Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2019 ಮಹಾಶಿವರಾತ್ರಿ: ನೀವು ಅನುಸರಿಸಬೇಕಾದ ಪೂಜಾ ವಿಧಿ ವಿಧಾನಗಳು
ಹಿಂದೂ ಪಂಚಾಂಗದ ಚಂದ್ರಸೂರ್ಯ ಮಾಸದಲ್ಲಿ ಶಿವರಾತ್ರಿಯು ಪ್ರತೀ ವರ್ಷ ಬರುವುದು. ಅದಾಗ್ಯೂ, ಉತ್ತರ ಭಾರತೀಯ ಕ್ಯಾಲೆಂಡರ್ ನ ಪ್ರಕಾರ ಫಾಲ್ಗುಣ ಮಾಸದಲ್ಲಿ ಮಹಾಶಿವರಾತ್ರಿ ಆಚರಿಸಲಾಗುತ್ತದೆ. ದಕ್ಷಿಣ ಭಾರತೀಯ ಪಂಚಾಂಗದ ಪ್ರಕಾರ ಶಿವರಾತ್ರಿಯು ಕೃಷ್ಣ ಪಕ್ಷದ ಮಘ ಮಾಸದ ಚತುದರ್ಶಿ ತಿಥಿಯಯಲ್ಲಿ ಬರುವುದು. ತಿಂಗಳುಗಳ ಉಲ್ಲೇಖವು ಭಿನ್ನವಾಗಿದ್ದರೂ ನಾವು ಆಚರಿಸುವಂತ ಮಹಾಶಿವರಾತ್ರಿ ಮಾತ್ರ ಒಂದೇ ಆಗಿರುವುದು. ಹಿಂದೂಗಳು ಹೆಚ್ಚಾಗಿ ಮಹಾಶಿವರಾತ್ರಿಯಂದು ಜಾಗರಣೆ ಕುಳಿತು ಶಿವ ಭಜನೆ ಮಾಡುವರು. ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಬಂದಿದೆ.
ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ.

ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು. ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು.

