For Quick Alerts
ALLOW NOTIFICATIONS  
For Daily Alerts

ತಿಗಣೆಕಾಟ :ಸುಲಭವಾಗಿ ನಿವಾರಿಸಲು 10 ಪರಿಣಾಮಕಾರಿ ಮನೆಮದ್ದುಗಳು

|

ತಿಗಣೆಕಾಟ, ನೇರವಾಗಿ ಹೇಳಿಕೊಳ್ಳಲು ಮುಜುಗರವಾಗುವ, ನಿದ್ದೆ ಮತ್ತು ಆರೋಗ್ಯವನ್ನು ಕೆಡಿಸುವ ಸಾಮಾನ್ಯ ತೊಂದರೆಯಾಗಿದ್ದರೂ ಹೆಚ್ಚಿನವರು ಈ ತೊಂದರೆಯನ್ನು ಅಪಾಯಕಾರಿ ಎಂದು ಪರಿಗಣಿಸದೇ ಕೇವಲ ತಮ್ಮ ಗೊಣಗಾಟವನ್ನು ಮುಂದುವರೆಸುತ್ತಾರೆ. ಈ ಕಾಟವೇನೂ ನಿಗ್ರಹಿಸಲು ಅಸಾಧ್ಯವಾದುದಷ್ಟು ಭೀಕರವಲ್ಲ, ಕೆಲವು ಸುಲಭ ಮನೆಮದ್ದುಗಳಿಂದಲೇ ಇವನ್ನು ಮನೆಯಿಂದ ನಿವಾರಿಸಬಹುದು, ಅದೂ ಕ್ಷಿಪ್ರ ಸಮಯದಲ್ಲಿಯೇ. ತಿಗಣೆಗಳು ಸಾಮಾನ್ಯವಾಗಿ ಮೊಟ್ಟೆಯಾಕಾರದ, ಹೊಟ್ಟೆ ಖಾಲಿಯಿದ್ದಾಗ ಚಪ್ಪಟೆಯಾಗಿದ್ದು ತುಕ್ಕುಹಿಡಿದ ಕಬ್ಬಿಣದಷ್ಟು ಕಂದು ಬಣ್ಣದಲ್ಲಿರುತ್ತದೆ.

Ten Effective Home Remedies To Get Rid Of Bed Bugs

ವಯಸ್ಕ ತಿಗಣೆ ಸುಮಾರು ಐದು ಮಿ.ಮೀ ಗಾತ್ರ ಪಡೆಯುತ್ತದೆ. ರಕ್ತ ಕುಡಿದ ಚಪ್ಪಟೆಯಾಗಿದ್ದ ಇದರ ದೇಹ ಬೆಲೂನು ಊದಿದಂತೆ ಉಬ್ಬಿಬಿಡುತ್ತದೆ. ಇವು ಹಗಲಿಡೀ ಚಿಕ್ಕ ಚಿಕ್ಕ ತೂತುಗಳಲ್ಲಿ ಅಡಗಿದ್ದು ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಹೊರಬರುತ್ತವೆ. ಮನುಷ್ಯರ ರಕ್ತವನ್ನು ಕುಡಿದು ಜೀವಿಸುವ ಇವು ಕಡಿದ ಭಾಗ ಕಡಿಯುವಾಗ ಅನುಭವವೇ ಆಗುವುದಿಲ್ಲ, ಆದರೆ ಬಳಿಕ ಉರಿ ಪ್ರಾರಂಭವಾಗಿ ಈ ಭಾಗದಲ್ಲಿ ಕೆಂಪಗಾಗುತ್ತದೆ. ಈ ರಕ್ತಪಿಪಾಸುಗಳನ್ನು ನಿಗ್ರಹಿಸಲು ಕೆಲವು ಸುಲಭ ಮನೆಮದ್ದುಗಳು ಇಲ್ಲಿವೆ:

