For Quick Alerts
ALLOW NOTIFICATIONS  
For Daily Alerts

ಮನೆ ವಾಸ್ತುವಿಗೂ ಮಕ್ಕಳ ಭಾಗ್ಯ ಪಡೆಯುವುದಕ್ಕೂ ಸಂಬಂಧವಿದೆಯೇ?

|

ವಾಸ್ತು ಶಾಸ್ತ್ರದ ಬಗ್ಗೆ ಇಂದು ಜನ ಸಾಮಾನ್ಯರಲ್ಲಿ ಹೆಚ್ಚಿನ ಎಚ್ಚರಿಕೆ ಮೂಡಿದೆ ಹಾಗೂ ವಾಸ್ತುವಿನ ಪ್ರಾಮುಖ್ಯತೆಯನ್ನು ತಡವಾಗಿಯಾದರೂ ಸರಿ ಅರಿತುಕೊಂಡು ಹಿಂದೆ ವಾಸ್ತುವಿನ ಅರಿವಿಲ್ಲದೇ ಮಾಡಿದ್ದ ತಪ್ಪುಗಳನ್ನು ಸರಿಪಡಿಸುವತ್ತ ಕಾಳಜಿ ವಹಿಸುತ್ತಿದ್ದಾರೆ.

Vastu Tips For Conceiving

ಸಾಮಾನ್ಯವಾಗಿ ನಾವು ವಾಸ್ತು ಎಂದರೆ ಮನೆ ಅಥವಾ ವಾಣಿಜ್ಯಕಟ್ಟಡಗಳಿಗೆ ಮಾತ್ರವೇ ಮೀಸಲು ಎಂದು ತಿಳಿದುಕೊಂಡಿದ್ದೇವೆ. ಆದರೆ ಕುಟುಂಬದ ಒಟ್ಟಾರೆ ಅಭ್ಯುದಯದಲ್ಲಿಯೂ ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ.

ವಿಶೇಷವಾಗಿ ಕುಟುಂಬದ ವಂಶ ಮುಂದುವರೆಯಲು ಅಗತ್ಯವಾಗಿರುವ ಸಂತಾನಫಲವನ್ನು ನಿರ್ಧರಿಸುವಲ್ಲಿಯೂ ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಮಗೆ ಅಚ್ಚರಿಯಾಗಬಹುದು (ವಾಸ್ತು ತಜ್ಞರನ್ನು ಹೊರತುಪಡಿಸಿ). ಆದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಒಡತೆ ಗರ್ಭಧರಿಸಲು ಮನೆಯ ವಾಸ್ತುವೂ ಪ್ರಮುಖ ಪಾತ್ರ ವಹಿಸುತ್ತದೆ.

ಕೋಣೆಗಳ ಸ್ಥಳ ಮತ್ತು ವಸ್ತುಗಳನ್ನು ಸೂಕ್ತ ಸ್ಥಳಗಳಲ್ಲಿ ಇರಿಸುವುದು ಮನೆಯಲ್ಲಿ ಮಗುವಿನ ಆಗಮನದ ಸಾಧ್ಯತೆಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಬಳ ವರ್ಷಗಳಿಂದ ಮಗುವನ್ನು ಪಡೆಯಲು ಗರ್ಭಿಣಿಯಾಗಲು ಪ್ರಯತ್ನಿಸಿದರೂ, ಫಲಿತಾಂಶಗಳು ಫಲಪ್ರದವಾಗದಿರುವ ಅನೇಕ ಉದಾಹರಣೆಗಳಿವೆ. ಗರ್ಭ ಧರಿಸಲು ಸಾಧ್ಯವಾಗದಿರುವಲ್ಲಿ ದೈಹಿಕ ತೊಂದರೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆಯಾದರೂ, ಖಂಡಿತವಾಗಿಯೂ ಅದಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುವ ಇತರ ಅಂಶಗಳೂ ಇವೆ. ಇದು ಆ ಕುಟುಂಬವು ವಾಸಿಸುತ್ತಿರುವ ಸ್ಥಳದ ವಾಸ್ತು ಶಾಸ್ತ್ರದೊಂದಿಗೆ ನೇರವಾಗಿ ಸಂಬಂಧಿಸಿದೆ.

