For Quick Alerts
ALLOW NOTIFICATIONS  
For Daily Alerts

ಈ ಶ್ವಾನಗಳು ಮನೆಯಲ್ಲಿದ್ದರೆ ಕಾವಲುಗಾರ ಬೇಕಾಗಿಲ್ಲ

|

ಕೆಲವರಿಗೆ ಮೈ ತುಂಬಾ ರೋಮವಿರುವ, ಮುದ್ದಾದ ನಾಯಿಗಳನ್ನು ಕಂಡರೆ ಬಲು ಪ್ರೀತಿ. ಮತ್ತೆ ಕೆಲವರಿಗೆ ನೋಡಲು ಮುದ್ದಾಗಿ ಕಾಣುವ ನಾಯಿಗಿಂತ ಸ್ವಲ್ಪ ದರ್ಪವಿರುವ ನಾಯಿ ತುಂಬಾ ಇಷ್ಟವಾಗುವುದು.

ಮನೆಯಲ್ಲಿ ಒಳ್ಳೆಯ ಬುದ್ಧಿ ಇರುವ, ದರ್ಪದ ನಾಯಿಯಿದ್ದರೆ ಸಾಕು ಯಾವ ಕಾವಲುಗಾರನ ಅವಶ್ಯಕತೆ ಬೀಳುವುದಿಲ್ಲ. ಅಲ್ಲದೆ ಈ ನಾಯಿಗಳಿಗೆ ಮೈ ತುಂಬಾ ರೋಮವಿರುವ ನಾಯಿಗಳಿಗೆ ಬೇಕಾದಷ್ಟು ಆರೈಕೆ ಕೂಡ ಬೇಕಾಗಿಲ್ಲ. ಅದನ್ನಾದರೆ ಅದರ ಕೂದಲನ್ನು ದಿನಾ ಬಾಚಿ ಕೊಡಬೇಕು, ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರವಹಿಸಬೇಕು. ಇದರ ಕೂದಲನ್ನು ಒಂದು ದಿನ ಬಾಚದಿದ್ದರೂ ಗಂಟು ಬೀಳುವುದಿಲ್ಲ.

ನಿಮ್ಮ ಮನೆಗೆ ಒಬ್ಬ ನಿಯತ್ತಿನ ಕಾವಲುಗಾರನಾಗಿ, ಮನೆಯ ಸದಸ್ಯನಂತೆ ಬಾಳುವ ಬುದ್ಧಿವಂತ ನಾಯಿಯ ಹುಡುಕಾಟದಲ್ಲಿದ್ದರೆ ಈ ನಾಯಿಗಳಲ್ಲಿ ಒಂದನ್ನು ನಿಮ್ಮ ಮನೆಯ ಸದಸ್ಯನಾಗಿ ಆಯ್ಕೆ ಮಾಡುವುದು ಒಳ್ಳೆಯದು:

 Rottweiler

Rottweiler

ಈ ಜಾತಿಯ ಒಂದು ಹೆಣ್ಣು, ಒಂದು ಗಂಡು ನಾಯಿಯನ್ನು ಸಾಕಿ ನೋಡಿ, ಇವು ನಿಮಗೆ ಒಳ್ಳೆಯ ಕಂಪನಿ ನೀಡುವುದಲ್ಲದೆ, ಇವುಗಳನ್ನು ಮನೆ ರಕ್ಷಣೆಗೆ ಬಿಟ್ಟು ನೀವು ನೆಮ್ಮದಿಯಾಗಿ ಇರಬಹುದು.

 Mastiff

Mastiff

ಈ ನಾಯಿ ಕೂಡ ತುಂಬಾ ನಿಯತ್ತಿನ ಕಾವಲುಗಾರನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Boxer

Boxer

ಈ ನಾಯಿ ನೋಡುವುದಕ್ಕೆ ದೊಡ್ಡ ಗಾತ್ರದಲ್ಲಿದ್ದರೂ ತುಂಬಾ ಮೃದುವಾದ, ಸ್ನೇಹ ಸ್ವಭಾವದ ನಾಯಿಯಾಗಿದೆ.