ಉಸಿರುಗಟ್ಟಿ ಸಾಯುವಂತೆ ಮಾಡಿ

ಉಸಿರುಗಟ್ಟಿ ಸಾಯುವಂತೆ ಮಾಡಿ

ಮೊದಲಾಗಿ, ಈ ತಿಗಣೆಗಳು ಆಶ್ರಯ ಪಡೆಯುವ ಸ್ಥಳಗಳನ್ನು ಮುಚ್ಚಬೇಕು. ಮಂಚದ ಬಿರುಕು, ಚಿಕ್ಕ ಚಿಕ್ಕ ತೂತುಗಳು, ಹಾಸಿಗೆಯ ಅಂಚುಗಳು, ಹೊಲಿದ ಭಾಗಗಳ ನಡುವಣ ಬಿರುಕು ಮೊದಲಾದವುಗಳಲ್ಲೆಲ್ಲಾ ಇವು ಅವಿತು ಕುಳಿತುಕೊಂಡಿರುತ್ತವೆ. ಹಾಸಿಗೆಯನ್ನು ಮಂಚದಿಂದ ನಿವಾರಿಸಿ ಮಂಚದಲ್ಲಿರುವ ಅಷ್ಟೂ ತೂತುಗಳನ್ನು, ಬಿರುಕುಗಳನ್ನು ಮೇಣದ ಬತ್ತಿಯ ಮೇಣದಿಂದ ಮುಚ್ಚಿಬಿಡಬೇಕು. ಹಾಸಿಗೆಯನ್ನು ಒಂದು ಪ್ಲಾಸ್ಟಿಕ್ ಚೀಲ ಅಥವಾ ಝಿಪ್ ಲಾಕ್ ಇರುವ ದೊಡ್ಡ ಚೀಲದಲ್ಲಿ ಹಾಕಿ ಒಂದು ವಾರವಾದರೂ ಇಡಬೇಕು. ಇದರಿಂದ ಒಳಗಿರುವ ತಿಗಣೆಗಳು ಗಾಳಿಯಿಲ್ಲದೇ ಸತ್ತು ಹೋಗುತ್ತವೆ.

ಹಾಸಿಗೆ ಹೊದಿಕೆಗಳ ಗೋಜಲನ್ನು ತೆರವುಗೊಳಿಸಿ

ಹಾಸಿಗೆ ಹೊದಿಕೆಗಳ ಗೋಜಲನ್ನು ತೆರವುಗೊಳಿಸಿ

ತಿಗಣೆಗಳು ಕೇವಲ ಹಾಸಿಗೆಯ ಒಳಗೆ ಮಾತ್ರವಲ್ಲ, ಹೊದಿಕೆ, ತಲೆದಿಂಬು ಮೊದಲಾದ ಕಡೆಯಲ್ಲಿಯೂ ಅಡಗಿ ಕುಳಿತುಕೊಳ್ಳುತ್ತವೆ. ಅಷ್ಟೇ ಅಲ್ಲ, ಪೀಠೋಪಕರಣಗಳ ಸಂದುಗಳು, ಕಿಟಕಿಯ ಪರದೆ, ರಟ್ಟಿನ ಪೆಟ್ಟಿಗೆಗಳು, ಒಗೆಯಲು ಹಾಕಿದ್ದ ಬಟ್ಟೆಗಳ ನಡುವೆ, ಒಟ್ಟಾರೆ ಎಲ್ಲಿ ಕತ್ತಲೆ ಇರುತ್ತದೆಯೋ ಅಲ್ಲೆಲ್ಲಾ ನುಸುಳಿಬಿಡುತ್ತವೆ. ಇದಕ್ಕೆ ಸೂಕ್ತ ಪರಿಹಾರವೆಂದರೆ ಆದಷ್ಟೂ ನಮ್ಮ ಕೋಣೆಯನ್ನು ಗೋಜಲುರಹಿತವಾಗಿಸಿ ಒಪ್ಪ ಓರಣವಾಗಿಸುವುದು. ರಟ್ಟಿನ ಪೆಟ್ಟಿಗೆಗಳ ಒಳಗೆ ಇವು ನುಸುಳಲು ಭಾರೀ ಸ್ಥಳಾವಕಾಶವಿರುವ ಕಾರಣ ಈ ಪೆಟ್ಟಿಗೆಗಳನ್ನು ಮೊದಲು ಕೋಣೆಯಿಂದ ಎಸೆದು ಇದರಲಿದ್ದ ವಸ್ತುಗಳಿಗೆ ಪ್ಲಾಸ್ಟಿಕ್ ಪೆಟ್ಟಿಗೆಗಳ ವ್ಯವಸ್ಥೆ ಮಾಡಿ. ಒಗೆಯುವ ಬಟ್ಟೆಗಳನ್ನು ಲಾಂಡ್ರಿ ಬಕೆಟ್ ನೊಳಗೆ ಹಾಕುವ ಮುನ್ನ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತೆರೆದ ಭಾಗವನ್ನು ಮುಚ್ಚಿ. ಒಗೆದ ಬಟ್ಟೆಗಳನ್ನೂ ಚಿಕ್ಕ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ತೆರೆದ ಭಾಗವನ್ನು ಬಿಸಿಮಾಡಿ ಮುಚ್ಚಿ. ನಿಮ್ಮ ವಾಸಸ್ಥಳವಷ್ಟನ್ನೂ ಆಗಾಗ ವ್ಯಾಕ್ಯೂಮ್ ಕ್ಲೀನರ್ ನಿಂದ ಸ್ವಚ್ಛಗೊಳಿಸುತ್ತಾ ಇರಿ.

