Just In
Don't Miss
- News
ನಾನಿದ್ದಾಗ ಸಾರಿಗೆ ಇಲಾಖೆಯಲ್ಲಿ ಹಣವಿತ್ತು, ಈಗೆಲ್ಲಿ ಹೋಯಿತು?: ಎಚ್ಡಿಕೆ
- Automobiles
ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು
- Sports
ಐಪಿಎಲ್ ಪಂದ್ಯದ ವೇಳೆ ನಿತೀಶ್ ರಾಣಾ 3 ಬೆರಳು ತೋರಿಸಿದ್ಯಾಕೆ?!
- Finance
ಚಿನ್ನದ ಬೆಲೆ ಏರಿಳಿತ: ಏಪ್ರಿಲ್ 12ರ ಬೆಲೆ ಹೀಗಿದೆ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಇನ್ಸ್ಟಾಗ್ರಾಂ ಖಾತೆಯ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿದ ಖ್ಯಾತ ನಿರ್ದೇಶಕ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನೆಯ ಬಳಿ ಜೇನುಗೂಡು ಕಟ್ಟಿದಿಯಾ? ಹಾಗಿದ್ದರೆ ಹೀಗೆ ಮಾಡಿ..
ನಾವು ನಮ್ಮ ಮನೆ ಜೇನುಗೂಡುಗಳನ್ನು ನೋಡಿದರೆ ಕೂಡಲೇ ಅದನ್ನು ಸಾಯಿಸಲು ಪ್ರಯತ್ನ ಪಡುತ್ತೇವೆ ಯಾಕೆಂದರೆ ಅವುಗಳಿಂದ ದೊಡ್ಡ ಸಮಸ್ಯೆ ಉಂಟಾಗುತ್ತದೆ ಎಂಬ ಭಯ ಎಲ್ಲರಲ್ಲೂ ಇರುತ್ತದೆ. ಆದರೆ ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿರುವ ವಿಚಾರವೇನೆಂದರೆ, ನಮ್ಮ ಪ್ರಾಕೃತಿಕ ಸಮತೋಲನ, ಆರೋಗ್ಯ ಮತ್ತು ಪರಾಗಸ್ಪರ್ಷದ ವಿಚಾರದಲ್ಲಿ ಜೇನುಗಳ ಮಹತ್ವ ಬಹಳವಾದದ್ದು.
ಹೆಚ್ಚಿನ ತರಕಾರಿಗಳು ಮತ್ತು ಹಣ್ಣುಗಳನ್ನು ನಾವೇನು ಪ್ರತಿದಿನ ಬಳಕೆ ಮಾಡುತ್ತೀವೋ ಅವುಗಳು ಜೇನುಗಳ ಪರಾದಸ್ಪರ್ಷ ಪ್ರಕ್ರಿಯೆಯಿಂದ ಮಾಡಲ್ಪಟ್ಟಿವೆ. ನಾವು ಕೆಳಗೆ ತಿಳಿಸಿರುವ ಟಿಪ್ಸ್ ಗಳ ಮುಖಾಂತರ ನೀವು ಜೇನುಗಳನ್ನು ನಿಮ್ಮ ಮನೆ ಹತ್ತಿರದಿಂದ ಅವುಗಳನ್ನು