ಗರ್ಭಧರಿಸುವ ಸಾಧ್ಯತೆಗಳನ್ನು ಹೆಚ್ಚಿಸಲು ಅಗತ್ಯವಿರುವ ಆರೋಗ್ಯ ಮತ್ತು ಸಂದರ್ಭಗಳನ್ನು ಎದುರಿಸಲು ಹಲವಾರು ಮಾರ್ಗಗಳಿವೆ. ಗರ್ಭಧಾರಣೆಯ ಸಾಧ್ಯತೆ ಅತಿ ಕಡಿಮೆ ಇರುವ ಕಾರಣದಿಂದ ಯಾವುದೇ ಭರವಸೆ ನೀಡದ ವೈದ್ಯರೂ ಇರಬಹುದು.

ಆದರೆ ವಾಸ್ತು ಪ್ರಕಾರ ಈ ಪರಿಸ್ಥಿತಿಯನ್ನು ಗ್ರಹಿಸಿ ಅದಕ್ಕೆ ಸೂಕ್ತ ಪರಿಹಾರ ನೀಡುವುದರಿಂದ ಈ ದಂಪತಿಗಳೂ ಸಂತಾನಭಾಗ್ಯವನ್ನು ಹೊಂದಲು ಭರವಸೆಯ ಆಶಾಕಿರಣವೊಂದು ಗೋಚರಿಸಬಹುದು. ಮನೆಯಲ್ಲೊಂದು ಮಗುವಿದ್ದರೆ ಮನೆಯ ಕಳೆಯೇ ಬೇರೆ ಮತ್ತು ಕುಟುಂಬಕ್ಕೆ ಸಂತೋಷ ಮತ್ತು ಅದೃಷ್ಟವನ್ನು ತರಲು ಸಹಾಯ ಮಾಡುತ್ತದೆ, ಅದಕ್ಕಾಗಿಯೇ ಫಲವತ್ತತೆಗಾಗಿ ವಾಸ್ತು ಪ್ರಕಾರದ ಪರಿಹಾರಗಳನ್ನು ನೀಡುವ ಮೂಲಕ ಜೀವನದಲ್ಲಿ ಹೆಚ್ಚಿನ ಸಂತಸ ತರಬಹುದು.

ಗರ್ಭಧಾರಣೆ ಮತ್ತು ಫಲವತ್ತತೆ ಹೆಚ್ಚಿಸಲು ಮಲಗುವ ಕೋಣೆಗೆ ಅಗತ್ಯವಿರುವ ವಾಸ್ತು ಸಲಹೆಗಳು:

ಗರ್ಭಧಾರಣೆ ಮತ್ತು ಫಲವತ್ತತೆ ಹೆಚ್ಚಿಸಲು ಮಲಗುವ ಕೋಣೆಗೆ ಅಗತ್ಯವಿರುವ ವಾಸ್ತು ಸಲಹೆಗಳು:

ವಾಸ್ತು ಶಾಸ್ತ್ರದ ಪ್ರಕಾರ ಸಂತಾನಫಲವನ್ನು ಪಡೆಯಲು ಅಸಮರ್ಥತೆಯನ್ನು ಎದುರಿಸುವಾಗ ಹಲವಾರು ನಿಯತಾಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಗರ್ಭಧಾರಣೆ ಮತ್ತು ಫಲವತ್ತತೆ ಪಡೆಯಲು ಮಲಗುವ ಕೋಣೆಗೆ ವಾಸ್ತು ಸುಳಿವುಗಳ ಪ್ರಕಾರ ಈ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂಬುದರ ಕುರಿತು ಉತ್ತಮವಾದ ಕಲ್ಪನೆಯನ್ನು ನೀಡುವ ಕೆಲವು ಅಂಶಗಳು ಇಲ್ಲಿವೆ:

ಗರ್ಭಿಣಿಯಾಗಲು ಮಲಗುವ ಕೋಣೆಗೆ ವಾಸ್ತು ಸಲಹೆಗಳ ಪ್ರಕಾರ, ವಿವಾಹಿತ ದಂಪತಿಗಳು ಯಾವಾಗಲೂ ಮಲಗುವ ಕೋಣೆಯ ಆಗ್ನೇಯ ಭಾಗದಲ್ಲಿ ಮಲಗಬೇಕು ಏಕೆಂದರೆ ಅದು ಬೆಂಕಿಯ ಅಂಶದೊಂದಿಗೆ ಸಂಪರ್ಕ ಹೊಂದಿದೆ. ಇದು ಉತ್ತಮ ಲೈಂಗಿಕ ಜೀವನವನ್ನು ಹೊಂದಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಗರ್ಭಧಾರಣೆಯ ಅನುಪಾತವನ್ನು ಹೆಚ್ಚಿಸುತ್ತದೆ.

