Just In
Don't Miss
- Movies
ಬಿಗ್ಬಾಸ್ ಮನೆಯಲ್ಲಿ ಪ್ರೇಮಕತೆ ಆರಂಭ: ಯಾರು 'ಬ್ರೋ ಗೌಡ'ನ ಪ್ರೇಯಸಿ?
- Sports
ಜಿಂಬಾಬ್ವೆ ವಿರುದ್ಧದ ಆರಂಭಿಕ ಟೆಸ್ಟ್ಗೆ ರಶೀದ್ ಖಾನ್ ಮಿಸ್?
- News
ಮಹಾರಾಷ್ಟ್ರ: 5 ದಿನದ ನಂತರ 8000ಕ್ಕಿಂತ ಕಡಿಮೆ ಕೊರೊನಾ ಕೇಸ್
- Automobiles
ಭಾರತದಲ್ಲಿ ಸಿ5 ಏರ್ಕ್ರಾಸ್ ಎಸ್ಯುವಿ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭಿಸಿದ ಸಿಟ್ರನ್
- Finance
ಫೆಬ್ರವರಿಯಲ್ಲಿ ಜಿಎಸ್ಟಿ ಆದಾಯ ಸಂಗ್ರಹ 1.13 ಲಕ್ಷ ಕೋಟಿ ರೂಪಾಯಿ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಪತ್ತು ಹೆಚ್ಚಲು ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಡಿ
ಇತ್ತೀಚಿನ ದಿನಗಳಲ್ಲಿ ಕನ್ನಡಿ ಇಲ್ಲದ ಮನೆಗಳಿಲ್ಲ. ಮೊದಲೆಲ್ಲಾ ಮನೆಗಳಿಗೆ ಒಂದೇ ಕನ್ನಡಿ ಇರುತ್ತಿದ್ದರೆ ಇಂದು ಮನೆಯ ಪ್ರತಿ ಕೊಠಡಿ, ಶೌಚಾಲಯಗಳಿಗೂ ಕನ್ನಡಿ ಇದ್ದೇ ಇರುತ್ತದೆ. ಇನ್ನೂ ಮುಂದುವರೆದು ಇದೀಗ ಕನ್ನಡಿ ವಾಸ್ತು, ದೃಷ್ಟಿ ನಿವಾರಣೆಯ ಸಂಕೇತವಾಗಿದೆ. ಆದ್ದರಿಂದ ವಾಸ್ತುವಿನ ಪ್ರಕಾರ ಸಹ ಮನೆಗಳಲ್ಲಿ ಕನ್ನಡಿ ಹಾಕುವುದನ್ನು ನಾವು ಗಮನಿಸುತ್ತೇವೆ.
ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿನ ವಾಸ್ತು ದೋಷ ನಿವಾರಣೆಗೆ ಅತ್ಯುತ್ತಮ ಸಾಧನ ಕನ್ನಡಿ ಅಥವಾ ಕನ್ನಡಿ ಮಾದರಿಯ ಪಾರದರ್ಶಕ ವಸ್ತುಗಳಂತೆ. ಕನ್ನಡಿಯನ್ನು ವಾಸ್ತುಶಾಸ್ತ್ರಜ್ಙರ ಸಲಹೆಯ ಪ್ರಕಾರ ಮನೆಗಳಲ್ಲಿ ಬಳಸಿದ್ದೇ ಆದರೆ, ಊಹಿಸಲಾಗದ ಅದೃಷ್ಟ, ಸಂಪತ್ತು ಮತ್ತು ಸಂತೋಷ ನಮ್ಮದಾಗುತ್ತದೆ ಎನ್ನಲಾಗುತ್ತದೆ.
ಅಷ್ಟೇ ಅಲ್ಲ, ಕನ್ನಡಿಯನ್ನು ವಾಸ್ತು ಪ್ರಕಾರ ಬಳಸದೇ ಇದ್ದರೆ ಅಥವಾ ವಾಸ್ತು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ಅವು ದುರದೃಷ್ಟ, ಬಡತನ ಮತ್ತು ಅತೃಪ್ತಿಗೆ ಕಾರಣವಾಗುತ್ತವೆ. ವಾಸ್ತು ಶಾಸ್ತ್ರದಲ್ಲಿ ಕನ್ನಡಿಯ ಪ್ರಾಮುಖ್ಯತೆ ಹಾಗೂ ಅದನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ, ಸಂಪತ್ತು ಮತ್ತು ನೆಮ್ಮದಿ ನಿಮ್ಮದಾಗುತ್ತ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿದ್ದೇವೆ ಮುಂದೆ ಓದಿ.

