For Quick Alerts
ALLOW NOTIFICATIONS  
For Daily Alerts

ಸೆ. 18 ರಿಂದ ಅ. 16ವರೆಗೆ ಅಧಿಕ ಮಾಸ: ಈ ಸಮಯದಲ್ಲಿ ಶುಭಕಾರ್ಯ ಯಾವುದೂ ಮಾಡುವಂತಿಲ್ಲ, ಏಕೆ?

|

2020ರಲ್ಲಿ ಅಧಿಕ ಮಾಸ ಬಂದಿದೆ. ಈ ಬಾರಿ ಅಶ್ವಯುಜ ಮಾಸದಲ್ಲಿ ಅಧಿಕ ಮಾಸ ಬಂದಿದೆ. ಸೆಪ್ಟೆಂಬರ್‌ 18ರಿಂದ ಅಧಿಕ ಮಾಸ ಪ್ರಾರಂಭವಾಗಿ ಅಕ್ಟೋಬರ್‌ 16ಕ್ಕೆ ಮುಕ್ತಾಯವಾಗಲಿದೆ. ಅಧಿಕ ಮಾಸ ಪ್ರತೀ ಮೂರು ವರ್ಷಕ್ಕೊಮ್ಮೆ ಅಂದರೆ 33 ತಿಂಗಳು, 16 ದಿನ 4 ಘಳಿಗೆಗೆ ಬರುತ್ತದೆ. ಈ ಅಧಿಕ ಮಾಸವನ್ನು ಮಲ ಮಾಸವೆಂದು ಕೂಡ ಕರೆಯಲಾಗುವುದು.

ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಕೂಡ ಕರೆಯುತ್ತಾರೆ. ಈ ಮಾಸದ ಅಧಿಪತಿ ಭಗವಾನ್ ವಿಷ್ಣು ಆಗಿದ್ದಾನೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ ಆದರೆ ವ್ರತ, ಉಪವಾಸ, ಧ್ಯಾನ ಇವುಗಳಿಗೆ ಸೂಕ್ತವಾದ ಕಾಲ ಇದು ಎಂದು ಹೇಳಲಾಗುತ್ತದೆ.

ಇಲ್ಲಿ ನಾವು ಅಧಿಕ ಮಾಸದಲ್ಲಿ ಮಾಡುವ ವ್ರತ, ಇದರಿಂದ ಸಿಗುವ ಫಲವೇನು, ಯಾವ ದಾನ ಶ್ರೇಷ್ಠ ಹಾಗೂ ಯಾವ ಮಂಗಳಕಾರ್ಯ ಮಾಡಬಾರದು ಎಂಬುವುದರ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ:

ಅಧಿಕ ಮಾಸದಲ್ಲಿ ಏನು ಮಾಡಬಾರದು?

ಅಧಿಕ ಮಾಸದಲ್ಲಿ ಏನು ಮಾಡಬಾರದು?

ಹಿಂದೂ ಧರ್ಮದಲ್ಲಿ ಏನಾದರೂ ಹೊಸ ಕಾರ್ಯ ಮಾಡುವಾಗ, ಮದುವೆ-ನಾಮಕರಣ ಇವೆಲ್ಲಾ ಮಾಡುವಾಗ ಶುಭ ಗಳಿಗೆ ನೋಡಿ ಮಾಡಲಾಗುವುದು. ಆದರೆ ಅಧಿಕ ಮಾಸದಲ್ಲಿ ಇಂಥ ಯಾವುದೇ ಮಂಗಳಕರ ಕಾರ್ಯ ಮಾಡುವುದಿಲ್ಲ. ವಿವಾಹ, ನಾಮಕರಣ, ಯಜ್ಞೋಪವೀತ, ಸಾಮಾನ್ಯ ಧಾರ್ಮಿಕ ಸಂಸ್ಕಾರಗಳು, ಹೊಸ ವಸ್ತುಗಳ ಖರೀದಿ, ಗಾಡಿ ಖರಿದಿ, ಗೃಹಪ್ರವೇಶ, ಹೊಸ ವ್ಯಾಪಾರ ಪ್ರಾರಂಭಿಸುವುದು ಹೀಗೆ ಯಾವುದೇ ಶುಭಕರವಾದ ಕಾರ್ಯವನ್ನು ಮಾಡುವಂತಿಲ್ಲ.

ಅಧಿಕ ಮಾಸದಲ್ಲಿ ಮಾಡುವ ವ್ರತ, ಧ್ಯಾನಕ್ಕೆ ತುಂಬಾ ಮಹತ್ವವಿದೆ

ಅಧಿಕ ಮಾಸದಲ್ಲಿ ಮಾಡುವ ವ್ರತ, ಧ್ಯಾನಕ್ಕೆ ತುಂಬಾ ಮಹತ್ವವಿದೆ

ಅಧಿಕ ಮಾಸದ ಸಂಪೂರ್ಣ ಭಾರ ವಿಷ್ಣುವಿನ ಮೇಲಿದೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಮನಸ್ಸನ್ನು ಪವಿತ್ರಗೊಳಿಸಲು ಇದು ಸೂಕ್ತವಾದ ಮಾಸವೆಂದು ಹೇಳಲಾಗುತ್ತದೆ. ಜನರು ಶ್ರದ್ಧೆಯಿಂದ ವ್ರತ, ಉಪವಾಸ, ಧ್ಯಾನ, ಭಜನೆ, ಕೀರ್ತನೆಯಲ್ಲಿ ತಲ್ಲೀನವಾದರೆ ಇದರಿಂದ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ. ಈ ಮಾಸದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪ್ರಯತ್ನದಿಂದಾಗಿ ವ್ಯಕ್ತಿಯು ಭೌತಿಕ ಹಾಗೂ ಆಧ್ಯಾತ್ಮಿಕ ಉನ್ನತಿ ಗಳಿಸುತ್ತಾನೆ ಹಾಗೂ ಈ ಸಮಯದಲ್ಲಿ ಧಾರ್ಮಿಕ ಕಾರ್ಯದಿಂದಾಗಿ ಜನ್ಮ ಕುಂಡಲಿಯಲ್ಲಿನ ದೋಷ ನಿವಾರಣೆಯಾಗುವುದು.

