For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುವುದು ಹೇಗೆ?

By Viswanath S
|

ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿ ಪೂಜೆ ಅಥವ ವರಮಹಾಲಕ್ಷ್ಮಿ ವ್ರತವನ್ನು ತಮ್ಮ ಕುಟುಂಬಗಳ ಏಳಿಗೆಗೆ ಮತ್ತು ಯೋಗ ಕ್ಷೇಮಕ್ಕೆ ಮಾಡುವ ಅಥವ ಆಚರಿಸುವ ಒಂದು ಪ್ರಮುಖ ಪೂಜಾ ಕಾರ್ಯಕ್ರಮ.

ಪ್ರಸ್ತುತ ವರ್ಷದಲ್ಲಿ ವರಲಕ್ಷ್ಮಿ ವ್ರತ ಆಗಸ್ಟ್ 8ರಂದು ಬರುತ್ತದೆ. ವರಮಹಾಲಕ್ಷ್ಮಿ ಪೂಜೆಯು ಆಗಸ್ಟ್ ತಿಂಗಳಿನ ಒಂದು ಶುಕ್ರವಾರ ಬರುತ್ತದೆ ಮತ್ತು ಪೂಜೆಯ ತಯಾರಿಯನ್ನು ಹಿಂದಿನ ದಿನ ಗುರುವಾರವೇ ಆರಂಭವಾಗುತ್ತದೆ. ಪೂಜೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಗುರುವಾರ ಸಂಜೆಯೇ ಸಂಗ್ರಹಿಸಲಾಗುತ್ತದೆ.

How to perform Varamahalakshmi Puja?

ಶುಕ್ರವಾರದ ದಿವಸ ಮುಂಜಾನೆ ಬೇಗನೆ ಎದ್ದು ಮಹಿಳೆಯರು ಸ್ನಾನಮಾಡುತ್ತಾರೆ. ಸಾಂಪ್ರದಾಯಿಕವಾಗಿ ಪೂಜೆಯ ದಿವಸ ಮುಂಜಾನೆ ಏಳುವ ಸಮಯಕ್ಕೆ ಬ್ರಾಹ್ಮೀ ಮುಹೂರ್ತವೆಂದು ಹೇಳುತ್ತಾರೆ. ಆ ನಂತರ ಪೂಜೆಗೆ ಗೊತ್ತುಪಡಿಸಿದ ಸ್ಥಳ ಮತ್ತು ಮನೆಯೆಲ್ಲವನ್ನೂ ಶುಚಿಗೊಳಿಸಿ ಒಂದು ಸುಂದರವಾದ ರಂಗೋಲಿ ಅಥವ "ಕೋಲಂ" ಪೂಜೆ ಮಾಡುವ ಉದ್ದೇಶಿತ ಸ್ಥಳದಲ್ಲಿ ಚಿತ್ರಿಸುತ್ತಾರೆ.

ಇದಾದ ಮೇಲೆ ಮುಂದಿನ ಹೆಜ್ಜೆಯೆಂದರೆ "ಕಳಶ" ಸ್ಥಾಪನೆ. ಒಂದು ಕಂಚಿನ ಅಥವ ಬೆಳ್ಳಿ ಚೊಂಬು ತೆಗೆದುಕೊಂಡು ಚೆನ್ನಾಗಿ ಶುಚಿಗೊಳಿಸಿ ಆ ಚೊಂಬಿನ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬರೆದು ಶ್ರೀಗಂಧದ ಲೇಪನ ಮಾಡುತ್ತಾರೆ. ಕಳಶದ ಚೊಂಬಿನಲ್ಲಿ ಅಕ್ಕಿ ಅಥವ ನೀರು, ನಾಣ್ಯಗಳು, ಒಂದು ನಿಂಬೆಹಣ್ಣು, ಐದು ವೀಳ್ಯದ ಎಲೆಗಳು ಮತ್ತು ಅಡಿಕೆಯನ್ನು ಹಾಕಿ ತುಂಬಿಸುತ್ತಾರೆ.