ಮಹಾಶಿವರಾತ್ರಿ ಪೂಜೆಯು ಬೆಳಗ್ಗೆ ಬೇಗನೆ ಆರಂಭವಾಗುವುದು
ಸಾಮಾನ್ಯವಾಗಿ ಮಹಾಶಿವರಾತ್ರಿ ಪೂಜೆಯು ಬೆಳಗ್ಗೆ ಬೇಗನೆ ಆರಂಭವಾಗುವುದು. ಈ ದಿನ ಭಕ್ತರು ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವರು, ಹೊಸ ಬಟ್ಟೆ ಧರಿಸಿ, ಶಿವನ ಮಂದಿರಕ್ಕೆ ಭೇಟಿ ನೀಡುವರು. ಸಾಂಪ್ರದಾಯಿಕವಾಗಿ ನೀರು, ಹಾಲು, ಬಿಲ್ವ ಪತ್ರೆ, ಹಣ್ಣುಗಳೊಂದಿಗೆ ವ್ರತವನ್ನು ಆಚರಿಸುವಂತಹ ಮಹಿಳೆಯರಿಗೆ ಈ ದಿನವು ತುಂಬಾ ವಿಶೇಷವಾಗಿರುವುದು. ಇವರು ಶಿವಲಿಂಗಕ್ಕೆ 3ರಿಂದ 7 ಸುತ್ತು ಬರುವರು ಮತ್ತು ಇದರ ಬಳಿಕ ಲಿಂಗಕ್ಕೆ ನೀರು ಮತ್ತು ಹಾಲಿನ ಅಭಿಷೇಕ ಮಾಡಿ, ಬಳಿಕ ಬಿಲ್ವ ಪತ್ರೆಗಳು, ಹಣ್ಣುಗಳು, ಹೂವು ಅರ್ಪಿಸುವರು. ಇದರ ಬಳಿಕ ಅಗರಬತ್ತಿ ಬಳಸಿಕೊಂಡು ಪೂಜೆ ಮಾಡುವರು.
ಮಹಾಶಿವರಾತ್ರಿ ಪೂಜೆ ಮಾಡುವ ವೇಳೆ ಆರು ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಪ್ರತಿಯೊಂದಕ್ಕೂ ಅದರದ್ದೇ ಆಗಿರುವಂತಹ ಮಹತ್ವವಿದೆ.
• ಶಿವ ಲಿಂಗವನ್ನು ನೀರು, ಹಾಲಿನಿಂದ ಅಭಿಷೇಕ ಮಾಡಿದ ಬಳಿಕ ಬಿಲ್ವ ಪತ್ರೆ ಅರ್ಪಿಸುವುದು, ಆತ್ಮದ ಶುದ್ಧೀಕರಣಕ್ಕಾಗಿ.
• ಸ್ನಾನದ ಬಳಿಕ ವಿಭೂತಿ ಇಡುವುದು ಮೌಲ್ಯದ ಸಂಕೇತವಾಗಿದೆ.
• ಹಣ್ಣುಗಳನ್ನು ಅರ್ಪಣೆ ಮಾಡುವುದು ಆಕಾಂಕ್ಷೆ ಮತ್ತು ದೀರ್ಘಾಯುಷ್ಯದ ಪ್ರಾರ್ಥನೆಗಾಗಿ.
• ಸಂಪತ್ತನ್ನು ಕೇಳಲು ಅಗರಬತ್ತಿ ಹಚ್ಚಿಡಲಾಗುತ್ತದೆ.
•ಬಿಲ್ವ ಪತ್ರೆ ಅರ್ಪಣೆ ಮಾಡುವುದು ಲೌಕಿಕ ಆಕಾಂಕ್ಷೆಗಳ ಸಂತೃಪ್ತಿಗಾಗಿ.
ಮಂದಿರಗಳಲ್ಲಿ ರಾತ್ರಿಯಿಡಿ ಶಿವನ ಪೂಜೆ ಮಾಡುವುದು ಈ ದಿನದ ಪ್ರಾಮುಖ್ಯತೆಯಾಗಿದೆ. ಇದರಿಂದಾಗಿ ಹೆಚ್ಚಿನ ಭಕ್ತರು ಈ ದಿನ ಜಾಗರಣೆ ಮಾಡುವರು. ಈ ದಿನ ರಾತ್ರಿ ಶಿವ ಮಂದಿರಗಳಲ್ಲಿ ಓಂ ನಮಃ ಶಿವಾಯ ಮಂತ್ರಾಕ್ಷರಿಯನ್ನು ಪಠಿಸಲಾಗುತ್ತದೆ. ಭಜನೆ ಹಾಗೂ ನೃತ್ಯ ಮಾಡುವ ಮೂಲಕವೂ ಜಾಗರಣೆ ಮಾಡಲಾಗುತ್ತದೆ.

ಶಿವರಾತ್ರಿಯಂದು ಉಪವಾಸ(ವ್ರತ ವಿಧಾನ) ಮಾಡುವುದು ಹೇಗೆ?
ಮಹಾಶಿವರಾತ್ರಿಯಂದು ವ್ರತ ವಿಧಾನವು ಸಂಪೂರ್ಣ ದಿನ ಉಪವಾಸ ಮಾಡುವುದು. ಶಿವರಾತ್ರಿ ವ್ರತ ಆಚರಣೆ ಮಾಡುವ ಮೊದಲು ಒಂದು ಸಲ ಮಾತ್ರ ಆಹಾರ ಸೇವನೆ ಮಾಡಬಹುದು. ಮಹಾಶಿವರಾತ್ರಿಯಂದು ಭಕ್ತರು ಕಠಿಣ ಉಪವಾಸ ವ್ರತ ಮಾಡುವಂತಹ ಸಂಕಲ್ಪ ಅಥವಾ ವಚನ ತೆಗೆದುಕೊಳ್ಳಬೇಕು. ಮರುದಿನ ಆಹಾರ ಸೇವನೆ ಮಾಡಬಹುದು. ಶಿವ ದೇವರ ಆಶೀರ್ವಾದ ಪಡೆಯಲು ಬಯಸುವಂತಹವರು ತುಂಬಾ ಶಕ್ತಿ ಹಾಗೂ ಬದ್ಧತೆಯಿಂದ ಮಹಾಶಿವರಾತ್ರಿ ವ್ರತವನ್ನು ಯಾವುದೇ ಅಡೆತಡೆಗಳು ಇಲ್ಲದೆ ಪೂರೈಸಬೇಕು.