ಟೀ ಟ್ರೀ ಅವಶ್ಯಕ ತೈಲ

ಟೀ ಟ್ರೀ ಅವಶ್ಯಕ ತೈಲ

ಟೀ ಟ್ರೀಯಲ್ಲಿರುವ ಅವಶ್ಯಕ ತೈಲವು (essential oil) ತನ್ನ ಅತಿಸೂಕ್ಷ್ಮಾಣು ಪ್ರತಿಬ೦ಧಕ (anti-microbial) ಪರಿಣಾಮಗಳಿಗಾಗಿ ಚಿರಪರಿಚಿತವಾಗಿದ್ದು,ಫ೦ಗಸ್, ವೈರಾಣುಗಳು, ಹಾಗೂ ಬ್ಯಾಕ್ಟೀರಿಯಾಗಳನ್ನೂ ಒಳಗೊ೦ಡ೦ತೆ ಎಲ್ಲಾ ತೆರನಾದ ಅತಿಸೂಕ್ಷ್ಮಾಣು ಜೀವಿಗಳಿ೦ದ ಮುಕ್ತಿ ಹೊ೦ದಲು ಪ್ರಯೋಜನಕಾರಿಯಾಗಿದೆ. ಟೀ ಟ್ರೀ ಸ್ಪ್ರೇಯ ಈ ವಿಶಿಷ್ಟವಾದ ಗುಣಲಕ್ಷಣದ ಕಾರಣದಿ೦ದಾಗಿಯೇ ಇದನ್ನು ಯಶಸ್ವಿಯಾಗಿ ತಿಗಣೆಗಳ ಕಾಟದಿ೦ದ ತಪ್ಪಿಸಿಕೊಳ್ಳಲೂ ಸಹ ಬಳಸಿಕೊಳ್ಳಲಾಗುತ್ತದೆ. ಟೀ ಟ್ರೀ ಅವಶ್ಯಕ ತೈಲದ ಒ೦ದು ದೊಡ್ಡ ಬಾಟಲಿಯನ್ನು ಖರೀದಿಸಿ ತ೦ದು ಅದನ್ನು ಸ್ವಲ್ಪ ನೀರಿನಿ೦ದ ದುರ್ಬಲಗೊಳಿಸಿರಿ. ಈಗ ಈ ಗಿಡಮೂಲಿಕೆಯ ದ್ರಾವಣವನ್ನು ಸ್ಪ್ರೇ ಬಾಟಲ್ ಒ೦ದರಲ್ಲಿ ತು೦ಬಿಸಿ, ದ್ರಾವಣವನ್ನು ಗೋಡೆಗಳು, ಹಾಸಿಗೆಗಳು, ಅಲ್ಮೇರಾಗಳು, ಉಡುಪುಗಳು, ಪೀಠೋಪಕರಣಗಳು, ಮ೦ಚ, ಹೀಗೆ ಮನೆಯ ಪ್ರತಿಯೊ೦ದು ವಸ್ತುವಿನ ಮೇಲೆಯೂ ಸಿ೦ಪಡಿಸಿರಿ. ತಿಗಣೆಗಳನ್ನು ಸ೦ಪೂರ್ಣವಾಗಿ ನಿವಾರಿಸುವ೦ತಾಗಲು ಈ ಪ್ರಕ್ರಿಯೆಯನ್ನು ಪ್ರತಿದಿನವೂ ಬಿಡದೇ ಒ೦ದು ವಾರದ ಕಾಲ ಮು೦ದುವರೆಸಿರಿ.

