For Quick Alerts
ALLOW NOTIFICATIONS  
For Daily Alerts

ನವರಾತ್ರಿ 2021: ಈ 9 ದಿನ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ!

|
ನವರಾತ್ರಿ 2019: ಈ 9 ದಿನ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ! | BoldSky Kannada

ಈ ಸಾಲಿನ ನವರಾತ್ರಿ ಅಕ್ಟೋಬರ್ 7ರಿಂದ ಆರಂಭಗೊಂಡು ಅಕ್ಟೋಬರ್ 15ರವರೆಗೆ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಮಾತೆ ಪಾವರ್ತಿಯೇ ಒಂಭತ್ತು ಅವತಾರಗಳನ್ನು ತಾಳಿ ನವರಾತ್ರಿಯ ಸಮಯದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾರೆ. ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ದಮನ ಮಾಡುವ ಈ ದಿನವೇ ನವರಾತ್ರಿಯಾಗಿದೆ. ಭಾರತದ ಕೆಲವು ಕಡೆ ರಾಮನು ರಾಣವನ ಮೇಲೆ ಗೆಲುವನ್ನು ಸಾಧಿಸಿದ ದಿನವಾಗಿ ಕೂಡ ನವರಾತ್ರಿಯನ್ನು ಆಚರಿಸಲಾಗುತ್ತದೆ. ಹೀಗೆ ದೇಶಾದ್ಯಂತ ನವರಾತ್ರಿಯನ್ನು ಯಾವುದೇ ಜಾತಿ ಮಥ, ಬಡವ, ಶ್ರೀಮಂತನೆಂಬ ಬೇಧವಿಲ್ಲದೆ ಆಚರಿಸಲಾಗುತ್ತದೆ.

ನವರಾತ್ರಿ ಸಮಯದಲ್ಲಿ ಮಾತೆ ದುರ್ಗೆಯ ಒಂದೊಂದು ಅವತಾರವನ್ನು ಮಾತೆಗೆ ಅಲಂಕರಿಸಿ ಆ ರೀತಿಯಲ್ಲಿ ದೇವಿಯ ಪೂಜೆಯನ್ನು ಮಾಡುತ್ತಾರೆ. ಅಸುರರನ್ನು ಮಟ್ಟಹಾಕುವುದಕ್ಕಾಗಿ ಮಾತೆಯು ಈ ಒಂದೊಂದು ರೂಪವನ್ನು ಧರಿಸಿದ್ದರು ಎಂಬುದು ಇತಿಹಾಸಿಗಳು ತಿಳಿಸಿಕೊಡುತ್ತಿವೆ. ಹೀಗೆ ಮಾತೆಯು ಒಂದೊಂದು ಯುಗದಲ್ಲಿ ಕೂಡ ಅಸುರ ಧಮನಕ್ಕಾಗಿ ಒಂದೊಂದು ರೂಪವನ್ನು ಎತ್ತಿ ಬರುತ್ತಾರೆ ಎಂಬುದು ಪುರಾಣಗಳಲ್ಲಿ ತಿಳಿಸಿರುವ ಸಂದೇಶವಾಗಿದೆ.

ನವರಾತ್ರಿಯಂದು ಹೆಚ್ಚಿನವರು ಉಪವಾಸ ವ್ರತಗಳನ್ನು ವಾಡಿಕೆಯಾಗಿದೆ. ಈ ಸಮಯದಲ್ಲಿ ಮಾತೆಯ ಕೃಪಾಕಟಕ್ಷ ಭಕ್ತರ ಮೇಲೆ ಉತ್ತಮವಾಗಿರುವುದರಿಂದ ಮಾತೆಯನ್ನು ಖುಷಿಪಡಿಸುವ ಕೆಲಸಗಳನ್ನು ಮಾಡಬೇಕು. ಇಂದಿನ ಲೇಖನದಲ್ಲಿ ಮಾತೆಗೆ ಇಷ್ಟವಾಗದೇ ಇರುವ ಯಾವ ಕೆಲಸಗಳನ್ನು ನೀವು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ...

 ಮಾಡಬಾರದ ಕೆಲಸಗಳು

ಮಾಡಬಾರದ ಕೆಲಸಗಳು

ನವರಾತ್ರಿಯನ್ನು ಶುಭದಿನಗಳೆಂದು ಪರಿಗಣಿಸುವುದರಿಂದ ಈ ಸಮಯದಲ್ಲಿ ನೀವು ಅಶುಭ ಕೆಲಸಗಳನ್ನು ಮಾಡಬಾರದು. ಬನ್ನಿ ಅದೇನು ಎಂಬುದನ್ನು ತಿಳಿದುಕೊಳ್ಳೋಣ.