ಗರ್ಭಧಾರಣೆ ಮತ್ತು ಫಲವತ್ತತೆ:

ಗರ್ಭಧಾರಣೆ ಮತ್ತು ಫಲವತ್ತತೆ:

ವಾಸ್ತು ಶಾಸ್ತ್ರದ ಪ್ರಕಾರ, ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬೇಕಾದರೆ ಮಲಗುವ ಕೋಣೆಯಲ್ಲಿ ವಿವಾಹಿತ ದಂಪತಿಗಳು ಯಾವಾಗಲೂ ಮಲಗುವ ಕೋಣೆಯ ಆಗ್ನೇಯ ಭಾಗದಲ್ಲಿಯೇ ಮಲಗಬೇಕು ಏಕೆಂದರೆ ಅದು ಅಗ್ನಿಯ ಅಂಶದೊಂದಿಗೆ ಸಂಪರ್ಕ ಹೊಂದಿದೆ. ಇದು ಉತ್ತಮ ಲೈಂಗಿಕ ಜೀವನವನ್ನು ಹೊಂದಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಗರ್ಭಧಾರಣೆ ಯಶಸ್ವಿಯಾಗುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.

ಗರ್ಭಧಾರಣೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು, ಮಕ್ಕಳಿಲ್ಲದ ದಂಪತಿಗಳಿಗೆ ಸಂತತಿಯನ್ನು ದಯಪಾಲಿಸಲು ಸಹಾಯ ಮಾಡುವ ನಮ್ಮ "ಸಂತಾನ್ ಗೋಪಾಲ್" ಯಂತ್ರವನ್ನು ಸಹ ಬಳಸಬಹುದು. ಈ ಶಕ್ತಿಯುತ ಯಂತ್ರವನ್ನು ನಮ್ಮ ತಜ್ಞ ಜ್ಯೋತಿಷಿಗಳು ಶುದ್ಧೀಕರಿಸಿ, ಶಕ್ತಿಯುತಗೊಳಿಸುತ್ತಾರೆ ಮತ್ತು ಗ್ರಹಿಸುವಂತೆ ಮಾಡಿರುತ್ತಾರೆ.

ಯಾವಾಗಲೂ ನಿಮ್ಮ ತಲೆಯನ್ನು ದಕ್ಷಿಣಕ್ಕೆ ಮತ್ತು ಕಾಲುಗಳನ್ನು ಉತ್ತರದ ಕಡೆಗೆ ಇರುವಂತೆ ಮಲಗಿ. ಈ ಪ್ರಯೋಜನಗಳನ್ನು ಪಡೆಯಲು, ನಿಮ್ಮ ತಲೆಯನ್ನು ಪಶ್ಚಿಮಕ್ಕೆ ಮತ್ತು ಕಾಲುಗಳನ್ನು ಪೂರ್ವ ದಿಕ್ಕಿನ ಕಡೆಗೆ ಇರಿಸಿ ಮಲಗುವ ಭಂಗಿಯೂ ಉತ್ತಮ ಎಂದು ಗಣೇಶ ಹೇಳುತ್ತಾರೆ.

ಮಲಗುವ ಕೋಣೆಯ ಒಳಗೆ ಸಕಾರಾತ್ಮಕ ಆಕರ್ಷಣೆಗಳಿರುವಂತೆ ವಾತಾವರಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಸುಂದರವಾದ ಭೂದೃಶ್ಯ ವರ್ಣಚಿತ್ರಗಳನ್ನು ಅಳವಡಿಸಬಹುದು. ಅದು ಕಣ್ಣುಗಳಿಗೆ ಹಿತಕರವಾಗಿರುತ್ತದೆ ಅಥವಾ ತಾಜಾ ಮತ್ತು ಸುಗಂಧ ಬೀರುವ ಹೂವುಗಳನ್ನೂ ಮಲಗುವ ಕೋಣೆಯಲ್ಲಿ ಇಡಬಹುದು.

