For Quick Alerts
ALLOW NOTIFICATIONS  
For Daily Alerts

2019 ಗುರು ಪೂರ್ಣಿಮೆ: ಇದರ ಪ್ರಾಮುಖ್ಯತೆ ಹಾಗೂ ಆಚರಣೆಯ ವಿಧಿವಿಧಾನಗಳು

|

ಗುರುಭ್ಯೋ ನಮಃ ಎನ್ನುವ ಮಾತು ಹಿಂದೂ ಸಂಸ್ಕೃತಿಯಲ್ಲಿದೆ. ಎಲ್ಲಕ್ಕಿಂತಲೂ ಮೊದಲು ನಮಗೆ ವಿದ್ಯೆ ಕಲಿಸಿರುವಂತಹ ಗುರುವಿಗೆ ನಮಿಸಬೇಕು. ಹಿಂದೂ ಧರ್ಮದಲ್ಲಿ ಗುರುವಿನ ಆರಾಧನೆಗಾಗಿಯೇ ಒಂದು ದಿನವನ್ನು ಮೀಸಲು ಇಡಲಾಗಿದೆ. ಅದು ಗುರು ಪೂರ್ಣಿಮೆ. ಹಿಂದು ಪಂಚಾಂಗದ ಪ್ರಕಾರ ಆಷಾಢ ಮಾಸ ಹುಣ್ಣೆಮೆಯಂದು ಇದನ್ನು ಆಚರಿಸಲಾಗುವುದು. ಈ ದಿನದಂದು ತಮಗೆ ವಿದ್ಯೆ ನೀಡಿದ, ಗುರುಗಳಾಗಿದ್ದ ಮತ್ತು ಮಾರ್ಗದರ್ಶಕರಾಗಿದ್ದವರನ್ನು ಪೂಜಿಸಲಾಗುತ್ತದೆ. ಇವರೆಲ್ಲರೂ ತಮ್ಮ ಜೀವನದಲ್ಲಿನ ಯಶಸ್ಸು ಹಾಗೂ ಜ್ಞಾನ ಸಂಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗುರು ಪೂರ್ಣಿಮಾದಂದು ಯೋಗ ಸಾಧನೆ ಮತ್ತು ಧ್ಯಾನ ಮಾಡಬಹುದು.

ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದು ಕೂಡ ಆಚರಣೆ ಮಾಡಲಾಗುತ್ತದೆ ಮತ್ತು ಈ ದಿನವನ್ನು ವೇದ ವ್ಯಾಸರ ಜನ್ಮ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ವೇದ ವ್ಯಾಸರು ಒಬ್ಬರು ಸನ್ಯಾಸಿಯಾಗಿದ್ದು, ಅವರು ಮಹಾಭಾರತವನ್ನು ಬರೆದರು. ಹಿಂದೂ ಧರ್ಮದಲ್ಲಿ ಶ್ರೀ ಮಧ್ವಾಚಾರ್ಯ, ಆದಿ ಶಂಕರ ಮತ್ತು ಶ್ರೀ ರಾಮಾನುಜ ಆಚಾರ್ಯ ಅವರನ್ನು ಗುರುಗಳು ಎಂದು ಪರಿಗಣಿಸಲಾಗಿದೆ. ಗೌತಮ ಬುದ್ಧನ ಅನುಯಾಯಿಗಳು ಈ ದಿನದಂದು ಆತನನ್ನು ಪೂಜೆ ಮಾಡುವರು. ಗುರು ಪೂರ್ಣಿಮೆಯಂದು ಗೌತಮ ಬುದ್ಧ ಮೊದಲ ಧರ್ಮೋದೇಶ ನೀಡಿದ ಎಂದು ನಂಬಲಾಗಿದೆ.

Guru Purnima

ಗುರು ಪೂರ್ಣಿಮೆ ಯಾವ ದಿನ ಆಚರಿಸಲಾಗುತ್ತದೆ?

ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದಲ್ಲಿ ಬರುವಂತಹ ಹುಣ್ಣಿಮೆಯಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ಬಾರಿ ಗುರು ಪೂರ್ಣಿಮೆ ಇದೇ ಬರುವ ಜುಲೈ 16 ನೇ ದಿನಾಂಕದಂದು ಆಚರಿಸಲಾಗುತ್ತದೆ.

Most Read: ಗುರು ಪೂರ್ಣಿಮೆಯ ಪೂಜೆ ಎಂದು? ಚಂದ್ರ ಗ್ರಹಣದ ದಿನ ಮಾಡಬಹುದೇ?

ಗುರು ಪೂರ್ಣಿಮೆಯ ಮಹತ್ವ

ಗುರು ಎನ್ನುವ ಪದವನ್ನು ಎರಡು ಪದಗಳಿಂದ ಮಾಡಲ್ಪಟ್ಟಿದೆ. 'ಗುರ್' ನ ಅರ್ಥ ಕತ್ತಲು ಮತ್ತು 'ರು' ನ ಅರ್ಥ ಬೆಳಕು ಎಂದು. ಯಾರಾದರೂ ನಮ್ಮನ್ನು ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ದರೆ ಅವರನ್ನು ಗುರು ಎಂದು ಹೇಳಬಹುದು. ಈ ಹಬ್ಬದ ಆಚರಣೆಯು ಇದೇ ಪದದ ಅರ್ಥದಲ್ಲಿ ಅಡಗಿದೆ.