ಈ ರೀತಿಯ ಚೊಂಬಿನಲ್ಲಿ ತುಂಬುವ ಸಂಪ್ರದಾಯವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಮತ್ತು ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಣ್ಣದ ಬಳೆಗಳು ಮತ್ತು ಕಪ್ಪು ಬಣ್ಣದ ಮಣಿಗಳನ್ನು ಚೊಂಬಿನ ಪಕ್ಕದಲ್ಲಿ ಜೋಡಿಸುತ್ತಾರೆ.

ಕೆಲವು ಪ್ರದೇಶಗಳಲ್ಲಿ ಚೊಂಬಿನ ಸುತ್ತಲೂ ಒಂದು ಬಟ್ಟೆಯನ್ನು ಕಟ್ಟಿ ಚೊಂಬಿನ ಬಾಯಿಯಲ್ಲಿ ಮಾವಿನೆಲೆಯನ್ನು ಇಟ್ಟು ನಿಲ್ಲಿಸುತ್ತಾರೆ. ಕೊನೆಯಲ್ಲಿ ಒಂದು ತೆಂಗಿನಕಾಯನ್ನು ಶುದ್ಧೀಕರಿಸಿ, ಅದರ ಮೇಲೆ ಅರಶಿನವನ್ನು ಬಳಿದು ತೆಂಗಿನಕಾಯಿಯ ಜುಟ್ಟು ಮೇಲೆ ಬರುವ ಹಾಗೆ ಚೊಂಬಿನ ಮೇಲೆ ಕೂಡಿಸುತ್ತಾರೆ.

ಈ ತೆಂಗಿನಕಾಯಿಗೆ ಲಕ್ಷ್ಮಿ ದೇವಿಯ ಮುಖವಾಡವನ್ನು ಕಟ್ಟುತ್ತಾರೆ, ಅಥವ ಮುಖವಾಡದ ಬದಲು ಅರಿಶಿನದಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಬಿಡಿಸುತ್ತಾರೆ. ಈ ರೀತಿ ಮಾಡುವುದರಿಂದ ಕಳಶವು ಲಕ್ಷ್ಮಿ ದೇವಿಯನ್ನು ಸಾಂಕೇತಿವಾಗಿ ಪ್ರತಿನಿಧಿಸುತ್ತದೆ.

ಕ್ಯಾರೆಟ್ ಪಾಯಸ- ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಪೆಷಲ್

ಕೆಲವು ಪ್ರದೇಶಗಳಲ್ಲಿ ಕಳಶದ ಹಿಂದೆ ಒಂದು ಕನ್ನಡಿ ಇಡುವ ಪದ್ಧತಿಯಿದೆ. ಈಗಂತೂ ಮಾರುಕಟ್ಟೆಯಲ್ಲಿ ವಿಶೇಷವಾಗಿ ತಯಾರಿಸಿದ ಲಕ್ಷ್ಮಿ ದೇವಿ ಲಭ್ಯವಿರುವ ಚೊಂಬುಗಳು ದೊರಕುತ್ತವೆ. ಕಳಶವನ್ನು ಸಾಮಾನ್ಯವಾಗಿ ಒಂದು ಅಕ್ಕಿಯ ಪೀಠದ ಮೇಲೆ ಇರಿಸುತ್ತಾರೆ. ಪೂಜೆ ಮಾಡುವಾಗ ಮೊದಲು ಗಣೇಶನನ್ನು ಪೂಜೆ ಮಾಡಲಾಗುತ್ತದೆ.

ತದನಂತರ ವರಮಹಾಲಕ್ಷ್ಮಿ ದೇವಿಯ ಪೂಜೆ ಆರಂಭವಾಗುತ್ತದೆ. ಪೂಜೆಯಲ್ಲಿ ಲಕ್ಷ್ಮಿ ದೇವಿಯ ಶ್ಲೋಕಗಳನ್ನು ಹೇಳುವುದರ ಮೂಲಕ ಮತ್ತು ಲಕ್ಷ್ಮಿ ಸಹಸ್ರನಾಮಗಳನ್ನು ಸ್ಫಟಿಸುವುದು ಕೂಡಿರುತ್ತವೆ. ಕಳಶಕ್ಕೆ ಆರತಿಯನ್ನು ಮಾಡುತ್ತಾರೆ. ವಿವಿಧ ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಕೆಲವರು ಪೊಂಗಲ್ ಅರ್ಪಿಸುತ್ತಾರೆ. ಕೆಲವೆಡೆ ಪೂಜೆ ಮಾಡಿದ ಮಹಿಳೆಯರು ತಮ್ಮ ಕೈ ಮಣಿಕಟ್ಟಿನಸುತ್ತಲು ಹಳದಿದಾರವನ್ನು ಕಟ್ಟಿಕೊಳ್ಳುತ್ತಾರೆ.