ಸಾಯಿಯದೇ ಓಡಿಸಬಹುದಾಗಿದೆ. ಒಂದೇ ಒಂದು ಜೇನು ಹುಳುವನ್ನು ಮನೆಯ ಹತ್ತಿರವೇ ಇಟ್ಟುಕೊಳ್ಳಬೇಡಿ, ಯಾಕೆಂದರೆ ಅವುಗಳಲ್ಲಿ ಒಂದನ್ನು ಬಿಟ್ಟರೂ ಕೆಲವೇ ದಿನಗಳಲ್ಲಿ ಸಾವಿರ ಜೇನುಗಳು ನಿಮ್ಮ ಮನೆಯನ್ನು ಪ್ರವೇಶಿಸಿ ಬಿಡುತ್ತದೆ ಮತ್ತು ಅಷ್ಟೇ ಅಲ್ಲ ಇದು ನಿಮಗೆ, ನಿಮ್ಮ ಕುಟುಂಬಕ್ಕೆ, ನಿಮ್ಮ ಮುದ್ದಿನ ಸಾಕುಪ್ರಾಣಿಗಳಿಗೆ ಅಷ್ಟೇ ಯಾಕೆ ನಿಮ್ಮ ಅಕ್ಕಪಕ್ಕದ ಮನೆಯವರಿಗೂ ಸಮಸ್ಯೆಗೆ ಕಾರಣವಾಗಬಹುದು. ಇದು ನಿಮಗೆ ಭಯಾನಕವಾಗಿ ಅನ್ನಿಸುತ್ತಿರಬಹುದು.ಒಂದು ವೇಳೆ ನೀವು ಕೆಲವು ವಿಚಾರಗಳನ್ನು ಮತ್ತು ಹಂತಗಳನ್ನು ಅನುಸರಿಸಿದರೆ ತುಂಬಾ ಸುಲಭದಲ್ಲಿ ಜೇನುಗಳನ್ನು ನಿಮ್ಮ ಮನೆಯ ಹತ್ತಿರದಿಂದ ಅವುಗಳನ್ನು ಸಾಯಿಸದೇ ಓಡಿಸಬಹುದು.

ಮೊದಲು ಜೇನುಗೂಡು ಎಲ್ಲಿದೆ ಪತ್ತೆ ಮಾಡಿ
ನಿಮ್ಮ ಮನೆಯ ಸುತ್ತಮುತ್ತಲಿನ ಜಾಗವನ್ನು ಸೂಕ್ಷ್ಮವಾಗಿ ಪರೀಕ್ಷೆ ಮಾಡುವ ಮೂಲಕ ಜೇನುಗಳು ಎಲ್ಲಿಂದ ಬಂದವು, ಅವುಗಳ ಗೂಡು ಎಲ್ಲಿ ತಯಾರಾಗಿದೆ ಎಂಬುದನ್ನು ಸುಲಭದಲ್ಲಿ ಪತ್ತೆ ಮಾಡಬಹುದು.ನೀವು ಒಂದು ಅಥವಾ ಎರಡು ಜೇನುಹುಳುಗಳು ನಿಮ್ಮ ಮನೆಯಲ್ಲಿ ಹಾರಾಡುತ್ತಿರುವುದನ್ನು ಗಮನಿಸಿದರೆ ಎಂದರೆ ಖಂಡಿತ ಜೇನುಗೂಡು ಕೂಡ ಸುತ್ತಮುತ್ತ ಎಲ್ಲೋ ಇರುವ ಸಾಧ್ಯತೆ ಇದೆ.ಹಾಗಾಗಿ ಆದಷ್ಟು ಬೇಗನೆ ಜೇನುಗೂಡುಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಾಶ ಮಾಡುವುದು ಬಹಳ ಮುಖ್ಯ. ಜೇನುಗಳನ್ನು ಸಾಯಿಸುವ ಬದಲಾಗಿ ಅವುಗಳನ್ನು ಸ್ಥಳಾಂತರಿಸಲು ಪ್ರಯತ್ನ ಮಾಡಿ. ಆ ನಿಟ್ಟಿನಲ್ಲಿ ಅಗತ್ಯ ಬೀಳುವ ಸಾಧನಗಳನ್ನು ಒಟ್ಟುಗೂಡಿಸಿ.