ನಿಮ್ಮ ಜೀವನ ಸಂಗಾತಿಯನ್ನು ನೆನಪಿಸುವ ವಸ್ತುಗಳನ್ನು ಕಣ್ಣಿಗೆ ಕಾಣುವಂತೆ ಇರಿಸುವ ಮೂಲಕ ನಿಮ್ಮ ಮಲಗುವ ಕೋಣೆಯನ್ನು ಅನ್ಯೋನ್ಯತೆಗಾಗಿ ಪ್ರತ್ಯೇಕಗೊಳಿಸಬಹುದು. ದಂಪತಿಗಳ ನಡುವಿನ ವಿಶೇಷ ಸಂಪರ್ಕ ಮತ್ತು ಬಾಂಧವ್ಯವು ಯಾವಾಗಲೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರೀತಿಯ ಮತ್ತು ಹರ್ಷಚಿತ್ತದ ಲಹರಿಯನ್ನು ಹರಡಲು ಸಹಾಯ ಮಾಡುತ್ತದೆ.ಅಲ್ಲದೆ, ಕೋಣೆಯಲ್ಲಿ ಹಿತಕರವಾದ ವಾತಾವರಣವನ್ನು ಸೃಷ್ಟಿಸಲು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮಲಗುವ ಕೋಣೆಯಲ್ಲಿ ನಿಮ್ಮದೇ ಆದ ಖಾಸಗಿ ಮತ್ತು ಗುಣಮಟ್ಟದ ಸಮಯವನ್ನು ಕಳೆಯುವುದನ್ನು ಖಚಿತಪಡಿಸಿಕೊಳ್ಳಿ.

ಗರ್ಭಾವಸ್ಥೆಯಲ್ಲಿ ಅನುಸರಿಸಬೇಕಾದ ವಾಸ್ತು ಸಲಹೆಗಳು:

ಗರ್ಭಾವಸ್ಥೆಯಲ್ಲಿ ಅನುಸರಿಸಬೇಕಾದ ವಾಸ್ತು ಸಲಹೆಗಳು:

ಅಪಘಾತ ಅಥವಾ ಗರ್ಭಪಾತದ ಕಾರಣದಿಂದಾಗಿ ಮಗುವನ್ನು ಹೆರಿಗೆ ಮಾಡಿಸಲು ಸಾಧ್ಯವಾಗದ ಕೆಲವು ನಿದರ್ಶನಗಳಿವೆ, ಅದಕ್ಕಾಗಿಯೇ ಮನೆಯಲ್ಲಿ ಮಗುವನ್ನು ಯಶಸ್ವಿಯಾಗಿ ಹೆರಿಗೆ ಮಾಡಲು ಒಬ್ಬರು ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಅವುಗಳೆಂದರೆ:

