For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಸಲಹೆಗಳು

By Jaya Subramanya
|

ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭ ವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹಾರವಾದರೂ ಹೇಗೆ ಕಂಡುಹಿಡಿಯಲು ಸಾಧ್ಯ. ಹೀಗೆ ನಿಮ್ಮ ಜೀವನದಲ್ಲೂ ಹಲವು ಬಾರಿ ಯಾವುದೇ ಸರಿಯಾದ ಕಾರಣವಿಲ್ಲದೆ ಸಮಸ್ಯೆಗಳು ಎದುರಾಗಿರಬಹುದು. ಯಾವುದೇ ವೈದ್ಯರಲ್ಲಿ ಹೋದರೂ ಅನಾರೋಗ್ಯವೇ ಗುಣವಾಗುವುದಿಲ್ಲ, ಯಾವುದೇ ವ್ಯವಹಾರದಲ್ಲೂ ಲಾಭವಾಗುವುದಿಲ್ಲ ಹೀಗೆ ಅನೇಕ ವೇಳೆ ಏನೇ ಮಾಡಿದರೂ ನಷ್ಟವೇ ಆಗುತ್ತಿರಬಹುದು. ನಿಮ್ಮ ಪ್ರಯತ್ನದ ಹೊರತಾಗಿಯೂ ನಿಮ್ಮ ಯಶಸ್ಸಿನಲ್ಲಿ ನಿಮ್ಮ ಕೈ ಹಿಡಿಯುವ ಇನ್ನೂ ಅನೇಕ ವಿಷಯಗಳಿವೆ.

ಪ್ರಾಚೀನ ಭಾರತೀಯ ಋಷಿ-ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಇಂದಿನ ದಿನಗಳಲ್ಲಿ ವಾಸ್ತು ನಂಬದ ಜನರು ಸಿಗುವುದು ತುಂಬಾ ವಿರಳ. ಪ್ರತಿಯೊಬ್ಬರು ವಾಸ್ತುವಿನೊಳಗೆ ಬಂಧಿಯಾಗಿರುವರು. ಇದು ಕಚೇರಿ ಅಥವಾ ಮನೆಯೇ ಆಗಿರಬಹುದು. ಕೆಲವರು ಗೊತ್ತಿಲ್ಲದೆ ವಾಸ್ತು ಅಳವಡಿಸಿಕೊಂಡರೆ ಇನ್ನು ಕೆಲವರು ವಾಸ್ತು ತಜ್ಞರ ಅಭಿಪ್ರಾಯದ ಪ್ರಕಾರ ಎಲ್ಲವನ್ನು ಮಾಡುವರು. ವಾಸ್ತುವಿನಲ್ಲಿ ಕನ್ನಡಿ ಎನ್ನುವುದು ತುಂಬಾ ಪ್ರಮುಖ ಪಾತ್ರ ವಹಿಸುವುದು. ಕನ್ನಡಿಯು ನಿಮ್ಮ ಮನೆಯಲ್ಲಿ ಶಕ್ತಿಯನ್ನು ತರಬಹುದು ಅಥವಾ ನಾಶ ಮಾಡಬಹುದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ನಿಮ್ಮ ಅಂದದ ಅರಮನೆಯಲ್ಲಿ ಸುಖ ಶಾಂತಿ ನೆಲೆಸಿರಬೇಕು ಎಂದಾದಲ್ಲಿ ಕೆಲವೊಂದು ವಾಸ್ತು ನಿಯಮಗಳನ್ನು ನೀವು ಅನುಸರಿಸಲೇಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಅದೇನು ಎಂಬುದನ್ನು ಕಂಡುಕೊಳ್ಳೋಣ.