ಅಧಿಕ ಮಾಸದಲ್ಲಿ ವ್ರತಾಚರಣೆ

ಅಧಿಕ ಮಾಸದಲ್ಲಿ ವ್ರತಾಚರಣೆ

ಮನಸ್ಸಿನಲ್ಲಿ ಸಂಕಲ್ಪ ಮಾಡಿ ಅಧಿಕ ಮಾಸದಲ್ಲಿ ವ್ರತಾಚರಣೆ ಮಾಡಿದರೆ ಇದರಿಂದ ಬಯಕೆ ಈಡೇರುವುದು. ಅಧಿಕ ಮಾಸದಲ್ಲಿ ಉತ್ತಮ ಫಲಕ್ಕಾಗಿ ಧಾರಣ ಪಾರಣ ವ್ರತ (ಒಂದು ದಿನ ಉಪವಾಸವಿದ್ದು ಮಾರನೇಯ ದಿನ ಬೆಳಗ್ಗೆ ಆಹಾರ ಸೇವಿಸುವುದು), ಕಭುಕ್ತೌ ವ್ರತ (ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುವುದು) ನಕ್ತಭೋಜನ ವ್ರತ (ಸೋರ್ಯಾಸ್ತದ ನಂತರ ಊಟ), ಅಲವಣ ವ್ರತ(ಉಪ್ಪು ಹಾಕಿರದ ಊಟ ಮಾಡುವುದು) ಇಂಥ ವ್ರತ ಪಾಲಿಸುವುದರಿಂದ ಶ್ರೀ ವಿಷ್ಣು ಆಶೀರ್ವದಿಸುತ್ತಾನೆ.

ಅಧಿಕ ಮಾಸದಲ್ಲಿ ದಾನ ಮಾಡಿದರೆ ದಾರಿದ್ರ್ಯ ನಾಶ

ಅಧಿಕ ಮಾಸದಲ್ಲಿ ದಾನ ಮಾಡಿದರೆ ದಾರಿದ್ರ್ಯ ನಾಶ

ಶನಿ ದೋಷ, ನವಗ್ರಹ ದೋಷ, ದಾರಿದ್ರ್ಯ ಇವುಗಳನ್ನು ಹೋಗಲಾಡಿಸಲು ಮೂವತ್ಮೂರು ಅಪ್ಪೂಪವನ್ನು ಸದ್ಬ್ರಾಹ್ಮಣರಿಗೆ ಕಂಚಿನ ಪಾತ್ರೆಯಲ್ಲಿ ಇಟ್ಟು ದಾನ ಮಾಡಬೇಕು, ಇದರಿಂದ ದಾನ ಮಾಡಿದವರು ಸ್ವರ್ಗಸುಖವನ್ನು ಅನುಭವಿಸುತ್ತಾರೆ ಎಂಬ ನಂಬಿಕೆ ಇದೆ.

ಇನ್ನು ಅಮಾವಾಸ್ಯೆ, ಹುಣ್ಣಿಮೆ, ದ್ವಾದಶಿ ಹಾಗೂ ವೈಧೃತಿ, ವ್ಯತೀಪಾತ ಯೋಗಗಳಲ್ಲಿ ದಂಪತಿಯನ್ನು ಊಟಕ್ಕೆ ಕರೆದು ಅವರಿಗೆ 33 ವಸ್ತುಗಳನ್ನು ಇಟ್ಟು ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಸುವುದು.

ವಿಷ್ಣು ಮಂತ್ರ ಜಪಿಸಬೇಕು

ವಿಷ್ಣು ಮಂತ್ರ ಜಪಿಸಬೇಕು

ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರ ಜೊತೆಗೆ ಶ್ರೀಮದ್ ದೇವಿ ಭಾಗವತ, ಶ್ರೀ ವಿಷ್ಣು ಪುರಾಣ, ಶ್ರೀ ವಿಷ್ಣು ಸಹಸ್ರನಾಮಾವಳಿ, ವಿಷ್ಣುಮಂತ್ರ ಕೇಳುವುದು, ಜಪಿಸುವುದು ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ.

ಅಧಿಕ ಮಾಸ 3 ವರ್ಷಗಳಗೊಮ್ಮೆ ಬರುವುದು. ಇದೀಗ ಬಂದಿದೆ, ಕಷ್ಟಗಳಿಂದ ಮುಕ್ತಿ ಪಡೆಯಲು ಹಾಗೂ ಜನ್ಮ ದೋಷಗಳ ನಿವಾರಣೆ ಅಧಿಕ ಮಾಸ ಸಕಾಲವಾಗಿದ್ದು, ಈ ಸಮಯದಲ್ಲಿ ಧಾರ್ಮಿಕ ಕಾರ್ಯ ಮಾಡುವ ಮೂಲಕ ಅದರ ಫಲ ಪಡೆಯಿರಿ.

English summary

Adhika Maasa 2020: Dates, Importance and Significance in Kannada

To know what is Adhika Maasa Dates, Importance and Significance read on.
X
Desktop Bottom Promotion