  • ಗರ್ಭವತಿಯು ತನ್ನ ಮಗುವಿನ ಮೇಲೆ ಆಶಾವಾದಿ ಪ್ರಭಾವವನ್ನು ಹೊಂದಿರುವುದರಿಂದ ಗರ್ಭಾವಸ್ಥೆಯಲ್ಲಿ ಪ್ರೇರಕ ಚಲನಚಿತ್ರಗಳನ್ನು ನೋಡಬೇಕು, ಧಾರ್ಮಿಕ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಓದುವುದು ಉತ್ತಮ.
  • ಗರ್ಭವತಿಯು ಗರ್ಭಾವಸ್ಥೆಯಲ್ಲಿ ಸಂಸ್ಕೃತ ಸಾಹಿತ್ಯವನ್ನು ಓದುವುದನ್ನು ಹೆಚ್ಚು ಶಿಫಾರಸು ಮಾಡಲಾಗಿದೆ.
  • ಗರ್ಭವತಿಯು ಕೋಣೆಯ ಈಶಾನ್ಯ ದಿಕ್ಕಿನಲ್ಲಿ ನಿತ್ಯವೂ ಬೆಳಿಗ್ಗೆ ಧ್ಯಾನ ಮಾಡಬೇಕು. ಇದು ಆಕೆಗೆ ಹೆಚ್ಚು ತಾಜಾ ಗಾಳಿ ಮತ್ತು ಬೆಳಗ್ಗಿನ ಸೂರ್ಯನ ಪ್ರಥಮ ಕಿರಣಗಳನ್ನು ಪಡೆಯಲೂ ನೆರವಾಗುತ್ತದೆ. ಇದು ತಾಯಿ ಮತ್ತು ಮಗುವಿಗೆ ಬಹಳ ಮುಖ್ಯವಾಗಿದೆ.
  • ಗರ್ಭಿಣಿಯಾಗಲು ಮಲಗುವ ಕೋಣೆಯ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದಂತೆ, ನಿಮ್ಮ ಮಲಗುವ ಕೋಣೆಯಲ್ಲಿನ ಅನಗತ್ಯ ವಸ್ತುಗಳನ್ನು ನಿವಾರಿಸುವ ಮೂಲಕ ಕೋಣೆಯಲ್ಲಿ ಹೆಚ್ಚಿನ ಪ್ರಶಾಂತತೆಯನ್ನು ಉಂಟುಮಾಡುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರಲು ಮತ್ತು ಕಾರ್ಯ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ಗಣೇಶ ಹೇಳುತ್ತಾರೆ. ಅಸ್ತವ್ಯಸ್ತತೆ, ವಿಶೇಷವಾಗಿ ನಿಮ್ಮ ಹಾಸಿಗೆಯ ಕೆಳಗೆ ಸಂಗ್ರಹಿಸಿರುವ ಅನಗತ್ಯ ವಸ್ತುಗಳು ನಿಮ್ಮ ಮನಸ್ಸನ್ನು ಭೂತಕಾಲದೊಂದಿಗೆ ಸೂಕ್ಷ್ಮವಾಗಿ ಸಂಪರ್ಕಿಸುತ್ತದೆ, ಹಿಮ್ಮೆಟ್ಟಿಸುತ್ತದೆ ಮತ್ತು ಮುಂದಿನ ಪ್ರಗತಿಗೆ ಅವಕಾಶ ನೀಡುವುದಿಲ್ಲ.
  • ನಿಮ್ಮ ಮಲಗುವ ಕೋಣೆಗೆ ಪ್ರವೇಶಿಸಿದ ಬಳಿಕ, ಈ ಸ್ಥಳದಲ್ಲಿ ಶಾಂತಿಯುತ ಮತ್ತು ಪ್ರಶಾಂತತೆಯ ಭಾವನೆಯನ್ನು ನೀಡುವ ಧನಾತ್ಮಕವಾಗಿ ಪ್ರಚೋದಿಸುವ ಏನನ್ನಾದರೂ ವೀಕ್ಷಿಸಬಹುದು. ಇದು ನಿಮ್ಮ ನೆಚ್ಚಿನ ಛಾಯಾಚಿತ್ರ, ನೆಚ್ಚಿನ ಉಲ್ಲೇಖ, ಚಿತ್ರಕಲೆ ಅಥವಾ ಶಿಲ್ಪಕಲೆ ಮೊದಲಾದ ಯಾವುದೂ ಆಗಿರಬಹುದು. ಹೂವುಗಳು ಮತ್ತು ಅಲಂಕಾರಿಕಾ ಗಿಡಗಳೂ ಸ್ಥಳದ ಸೊಬಗನ್ನು ಹೆಚ್ಚಿಸುತ್ತದೆ.

    ಫಲವತ್ತತೆಗಾಗಿ ವಾಸ್ತು ಸಲಹೆಗಳು: ಮಾಡಬಾರದು

    ಫಲವತ್ತತೆಗಾಗಿ ವಾಸ್ತು ಸಲಹೆಗಳು: ಮಾಡಬಾರದು

    ಫಲವತ್ತತೆಗಾಗಿ ವಾಸ್ತು ಸಲಹೆಗಳ ಅಡಿಯಲ್ಲಿ, ಇಲ್ಲಿ ಅನ್ವಯಿಸಲಾದ ವಾಸ್ತು ಶಾಸ್ತ್ರದ ತತ್ವಗಳಿಂದ ಹೆಚ್ಚಿನದನ್ನು ಪಡೆಯಲು ಒಬ್ಬರು ಅನುಸರಿಸಬೇಕಾದ ಕೆಲವು ಮಾನದಂಡಗಳಿವೆ. ಮಲಗುವ ಕೋಣೆ ಗರ್ಭಿಣಿಯಾಗಲು ವಾಸ್ತು ಸುಳಿವುಗಳ ಸಹಾಯದಿಂದ ಗರಿಷ್ಠ ಲಾಭಗಳನ್ನು ಬಯಸಿದರೆ ಒಬ್ಬರು ತಪ್ಪಿಸಬೇಕಾದ ವಿಷಯಗಳು ಇವು. ಇವು:

