For Quick Alerts
ALLOW NOTIFICATIONS  
For Daily Alerts

ಸಾಲದ ಸುಳಿಗೆ ಸಿಲುಕಿದ್ದರೆ, ಈ ವಾಸ್ತುಸಲಹೆಗಳನ್ನು ಅಳವಡಿಸಿಕೊಳ್ಳಿ

|

ಇಂದಿನ ಕಾಲದಲ್ಲಿ ಸಾಲವಿಲ್ಲದೇ ಜೀವನ ಮಾಡುವವರು ಬಹಳ ಕಡಿಮೆ. ಅದರಲ್ಲೂ ಮಧ್ಯಮ ವರ್ದ ಜನರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಸಾಲ ಮಾಡುವುದು ಅನಿವಾರ್ಯ. ಅದರಲ್ಲಿ ಕೆಲವರು ಅದನ್ನು ಸರಿಯಾಗಿ ತೀರಿಸಿದರೆ, ಇನ್ನು ಉಳಿದವರಿಗೆ ಎಷ್ಟೇ ಪ್ರಯತ್ನ ಪಟ್ಟರೂ, ಆ ಸಾಲ ಮರುಪಾವತಿಸಲಾಗದೇ, ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಇದಕ್ಕೆ ವಾಸ್ತು ಕೂಡ ಒಂದು ಕಾರಣ ಎಂಬುದನ್ನು ನಾವು ಮರೆಯಬಾರದು.

ಹಣಕಾಸಿನ ಹರಿವಿನ ದಿಕ್ಕು ಸಮತೋಲನದಲ್ಲಿದ್ದರೆ ಯಾವುದೇ ಸಾಲದ ಸಮಸ್ಯೆಗಳು ಉಂಟಾಗುವುದಿಲ್ಲ. ಅವುಗಳು ಕಲುಷಿತವಾಗಿದ್ದರೆ, ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹಾಗಾದರೆ ಆ ದಿಕ್ಕುಗಳಾವುವು? ಅದನ್ನು ಪರಿಹರಿಸುವ ವಿಧಾನವನ್ನು ಈ ಕೆಳಗೆ ನೋಡೋಣ.

ಸಾಲಕ್ಕೆ ಕಾರಣವಾಗುವ ದಿಕ್ಕುಗಳು ಹೀಗಿವೆ:

ಸಾಲಕ್ಕೆ ಕಾರಣವಾಗುವ ದಿಕ್ಕುಗಳು ಹೀಗಿವೆ:

ಸಾಲದ ಬಲೆಗೆ ಕಾರಣವಾಗುವ ಪ್ರಮುಖ ದಿಕ್ಕುಗಳೆಂದರೆ, ಈಶಾನ್ಯ (ಮಾನಸಿಕ ಸ್ಪಷ್ಟತೆಗಾಗಿ ವಾಸ್ತು ವಲಯ), ಆಗ್ನೇಯದ ಪೂರ್ವ (ಆತಂಕ ಮತ್ತು ಮಂಥನದ ವಲಯ), ನೈಋತ್ಯದ ದಕ್ಷಿಣ (ವ್ಯರ್ಥ ವೆಚ್ಚಗಳ ವಲಯ), ಉತ್ತರ (ವಲಯ ಹೊಸ ಅವಕಾಶಗಳು) ಮತ್ತು ಆಗ್ನೇಯ (ನಗದು ಹರಿವಿನ ವಲಯ). ಈ ದಿಕ್ಕುಗಳಲ್ಲಿ ದೋಷಗಳಿದ್ದರೆ ಅಥವಾ ಯಾವುದಾದರೂ ಅಸಮತೋಲನವಿದ್ದರೆ, ಹಣಕಾಸು ಹಾಗೂ ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳಾಗುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಜೊತೆಗೆ ಈ ದಿಕ್ಕುಗಳು ಆರೋಗ್ಯಕರ ಮತ್ತು ಸಮತೋಲಿತವಾಗಿದ್ದಾಗ, ವ್ಯಕ್ತಿಯು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಜೊತೆಗೆ ಯಾವಾಗ ಸಾಲ ತೆಗೆದುಕೊಳ್ಳಬೇಕು ಮತ್ತು ಸಾಲಗಳನ್ನು ಮರುಪಾವತಿ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಪಷ್ಟವಾಗಿರುತ್ತಾನೆ.