ವರಮಹಾಲಕ್ಷ್ಮಿ ಮಾಡುವ ಮಹಿಳೆಯು ಕೆಲವು ವಿಧದ ಆಹಾರಗಳನ್ನು ವರ್ಜಿಸುತ್ತಾರೆ. ಈ ಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಕೆಲವು ಪ್ರದೇಶಗಳಲ್ಲಿ ಪೂಜೆ ಮಾಡುವ ಮಹಿಳೆಯರು ಪೂಜೆ ಮುಗಿಸುವವರೆಗೆ ಉಪವಾಸದಲ್ಲಿರುತ್ತಾರೆ. ಸುತ್ತಮುತ್ತಲಿನ ಮನೆಗಳಲ್ಲಿರುವ ಮಹಿಳೆಯರನ್ನು ಆಹ್ವಾನಿಸಿ ಅವರಿಗೆ ವಿಳ್ಯದ ಎಲೆ, ಅಡಿಕೆ ಮತ್ತು ಸುಣ್ಣದ ತಾಂಬೂಲವನ್ನು ಕೊಡುತ್ತಾರೆ. ಹಾಗೂ ಸಾಯಂಕಾಲ ಲಕ್ಷ್ಮಿ ಕಳಶಕ್ಕೆ ಆರತಿಯನ್ನು ಮಾಡುತ್ತಾರೆ.

ವರಮಹಾಲಕ್ಷ್ಮೀ ವ್ರತದ ಆಚರಣೆ ಹೇಗೆ?

ಮರುದಿನ, ಅಂದರೆ ಶನಿವಾರ, ಸ್ನಾನಮಾಡಿದ ನಂತರ ಕಳಶವನ್ನು ತೆರೆದು ಎಲ್ಲವನ್ನು ಬಿಚ್ಚಿ, ಅದರಲ್ಲಿ ಇಟ್ಟಿದ್ದ ನೀರನ್ನು ಮನೆಯ ಎಲ್ಲಾ ಪ್ರದೇಶದಲ್ಲಿ ಚಿಮುಕಿಸುತ್ತಾರೆ. ನೀರಿನ ಬದಲು ಅಕ್ಕಿಯನ್ನಿಟ್ಟಿದ್ದರೆ, ಅದರಲ್ಲಿ ಅನ್ನ ಮಾಡಿ ಆ ಅನ್ನವನ್ನು ಊಟಕ್ಕೆ ತಯಾರಿಸಿದ ಅನ್ನದ ಜೊತೆ ಬೆರಸುತ್ತಾರೆ. ವರಮಹಾಲಕ್ಷ್ಮಿ ಪೂಜೆಯನ್ನು ಮಾಡಲು ಅಂಥಹ ಕಟ್ಟು ನಿಟ್ಟದ ನಿಯಮಗಳೇನಿಲ್ಲ ಮತ್ತು ಸರಳವಾಗಿಯೂ ಮಾಡಬಹುದು. ಭಕ್ತಿಯಿಂದ ಸರಳವಾಗಿ ಪ್ರಾರ್ಥನೆಸಲ್ಲಿಸಿದರೂ ಸಹ ಲಕ್ಷ್ಮಿದೇವಿಯನ್ನು ಮೆಚ್ಚಿಸಬಹುದು.

English summary

How to perform Varamahalakshmi Puja?

Varalakshmi Puja or Varalakshmi Vratham is an important ritual observed by married women in South India and Maharashtra for the prosperity and welfare of their families.
Story first published: Thursday, August 7, 2014, 17:19 [IST]
X
Desktop Bottom Promotion