For Quick Alerts
ALLOW NOTIFICATIONS  
For Daily Alerts

ನಾಯಿಗೆಅಂದದ ರೋಮಕ್ಕಾಗಿ ಬೇಕು ನಿಮ್ಮ ಆರೈಕೆ

|
Tips To Control Hair Shedding Of Dog
ದಷ್ಟಪುಷ್ಟವಾದ, ಮೈಯೆಲ್ಲಾ ರೋಮವಿರುವ ಆರೋಗ್ಯವಂತ ನಾಯಿ ಮನೆಯಲ್ಲಿದ್ದರೆ ಅಪರೂಪಕ್ಕೆ ಮನೆಗೆ ಬರುವವರಿಗೆ ಮತ್ತು ಅಪರಿಚಿತರಿಗೆ ಆ ನಾಯಿಯನ್ನು ನೋಡಿದಾಗ ಭಯ ಮತ್ತು ಖುಷಿಯಾಗುತ್ತದೆ. ಮನೆಯವರಿಗೆ ಅದನ್ನು ನೋಡುವಾಗ ಹೆಮ್ಮೆ ಅನಿಸುತ್ತದೆ. ಆದರೆ ನಾಯಿಗೆ ರೋಮ ಉದುರುವ ಸಮಸ್ಯೆ ಕಾಣಿಸಿಕೊಂಡರೆ ರೋಮ ಉದುರಿ ಅದರ ಸೌಂದರ್ಯ ಕಡಿಮೆಯಾಗುವುದು ಅಲ್ಲದೆ ಆ ರೋಮ ನಾಯಿ ಓಡಾಡಿದ ಕಡೆಯೆಲ್ಲಾ ಬೀಳುವುದರಿಂದ ಮನೆ ಸ್ವಚ್ಛವಾಗಿ ಕಾಣುವುದಿಲ್ಲ, ಅಲ್ಲದೆ ಮನೆಯಲ್ಲಿ ಯಾರಿಗಾದರೂ ಅಸ್ತಮಾ ಇದ್ದರೆ ಕಾಯಿಲೆ ಹೆಚ್ಚಾಗುವುದು.

ಆದ್ದರಿಂದ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ನಾಯಿ ರೋಮ ಉದುರುವುದನ್ನು ತಡೆಗಟ್ಟಬಹುದು.

1. ದಿನವೂ ರೋಮವನ್ನು ಬಾಚಬೇಕು. ನಮ್ಮ ತಲೆಯನ್ನು ದಿನಾ ಬಾಚಿ ಕೂದಲ ಆರೈಕೆ ಮಾಡುವಂತೆ ನಾಯಿ ರೋಮ ಬಾಚಿ ಆರೈಕೆ ಮಾಡಬೇಕು. ಹೀಗೆ ಮಾಡಿದರೆ ನಾಯಿಯ ರೋಮದ ಪೋಷಣೆಯಾಗಿ ರೋಮ ಉದುರುವುದು ಕಡಿಮೆಯಾಗುವುದು.

2. ಸ್ಪ್ರೇ ಮಾಡುವುದು: ನಾಯಿಯ ರೋಮವನ್ನು ಬಾಚಿದಾಗ ನೇರವಾಗಿ ನಿಲ್ಲುವುದು, ಇದರಿಂದ ಕೂದಲು ಬಾಚಿದಾಗ ಮತ್ತಷ್ಟು ಉದುರುವುದು. ಇದನ್ನು ತಡೆಯಲು ಆಂಟಿ ಸ್ಟೇಟಿಕ್ ಸ್ಪ್ರೇಯನ್ನು ರೋಮ ಬಾಚುವುದರ ಮೊದಲು ಹಾಕಿ ನಂತರ ಬಾಚಬೇಕು.

3. ರೋಮದ ಗಂಟು ತೆಗೆಯುವುದು: ತುಂಬಾ ರೋಮವಿದ್ದರೆ ಅದು ಗಂಟಾಗುತ್ತದೆ. ಅದನ್ನು ಹಾಗೇ ಬಾಚಿದರೆ ರೋಮ ಮತ್ತಷ್ಟು ಉದುರುವುದು ಅಲ್ಲದೆ ನಾಯಿಗೂ ಕೂಡ ನೋವಾಗುತ್ತದೆ. ಆದ್ದರಿಂದ ಹಾಗೇ ಗಂಟಾಗಿದ್ದರೆ ಮೊದಲು ಕೈಯಿಂದಲೇ ಗಂಟು ಬಿಚ್ಚಿ ನಂತರ ಬಾಚಬೇಕು. ರೋಮವನ್ನು ನಾಯಿ ಮಲುಗುವ ಜಾಗದಲ್ಲಿ ಬಾಚಬೇಡಿ.

4. ರಬ್ಬರ್ ಗ್ರೋಮಿಂಗ್ ಮಿಟ್ಟ್ ಬಳಕೆ:
ಮೊದಲು ರೋಮವನ್ನು ಬಾಚಿ ನಂತರ ಇದನ್ನು ಬಳಸಿದರೆ ದುರ್ಬಲ ರೋಮಗಳು ಇದರಲ್ಲಿ ಬರುತ್ತದೆ. ಹೀಗೆ ಮಾಡುವುದರಿಂದ ಉಳಿದ ರೋಮಗಳಿಗೆ ಮಸಾಜ್ ಮಾಡಿದಂತೆ ಆಗುವುದು. ಉದುರುವಂತಹ ರೋಮಗಳು ಇದರಲ್ಲಿ ಬರುವುದರಿಂದ ನಾಯಿ ಓಡಾಡಿದ ಕಡೆ ಕೂದಲು ಉದುರುವುದಿಲ್ಲ.

5. ಶ್ಯಾಂಪೂ: ನಾಯಿಯನ್ನು ತೊಳೆಯುವಾಗ ರೋಮ ಮತ್ತು ಚರ್ಮವನ್ನು ಮಾಯಿಶ್ಚರೈಸರ್ ಮಾಡುವಂತಹ ಶ್ಯಾಂಪೂ ಬಳಸಬೇಕು. ರೋಮವನ್ನು ಒಣಗಿಸುವಂತಹ ಶ್ಯಾಂಪೂ ಬಳಸಿದರೆ ರೋಮ ಉದುರುವುದು ಹೆಚ್ಚಾಗುವುದು.

ಕೆಲವೊಮ್ಮೆ ಕಾಯಿಲೆಗಳು ಬಂದಾಗ ತುಂಬಾ ರೋಮ ಉದುರುತ್ತದೆ, ಆಗ ಪಶುವೈದ್ಯರಿಗೆ ತೋರಿಸಿ ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು.

English summary

Tips To Control Hair Shedding Of Dog | Tips For Pet Care | ನಾಯಿಯ ರೋಮ ಉದುರುವುದನ್ನು ತಡೆಯಲು ಕೆಲ ಸಲಹೆಗಳು | ಸಾಕು ಪ್ರಾಣಿಗಳ ಆರೈಕೆಗೆ ಕೆಲ ಸಲಹೆಗಳು

Hair shedding of dog is very irritate one.Moreover, if you are allergic to dog hair, the situation becomes worse. follow these tips to control hair shedding of your dogs and for keeping your house clean.
Story first published: Monday, May 14, 2012, 15:00 [IST]
X
Desktop Bottom Promotion