For Quick Alerts
ALLOW NOTIFICATIONS  
For Daily Alerts

ಕಾಮಕ್ಯ ದೇವಿ ಮುಟ್ಟಾದರೆ ಬ್ರಹ್ಮಪುತ್ರಾ ಕೆಂಪಾಗುವುದು!

|

ಶಕ್ತಿ ಪೀಠವೆಂದು ಗುರುತಿಸಲಾಗಿರುವ ಕಾಮಕ್ಯ ದೇವಾಲಯ ಗೌಹಾಟಿಯಲ್ಲಿದೆ. ಈ ದೇವಾಲಯದ ವಿಶೇಷವೆಂದರೆ ಕಾಮಕ್ಯ ದೇವಿ ರಕ್ತಸ್ರಾವ ದೇವತೆ ಎಂದು ಪ್ರಸಿದ್ಧಿಯಾಗಿದ್ದಾಳೆ! ಈ ದೇವಾಲಯವೂ ನೀಲಾಚಲಾ ಗಿರಿಯಲ್ಲಿದೆ. ಗೌಹಾಟಿ ರೈಲ್ವೆ ನಿಲ್ದಾಣದಿಂದ 8 ಕಿ. ಮೀ ದೂರದಲ್ಲಿದೆ. ಇಲ್ಲಿ ದೇವಿಯ ಹತ್ತು ರೂಪಗಳ ಮೂರ್ತಿಗಳನ್ನು ಕಾಣಬಹುದು.

ರಕ್ತ ಪೀಠ ದೇವಾಲಯದ ಉಗಮದ ಕತೆ
ಈ ಕಾಮಕ್ಯ ದೇವಾಲಯದ ಉಗಮದ ಕತೆ ತುಂಬಾ ಆಸಕ್ತಿಕರವಾಗಿದೆ. ಇಲ್ಲಿ 108 ಶಕ್ತಿ ಪೀಠಗಳಿವೆ. ಈ ಶಕ್ತಿ ಪೀಠಗಳ ಬಗ್ಗೆ ಹೇಳುವ ಕತೆಯೆಂದರೆ ಪಾರ್ವತಿ ತನ್ನ ಗಂಡನಾದ ಶಿವನನ್ನು ತನ್ನ ತಂದೆ ನಡೆಸುತ್ತಿರುವ ಯಾಗಕ್ಕೆ ಹೋಗಲು ಹೇಳುತ್ತಾಳೆ. ಶಿವ ಹೋಗಲ್ಲ ಎಂದಾಗಒತ್ತಾಯ ಮಾಡಿ ಶಿವನನ್ನು ಅಲ್ಲಿಗೆ ಹೋಗುವಂತೆ ಮಾಡುತ್ತಾಳೆ. ಯಾಗಕ್ಕೆ ಬಂದ ಶಿವನನ್ನು ಸತಿಯ ತಂದೆ ಅವಮಾನಿಸುತ್ತಾನೆ. ಇದರಿಂದ ಬೇಜಾರುಗೊಂಡ ಸತಿ ಬೆಂಕಿಗೆ ಹಾರಿ ಪ್ರಾಣ ಬಿಡುತ್ತಾಳೆ. ಶಿವನಿಗೆ ಪತ್ನಿ ತೀರಿಹೋದ ಸುದ್ದಿ ಕೇಳಿ ತುಂಬಾ ಆಘಾತವಾಗುತ್ತದೆ.

 Kamakhya Temple: Story Of A Bleeding Devi

ಪತ್ನಿಯ ಸಾವಿನಿಂದ ಕೋಪಗೊಂಡ ಶಿವ ಪಾರ್ವತಿಯ ಶವವನ್ನು ಎತ್ತಿಕೊಂಡು ತಾಂಡವ ನೃತ್ಯ ಪ್ರಾರಂಭಿಸುತ್ತಾನೆ. ಇದನ್ನು ನೋಡಿದ ವಿಷ್ಣು, ಶಿವನ ನೃತ್ಯದಿಂದ ಎಲ್ಲವೂ ಸರ್ವನಾಶವಾಗುತ್ತದೆ ಎಂದು ತಿಳಿದು ತನ್ನ ಸುದರ್ಶನ ಚಕ್ರ ಬಿಟ್ಟು ಸತಿಯ ಶರೀರ ಕತ್ತರಿಸುತ್ತಾನೆ. ಸತಿಯ ದೇಹ ನೂರೆಂಟು ತುಂಡುಗಳಾಗಿ ಬೀಳುತ್ತದೆ. ಅವುಗಳೇ ಶಕ್ತಿ ಪೀಠಗಳಾದವು.

ಕಾಮಕ್ಯ ಹೆಸರು ಹೇಗೆ ಬಂತು?
ಕಾಮದೇವ ತನ್ನ ಪುರುಷತ್ವವನ್ನು ಶಾಪದಿಂದಾಗಿ ಕಳೆದುಕೊಂಡನು. ಸತಿಯ ದೇಹದ ಭಾಗ ಕಂಡು ಹಿಡಿದರೆ ಅವನು ಆ ಶಾಪದಿಂದ ಮುಕ್ತನಾಗಬಹುದಿತ್ತು. ಸತಿಯ ದೇಹದ ಭಾಗವನ್ನು ಹುಡುಕಿಕೊಂಡು ಬಂದ ಕಾಮದೇವನಿಗೆ ಸತಿಯ ದೇಹದ ಗರ್ಭಕೋಶ ಈ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಅಲ್ಲಿಂದ ಈ ಸ್ಥಳವನ್ನು ಕಾಮಕ್ಯ, ದೇವಿಯನ್ನು ಕಾಮಕ್ಯ ದೇವಿಯೆಂದು ಎಂದು ಕರೆಯಲಾಯಿತು.

ರಕ್ತಸ್ರಾವದ ದೇವಿ
ದೇವಿಯ ಗರ್ಭಕೋಶ ಹಾಗೂ ಜನನೇಂದ್ರೀಯ ಈ ಭಾಗದಲ್ಲಿ ಬಿದ್ದ ಕಾರಣ ಪ್ರತೀ ವರ್ಷ ಆಷಾಡ ತಿಂಗಳಿನಲ್ಲಿ ದೇವಿ ಮುಟ್ಟಾಗುತ್ತಾಳೆ. ಕಾಮಕ್ಯ ದೇಗುಲದ ಹತ್ತಿರದ ಆಗ ಬ್ರಹ್ಮ ಪುತ್ರಾ ನದಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆಗ ದೇವಾಲಯವನ್ನು 3 ದಿನಗಳವರೆಗೆ ಮುಚ್ಚಲಾಗುತ್ತದೆ. 3 ದಿನಗಳ ಬಳಿಕ ಭಕ್ತರಿಗೆ ತೀರ್ಥ ನೀರನ್ನು ಕೊಡಲಾಗುವುದು.

ನದಿ ಏಕೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಅನ್ನುವುದು ವೈಜ್ಞಾನಿಕವಾಗಿ ಇದುವರೆಗೆ ಸಾಬೀತಾಗಿಲ್ಲ.

English summary

Kamakhya Temple: Story Of A Bleeding Devi | ಕಾಮಕ್ಯ ದೇವಿ: ರಕ್ತಸ್ರಾವ ದೇವಿಯ ಕತೆ

Kamakhya devi is famous as the bleeding goddess. The mythical womb and vagina of Shakti are supposedly installed in the 'Garvagriha' or sanctum of the temple. In the month of Ashaad (June), the goddess bleeds or menstruates.
X
Desktop Bottom Promotion