ವಾಸ್ತುತಜ್ಞರು ನಿಮ್ಮ ಮನೆ ಅಥವಾ ಕಛೇರಿಯ ಮಧ್ಯಭಾಗದಲ್ಲಿ ನಿಂತು ದಿಕ್ಸೂಚಿಯ ಸಹಾಯದಿಂದ ಈ ಕೆಳಗಿನ ದಿಕ್ಕುಗಳನ್ನು ಗುರುತಿಸಿ, ಸಮತೋಲನದಲ್ಲಿದೆಯೇ ಎಂದು ತಿಳಿದುಕೊಳ್ಳಲು ಶಿಫಾರಸ್ಸು ಮಾಡುತ್ತಾರೆ:

ವಾಸ್ತುತಜ್ಞರು ನಿಮ್ಮ ಮನೆ ಅಥವಾ ಕಛೇರಿಯ ಮಧ್ಯಭಾಗದಲ್ಲಿ ನಿಂತು ದಿಕ್ಸೂಚಿಯ ಸಹಾಯದಿಂದ ಈ ಕೆಳಗಿನ ದಿಕ್ಕುಗಳನ್ನು ಗುರುತಿಸಿ, ಸಮತೋಲನದಲ್ಲಿದೆಯೇ ಎಂದು ತಿಳಿದುಕೊಳ್ಳಲು ಶಿಫಾರಸ್ಸು ಮಾಡುತ್ತಾರೆ:

ಈಶಾನ್ಯ ದಿಕ್ಕು:

ಹಣಕಾಸಿನ ಸಮಸ್ಯೆಗಳು ಸಾಮಾನ್ಯವಾಗಿ ನಾವು ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಈಶಾನ್ಯದಲ್ಲಿ ಅಸ್ತವ್ಯಸ್ತತೆ, ಕಸದ ತೊಟ್ಟಿ, ಶೌಚಾಲಯ, ಒಳಚರಂಡಿ ಗುಂಡಿ, ಪೊರಕೆಯಂತಹ ವಸ್ತುಗಳು ಇದ್ದರೆ, ಅವು ನಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮಲ್ಲಿ ಮುಚ್ಚಿದ ಆಲೋಚನೆ, ಕಳಪೆ ದೃಷ್ಟಿ, ಕಳಪೆ ಆರ್ಥಿಕ ಯೋಜನೆ, ಸಾಲದ ಬಲೆಗೆ ಬೀಳುವ ಸಂದರ್ಭಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಈಶಾನ್ಯದಲ್ಲಿರುವ ಈ ವಸ್ತುಗಳನ್ನು ತೆರವುಗೊಳಿಸಿ ಮತ್ತು ಧ್ಯಾನಸ್ಥ ಬುದ್ಧನ ಪ್ರತಿಮೆಯನ್ನು ಇಡಿ. ಇಲ್ಲಿ ಪೂಜಾ ಕೊಠಡಿ ಅಥವಾ ಧ್ಯಾನ ಕೊಠಡಿ ಇದ್ದರೆ, ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

ಆಗ್ನೇಯ ಪೂರ್ವ:

ಆಗ್ನೇಯ ಪೂರ್ವ:

ಇದು ಕಡೆಯುವ(ಮಂಥನ) ಮತ್ತು ಆತಂಕದ ವಲಯವಾಗಿದೆ. ಪೂರ್ವ ಮತ್ತು ಆಗ್ನೇಯ ದಿಕ್ಕನ್ನು ವಿಭಜಿಸಿದರೆ ಪೂರ್ವ ಆಗ್ನೇಯ (ESE) ದಿಕ್ಕನ್ನು ಪಡೆಯುತ್ತೀರಿ. ಪ್ರಾಚೀನ ಕಾಲದಲ್ಲಿ, ಇದನ್ನು ಬೆಣ್ಣೆ ತಯಾರಿಕೆಗೆ ಸೂಕ್ತ ದಿಕ್ಕು ಎಂದು ಪರಿಗಣಿಸಲಾಗಿತ್ತು. ಆಧುನಿಕ ದಿನಗಳಲ್ಲಿ ಮಿಕ್ಸರ್-ಗ್ರೈಂಡರ್ ಇಡಲು ಸೂಕ್ತ ದಿಕ್ಕು. ಈ ದಿಕ್ಕಿನಲ್ಲಿ ವಾಸ್ತು ದೋಷಗಳಿದ್ದರೆ, ಪಾರ್ಶ್ವವಾಯುವಿಗೆ ಸಿಲುಕುವ ಸಾಧ್ಯತೆ ಹೆಚ್ಚು, ಜೊತೆಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಕೆಲಸದ ಟೇಬಲ್ ಅನ್ನು ಇಲ್ಲಿ ಇಡಬೇಡಿ , ಇಲ್ಲಿ ಪೂಜಾ ಕೊಠಡಿ ಅಥವಾ ಅಡುಗೆಮನೆ ಬೆಂಕಿಯನ್ನು ಹಾಕಬೇಡಿ. ಮೊಸರು ಕಡೆಯುವ ಚಿತ್ರ ಇಲ್ಲಗೆ ಸೂಕ್ತವಾಗಿದ್ದು, ಪರ್ಯಾಯವಾಗಿ ಮಿಕ್ಸರ್-ಗ್ರೈಂಡರ್ ಅನ್ನು ಇಲ್ಲಿ ಇಡಬಹುದು.