    ನಮ್ಮ ವಾಸ್ತು ತಜ್ಞರು ಸೂಚಿಸಿದಂತೆ, ಭಾರೀ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುವುದನ್ನು ತಪ್ಪಿಸಿ ಏಕೆಂದರೆ ಇದು ಹಾನಿಕಾರಕ ವಿಕಿರಣವನ್ನು ಉತ್ಪಾದಿಸುತ್ತದೆ ಮತ್ತು ಇದು ಗರ್ಭಧಾರಣೆಯ ಪ್ರಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

    ಮಲಗುವ ಕೋಣೆಯಲ್ಲಿನ ಕನ್ನಡಿ ಎಂದಿಗೂ ಹಾಸಿಗೆಯನ್ನು ಎದುರಿಸಬಾರದು, ಏಕೆಂದರೆ ಅದರ ಪ್ರತಿಬಿಂಬವು ನಿದ್ರೆಯ ಮಾದರಿಗಳನ್ನು ತೊಂದರೆಗೊಳಿಸುವುದಲ್ಲದೆ, ನಿಮ್ಮ ದೈನಂದಿನ ದಿನಚರಿ ಮತ್ತು ಲೈಂಗಿಕತೆಯನ್ನೂ ಸಹ ಪರಿಣಾಮ ಬೀರುತ್ತದೆ.

    ಗರ್ಭಧಾರಣೆ ಮತ್ತು ಫಲವತ್ತತೆ ಹೆಚ್ಚಿಸಲು ವಾಸ್ತು ಸಲಹೆಗಳು: ನೀವು ಮಾಡಬಾರದ ವಿಷಯಗಳು:

    ಗರ್ಭಧಾರಣೆ ಮತ್ತು ಫಲವತ್ತತೆ ಹೆಚ್ಚಿಸಲು ವಾಸ್ತು ಸಲಹೆಗಳು: ನೀವು ಮಾಡಬಾರದ ವಿಷಯಗಳು:

    ಗರ್ಭಧಾರಣೆ ಮತ್ತು ಫಲವತ್ತತೆ ಹೆಚ್ಚಿಸಲು ನಿರ್ವಹಿಸಬೇಕಾದ ವಾಸ್ತು ಶಾಸ್ತ್ರದ ಅನ್ವಯಿಕೆಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಬೇಕು ಹಾಗೂ ವಾಸ್ತು ಶಾಸ್ತ್ರ ನಿಷೇಧಿಸಿದ ಸಂಗತಿಗಳನ್ನು ಸರ್ವಥಾ ಪಾಲಿಸಬಾರದು. ಒಂದು ವೇಳೆ ಮಾಹಿತಿಯ ಕೊರತೆಯಿಂದ ದಂಪತಿಗಳು ಪಾಲಿಸುತ್ತಾ ಬಂದಿರುವ, ವಿಶೇಷವಾಗಿ ಮಲಗುವ ಕೋಣೆಯ ಕೆಲವು ಸಂಗತಿಗಳೂ ಫಲವತ್ತತೆ ಸಾಧ್ಯವಾಗದಿರಲು ಕಾರಣವಾಗಿರಬಹುದು. ಇವುಗಳಲ್ಲಿ ಪ್ರಮುಖವಾದವು ಎಂದರೆ:

    ವಾಸ್ತು ತಜ್ಞರು ಸೂಚಿಸುವಂತೆ, ಭಾರೀ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ. ಏಕೆಂದರೆ ಇದು ಹಾನಿಕಾರಕ ವಿಕಿರಣಗಳನ್ನು ಉತ್ಪಾದಿಸುತ್ತದೆ ಮತ್ತು ಇದು ಗರ್ಭಧಾರಣೆಯ ಪ್ರಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

    ಮಲಗುವ ಕೋಣೆಯಲ್ಲಿನ ಕನ್ನಡಿ ಎಂದಿಗೂ ಹಾಸಿಗೆಯಲ್ಲಿ ಮಲಗಿದ್ದಾಗ ಎದುರಿಗೆ ಕಾಣುವಂತಿರಬಾರದು. ಏಕೆಂದರೆ ಅದರ ಪ್ರತಿಬಿಂಬವು ನಿದ್ರೆಯ ಮಾದರಿಗಳನ್ನು ತೊಂದರೆಗೊಳಿಸುವುದಲ್ಲದೆ, ನಿಮ್ಮ ದೈನಂದಿನ ದಿನಚರಿ ಮತ್ತು ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ.