ಉಗುರು ಕತ್ತರಿಸುವುದು

ಉಗುರು ಕತ್ತರಿಸುವುದು

ಈ ದಿನ ಉಗುರುಗಳನ್ನು ಕತ್ತರಿಸುವುದು, ಇಲ್ಲವೇ ಉಗುರು ತೀಡುವುದು ಮೊದಲಾದ ಫ್ಯಾಶನ್ ಕೆಲಸಗಳನ್ನು ಮಾಡಬಾರದು.

ತಲೆಗೂದಲು ಕತ್ತರಿಸುವುದು

ತಲೆಗೂದಲು ಕತ್ತರಿಸುವುದು

ಈ ದಿನಗಳಲ್ಲಿ ನಿಮ್ಮ ಕೂದಲನ್ನು ಕತ್ತರಿಸಿಕೊಳ್ಳಬೇಡಿ. ವೃತವನ್ನು ಮಾಡುವವರು ಗಡ್ಡ ತೆಗೆಯುವುದು ಅಥವಾ ಕೂದಲು ಕತ್ತರಿಸುವುದಿಲ್ಲ. ಅಲ್ಲದೆ ಈ ಸಮಯದಲ್ಲಿ ಹೊಲಿಗೆ ಕಸೂತಿ ಹಾಕುವುದು ಬೇಡ, ಈ ದಿನಗಳಲ್ಲಿ ಕಸೂತಿ, ಹೊಲಿಗೆ ಕೆಲಸಗಳನ್ನು ಮಾಡಬೇಡಿ.

Most Read:ನವರಾತ್ರಿಗಳಲ್ಲಿ 'ನವದುರ್ಗೆ'ಯನ್ನು ಪೂಜಿಸುವ ಆ ಒಂಬತ್ತು ರೂಪಗಳು...

ಗಾಸಿಪ್ ಬೇಡ

ಗಾಸಿಪ್ ಬೇಡ

ಪರರನ್ನು ದೂಷಿಸುವುದು, ಗಾಸಿಪ್ ಮಾಡುವುದು ಇವೇ ಮೊದಲಾದ ಕೆಲಸಗಳನ್ನು ಮಾಡಬೇಡಿ.

 ಜ್ಯೋತಿಯನ್ನು ಉರಿಯುವವರೆಗೆ ಇರಿಸಬೇಡಿ

ಜ್ಯೋತಿಯನ್ನು ಉರಿಯುವವರೆಗೆ ಇರಿಸಬೇಡಿ

ಪೂಜೆ ಮಾಡಿದ ನಂತರ ಜ್ಯೋತಿಯನ್ನು ಉರಿಯುವವರೆಗೆ ಇರಿಸಬೇಡಿ. ಅಗ್ನಿಯನ್ನು ನಂದಿಸಲು ಕೆಲವೊಂದು ಹೂವು ಹಾಕಿ ಇದರಿಂದ ನಿಮ್ಮ ಪೂಜೆಯ ಅರ್ಪಣೆಯೆಂದು ಇದನ್ನು ಪರಿಗಣಿಸಲಾಗುತ್ತದೆ. ಅಖಂಡ ಜ್ಯೋತಿಯನ್ನು ನೀವು ಇರಿಸಲು ಬಯಸಿದಲ್ಲಿ ಅದಕ್ಕೆ 24/7 ಸಮಯವೂ ಪೂಜೆ ಮಾಡುತ್ತಿರಬೇಕು. ಮಖಂಡ ಜ್ಯೋತಿಯಲ್ಲಿ ಸಾಸಿವೆ ಎಣ್ಣೆ ಬಳಸಬೇಡಿ.

ಪೂಜಾ ಕೊಠಡಿಯ ಧೂಳು ಹೊಡೆಯುವುದು ಮಾಡಬೇಡಿ

ಪೂಜಾ ಕೊಠಡಿಯ ಧೂಳು ಹೊಡೆಯುವುದು ಮಾಡಬೇಡಿ

ಈ ದಿನಗಳಲ್ಲಿ ಮನೆಯ, ಪೂಜಾ ಕೊಠಡಿಯ ಧೂಳು ಹೊಡೆಯವುದು ಇವೇ ಮೊದಲಾದ ಕೆಲಸಗಳನ್ನು ಮಾಡಬೇಡಿ.

ಮನೆಯೊಳಗೆ ಶೂ, ಸ್ಲಿಪ್ಪರ್ ಧರಿಸಬೇಡಿ

ಮನೆಯೊಳಗೆ ಶೂ, ಸ್ಲಿಪ್ಪರ್ ಧರಿಸಬೇಡಿ

ಒಂಬತ್ತು ದಿನಗಳ ಕಾಲ ಶೂ, ಚಪ್ಪಲಿ ಧರಿಸಿ ಮನೆಯೊಳಗೆ ಓಡಾಡಬೇಡಿ, ಇದು ಅಮಂಗಳವಾಗಿದೆ.