ಜೇನು ಸಾಕಾಣಿಕಾ ಕೇಂದ್ರದವರ ಸಹಾಯ ಪಡೆಯಿರಿ
ಸ್ಥಳೀಯ ಜೇನುಸಾಕಾಣಿಕಾ ಕೇಂದ್ರದವರ ನೆರವನ್ನು ಪಡೆಯಿರಿ. ಅವರು ಜೇನುಗಳನ್ನು ವೃತ್ತಿಪರವಾಗಿ ಬಳಸುತ್ತಿರುತ್ತಾರೆ. ಹಾಗಾಗಿ ಅವರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುತ್ತದೆ.ನೀವು ಈ ಸೇವೆಯನ್ನು ವೃತ್ತಿಪರ ಕಂಪೆನಿಗಳ ಸಹಾಯದಿಂದ ಕೂಡ ಪಡೆಯಬಹುದು.ಇವರುಗಳು ಜೇನುಹುಳುಗಳನ್ನು ಸಾಯಿಸದೇ ಅವುಗಳನ್ನು ಪರಾಗಸ್ಪರ್ಶಕ್ಕೆ ಬಳಕೆ ಮಾಡುತ್ತಾರೆ ಮತ್ತು ಜೇನುತುಪ್ಪಕ್ಕಾಗಿ ಅವುಗಳ ಬಳಕೆ ಮಾಡುತ್ತಾರೆ ಅದಕ್ಕಾಗಿ ಅವರು ಜೇನು ಹಿಡಿಯು ವ್ಯಾಕ್ಸ್ ಗಳನ್ನು ಬಳಸುತ್ತಾರೆ. ಹೆಚ್ಚಿನ ಕಂಪೆನಿಯನ್ನು ಉಚಿತವಾಗಿ ಮಾಡುತ್ತದೆ.ನೀವು ಕೂಡ ನಿಮ್ಮ ಮನೆಯಲ್ಲಿ ಒಂದು ವೇಳೆ ಜೇನುಹುಳುಗಳ ಓಡಾಟ ಗಮನಿಸಿ ಗೂಡು ಇರುವುದನ್ನು ಪತ್ತೆ ಮಾಡಿದರೆ ನಿಮ್ಮಲ್ಲಿ ಸ್ಥಳೀಯವಾಗಿ ಈ ಕೆಲಸ ಯಾರು ಮಾಡುತ್ತಾರೆ ಎಂಬುದನ್ನು ತಿಳಿಯಿರಿ.

ಜೇನುಗೂಡುಗಳಿಗೆ ಹೊಗೆ ಹಾಕುವ ಪ್ರಕ್ರಿಯೆ
ಜೇನುಗೂಡುಗಳಿಂದ ಜೇನುನೊಣಗಳನ್ನು ತೆಗೆದುಹಾಕಲು ನಾವು ಹೊಗೆ ಮತ್ತು ಧೂಪವನ್ನು ಬಳಸಬಹುದು. ಜೇನುತುಪ್ಪವನ್ನು ತೆಗೆಯುವ ಸಂದರ್ಬದಲ್ಲಿ ಹೆಚ್ಚಾಗಿ ಇದೇ ವಿಧಾನವನ್ನು ಬಳಕೆ ಮಾಡಲಾಗುತ್ತದೆ. ಹೊಗೆ ಮತ್ತು ಧೂಪವನ್ನು ಬಳಕೆ ಮಾಡಿದಾಗ ಜೇನುನೊಣಗಳು ತಮ್ಮ ಸ್ಥಾನದಿಂದ ನಿಧಾನವಾಗಿ ಜಾಗ ಖಾಲಿ ಮಾಡುತ್ತವೆ. ಒಮ್ಮೆ ಗೂಡು ಖಾಲಿಯಾದರೆ, ನಿಧಾನವಾಗಿ ಅದನ್ನು ತೆಗೆಯಿರಿ. ಜೇನುತುಪ್ಪವನ್ನು ಸಂಗ್ರಹಿಸಿ ಮತ್ತು ಜೇನುಗೂಡು ಇದ್ದ ಜಾಗವನ್ನು ಸ್ವಚ್ಛಗೊಳಿಸಿ ಆ ಮೂಲಕ ಮತ್ತೆ ಜೇನುನೊಣಗಳು ಆ ಜಾಗಕ್ಕೆ ಆಕರ್ಷಣೆಗೊಳ್ಳುವುದು ತಪ್ಪುತ್ತೆ.