ಭಾರತೀಯ ಸಂಸ್ಕೃತಿಯ ಪ್ರಕಾರ ಗುರು ಎನ್ನುವವರು ನಮಗೊಬ್ಬರು ಮಾರ್ಗದರ್ಶಕರು. ಅವರು ನಮ್ಮಲ್ಲಿ ಇರುವಂತಹ ಭೀತಿ ಹಾಗೂ ಅಜ್ಞಾನವನ್ನು ತೊಡೆದು ಹಾಕುವರು. ರಾಮಕೃಷ್ಣ ಪರಮಹಂಸರ ಮಾತಿನಲ್ಲಿ ಹೇಳುವುದಾದರೆ, ನಿಜವಾದ ಜ್ಞಾನದ ಬೆಳಕಿನಿಂದ ಪ್ರಕಾಶಿತನಾದವನೇ ನಿಜವಾದ ಶಿಕ್ಷಕ". ಗಂಟಲಿನ ಬಳಿಯಲ್ಲಿ ಇರುವಂತಹ ವಿಶುದ್ಧ ಚಕ್ರದಲ್ಲಿ ಗುರು ನೆಲೆಸಿರುತ್ತಾನೆ ಮತ್ತು ನಾವು ಉನ್ನತ ಮಟ್ಟವನ್ನು ತಲುಪಿದಾಗ ಅದು ಎಚ್ಚೆತ್ತುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಗುರು ಪೂರ್ಣಿಮೆಯನ್ನು ಆಚರಿಸುವಂತಹ ಉದ್ದೇಶವೆಂದರೆ ನಮಗೆ ಗುರುಗಳು ಕಲಿಸಿರುವಂತಹ ಜ್ಞಾನಕ್ಕೆ ಬದ್ಧರಾಗಿ ಅವರಿಗೆ ನಮ್ಮ ಗೌರವ ಸಲ್ಲಿಸುವುದು. ನಮ್ಮ ಜೀವನವನ್ನು ತುಂಬಾ ಮೌಲ್ಯಯುತ ಹಾಗೂ ಸುಂದರ ಜೀವನ ಸಾಗಿಸಲು ನೆರವಾದ ಗುರುಗಳಿಗೆ ಗೌರವ ಅರ್ಪಿಸಬೇಕು.

ಗುರುಪೂರ್ಣಿಮೆ ಹಬ್ಬ-ಆಚರಣೆ ಮತ್ತು ವಿಧಿಗಳು

ಗೌತಮ ಬುದ್ಧನನ್ನು ಗೌರವಿಸಲು ಬೌದ್ಧರು ಗುರು ಪೂರ್ಣಿಮೆಯನ್ನು ಆಚರಿಸಿದರು ಎಂದು ಹೇಳಲಾಗುತ್ತದೆ. ಗುರು ಪೂರ್ಣಿಮೆಯ ದಿನದಂದು ಹಿಂದುಗಳು ವೇದ ವ್ಯಾಸರಿಗೆ ಗೌರವ ಅರ್ಪಿಸುವರು. ಇದರಿಂದ ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನವು ಜ್ಞಾಣ ಮತ್ತು ಬೋಧನೆಯ ದಿನವಾಗಿರುವ ಕಾರಣದಿಂದಾಗಿ ಇದನ್ನು ಜ್ಞಾನ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಗುರು ಪೂರ್ಣಿಮೆಯಂದು ಜನರು ಸ್ನಾನ ಮಾಡಿದ ಬಳಿಕ ಹೊಸ ಬಟ್ಟೆಯನ್ನು ಧರಿಸಿ ತಮ್ಮ ಗುರುಗಳಿಗೆ ಪೂಜೆ ಸಲ್ಲಿಸಿ, ಗೌರವ ಸಲ್ಲಿಸುವರು. ಭಾರತದಲ್ಲಿ ಎಲ್ಲರು ಗುರು ಪೂರ್ಣಿಮೆಯನ್ನು ಆಚರಣೆ ಮಾಡುವರು. ತಮ್ಮ ಗುರುಗಳನ್ನು ನೆನಪಿಸುವ ವೇಳೆ ಅವರು ಈ ಶ್ಲೋಕ ಹೇಳುವರು.

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ

ಗುರು ಸಾಕ್ಷತ್ ಪರಬ್ರಹ್ಮ, ತಸ್ಮಯಿ ಶ್ರೀ ಗುರುವೇ ನಮಃ

ನಿಮ್ಮ ಗುರು ಜೀವಂತವಾಗಿ ಇಲ್ಲವಾಗಿದ್ದರೆ ಆಗ ನೀವು ಅವರ ಫೋಟೊ ಇಟ್ಟುಕೊಂಡು ಪೂಜೆ ಮಾಡಬಹುದು. ಗುರುಗಳ ನೆನೆದು ಈ ಮಂತ್ರವನ್ನು ಜಪಿಸುವುದು ತುಂಬಾ ಒಳ್ಳೆಯದು.

English summary

2019 Guru Purnima:Importance And Celebrations

Guru Purnima is popular Hindu festival celebrated on a full moon day. As per the Hindu Lunar Calendar, it falls in the Ashadha month. People choose to worship their teachers, gurus and mentors for guiding them through their childhood and formative years, and for carrying them to the light of knowledge.You can go for Yogic Sadhana and meditation on the day of Guru Purnima.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X