Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಹೊಸ ವರ್ಷಕ್ಕಾಗಿ ಮನೆಗೆ ಹೊಸತನದ ಹೊಳಪು ನೀಡಿ
ಹೊಸ ವರುಷದಲ್ಲಿ ಎಲ್ಲದರಲ್ಲೂ ನಾವು ಹೊಸತನವನ್ನು ಕಾಣಲು ಬಯಸುತ್ತೇವೆ. ನಮ್ಮ ಪರಿಸರ, ನಮ್ಮ ಹವ್ಯಾಸಗಳು, ಸ್ನೇಹಿತರು, ಜೀವನ ಶೈಲಿ, ಉಡುಗೆ ತೊಡುಗೆ ಹೀಗೆ ಪ್ರತಿಯೊಂದರಲ್ಲೂ ಹೊಸ ವರುಷದ ಹೊಸ ನಿರ್ಧಾರಗಳನ್ನು ಬೆಸೆದು ಈ ರೀತಿಯೇ ಆರಂಭವನ್ನು ಮಾಡಬೇಕು ಎಂಬುದಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ. ಮನೆಯ ಕಿಟಕಿಯನ್ನು ಅಲಂಕರಿಸಲು ನವೀನ ಸಲಹೆಗಳು
ಇನ್ನು ನಾವು ವಾಸಿಸುವ ಪುಟ್ಟ ಅರಮನೆಯ ಅಂದ ಚೆಂದವನ್ನೂ ಇನ್ನಷ್ಟು ಸೊಗಸಾಗಿಸುವಲ್ಲಿ ಹೊಸ ವರುಷದ ಚಮತ್ಕಾರವನ್ನು ಬಳಸಬೇಕು ಎಂದಿದ್ದೀರಾ ಎಂದಾದಲ್ಲಿ ನಮ್ಮ ಈ ಲೇಖನದಲ್ಲಿ ನಿಮಗಾಗಿ ಅದ್ಭುತವಾದ ಉಪಾಯಗಳಿವೆ. ನಿಮ್ಮ ಮನೆಯನ್ನು ಸರಳವಾಗಿ ಚೊಕ್ಕಟವಾಗಿ ಅರಮನೆಯನ್ನಾಗಿ ತಯಾರು ಮಾಡುವುದು ಹೇಗೆ ಎಂಬುದನ್ನು ಕುರಿತಂತೆ ಇಂದಿನ ಲೇಖನದಲ್ಲಿ ನಾವು ಮಾಹಿತಿಯನ್ನು ನೀಡಲಿದ್ದೇವೆ.....

ಸಾಕಷ್ಟು ಸ್ಥಳವನ್ನು ರೂಪಿಸುವುದು
ಮನೆಯಲ್ಲಿ ಬೇಡದೇ ಇರುವ ಸಾಮಾನುಗಳನ್ನು ಆದಷ್ಟು ನಿವಾರಿಸಿಕೊಂಡು ಹೆಚ್ಚುವರಿ ಸ್ಥಳವನ್ನು ರೂಪಿಸಿಕೊಳ್ಳಿ. ಮಕ್ಕಳ ಬೇಡದೇ ಇರುವ ಆಟದ ಸಾಮಾನುಗಳನ್ನು ಇತರರಿಗೆ ನೀಡಿ. ಇದರಿಂದ ನೀವು ಖುಷಿಯಾಗುತ್ತೀರಿ ಮತ್ತು ಪಡೆದುಕೊಂಡವರೂ ನಿಮ್ಮನ್ನು ಸ್ಮರಿಸಿಕೊಳ್ಳುತ್ತಾರೆ.

ಹೂಗಳ ಅಲಂಕಾರ
ಹೂಗಳನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಮನೆಯಲ್ಲಿ ಸುವಾಸನೆಯನ್ನು ಪಸರಿಸುವ ಹೂಗಳಿಂದ ಮನೆಯ ಅಲಂಕಾರವನ್ನು ಇಮ್ಮಡಿಗೊಳಿಸಬಹುದಾಗಿದೆ. ಹ್ಯಾಂಗಿಂಗ್ ವಾಸ್‌ಗಳನ್ನು ಮನೆಯ ಅಲಂಕಾರಕ್ಕಾಗಿ ನಿಮಗೆ ಬಳಸಿಕೊಳ್ಳಬಹುದಾಗಿದೆ.

ಸುವಾಸನೆಯನ್ನು ಪಸರಿಸಿ
ನಿಮ್ಮ ಕೊಠಡಿಯನ್ನು ತಾಜಾಗೊಳಿಸುವ ಸುವಾಸನೆಯನ್ನು ಮನೆಯ ಸುತ್ತಲೂ ಪಸರಿಸಿ.
ಮಾರುಕಟ್ಟೆಯಲ್ಲಿ ಸುವಾಸಿತ ದ್ರವ್ಯಗಳು ದೊರೆಯುತ್ತಿದ್ದು ಅವುಗಳನ್ನು ಬಳಸಿಕೊಂಡು ಮನೆಯ ಸುವಾಸನೆಯನ್ನು ಇಮ್ಮಡಿಗೊಳಿಸಬಹುದಾಗಿದೆ.

ಮೆಚ್ಚಿನ ಚಿತ್ರಗಳನ್ನು ತೂಗುಹಾಕಿ
ಮನೆಯ ಗೋಡೆಗಳಲ್ಲಿ ಅಥವಾ ಕೊಠಡಿಗಳಲ್ಲಿ ನಿಮ್ಮ ಮೆಚ್ಚಿನ ಚಿತ್ರಗಳನ್ನು ತೂಗುಹಾಕಿ. ಆದಷ್ಟು ಕಡಿಮೆ ಪ್ರಮಾಣದಲ್ಲಿ ಈ ಚಿತ್ರಗಳನ್ನು ಬಳಸಿಕೊಳ್ಳಿ.

ಗೋಡೆಯ ಅಂದವನ್ನು ಹೆಚ್ಚಿಸುವುದು
ಒಂದೇ ಬಣ್ಣವನ್ನು ಇಡಿಯ ಮನೆಗೆ ಬಳಸಿಕೊಳ್ಳುವ ರೀತಿ ಮಾಯವಾಗಿದೆ. ಬೇರೆ ಬೇರೆ ಬಣ್ಣಗಳನ್ನು, ವಿನ್ಯಾಸಗಳನ್ನು ಮನೆಗಾಗಿ ಬಳಸಿಕೊಳ್ಳಿ.

ಜೋಡಿಸಿ
ಮನೆಯಲ್ಲಿರುವ ಸಾಮಾನುಗಳನ್ನು ಅಂದವಾಗಿ ಜೋಡಿಸುವುದರಲ್ಲೂ ನಿಮ್ಮ ಕುಶಲತೆ ಅಡಗಿದೆ. ಮಕ್ಕಳ ಕೊಠಡಿಗಳನ್ನು ಅವರಿಗೆ ಬೇಕಾದಂತೆ ಅಲಂಕರಿಸಿ. ಮನೆಯಲ್ಲಿರುವ ಪ್ರತಿ ಕೊಠಡಿಯೂ ನಿಮ್ಮ ಚಾಕಚಕ್ಯತೆಯಿಂದ ಹೊಳೆಯುತ್ತಿರಲಿ.

ಕ್ರಿಯಾತ್ಮಕವಾಗಿ ಯೋಚಿಸಿ
ನಿಮ್ಮ ಮನೆಗೆ ಹೊಸ ನೋಟವನ್ನು ನೀವು ಕೊಡಲು ಬಯಸುತ್ತೀರಿ ಎಂದಾದಲ್ಲಿ ಕ್ರಿಯಾತ್ಮಕವಾಗಿ ನೀವು ಆಲೋಚನೆ ಮಾಡಬೇಕಾಗುತ್ತದೆ. ಹಳೆಯದಕ್ಕೆ ಹೊಸತನವನ್ನು ನೀವು ನೀಡುತ್ತೀರಿ ಎಂದಾದಲ್ಲಿ ನೀವು ಸಾಕಷ್ಟು ಯೋಚನೆ ಮತ್ತು ಯೋಜನೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಈ ಸಲಹೆಗಳನ್ನು ಪಾಲಿಸಿಕೊಂಡು ಮನೆಯ ಅಂದ ಚೆಂದವನ್ನು ಹೆಚ್ಚಿಸಿಕೊಳ್ಳಿ.



Click it and Unblock the Notifications