ಮನೆಯ ಮುಂಬಾಗಿಲು

ಮನೆಯ ಮುಂಬಾಗಿಲು

Image source

ಮನೆಯಲ್ಲಿ ಚಿಕ್ಕ ಪುಟ್ಟ ಸ್ಥಳವನ್ನು ಕೂಡ ಅಂದಗೊಳಿಸುವುದರಿಂದ ನಿಮ್ಮ ಮನೆಯ ಸೌಂದರ್ಯ ಇಮ್ಮಡಿಯಾಗುತ್ತದೆ. ಹೀಗಿದ್ದಾಗ ಮನೆಯ ಮುಂಬಾಗಿಲನ್ನು ನೀವು ಸಾಧ್ಯವಾದಷ್ಟು ದೊಡ್ಡದಾಗಿ ಇರಿಸಿಕೊಂಡಲ್ಲಿ ಇದು ಮನೆಯ ಸೌಂದರ್ಯಕ್ಕೆ ಕಲಶವಿಟ್ಟಂತೆ ಕಾಣುವುದರ ಜೊತೆಗೆ ಧನಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶವಾಗುತ್ತದೆ. ಈ ಬಾಗಿಲಿಗೆ ಯಾವುದೇ ಅಡೆತಡೆಯನ್ನು ಇರಿಸಬೇಡಿ. ಆದಷ್ಟು ಮುಕ್ತ ಸ್ಥಳಾವಕಾಶವನ್ನು ಕಲ್ಪಿಸಿ. ಇದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಗೊಳ್ಳುತ್ತದೆ. ಮನೆಯ ಮುಂಬಾಗಿಲಿಗೆ ಎದುರಾಗಿ ಯಾವುದೇ ಕಿಟಕಿ, ಬಾಗಿಲು ಇಲ್ಲ ಎಂಬುದನ್ನು ದೃಢಪಡಿಸಿಕೊಳ್ಳಿ. ಇದರಿಂದ ಧನಾತ್ಮಕ ಶಕ್ತಿ ಮುಕ್ತವಾಗಿ ಮನೆಯೊಳಗೆ ಸಂಚರಿಸುತ್ತದೆ.

ಸೂರ್ಯನ ಶಕ್ತಿ ಮನೆಗೆ ಬೇಕು

ಸೂರ್ಯನ ಶಕ್ತಿ ಮನೆಗೆ ಬೇಕು

Image source

ಸೂರ್ಯನನ್ನು ಶಕ್ತಿಯ ಮೂಲ ಸಾರ ಎಂದು ಕರೆಯಲಾಗುತ್ತದೆ. ಹಾಗೂ ವಾಸ್ತು ಶಾಸ್ತ್ರದಲ್ಲಿ ಸೂರ್ಯನಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಮನೆಯನ್ನು ನಿರ್ಮಿಸುವ ಸಂದರ್ಭದಲ್ಲಿ ಮನೆಯೊಳಗೆ ಸಾಕಷ್ಟು ಬೆಳಕು ಹರಿದಾಡುವಂತೆ ನೋಡಿಕೊಳ್ಳಿ. ಇದರಿಂದ ಮನೆಗೊಳಗೆ ಧನಾತ್ಮಕ ಶಕ್ತಿ ಉತ್ಪನ್ನವಾಗುತ್ತದೆ ಹಾಗೂ ನಿತ್ಯವೂ ಸೂರ್ಯನ ಬೆಳಕಿನಿಂದ ನಿಮ್ಮ ಆತ್ಮವು ಪುನಶ್ಚೇತನಗೊಳ್ಳುತ್ತದೆ. ದೇಹಕ್ಕೆ ನವ ಕಳೆ ದೊರೆಯುತ್ತದೆ.