ಮಾಂಸಾಹಾರ ಸೇವನೆ ಮಾಡಬೇಡಿ

ಮಾಂಸಾಹಾರ ಸೇವನೆ ಮಾಡಬೇಡಿ

ಮಾಂಸಾಹಾರ ಸೇವನೆ, ಮೊಟ್ಟೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಸೇವೆಯನ್ನು ಈ ದಿನಗಳಲ್ಲಿ ಮಾಡಬೇಡಿ. ಅಂತೆಯೇ ನೀವು ಉಪವಾಸ ಮಾಡುತ್ತಿದ್ದಲ್ಲಿ ಸೂರ್ಯಾಸ್ತದ ಒಳಗೆ ಆಹಾರ ಸೇವನೆ ಮುಗಿಸಿ.

ಕೊಳೆಯಾದ ಬಟ್ಟೆ ಧರಿಸಬೇಡಿ

ಕೊಳೆಯಾದ ಬಟ್ಟೆ ಧರಿಸಬೇಡಿ

ಈ ದಿನಗಳಲ್ಲಿ ಕೊಳೆಯಾದ ಬಟ್ಟೆಗಳನ್ನು ಧರಿಸಬೇಡಿ

ದಿನದ ಸಮಯದಲ್ಲಿ ಮಲಗುವುದು ಟಿವಿ ನೋಡುವುದು ಮಾಡಬೇಡಿ

ದಿನದ ಸಮಯದಲ್ಲಿ ಮಲಗುವುದು ಟಿವಿ ನೋಡುವುದು ಮಾಡಬೇಡಿ

ಹಗಲು ಹೊತ್ತಿನಲ್ಲಿ ಮಲಗುವುದು ಅಥವಾ ಟಿವಿ ನೋಡುವುದನ್ನು ಮಾಡಬೇಡಿ. ಇದರಿಂದ ಋಣಾತ್ಮಕ ಅಂಶ ಬೀರಬಲ್ಲುದು. ಅಲ್ಲದೆ ಈ ದಿನಗಳಲ್ಲಿ ಯಾವುದೇ ದೈಹಿಕ ಕಾಮನೆಗಳನ್ನು ಇಟ್ಟುಕೊಳ್ಳಬೇಡಿ.

Most Read:ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಗಾಗಿ 'ಶಕ್ತಿಯುತ' ಮಂತ್ರಗಳು

ಸೇವನೆ

ಸೇವನೆ

ನಿಮ್ಮ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡಬೇಡಿ. 75% ಹಸಿವೆಯಲ್ಲಿ ನೀವು ಇರಬೇಕು. ಕಹಿ, ಹುಳಿ ಅಥವಾ ಮಾಂಸಹಾರವನ್ನು ಸೇವಿಸಬೇಡಿ. ಆದಷ್ಟು ಫಾಸ್ಟ್ ಫುಡ್‌ಗಳನ್ನು ದೂರವಿರಿಸಿ.

ಹೀಗಿದ್ದ ಸಂದರ್ಭದಲ್ಲಿ ಕಲಶ ಸ್ಥಾಪನೆ ಮಾಡಬೇಡಿ

ಹೀಗಿದ್ದ ಸಂದರ್ಭದಲ್ಲಿ ಕಲಶ ಸ್ಥಾಪನೆ ಮಾಡಬೇಡಿ

ನೀವು ಮನೆಯನ್ನು ಬಿಡುವ ಸಂದರ್ಭದಲ್ಲಿ ಅಥವಾ ನಿಮ್ಮ ಸ್ಥಳವನ್ನು ಬದಲಾಯಿಸುವ ಸಮಯದಲ್ಲಿ ಕಲಶ ಸ್ಥಾಪನೆ ಮಾಡಬೇಡಿ. ಇನ್ನು ನವರಾತ್ರಿ ಸಮಯದಲ್ಲಿ ಕಾಳು,ಉಪ್ಪು,ಖಾರದ ಆಹಾರಗಳನ್ನು ಈ ದಿನಗಳಲ್ಲಿ ಸೇವಿಸಬಾರದು.

English summary

mistakes you should never commit during Navratri

Navratri is just around the corner and there is a festive whiff in the air --- Navratri is a major Hindu festival celebrated through most of India and marks the arrival of the Goddess Durga, through different avataars in our homes. Durga, who is also known as Kali and Shakti represents female power and emancipation. While most of us know what to do during Navratri, there are few things that you absolutely must not do! Read on..
X
Desktop Bottom Promotion