    ಗರ್ಭವತಿಯರು ಕೋಣೆಯಲ್ಲಿ ಕಡು ಕೆಂಪು, ಕಪ್ಪು ಮತ್ತು ಕಿತ್ತಳೆ ಬಣ್ಣಗಳ ಗಾಢ ಅಥವಾ ಹೊಳೆಯುವ ಬಣ್ಣಗಳ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು ಮತ್ತು ನೀಲಿಮಿಶ್ರಿತ ಹಸಿರು (pastel green), ನೀಲಿ, ಹಳದಿ ಮತ್ತು ಬಿಳಿ ಬಣ್ಣಗಳಂತಹ ಪ್ರಖರ ಬಣ್ಣಗಳ ಬಟ್ಟೆಗಳನ್ನೇ ತೊಡಬೇಕು.

    ಹಿಂಸೆ, ಯುದ್ಧ, ಡ್ರ್ಯಾಗನ್ ಅಥವಾ ಯಾವುದೇ ನಕಾರಾತ್ಮಕ ಅಂಶವನ್ನು ಚಿತ್ರಿಸುವ ವರ್ಣಚಿತ್ರಗಳು ಮಲಗುವ ಕೋಣೆಯಲ್ಲಿ ಇರಿಸಬೇಡಿ. ಇದ್ದರೆ ತಕ್ಷಣ ನಿವಾರಿಸಿ.

    ಮಲಗುವ ಮಂಚವನ್ನು ಮೇಲೆ ಯಾವುದೇ ಭಾರದ ತೊಲೆ, ಮೆಟ್ಟಿಲು, ಅಡ್ಡಕಮಾನು ಅಥವಾ ಲೋಹದ ಸರಳು ಇರುವ ನಿರ್ಮಾಣ ಇರದಂತಹ ಸ್ಥಳದಲ್ಲಿಯೇ ಇರಿಸಿ.

    ದಂಪತಿಗಳ ನಡುವೆ ನಿರಾಶಾವಾದದ ಪ್ರಭಾವವನ್ನು ಬೀರಬಹುದು ಎಂದೆನ್ನಿಸುವ ಯಾವುದೇ ಭಾವನೆಗಳಿದ್ದರೆ ಇದನ್ನು ಮಲಗುವ ಕೋಣೆಯಲ್ಲಿ ಪ್ರಕಟಿಸದಿರಿ. ಅತೃಪ್ತಿ, ಒತ್ತಡ ಅಥವಾ ಕೋಪವನ್ನು ಅನುಭವಿಸುತ್ತಿರುವಾಗ ಮಲಗುವ ಕೋಣೆಯಲ್ಲಿ ಸಮಯ ಕಳೆಯಬೇಡಿ.

    ವೃತ್ತಾಕಾರದ ಹಾಸಿಗೆಯನ್ನು ಬಳಸುವುದನ್ನು ತಪ್ಪಿಸಿ. ಅಲ್ಲದೆ, ಹಾಸಿಗೆಯ ಮೇಲೆ ನಿಮ್ಮ ಊಟ ಅಥವಾ ಉಪಾಹಾರವನ್ನು ಸೇವಿಸದಿರಿ. ಹಾಸಿಗೆಯ ಮೇಲೆ ಏನಿದ್ದರೂ ಅನಿವಾರ್ಯ ಔಷಧಿಗಳನ್ನು ಮಾತ್ರವೇ ಸೇವಿಸಬೇಕೇ (ಅದೂ ರೋಗಿಯಾಗಿದ್ದರೆ ಮಾತ್ರ) ಉಳಿದಂತೆ ಏನನ್ನೂ ಸೇವಿಸಬಾರದು.

    ಹೊಸದಾಗಿ ಮದುವೆಯಾದ ದಂಪತಿಗಳಾದರೆ, ಮಲಗುವ ಕೋಣೆಯ ಈಶಾನ್ಯ ಮೂಲೆಯನ್ನು ಬಳಸದಿರಿ. ಕೇವಲ ಆಗ್ನೇಯ ಮೂಲೆಯಲ್ಲಿ ಮಾತ್ರ ಮಲಗುವ ಮಂಚವನ್ನು ಇರಿಸಿ.

English summary

Vastu Tips For Pregnancy, Conceiving and Fertility

Vastu Shastra says there is link between home vastu and to have babies, Here are what vastu shastra says about pregnancy...
X
Desktop Bottom Promotion