Most Read: ಉದ್ವೇಗ ಮತ್ತು ಖಿನ್ನತೆಯಿಂದ ಬಳಲುತ್ತಿದ್ದೀರಾ? ಈ ಗಿಡವನ್ನು ನಿಮ್ಮ ಮನೆಯಲ್ಲಿರಿಸಿ, ಪ್ರಯೋಜನವಿದೆ

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆಮನೆಯಲ್ಲಿ ಸದಾ ಅಡುಗೆ ಸೋಡಾ ಇರುವಂತೆ ಮಾಡಿಕೊಳ್ಳುವುದು ಒಳ್ಳೆಯದು. ಅಡುಗೆ ಸೋಡಾ ತಿಗಣೆಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಇದಕ್ಕಾಗಿ ಕೊಂಚ ಪ್ರಮಾಣದ ಅಡುಗೆ ಸೋಡಾವನ್ನು ನೇರವಾಗಿ ತಿಗಣೆಗಳಿರುವ ಸ್ಥಳಗಳಲ್ಲೆಲ್ಲಾ ಚಿಮುಕಿಸುತ್ತಾ ಹೋಗಿ. ಒಂದೆರಡು ದಿನ ಬಿಟ್ಟು ಮತ್ತೆ ಇದೇ ಸ್ಥಳಗಳಲ್ಲಿ ಚಿಮುಕಿಸಿ. ಅಡುಗೆ ಸೋಡಾ ತಿಗಣೆಯ ಮೈಗೆ ತಾಕಿದರೆ ಸಾಕು, ಇದು ಅದರ ಚರ್ಮದಿಂದ ನೀರನ್ನು ಹೀರಿಕೊಂಡು ಒಣಗಿ ಸಾಯುವಂತೆ ಮಾಡುತ್ತದೆ.

ಶಿರ್ಕಾ

ಶಿರ್ಕಾ

ಶಿರ್ಕಾದ ಕಮಟು ವಾಸನೆ ತಿಗಣೆಗಳನ್ನು ನಿಗ್ರಹಿಸಲು ನೆರವಾಗುತ್ತದೆ. ಅತ್ಯುತ್ತಮ ವಿಧಾನವೆಂದರೆ ಪೀಠೋಪಕರಣಗಳ ಒಳಗಿನ ಭಾಗಗಳ ಅಂಚುಗಳನ್ನು, ತೂತುಗಳನ್ನು ಶಿರ್ಕಾದಿಂದ ತೋಯಿಸುವುದು. ಹೀಗೆ ಮಾಡುವುದರಿಂದ ಇದರ ಕಮಟು ವಾಸನೆ ತಡೆಯಲಾಗದೇ ತಿಗಣೆಗಳು ಅಲ್ಲಿಂದ ಪಲಾಯನ ಮಾಡುತ್ತವೆ. ಆದರೆ ಈ ವಾಸನೆ ಒಂದು ವಾರದವರೆಗೆ ಇರುತ್ತದೆ. ಹಾಗಾಗಿ ವಾರದ ಬಳಿಕ ಮತ್ತೊಮ್ಮೆ ಈ ವಿಧಾನವನ್ನು ಮತ್ತೊಮ್ಮೆ ನಿರ್ವಹಿಸಬೇಕು. ಹೀಗೆ ಎರಡು ಅಥವಾ ಮೂರು ವಾರ ಕಾಲ ಶಿರ್ಕಾ ಸಿಂಪಡಿಸಿದರೆ ಮತ್ತೆ ತಿಗಣೆಗಳು ಬರುವುದಿಲ್ಲ.