ರಾತ್ರಿಯ ವೇಳೆಯಲ್ಲಿ ಜೇನುಗೂಡಿಗೆ ಪೇಪರ್ ಸುಟ್ಟು ಹಾಕಿ ಅಥವಾ ಕಟ್ಟಿಗೆಗಳನ್ನು ಸುಟ್ಟು ಹೊಗೆ ಹಾಕಿ
ಒಂದು ವೇಳೆ ನಿಮ್ಮ ಮನೆಯಲ್ಲಿ ಜೇನುಗೂಡುಗಳನ್ನು ಗಮನಿಸಿದರೆ, ರಾತ್ರಿಯ ವೇಳೆಯಲ್ಲಿ ಇಲ್ಲವೇ ಸಂಜೆಯ ಹೊತ್ತಲ್ಲಿ ಜೇನುಗೂಡಿಗೆ ಪೇಪರ್ ಸುಟ್ಟು ಹಾಕಿ ಅಥವಾ ಕಟ್ಟಿಗೆಗಳಿಂದ ಹೊಗೆ ಹಾಕುವ ಮೂಲಕ ಅವುಗಳನ್ನು ಓಡಿಸಬಹುದು. ನೀವು ಸರಿಯಾದ ಉಡುಗೆ ಧರಿಸಿ ಈ ಕೆಲಸ ಮಾಡಲು ಮುಂದಾಗಬೇಕು. ಮತ್ತು ಜೇನುನೊಣಗಳು ಅಡಗಿ ಕೂರಲು ಮತ್ತು ತಪ್ಪಿಸಿಕೊಂಡು ಹೋಗಲು ಯಾವುದೇ ಅವಕಾಶವನ್ನು ನೀಡಬೇಡಿ.

ಜೇನುಗಳನ್ನು ಆಕರ್ಷಣೆಗೆ ಒಳಪಡಿಸುವ ವಸ್ತುಗಳನ್ನು ದೂರವಿಡಿ
ಜೇನುನೊಣಗಳು ಯಾವಾಗಲೂ ಸೋರಿಕೆಯಾಗುವ ನೀರಿನ ಟ್ಯಾಂಕ್ ಗಳು ಮತ್ತು ತೆರೆದ ಕಾರಂಜಿಗಳಿಂದಾಗಿ ಆಕರ್ಷಣೆಗೆ ಒಳಗಾಗುತ್ತದೆ. ಜೇನುನೊಣಗಳು ಆಕರ್ಷಣೆಗೆ ಒಳಪಡುವ ಇಂತಹ ಎಲ್ಲಾ ವಸ್ತುಗಳನ್ನು ದೂರವಿಡಿ.ಕೇವಲ ಒಂದು ದಿನಕ್ಕಾಗಿಯೂ ಜೇನುಹುಳಗಳಿಗೆ ಆರಾಮದಾಯಕ ವಾತಾವರಣವನ್ನು ನಿಮ್ಮ ಮನೆಯಲ್ಲಿ ಸೃಷ್ಟಿಸಬೇಡಿ. ಒಂದು ವೇಳೆ ಹಾಗೆ ಆರಾಮದಾಯಕ ಅನುಭವವನ್ನು ನಿಮ್ಮ ಪ್ರದೇಶದಲ್ಲಿ ಜೇನುನೊಣಗಳು ಪಡೆದವು ಅಂದರೆ ಅವು ನಿಮ್ಮ ಪ್ರದೇಶದಿಂದ ಹೋಗಲು ಬಿಲ್ ಕುಲ್ ಒಪ್ಪುವುದಿಲ್ಲ.ಜೇನುನೊಣಗಳ ಗೂಡನ್ನು ಸಂಪೂರ್ಣ ನಾಶಪಡಿಸುವಿಕೆಯಿಂದಾಗಿ ಅವುಗಳು ನಿಮ್ಮ ಸ್ಥಳ ಬಿಟ್ಟು ಕದಲುತ್ತವೆ.

ಜೇನುಗಳ ವಿರುದ್ಧ ಕಾರ್ಯಾಚರಣೆ ಮಾಡಲು ಸೂಕ್ತ ಸಮಯ ಯಾವುದು?
