For Quick Alerts
ALLOW NOTIFICATIONS  
For Daily Alerts

ವಾಸ್ತು ಶಾಸ್ತ್ರ: ಮನೆ ಕಟ್ಟುವಾಗ ಗಮನಿಸಬೇಕಾದ ಅಂಶಗಳು

|

ಒಂದು ಮನೆ ಕಟ್ಟುವಾಗ ಆ ಮನೆ ಎಲ್ಲಾ ರೀತಿಯಿಂದಲೂ ನಮಗೆ ಶುಭವಾಗಿರಬೇಕೆಂದು ಬಯಸುತ್ತೇವೆ. ಆ ಮನೆ ನಮಗೆ ಅದೃಷ್ಟದ ಮನೆಯಾಗಿರಬೇಕೆಂದು ಬಯಸುತ್ತೇವೆ. ಆದ್ದರಿಂದಲೇ ಮನೆಯನ್ನು ಕಟ್ಟುವ ಮುನ್ನ ಮನೆ ಯಾವ ಜಾಗದಲ್ಲಿ ಕಟ್ಟಬೇಕು, ಮನೆಯ ಬಾಗಿಲು ಯಾವ ದಿಕ್ಕಿನಲ್ಲಿರಬೇಕು, ಅಡುಗೆ ಮನೆ ಯಾವ ಕಡೆ ಬರಬೇಕು, ಮಾಸ್ಟರ್ ಬೆಡ್‌ರೂಂ ಎಲ್ಲಿರಬೇಕು, ದೇವರ ಕೋಣೆಗೆ ಯಾವ ಜಾಗದಲ್ಲಿರಬೇಕು ಎಂದೆಲ್ಲಾ ನೋಡುತ್ತೇವೆ.

ವಾಸ್ತು ಶಾಸ್ತ್ರದಲ್ಲಿ ಕೂಡ ಮನೆ ಕಟ್ಟುವಾಗ ಕೆಲವೊಂದು ವಾಸ್ತು ಟಿಪ್ಸ್ ನೀಡಲಾಗಿದೆ, ಅದೇನೆಂದು ನೋಡೋಣ ಬನ್ನಿ:

ಮನೆಯ ಮುಂಬಾಗಿಲು

ಮನೆಯ ಮುಂಬಾಗಿಲು

1. ಮನೆಯ ಬಾಗಿಲು ಉತ್ತರ ಅಥವಾ ಪೂರ್ವದ ಕಡೆ ಇರಬೇಕು. ಮನೆಯ ಮುಂದುಗಡೆ 3 ದಾರಿಯಿದ್ದರೆ ಆ ಮನೆಯಲ್ಲಿ ವಾಸಿಸುವವರಿಗೆ ಮಾನಸಿಕ ಒತ್ತಡ ಅಧಿಕವಿರುತ್ತದೆ.

2. ಮನೆ ಪೌಂಡೇಷನ್ ಅಥವಾ ಅಡಿಪಾಯಕ್ಕೆ ಮಣ್ಣು ತೆಗೆಯುವಾಗ ಮೊದಲು ಪೂರ್ವದಿಂದ ತೆಗೆದು ನಂತರ ಉತ್ತರ, ಪಶ್ಚಿಮ ಕೊನೆಯದಾಗಿ ದಕ್ಷಿಣ ದಿಕ್ಕಿನಲ್ಲಿ ಮಣ್ಣು ತೆಗೆಯಬೇಕು.

3. ರಸ್ತೆಯ ತುಂಬಾ ಸಮೀಪ ಇರುವ ಜಾಗ ಕೂಡ ಅಷ್ಟು ಒಳ್ಳೆಯದಲ್ಲ.

4. ಮನೆಯ ಮುಂಬಾಗಿಲು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಲಿ. ದಕ್ಷಿಣ ಭಾಗದಲ್ಲಿ ಮನೆಯ ಮುಂಭಾಗಲು ಇರುವುದು ಮನೆಗೆ ಶ್ರೇಯಸ್ಸು ಅಲ್ಲ.

5. ನೈರುತ್ಯ ದಿಕ್ಕಿನಲ್ಲಿ ಮನೆಯ ಯಾವುದೇ ಬಾಗಿಲು ಇರಬಾರದು. ಮನೆಯ ಬಾಗಿಲು ತೆರೆದಾಗ ಒಳಗೆ ಹೋಗುವಂತಿರಬೇಕು, ಹೊರಗಡೆ ಬರುವಂತೆ ಇರಬಾರದು. ಮನೆ ಬಾಗಿಲು ತೆರೆದಾಗ ಅದು ಒಳಗಡೆ ಹೋಗುವಂತಿದ್ದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಮನೆ ಮುಂದೆ ಯಾವ ಗಿಡಗಳಿರಬೇಕು?

ಮನೆ ಮುಂದೆ ಯಾವ ಗಿಡಗಳಿರಬೇಕು?

6. ಮನೆಯ ಗೋಡೆಗಳಿಗೆ ತೆಳುವಾದ ಬಣ್ಣ ಬಳಸಿ. ಕಡು ಹಳದಿ, ಕಡು ಕೆಂಪು, ಗಾಢವಾದ ಕಿತ್ತಳೆ ಬಣ್ಣ ಬಳಸಬೇಡಿ. ಈ ಬಣ್ಣಗಳು ಕಿರಿಕಿರಿ ಉಂಟು ಮಾಡುವುದು.