ಬಣ್ಣಗಳ ಶಕ್ತಿ

ಬಣ್ಣಗಳ ಶಕ್ತಿ

Image source

ನಮ್ಮ ಜೀವನದಲ್ಲಿ ಬಣ್ಣಗಳು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿವೆ. ನಿಸರ್ಗದ ಬಣ್ಣವಾಗಿರುವ ಹಸಿರು ನಮ್ಮ ಮೈ ಮನಸ್ಸಿಗೆ ಮುದ ನೀಡುತ್ತವೆ ಅಂತೆಯೇ ಮನೆಯೊಳಗೆ ಕೂಡ ಈ ಬಣ್ಣಗಳ ಆಟವನ್ನು ನೀವು ನಡೆಸಬಹುದಾಗಿದೆ. ಏಳು ಬಣ್ಣಗಳು ನಿಮ್ಮ ಮನೆಗೆ ವಿಶಿಷ್ಟ ಕಳೆಯನ್ನು ನೀಡುತ್ತವೆ. ಅಂತೆಯೇ ಮನೆಯ ಧನಾತ್ಮಕ ಅಂಶವನ್ನು ಇಮ್ಮಡಿಗೊಳಿಸುವಲ್ಲಿ ನೆರವಾಗುತ್ತವೆ. ಮನೆಯನ್ನು ಆದಷ್ಟು ಉತ್ತಮವಾಗಿ ಸಿಂಗರಿಸಿಕೊಳ್ಳಿ ಅಂತೆಯೇ ಆದಷ್ಟು ತಿಳಿಯಾದ ಬಣ್ಣಗಳನ್ನು ಬಳಸಿ

ಸ್ವಚ್ಛ ಮತ್ತು ನಿಖರತೆ

ಸ್ವಚ್ಛ ಮತ್ತು ನಿಖರತೆ

Image source

ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ವಾಸ್ತು ದೋಷದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಮನೆಯನ್ನು ಸ್ವಚ್ಛವಾಗಿ ಸಂಘಟಿತವಾಗಿ ಇರಿಸಿಕೊಳ್ಳುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಗೊಳ್ಳುತ್ತದೆ ಹಾಗೂ ಶಾಂತಿ ಉತ್ಪಾದನೆಯಾಗುತ್ತದೆ. ಮನೆಯಲ್ಲಿ ಯಾವುದೇ ಮುರಿದ ಅಥವಾ ಹಳೆಯ ಉಪಯೋಗಕ್ಕೆ ಬಾರದ ವಸ್ತುಗಳನ್ನು ಇರಿಸಬೇಡಿ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಕುಂಠಿತಗೊಳ್ಳಬಹುದು.

ಉಪ್ಪಿನ ಶಕ್ತಿ

ಉಪ್ಪಿನ ಶಕ್ತಿ

Image source

ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ದೂರ ಮಾಡುವಲ್ಲಿ ಉಪ್ಪಿನ ಕರಾಮತ್ತು ಅತ್ಯದ್ಭುತವಾಗಿದೆ. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಸಮತೋಲನಗೊಳಿಸುವಲ್ಲಿ ಉಪ್ಪು ಸಹಕಾರಿಯಾಗಿದೆ. ನಿಮ್ಮ ಮನೆಯಲ್ಲಿ ನೀವು ಋಣಾತ್ಮಕ ಅಂಶವನ್ನು ನೀವು ಅನುಭವಿಸುತ್ತಿದ್ದರೆ, ಈಶಾನ್ಯ ಮತ್ತು ಆಗ್ನೇಯ ದಿಕ್ಕಿನಲ್ಲಿ ಉಪ್ಪು ಇರುವ ಪಾತ್ರೆಯನ್ನು ಇರಿಸಿ.

