪಿರಾಮಿಡ್ ತುದಿಯಲ್ಲಿ ನಿಲ್ಲುವ ವ್ಯಕ್ತಿ ಮಡಿಕೆಯನ್ನು ಒಡೆಯುತ್ತಾನೆ. ಮಡಿಕೆಯ ತುಂಬಾ ಮೊಸರನ್ನು ತುಂಬಿ, ಎತ್ತರದಲ್ಲಿ ತೂಗಿ ಬಿಟ್ಟಿರುವ ಹಾಗೆ ಕಟ್ಟಿರುತ್ತಾರೆ.

ಕೃಷ್ಣನು ಚಿಕ್ಕವನಿರುವಾಗ ಇದೇ ರೀತಿಯಲ್ಲಿ ಮೊಸರು ಹಾಗೂ ಬೆಣ್ಣೆಯನ್ನು ಕದಿಯುತ್ತಿದ್ದ ಎನ್ನುವ ಹಿನ್ನೆಲೆಯಲ್ಲಿ ಆಚರಿಸಲಾಗುವುದು. ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ.

English summary

All About Krishna Janmashtami 2019

The birth anniversary of Lord Krishna is celebrated as Krishna Janmashtami. Krishna Janmashtami falls on the eighth day during the Krishna Paksha in the month of Bhadrapad. It is also known as Krishna Ashtami, Gokul Ashtami, Bhado Ashtami and Rohini Ashtami. Lord Krishna is worshipped in his Laddu Gopal form.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more