For Quick Alerts
ALLOW NOTIFICATIONS  
For Daily Alerts

ನಾಯಿ ಸಾಕುವ ಮುನ್ನ ಈ ಪ್ರಶ್ನೆಗೆ ಉತ್ತರಿಸಿ!

|
Tips For Choose Right Dog
ನಾಯಿ ಜೊತೆ ಸ್ನೇಹ ಬೆಳೆಸಿದವರಿಗೆ ನಂತರ ಅದನ್ನು ಬಿಟ್ಟು ಬಾಳುವುದು ಕಷ್ಟವಾಗುತ್ತದೆ ಅಷ್ಟರ ಮಟ್ಟಿಗೆ ಸ್ನೇಹಮಯವಾದ ಪ್ರಾಣಿಯಾಗಿದೆ. ನಾಯಿಯಲ್ಲಿ ಅನೇಕ ಜಾತಿಯ ನಾಯಿಗಳಿವೆ. ಮನೆಯಲ್ಲಿ ನಾಯಿ ಸಾಕಬೇಕು, ಒಂದು ನಾಯಿ ಮರಿಯನ್ನು ತರಬೇಕೆಂದು ಯೋಚಿಸುವಾಗ ಯಾವ ಜಾತಿಯ ನಾಯಿ ಮರಿ ತಂದರೆ ಒಳ್ಳೆಯದು ಎಂದು ಯೋಚಿಸುತ್ತೇವೆ ಹೊರತು ಉಳಿದ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ. ಆ ರೀತಿ ಮಾಡಿದರೆ ನಿಮ್ಮ ಆಯ್ಕೆ ತಪ್ಪಾಗಬಹುದು, ಆದ್ದರಿಂದ ನಾಯಿ ತರುವಾಗ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು.

ನಾಯಿಯ ಅವಶ್ಯಕತೆ ಏನು?
ಈ ಪ್ರಶ್ನೆ ನಿಮ್ಮಲ್ಲಿಯೇ ನೀವು ಕೇಳಿಕೊಳ್ಳಬೇಕು. ನಿಮ್ಮ ರಕ್ಷಣೆಗೆ ಬೇಕೆ ಅಥವಾ ನಿಮ್ಮ ಒಂಟಿತನವನ್ನು ನೀಗಿಸಲು ಬೇಕೆ? ಈ ಎರಡರಲ್ಲಿ ಯಾವ ಕಾರಣಕ್ಕೆ ಬೇಕು ಅದರ ಆಧಾರದ ಮೇಲೆ ನಾಯಿಯನ್ನು ಕೊಂಡುಕೊಳ್ಳಬೇಕು.

ಆ ನಾಯಿ ನನ್ನ ಮನೆಗೆ ಹಾಗೂ ಜೀವನ ಶೈಲಿಗೆ ಹೊಂದಿಕೊಳ್ಳುತ್ತದೆಯೇ?
ನೀವು ಆಗಾಗ ಪ್ರಯಾಣ ಹೋಗುವವರಾದರೆ ಯಾರು ನಾಯಿಯನ್ನು ನೋಡಿಕೊಳ್ಳುತ್ತಾರೆ?ನಾಯಿಯನ್ನು ನೋಡಿಕೊಳ್ಳುವಷ್ಟು ಪುರುಸೊತ್ತು ನನಗಿದೆಯೇ? ಈ ಎಲ್ಲಾ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.

ಆರ್ಥಿಕ ಸ್ಥಿತಿಗೆ ಯಾವ ನಾಯಿ ಸೂಕ್ತ?
ಕೆಲವೊದು ಜಾತಿಯ ನಾಯಿಯನ್ನು ಕೊಳ್ಳಲು ಹಾಗೂ ಸಾಕಲು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಯಾವ ನಾಯಿ ಸೂಕ್ತ ಎಂದು ಯೋಚಿಸುವುದು ಒಳ್ಳೆಯದು.

ನಾಯಿಯ ಗಾತ್ರ ಎಷ್ಟಿರಬೇಕು?
ಗೋಲ್ಡನ್ ರಿಟ್ರಿಎವರ್ ಜಾತಿಯ ನಾಯಿಯನ್ನು ಸಾಕುವುದಾದರೆ ದೊಡ್ಡ ರೂಂ ಬೇಕು. ಇಲ್ಲದಿದ್ದರೆ ನಡೆದಾಡಲು ಅದಕ್ಕೆ, ಅದನ್ನು ನೋಡಿಕೊಳ್ಳಲು ನಿಮಗೆ ಕಷ್ಟವಾಗುವುದು. ಆದ್ದರಿಂದ ನಾಯಿಯನ್ನು ಕೊಳ್ಳುವಾಗ ಈ ಎಲ್ಲಾ ವಿಷಯಗಳನ್ನು ಯೋಚಿಸಬೇಕು.

English summary

Tips For Choose Right Dog | Tips For Pet Care | ಸರಿಯಾದ ನಾಯಿಯನ್ನು ಆಯ್ಕೆ ಮಾಡಲು ಕೆಲ ಸಲಹೆಗಳು | ಸಾಕುಪ್ರಾಣಿಗಳ ಆರೈಕೆಗೆ ಕೆಲ ಸಲಹೆಗಳು

There are so many breeds that you will get confused. Choosing to bring a dog home is a big decision and one silly mistake can spoil everything, so, be very careful. Here are few tips for choosing the right dog.
Story first published: Tuesday, October 16, 2012, 16:22 [IST]
X
Desktop Bottom Promotion