ಜೇನುನೊಣಗಳು ಮುಂಜಾವಿನಲ್ಲಿ ಮತ್ತು ಸಂಜೆಯ ಹೊತ್ತನಲ್ಲಿ ಗೂಡುಗಳಲ್ಲೇ ವಿರಮಿಸುತ್ತವೆ. ಯಾವಾಗ ನಿಮ್ಮ ಮನೆಯ ಸುತ್ತ ಜನರ ಓಡಾಟ ಕಡಿಮೆ ಇರುತ್ತೋ ಅಂತಹ ಸಮಯದಲ್ಲಿ ನೀವು ಜೇನುಗೂಡನ್ನು ತೆಗೆಯುವ ಕೆಲಸಕ್ಕೆ ಮುಂದಾಗಬೇಕು. ವಸಂತಕಾಲದ ಆರಂಭದಲ್ಲಿ,ಚಳಿಗಾಲದ ಕೊನೆಯಲ್ಲಿ ಈ ಕೆಲಸ ಮಾಡಬಹುದು. ಸಂಜೆ ಅಥವಾ ರಾತ್ರಿಯ ಹೊತ್ತು ಬಹಳ ಸೂಕ್ತವಾದದ್ದು. ಜೇನುಗೂಡನ್ನು ತೆಗೆಯುವ ಕೀಟನಾಶಕವನ್ನು ಬಳಸಿ ಮತ್ತು ಆದಷ್ಟು ಬೇಗ ಜೇನುಗೂಡನ್ನು ನಿಮ್ಮ ಪ್ರದೇಶದಿಂದ ನಿವಾರಿಸಿ.

ನೀವು ಅಲರ್ಜಿ ಹೊಂದಿರುವವರಾಗಿದ್ದರೆ ಸೂಕ್ತ ವೃತ್ತಿಪರರನ್ನು ಕರೆಸಿ
ನೀವು ಅಲರ್ಜಿ ಇರುವವರಾಗಿದ್ದರೆ,ಈ ಕೆಲಸಕ್ಕೆ ಕೈ ಹಾಕುವ ಮುನ್ನ ಸ್ವಲ್ಪ ಯೋಚಿಸಬೇಕಾಗುತ್ತದೆ. ಯಾತೆಂದರೆ ಅಲರ್ಜಿ ಇರುವವರಿಗೆ ಒಂದು ವೇಳೆ ಜೇನುನೊಣಗಳು ಕಚ್ಚಿದರೆ ಗಂಭೀರ ಆರೋಗ್ಯ ಸಮಸ್ಯೆಗಳಾಗುವ ಸಾಧ್ಯತೆಗಳಿರುತ್ತದೆ. ಉದಾಹರಣೆಗೆ ಉಸಿರಾಟದ ಸಮಸ್ಯೆ, ವಾಂತಿ, ಮೈಯಲ್ಲೆಲ್ಲಾ ಗುಳ್ಳೆಗಳು ಏಳುವುದು ಇತ್ಯಾದಿ. ಇವುಗಳು ಅತಿಯಾಗಿ ನಿಮ್ಮನ್ನು ಅಟ್ಯಾಕ್ ಮಾಡಿದರೆ ಜೀವಕ್ಕೂ ಹಾನಿಯಾಗಬಹುದು. ಹಾಗಾಗಿ ಅಲರ್ಜಿ ಇರುವವರು ಆದಷ್ಟು ಪ್ರೊಫೆಷನಲ್ ಗಳ ಮೊರೆ ಹೋಗುವುದೇ ಒಳಿತು.