ಡಯಟೋಮೇಶಿಯಸ್ ಪುಡಿ

ಡಯಟೋಮೇಶಿಯಸ್ ಪುಡಿ

Diatomaceous earth powder ಎಂಬ ಹೆಸರಿನಲ್ಲಿ ಸಿಗುವ ಈ ರಾಸಾಯನಿಕ ಪುಡಿ ಯನ್ನು ನೇರವಾಗಿ ತಿಗಣೆಗಳಿರುವ ಸ್ಥಳಗಳಲ್ಲಿ ಚಿಮುಕಿಸುತ್ತಾ ಹೋಗಿ. 90%ರಷ್ಟು ತಿಗಣೆಗಳು ಮೊದಲ ದಿನವೇ ಸಾಯುತ್ತವೆ. ತಿಗಣೆಗಳ ನಿಗ್ರಹಕ್ಕೆ ಇದು ಅತ್ಯುತ್ತಮ ವಿಧಾನವೆಂದು ಪರಿಗಣಿಸಲ್ಪಟ್ಟಿದೆ.

ಮದ್ಯ

ಮದ್ಯ

ಮದ್ಯದಿಂದ ಪೀಠೋಪಕರಣಗಳ ಒಳಭಾಗವನ್ನು ಉಜ್ಜುವುದೂ ಇನ್ನೊಂದು ವಿಧಾನವಾಗಿದೆ. ಹಾಸಿಗೆಯ ಅಂಚುಗಳು, ಪೀಠೋಪಕರಣಗಳ ಕೆಳಭಾಗ, ಒಳಭಾಗ ಮೊದಲಾದ ಕಡೆಗಳಲ್ಲೆಲ್ಲಾ ಮದ್ಯವನ್ನು ಸಿಂಪಡಿಸಿ ಅಥವಾ ಒದ್ದೆಯಾಗಿಸಿದ ಬಟ್ಟೆಯಿಂದ ಒರೆಸಿ ಒಣಗಿಸಿ. ಈ ವಾಸನೆಗೆ ತಿಗಣೆಗಳು ಸಾಯುತ್ತವೆ.