ಶಿವರಾತ್ರಿಯಂದು ಉಪವಾಸ(ವ್ರತ ವಿಧಾನ) ಮಾಡುವುದು ಹೇಗೆ?
ಮಹಾಶಿವರಾತ್ರಿ ಪೂಜೆಯನ್ನು ರಾತ್ರಿ ವೇಳೆ ಮಾಡಬೇಕು ಮತ್ತು ಮರುದಿನ ಬೆಳಗ್ಗೆ ಸ್ನಾನ ಮಾಡಿದ ಬಳಿಕ ವ್ರತವನ್ನು ಕೊನೆಗೊಳಿಸಬೇಕು. ಸೂರ್ಯಾಸ್ತದ ವೇಳೆ ಯಾವಾಗ ಬೇಕಿದ್ದರೂ ವ್ರತವನ್ನು ಬಿಡಬಹುದು ಮತ್ತು ಚತುದರ್ಶಿ ತಿಥಿಯು ಪೂರ್ಣಗೊಳ್ಳುವ ಮೊದಲು ವ್ರತ ಮುಗಿಸಿದರೆ ಅದರಿಂದ ಅತ್ಯಧಿಕ ಲಾಭವು ಸಿಗುವುದು.

ಶಿವರಾತ್ರಿಯಂದು ಉಡುಗೊರೆ
ಹಿತ್ತಾಳೆ ಬಿಡಿಭಾಗಗಳಾದ ಹಿತ್ತಾಳೆ ಡಿಯಾಸ್, ಡಿಯಾಯಾ ಸ್ಟ್ಯಾಂಡ್, ರುದ್ರಕ್ಷ ಮಾಲಾ, ರಿಹಲ್ ಮತ್ತು ಮೇಣದಬತ್ತಿಯ ಹಿಡಿಕೆಯನ್ನು ಮಂಗಳಕರವಾಗಿ ಪರಿಗಣಿಸಲಾಗುತ್ತದೆ. ಈ ದಿನದಲ್ಲಿ ಶಿವ ಅಥವಾ ಶಿವಲಿಂಗನ ವಿಗ್ರಹವನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸುವುದು ಕುಟುಂಬಕ್ಕೆ ಉತ್ತಮ ಅದೃಷ್ಟವನ್ನು ಸೂಚಿಸುತ್ತದೆ. ನೀವು ಸಮಯ ಮತ್ತು ಉಡುಗೊರೆಗಳನ್ನು ನವೀನತೆಯಿಂದ ಉಳಿಸಿಕೊಂಡು ಅಂತಹ ಉಡುಗೊರೆಗಳನ್ನು ನೀಡಲು ಬಯಸಿದರೆ, ಶಿವ ಭಜನೆ, ಶಿವನ ಹಾಡುಗಳು ಮತ್ತು ಪ್ರಾರ್ಥನೆಗಳನ್ನು ಒಳಗೊಂಡಿರುವ ಕಥಾ ಪುಸ್ತಕಗಳು ಅಥವಾ ಸಿಡಿಗಳು ಲಭ್ಯವಾಗುವ ಸುಗಂಧದ ಮೇಣದಬತ್ತಿಗಳನ್ನು ನೀವು ಯಾವಾಗಲೂ ನೀಡಬಹುದಾಗಿದೆ. ಈ ಬಗೆಯ ಉಡುಗೊರೆಯಿಂದ ವ್ಯಕ್ತಿಯು ಸಂತೋಷನ್ನು ಪಡೆಯುವುದು ಮಾತ್ರವಲ್ಲದೆ ನಿಮಗಿದು ಆಂತರಿಕ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಈ ಹಬ್ಬವನ್ನು ರಾಷ್ಟ್ರದಾದ್ಯಂತ ತುಂಬಾ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಮಹಾಶಿವರಾತ್ರಿಯಂದು ಶಿವ ದೇವರ ಆರಾಧನೆಯಲ್ಲಿ ಸುತ್ತಲಿನ ವಾತಾವರಣವು ತುಂಬಿರುವುದು. ಹೆಚ್ಚಿನ ಶಿವ ಭಕ್ತರು ತುಂಬಾ ಶ್ರದ್ಧಾಭಕ್ತಿ ಹಾಗೂ ಬದ್ಧತೆಯಿಂದ ಶಿವ ದೇವರ ಆರಾಧನೆ ಮಾಡುವರು. ಎಲ್ಲರಿಗೂ ಬೋಲ್ಡ್ ಸ್ಕೈ ವತಿಯಿಂದ ಮಹಾಶಿವರಾತ್ರಿಯ ಶುಭಾಶಯಗಳು.



Click it and Unblock the Notifications