7. ಬಾವಿ, ನಲ್ಲಿಯನ್ನು ಈಶಾನ್ಯ ದಿಕ್ಕಿನಲ್ಲಿಡಬೇಕು.

8. ಬಾವಿ ಆಗ್ನೇಯ ದಿಕ್ಕಿನಲ್ಲಿ ಇರಬಾರದು.

9. ಮನೆಯ ಹೊರಗಡೆ ತುಳಸಿ, ಬಾಳೆಗಿಡ, ಸಂಪಿಗೆ ಗಿಡ, ಅಶೋಕ ಗಿಡ ಇವುಗಳನ್ನು ನೆಡುವುದು ಒಳ್ಳೆಯದು.

ಹೆಚ್ಚಿನ ಪ್ರಯೋಜನ ಪಡೆಯಲು ಈ ಅಂಶಗಳನ್ನು ಗಮನಿಸುವುದು ಒಳ್ಳೆಯದು

ಹೆಚ್ಚಿನ ಪ್ರಯೋಜನ ಪಡೆಯಲು ಈ ಅಂಶಗಳನ್ನು ಗಮನಿಸುವುದು ಒಳ್ಳೆಯದು

1. ಜಾಗ ಚೌಕಾಕೃತಿ ಅಥವಾ ಆಯತಾಕಾರದಲ್ಲಿ ಇರಬೇಕು. ಸಾಧ್ಯವಾದರೆ ಈಶಾನ್ಯ ದಿಕ್ಕಿನ ಮೂಲೆ 90 ಡಿಗ್ರಿ ಇದ್ದರೆ ಒಳ್ಳೆಯದು.

2. ಉತ್ತರ, ಪೂರ್ವ, ಈಶಾನ್ಯ ದಿಕ್ಕಿನಲ್ಲಿ ಮನೆ ಬಾಗಿಲು ಇರಬೇಕು. ಒಂದು ಪೂರ್ವದಲ್ಲಿ ಮತ್ತೊಂದು ಉತ್ತರದಲ್ಲಿ ಇದ್ದರೆ ಮತ್ತಷ್ಟು ಒಳ್ಳೆಯದು. ದಕ್ಷಿಣ, ಆಗ್ನೇಯ, ನೈರುತ್ಯ ಹಾಗೂ ವಾಯುವ್ಯ ಭಾಗದಲ್ಲಿ ಬಾಗಿಲುಗಳು ಇರಬಾರದು.

3. ತಳ ಭಾಗ ಈಶಾನ್ಯ ದಿಕ್ಕಿಗೆ ಸ್ವಲ್ಪ ತಗ್ಗಿರಬೇಕು. ನೈರುತ್ಯ ಭಾಗದಲ್ಲಿ ಸ್ವಲ್ಪ ಎತ್ತರವಿರಬೇಕು.

4. ಪೂರ್ವ, ಉತ್ತರ ದಿಕ್ಕಿನ ಕೋಣೆಗಳಿಗೆ ದಕ್ಷಿಣ, ಪಶ್ಚಿಮ ದಿಕ್ಕಿನ ಕೋಣೆಗಳಿಗಿಂತ ಹೆಚ್ಚಿನ ಸ್ಥಳಾವಕಾಶ ಇರಬೇಕು.

ಅಡುಗೆ ಮನೆ ಎಲ್ಲಿರಬೇಕು?

ಅಡುಗೆ ಮನೆ ಎಲ್ಲಿರಬೇಕು?

5. ಅಡುಗೆ ಕೋಣೆ ನೈರುತ್ಯ, ವಾಯುವ್ಯ ದಿಕ್ಕಿನಲ್ಲಿರಬೇಕು, ಈಶಾನ್ಯ ದಿಕ್ಕಿನಲ್ಲಿ ಇರಬಾರದು.

6. ಮನೆಯ ಸ್ಟೇರ್‌ಕೇಸ್‌ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕಿನಲ್ಲಿ ಇರಬೇಕು.

7. ಅಂಡರ್‌ಗ್ರೌಂಡ್‌ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಬೇಕು.

8. ವಾಹನಗಳನ್ನು ಈಶಾನ್ಯ ದಿಕ್ಕಿನಲ್ಲಿ ಪಾರ್ಕ್ ಮಾಡಿ.

9. ಎಸಿ ಸಾಮಗ್ರಿಗಳನ್ನು ದಕ್ಷಿಣ ದಿಕ್ಕಿನಲ್ಲಿಡಬೇಕು.

10. ವಾಷ್‌ ಬೇಷನ್ ಉತ್ತರ ಅಥವಾ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿಡಬೇಕು.

ವಾಸ್ತು ಶಾಸ್ತ್ರದ ಪ್ರಯೋಜನಗಳು

ವಾಸ್ತು ಶಾಸ್ತ್ರದ ಪ್ರಯೋಜನಗಳು

* ಕಂಫರ್ಟ್ ನೀಡುವುದು

* ಮನೆಗೆ ಧನಾತ್ಮಕ ಶಕ್ತಿ ದೊರೆಯುವುದು.

* ಮನೆಗೆ ಒಳ್ಳೆಯ ಶೇಪ್‌ ನೀಡಬಹುದು

* ಮನೆಯ ಸದಸ್ಯರಿಗೆ ಒಳಿತಾಗುವುದು.

English summary

Vastu Shastra Tips for Building Construction in Kannada

Vastu Shastra Tips for Building Construction in Kannada, Read on...
Story first published: Wednesday, November 24, 2021, 17:18 [IST]
X
Desktop Bottom Promotion