ಉಪ್ಪು

ಉಪ್ಪು

ಉಪ್ಪಿನ ವಾಸನೆಯೂ ತಿಗಣೆಗಳನ್ನು ಅಟ್ಟಲು ಸಹಕಾರಿಯಾಗಿದೆ. ಉಪ್ಪು ಮೈಮೇಲೆ ಬಿದ್ದ ತಿಗಣೆ ಕೆಲವೇ ನಿಮಿಷಗಳಲ್ಲಿ ಸಾಯುತ್ತದೆ. ಉಪ್ಪನ್ನು ಹೆಚ್ಚಿನ ಸಾಂದ್ರತೆಯಲ್ಲಿ ನೀರಿನಲ್ಲಿ ಕರಗಿಸಿ ಈ ನೀರನ್ನು ತಿಗಣೆಗಳಿರುವ ಭಾಗದಲ್ಲೆಲ್ಲಾ ಸಿಂಪಡಿಸುವ ಮೂಲಕ ತಿಗಣೆಗಳನ್ನು ನಿಗ್ರಹಿಸಬಹುದು.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿಯನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ತಿಗಣೆ ಇರುವ ಭಾಗದಲ್ಲೆಲ್ಲಾ ಸಿಂಪಡಿಸಿದರೆ ಇದರ ಘಾಟಿಗೆ ತಿಗಣೆಗಳೆಲ್ಲಾ ಅಡಗುತಾಣದಿಂದ ಹೊರಬಂದು ಓಡಲಾರಂಭಿಸುತ್ತವೆ. ಈ ವಿಧಾನವನ್ನು ಅನುಸರಿಸುವ ಮುನ್ನ ಕೋಣೆಯ ಎಲ್ಲಾ ವಸ್ತುಗಳನ್ನು ಬಿಸಿಲಿಗೆ ಹಾಕಿ ರಸವನ್ನು ಸಂಪಡಿಸಿ ಬಳಿಕ ಕೋಣೆಯನ್ನುಸ್ವಚ್ಛಗೊಳಿಸಬೇಕು.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಬೇವಿನ ಎಣ್ಣೆಯನ್ನು ಬೇವಿನ ಮರದ ಎಲೆಗಳಿ೦ದ ತಯಾರಿಸಲಾಗುತ್ತದೆ ಅಥವಾ ಉತ್ತರಭಾರತದಲ್ಲಿ ಬೆಳೆಯುವ ಭಾರತೀಯ ಲೈಲಾಕ್ ವೃಕ್ಷದ ಎಲೆಗಳಿ೦ದ ತಯಾರಿಸಲಾಗುತ್ತದೆ. ಬೇವಿನ ಮರವು ತನ್ನ ಅತಿಸೂಕ್ಷ್ಮಾಣುಜೀವಿ ಪ್ರತಿಬ೦ಧಕ ಪ್ರಕ್ರಿಯೆಗಳಿಗೆ ಚಿರಪರಿಚಿತವಾಗಿದ್ದು,ತಿಗಣೆಗಳನ್ನೂ ಒಳಗೊ೦ಡ೦ತೆ ಸೋ೦ಕುಕಾರಕ ಸೂಕ್ಷ್ಮಾಣುಜೀವಿಗಳಿ೦ದ ಮುಕ್ತಿಯನ್ನು ಹೊ೦ದುವ೦ತಾಗಲು ಶತಶತಮಾನಗಳಿ೦ದಲೂ ಬೇವು ಬಳಸಲ್ಪಡುತ್ತಿದೆ. ಯಾವುದೇ ಔಷಧದ ಮಳಿಗೆಯಲ್ಲಿಯೂ ಸಹ ಬೇವಿನ ಎಣ್ಣೆಯು ಲಭ್ಯ. ಬೇವಿನ ಎಣ್ಣೆಯನ್ನು ಕಚ್ಚಾರೂಪದಲ್ಲಿಯೇ ಬಳಸಬೇಕು.ಅದನ್ನು ದುರ್ಬಲಗೊಳಿಸಬಾರದು. ಬೇವಿನ ತೈಲವನ್ನು ಮನೆಯಲ್ಲಿರುವ ಎಲ್ಲಾ ವಸ್ತುಗಳ ಮೇಲೂ ಸಿ೦ಪಡಿಸಿರಿ ಹಾಗೂ ನಿಮ್ಮ ಬಟ್ಟೆಗಳನ್ನು ಗಿಡಮೂಲಿಕೆಯ ತೈಲದೊ೦ದಿಗೆ ಮಿಶ್ರಗೊಳಿಸಿರುವ ಮಾರ್ಜಕ ಅಥವಾ ಡಿಟರ್ಜೆ೦ಟ್ ನಿ೦ದ ಒಗೆಯಿರಿ. ಒ೦ದು ವಾರದವರೆಗೆ ಈ ಪ್ರಕ್ರಿಯೆಯನ್ನು ಪ್ರತಿದಿನವೂ ಬಿಡದೇ ಮು೦ದುವರೆಸಿರಿ.

English summary

Ten Effective Home Remedies To Get Rid Of Bed Bugs

Bed bugs are indeed very common but most people panic and don't know how to make use of the basic home remedies for bed bugs that can help them disappear quickly. Bed bugs are insects that are small oval-shaped, flat and rusty-brown in colour around 5 mm in size. They usually appear in the night as they crawl out of their dark crevices in the night and mainly feed on human blood which results in bed bug bites. Listed here below are some remedies to cure the bed bugs.
Story first published: Saturday, May 18, 2019, 13:13 [IST]
X
Desktop Bottom Promotion