ನೈರುತ್ಯ ದಕ್ಷಿಣ (SSW):

ನೈರುತ್ಯ ದಕ್ಷಿಣ (SSW):

ವಾಸ್ತು ಪ್ರಕಾರ ದಕ್ಷಿಣ-ಆಗ್ನೇಯ-ಪಶ್ಚಿಮ ಅಂದರೆ, ನೈರುತ್ಯ ದಕ್ಷಿಣ ವ್ಯರ್ಥ ವೆಚ್ಚಗಳ ವಲಯವಾಗಿದೆ. ನೀವು ಈ ದಿಕ್ಕಿನಲ್ಲಿ ಮಲಗಿದರೆ ಅಥವಾ ಮನೆ/ಕಚೇರಿಯ ಮುಖ್ಯ ದ್ವಾರವು ಈ ದಿಕ್ಕಿನಲ್ಲಿದ್ದರೆ ಅಥವಾ ನಿಮ್ಮ ಕೆಲಸದ ಟೇಬಲ್ ಈ ದಿಕ್ಕಿನಲ್ಲಿದ್ದರೆ, ಸಾಲಗಳಿಂದ ಹೊರಬರಲು ನಿಮಗೆ ಕಷ್ಟವಾಗಿ, ಕೆಲವೇ ಸಮಯದಲ್ಲಿ ನಿಮ್ಮ ಇಡೀ ಸಂಪತ್ತು-ಆಸ್ತಿ ಕಳೆದುಕೊಳ್ಳಬೇಕಾಗಬಹುದು. ಆದರೆ ಶಕ್ತಿಯುತವಾದ ವಾಸ್ತು ಪರಿಹಾರಗಳಿಂದ ಕೆಲವು ತಿಂಗಳುಗಳಲ್ಲಿ ಈ ಪರಿಸ್ಥಿತಿಯನ್ನು ಸುಧಾರಿಸಬಹುದು.

ಉತ್ತರ ಮತ್ತು ಆಗ್ನೇಯ:

ಉತ್ತರ ಮತ್ತು ಆಗ್ನೇಯ:

ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಈ ಎರಡು ದಿಕ್ಕುಗಳನ್ನು ಹಣಕಾಸು ಸುಧಾರಿಸಲು ಮತ್ತು ಆ ಮೂಲಕ ಪರೋಕ್ಷವಾಗಿ ಹೆಚ್ಚುತ್ತಿರುವ ಸಾಲಗಳನ್ನು ನಿವಾರಿಸಲು ಬಳಸಬಹುದು. ಉತ್ತರವು ಅವಕಾಶಗಳ ದಿಕ್ಕಾಗಿದ್ದು, ಆಗ್ನೇಯವು ಹಣದ ಹರಿವಿನ ದಿಕ್ಕು. ಉತ್ತರದಲ್ಲಿ ಯಾವುದೇ ರೀತಿಯ ಕೆಂಪು ಬಣ್ಣದ ವಸ್ತು ಇಡುವುದರಿಂದ, ವಾಸ್ತು ದೋಷ ಉಂಟಾಗುತ್ತದೆ. ಅದೇ ರೀತಿ ಆಗ್ನೇಯದಲ್ಲಿ ನೀಲಿ ಬಣ್ಣವು ನಗದು ಹರಿವಿಗೆ ಅಡ್ಡಿಯಾಗುತ್ತದೆ. . ಏಕೆಂದರೆ, ಆಗ್ನೇಯವು ಬೆಂಕಿಯ ದಿಕ್ಕು ಮತ್ತು ಉತ್ತರವು ನೀರಿನ ದಿಕ್ಕಾಗಿರುವುದರಿಂದ, ಇವುಗಳ ಬದಲಾವಣೆ ಆರ್ಥಿಕತೆಯಲ್ಲಿ ಅಸಮತೋಲನ ಉಂಟುಮಾಡುತ್ತದೆ. ಆದ್ದರಿಂದ ಎಚ್ಚರವಾಗಿರಿ. ಸರಿಯಾದ ಬಣ್ಣ ಆಯ್ಕೆ ಮಾಡಿ.

English summary

Vastu Tips to Avoid Debts And Loans in Kannada

Here we talking about Vastu Tips to Avoid Debts And Loans in Kannada, read on
Story first published: Friday, November 26, 2021, 15:20 [IST]
X