ಸಂಗೀತದ ಪ್ರಶಾಂತತೆ

ಸಂಗೀತದ ಪ್ರಶಾಂತತೆ

Image source

ಸಂಗೀತದ ಧ್ವನಿಯು ಧನಾತ್ಮಕ ಶಕ್ತಿಯನ್ನು ಹೊಂದಿರುವ ಮನೆಗಳಲ್ಲಿ ನಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವಲ್ಲಿ ನೆರವಾಗಿದೆ. ಭಜನೆಗಳು, ಸಂಗೀತ ವಾದ್ಯಗಳು ಅಥವಾ ಯಾವುದೇ ಮನೋಭಾವವನ್ನು, ಅದರಲ್ಲೂ ವಿಶೇಷವಾಗಿ ಬೆಳಗಿನ ಮತ್ತು ಸಂಜೆ ಸಮಯ ಪ್ಲೇ ಮಾಡಿ ಮತ್ತು ಅದನ್ನು ಆಲಿಸಿ. ಕೆಲವೊಂದು ಧ್ವನಿ ಮಾಡುವ ಸಂಗೀತ ಉಪಕರಣಗಳು ಅಥವಾ ದೇವಾಲಯದ ಗಂಟೆಗಳಿಂದ ಸಂಗೀತವು ಋಣಾತ್ಮಕತೆಯನ್ನು ಒಡೆಯುತ್ತದೆ. ಗಾಳಿಗೆ ತೂಗಾಡುವ ಸಂಗೀತದ ಉಪಕರಣಗಳನ್ನು ಮನೆಯ ಹೊರಗೆ ತೂಗು ಹಾಕಿ ಇದರಿಂದ ಬರುವ ಧ್ವನಿ ಕೂಡ ಮನೆಗೆ ಒಳ್ಳೆಯದಾಗಿದೆ.

ಸರ್ವಶಕ್ತನ ವಾಸಸ್ಥಾನ

ಸರ್ವಶಕ್ತನ ವಾಸಸ್ಥಾನ

Image source

ಒಂದು ದೇವಸ್ಥಾನವನ್ನು ನೆನೆಸಿಕೊಂಡರೆ ಮತ್ತು ಎಲ್ಲಾ ಧನಾತ್ಮಕ ಆಲೋಚನೆಗಳು ಮತ್ತು ಶಕ್ತಿಯು ನಿಮ್ಮನ್ನು ಸಂಚಲನವಾಗುತ್ತದೆ, ಅಲ್ಲವೇ? ನೀವು ನಾಸ್ತಿಕರಾಗಿದ್ದರೂ ಸಹ, ನಿಮ್ಮ ಮನೆಯಲ್ಲಿ ಪ್ರತಿಮೆಗಳು, ದೇವರ ಚಿತ್ರಗಳು, ಧಾರ್ಮಿಕ ಚಿಹ್ನೆ ಅಥವಾ ಸಣ್ಣ ಗುಡಿಯನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ. ಇದು ಧನಾತ್ಮಕ ಕಂಪನಗಳು ಮತ್ತು ಶಾಂತಿಯುತ ಶಕ್ತಿಯೊಂದಿಗೆ ಮನೆಗೆ ಉತ್ತಮವಾಗಿದೆ. ದೇವರ ಪ್ರತಿಮೆಗಳನ್ನು ಮನೆಯ ಹೊರಗೆ ನೇತಾಡಿಸಬೇಡಿ ಹಾಗೂ ಮುಂಬಾಗಿಲನ್ನು ಎದುರಿಸುವಂತೆ ಇರಿಸಬೇಡಿ.

ವಾಸ್ತು ಶಾಸ್ತ್ರ, ವಾಸ್ತುಶೈಲಿಯ ಪುರಾತನ ಅತೀಂದ್ರಿಯ ತತ್ವಶಾಸ್ತ್ರವಾಗಿದ್ದು ಋಣಾತ್ಮಕ ಅಂಶವನ್ನು ನಿವಾರಿಸಿ ನಿಮಗಾಗಿ ಪರಿಪೂರ್ಣ ಮನೆಯನ್ನು ವಾಸ್ತು ಅಂಶಗಳ ಮೂಲಕ ವಿನ್ಯಾಸಗೊಳಿಸಬಹುದು. ಆದ್ದರಿಂದ, ಅದರ ಸಹಾಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಿ.

English summary

7-vastu-tips-to-bring-positive-energy-to-your-home

This is the energy that affects our mind and soul, consciously or unconsciously. Energy is everywhere. In fact, the universe is made up of energy and our home is a part of this universe. It is quite obvious that we want our home to be filled with positive vibes, so that we can live a blessed life with our family in our peaceful abode. Vastu, the ancientscience of architecture, helps us to build a happy home filled with positive energy. Follow the simple principles of Vastu and live a happy, healthy and prosperous life.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more