ಕನ್ನಡಿಯ ದಿಕ್ಕು ಹಾಗೂ ಅಳತೆ
- ಮನೆಯಲ್ಲಿ ಬಳಸುವ ಕನ್ನಡಿ ಚೌಕ ಅಥವಾ ಆಯತಾಕಾರದ ಆಕಾರದ ಕನ್ನಡಿಗಳನ್ನೇ ಆಯ್ಕೆ ಮಾಡುವುದು ಉತ್ತಮ.
- ಬೆಳಕನ್ನು ಪ್ರತಿಬಿಂಬಿಸುವಂಥಹ ಕನ್ನಡಿಗಳು, ಗೋಡೆಯ ಗಡಿಯಾರಗಳು, ಗಾಜಿನ ವಸ್ತುಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಉತ್ತರ ಅಥವಾ ಪೂರ್ವ ಗೋಡೆಗಳ ಮೇಲೆ ಮಾತ್ರ ಹಾಕಿ.
- ಮನೆಯಲ್ಲಿ ಕನ್ನಡಿಗಳನ್ನು ಗೋಡೆಗೆ ಹಾಕುವಾಗ ನೆಲದಿಂದ ಕನಿಷ್ಠ 4 ರಿಂದ 5 ಅಡಿ ಎತ್ತರದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಅಕ್ವೇರಿಯಂ
- ನಿಮ್ಮ ಮನೆಯಲ್ಲಿ ಮೀನಿನ ಅಕ್ವೇರಿಯಂ ಹೊಂದಿದ್ದರೆ ಅದನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟುಕೊಳ್ಳುವುದನ್ನು ಉತ್ತಮ. ವಾಸ್ತು ಶಾಸ್ತ್ರದ ಪ್ರಕಾರ ಅಕ್ವೇರಿಯಂ ಸುಂದರ ಮತ್ತು ಶಕ್ತಿಯುತ ಸಾಧನವಾಗಿದೆ.
- ವಾಸ್ತು ನಿಯಮಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಬಳಸಿದರೆ ಮನೆಯಲ್ಲಿ ಅಕ್ವೇರಿಯಂ ಬಳಸಿದರೆ, ಮನೆಗೆ ಸಂಪತ್ತು ಮತ್ತು ಸಂತೋಷ ಲಭಿಸುತ್ತದೆ: ಇಲ್ಲದಿದ್ದರೆ ಇದು ನಕಾರಾತ್ಮಕ ಶಕ್ತಿಯ ಪ್ರಮುಖ ಮೂಲವಾಗಬಹುದು.
- ಟಿವಿಯನ್ನು ಕೊಠಡಿಯ ಆಗ್ನೇಯ ಭಾಗದಲ್ಲಿ ಇಡಿ. ಟಿವಿ ಆಫ್ ಆಗಿರುವಾಗಲೆಲ್ಲಾ ಟಿವಿ ಪರದೆಯನ್ನು ಕವರ್ ಮಾಡಲು ಮರೆಯದಿರಿ.
- ದೊಡ್ಡ ಕನ್ನಡಿಯ ಡ್ರೆಸ್ಸಿಂಗ್ ಟೇಬಲ್ ಅನ್ನು ಹಾಸಿಗೆಯ ಪಕ್ಕದಲ್ಲಿ ಇರಿಸಿ ಅದು ಶುಭವೆಂದು ಪರಿಗಣಿಸಲಾಗಿದೆ.

ಕಿಟಕಿಗೆ ಎದುರು ಕನ್ನಡಿ
- ನಿಮ್ಮ ಮನೆಯ ಕಿಟಕಿಯ ಹೊರಗೆ ಸುಂದರವಾದ ಭೂದೃಶ್ಯವಿದ್ದರೆ, ಆ ಕಿಟಕಿಯ ಎದುರು ಕನ್ನಡಿಯನ್ನು ಇರಿಸಿ, ಅಂದರೆ ಭೂದೃಶ್ಯವು ಕನ್ನಡಿಯಲ್ಲಿ ಪ್ರತಿಫಲಿಸುತ್ತದೆ.
- ಇದು ನಿಮ್ಮ ಮನೆಯೊಳಗೆ ಸಕಾರಾತ್ಮಕ ಶಕ್ತಿ ಮತ್ತು ಭೂದೃಶ್ಯದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ, ಅದು ಹೆಚ್ಚು ಸಕಾರಾತ್ಮಕ ಶಕ್ತಿ ಮತ್ತು ಆನಂದವನ್ನು ತರುತ್ತದೆ.
- ನೀವು ಊಟ ಮಾಡುವ ಟೇಬಲ್ ಎದುರು ಕನ್ನಡಿಯನ್ನು ಇಡಿ. ಇದರಿಂದ ಮನೆಯಲ್ಲಿ ಆಹಾರ ದ್ವಿಗುಣಗೊಳ್ಳುವುದನ್ನು ಸಂಕೇತಿಸುತ್ತದೆ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.

ಖಜಾನೆಯಲ್ಲಿಡಿ ಕನ್ನಡಿ
- ಹಣದ ಲಾಕರ್, ಖಜಾನೆ ಮುಂದೆ ಕನ್ನಡಿಯನ್ನು ಇಡುವುದರಿಂದ ಹೆಚ್ಚು ಹೆಚ್ಚು ಸಂಪತ್ತು ಸೇರುತ್ತದೆ.
- ನೀವು ಸ್ನಾನಗೃಹದಲ್ಲಿ ಕನ್ನಡಿಗಳನ್ನು ಇಟ್ಟಿದ್ದರೆ ಅವು ಎಂದಿಗೂ ಕತ್ತಲೆಯಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊಂದಿರುವ ಯಾವುದೇ ವಸ್ತು ಇದ್ದರೆ, ಆ ವಸ್ತುವಿನ ಮುಂದೆ ಕನ್ನಡಿಯನ್ನು ಇರಿಸಿ.
ಮೇಲಿನ ಎಲ್ಲಾ ಕಾರಣಗಳಿಂದ ಕನ್ನಡಿಯನ್ನು ವಾಸ್ತುತಜ್ಞರ ಬಳಿ ಸಲಹೆ ಪಡೆದು ನಿಮ್ಮ ಮನೆಯ ವಸ್ತುವಿಗೆ ಅನುಗುಣವಾಗಿ ಇರಿಸಿ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಿರ್ಮೂಲನೆ ಮಾಡುತ್ತದೆ ಹಾಗೂ ಸಂಪತ್ತು, ನೆಮ್ಮದಿ ನಿಮ್ಮದಾಗಿಸಿಕೊಳ್ಳಿ.