German Shepherd

German Shepherd

ಇದು ಅತ್ಯಂತ ಬುದ್ಧಿವಂತಾದ ನಾಯಿಯಾಗಿದೆ. ಒಂಟಿಯಾಗಿ ಇರುವವರು ಈ ನಾಯಿ ಸಾಕಿದರೆ ಒಂಟಿತನ ಕಾಡುವುದೇ ಇಲ್ಲ.

 Doberman

Doberman

ಡೋಬರ್ ಮೆನ್ ಕೂಡ ಗಾತ್ರ ಮತ್ತು ಎತ್ತರ ನೋಡಿದರೆ ಆ ನಾಯಿಯಿರುವ ಮನೆಗೆ ಹೋಗಲು ಅಪರಿಚಿತರಿಗೆ ಧೈರ್ಯ ಬರುವುದಿಲ್ಲ. ಈ ನಾಯಿಗೆ ಚೆನ್ನಾಗಿ ಅಭ್ಯಾಸ ಮಾಡಿಸಿದರೆ ನೀವು ಹೇಳಿದಂತೆ ಕೇಳಿಕೊಂಡು ನಿಮ್ಮ ಜೊತೆ ಇರುತ್ತದೆ.

Labrador Retriever

Labrador Retriever

ಈ ನಾಯಿ ನೋಡಲು ದರ್ಪವಾಗಿ ಕಂಡು ಬಂದರು ಮೃದು ಸ್ವಭಾವದ ನಾಯಿಯಾಗಿದೆ. ಈ ನಾಯಿ ತುಂಬಾ ಬುದ್ಧಿವಂತಿಕೆಯನ್ನು ಹೊಂದಿದ್ದು ತನ್ನ ಯಜಮಾನನನ್ನು ತುಂಬಾ ಹಚ್ಚಿಕೊಳ್ಳುತ್ತದೆ.

Greyhound

Greyhound

ಇದು ಅತ್ಯಂತ ಬುದ್ಧಿವಿರುವ ನಾಯಿಯಾಗಿದೆ. ಬೇರೆ ನಾಯಿಯನ್ನು ಮನೆಯಲ್ಲಿ ಬಿಟ್ಟು ಹೋದರೆ ಮನೆಯಲ್ಲಿ ಇರುವ ವಸ್ತುಗಳನ್ನು ಕಚ್ಚಿ ತುಂಡು ಮಾಡುವುದು, ವಸ್ತುಗಳನ್ನು ಬೇರೆ ಕಡೆ ಇಡುವುದು ಈ ರೀತಿ ಯಾವುದೇ ತುಂಟಾಟ ಮಾಡುವುದಿಲ್ಲ. ಅದರ ಬುದ್ಧಿವಂತಿಕೆ ನೋಡಿ ನೀವು ಅದನ್ನು ತುಂಬಾ ಹಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

Siberian Husky

Siberian Husky

ಈ ನಾಯಿ ತುಂಬಾ ರೋಮಗಳನ್ನು ಹೊಂದಿರುವುದರಿಂದ ನೋಡಲು ಆಕರ್ಷಕವಾಗಿ ಕಾಣುವುದು. ತುಂಬಾ ತಂಪಾದ ಪ್ರದೇಶದಲ್ಲಿ ನಾಯಿ ಸಾಕುವುದಾದರೆ ಈ ನಾಯಿ ಬೆಸ್ಟ್.

Bull Dog

Bull Dog

ಇದು ಗುಂಡು-ಗುಂಡಾಗಿರುವ ಶಕ್ತಿಶಾಲಿಯಾದ ನಾಯಿಯಾಗಿದೆ. ಈ ನಾಯಿ ಕೂಡ ಮನೆಯನ್ನು ಕಾಯುವಲ್ಲಿ ಎತ್ತಿದ ಕೈ. ಇದಕ್ಕೆ ಬುದ್ಧಿ ಕಲಿಸುವುದು ಕೂಡ ತುಂಬಾ ಸುಲಭ.

Read more about: ನಾಯಿ ಮನೆ dog home
English summary

Active Dog Breeds For You | ಚಟುವಟಿಕೆಯಿಂದ ಕೂಡಿದ ದರ್ಪದ ಶ್ವಾನಗಳಿವು

If you are searching for dog breeds that are large. Secondly, active you can choose from this list. Here are some dog breeds that are ideal to have.
X
Desktop Bottom Promotion