ಜೇನುಗೂಡುಗಳನ್ನು ಸೋಪು ನೀರಿನಿಂದ ತೊಡೆದುಹಾಕಿ
ಸೋಪು ನೀರಿನಿಂದ ಸುಲಭದಲ್ಲಿ ಜೇನುನೊಣಗಳನ್ನು ಓಡಿಸಬಹುದು. ಒಂದು ಭಾಗ ಸೋಪಿಗೆ ನಾಲ್ಕು ಭಾಗದಷ್ಟು ನೀರನ್ನು ಸೇರಿಸಿ ಅದನ್ನು ಒಂದು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಆ ದ್ರಾವಣವನ್ನು ಜೇನುಗೂಡಿಗೆ ಸ್ಪ್ರೇ ಮಾಡಬೇಕು. ಈ ಮೆಥೆಡ್ ನಿಂದ ಅರ್ಧಭಾಗ ಜೇನುಗೂಡನ್ನು ನಿವಾರಣೆ ಮಾಡಲು ಮಾತ್ರ ಸಾಧ್ಯವಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

ಸೂಕ್ತವಾದ ಉಡುಗೆಗಳನ್ನು ಧರಿಸಿ
ಒಂದು ವೇಳೆ ನೀವು ಜೇನುನೊಣಗಳನ್ನು ಓಡಿಸುವ ಕೆಲಸಕ್ಕೆ ಕೈ ಹಾಕಿದರೆ ಆಗ ಗಮನದಲ್ಲಿಡಬೇಕಾದ ಮಹತ್ವ ವಿಚಾರವೇನೆಂದರೆ ಸರಿಯಾದ ಉಡುಗೆಗಳನ್ನು ನೀವು ಧರಿಸಿರಬೇಕು ಎಂಬುದಾಗಿದೆ.ತಿಳಿಯಾದ ಬಣ್ಣದ ಬಟ್ಟೆಗಳನ್ನು ಧರಿಸಿ ಮತ್ತು ಮೃದುವಾದ ಮೇಲ್ಮೈ ಹೊಂದಿರುವ ಬಟ್ಟೆ ಧರಿಸಿ ಇಲ್ಲದೇ ಇದ್ದರೆ ಜೇನುನೋಣಗಳು ಹೆಚ್ಚು ಉಲ್ಬಣಗೊಳ್ಳಬಹುದು.ನಿಮ್ಮ ಬಟ್ಟೆ ಹೆಚ್ಚು ತೆಳುವಾಗಿರದಂತೆ ನೋಡಿಕೊಳ್ಳಿ, ಇಲ್ಲದೇ ಇದ್ದರೆ ಜೇನುನೊಣಗಳು ನಿಮ್ಮನ್ನು ಕಚ್ಚುವ ಸಾಧ್ಯತೆಗಳಿರುತ್ತದೆ. ಕೈಗಳಿಗೆ ದಪ್ಪನೆಯ ಗ್ಲೌಸ್ ಧರಿಸಿ ಮತ್ತು ತಲೆಗೆ ಹೆಲ್ಮೆಟ್ ಧರಿಸಿ ಸರಿಯಾದ ಭದ್ರತೆಯನ್ನು ತೆಗೆದುಕೊಳ್ಳಿ. ಜೇನುನೊಣಗಳಿಂದ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳಿ. ಯಾವುದೇ ಡಿಯೋಡ್ರಂಟ್ ಅಥವಾ ಸುಗಂಧ ದ್ರವ್ಯಗಳನ್ನು ಬಳಕೆ ಮಾಡಬೇಡಿ ಯಾಕೆಂದರೆ ಇದರಿಂದ ಜೇನುನೊಣಗಳು ಹೂವುಗಳ ಪರಿಮಳವೆಂದು ಗೊಂದಲಕ್ಕೀಡಾಗಿ ಕಚ್ಚಲು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಪರಾಗಸ್ಪರ್ಷ ಮತ್ತು ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ಜೇನುನೊಣಗಳು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಆದರೆ ಅವುಗಳೂ ಕೂಡ ಕೀಟಗಳಾಗಿದ್ದು, ನಿಮಗೆ, ನಿಮ್ಮ ಕುಟುಂಬ ಸದಸ್ಯರಿಗೆ ಮತ್ತು ಸಾಕುಪ್ರಾಣಿಗಳಿಗೆ ತೊಂದರೆ ನೀಡುವ ಸಾಧ್ಯತೆ ಇರುತ್ತದೆ.ಹಾಗಾಗಿ, ನಿಮ್ಮ ವಾಸಿಸುವ ಪ್ರದೇಶದಲ್ಲಿ ಜೇನುನೊಣಗಳು ವಾಸ್ತವ್ಯ ಹೂಡಲು ಪ್ರಯತ್ನಿಸುತ್ತಿದ್ದರೆ ಆದಷ್ಟು ಬೇಗ ಅವುಗಳನ್ನು ಸಾಯಿಸದೇ ಕೇವಲ ಸ್ಥಳಾಂತರಿಸಲು ಬೇಕಾದ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಿ.