For Quick Alerts
ALLOW NOTIFICATIONS  
For Daily Alerts

ಈ ಸರಳ ಟಿಪ್ಸ್ ಅನುಸರಿಸಿದರೆ, ಬಟ್ಟೆಗೆ ಇಸ್ತ್ರಿಯ ಅಗತ್ಯವಿಲ್ಲ!

By CM Prasad
|

ನಿಮ್ಮ ಉಡುಗೆಗಳು ಇಸ್ತ್ರಿಯಾಗದೇ ಸುಕ್ಕು ಸುಕ್ಕಲಾಗಿ ಎಲ್ಲೆಂದರಲ್ಲಿ ಮಡಚಿರುವ ಗುರುತುಗಳಿದ್ದಲ್ಲಿ ಚೆನ್ನಾಗಿ ಕಾಣುವುದೇ? ಹೌದು, ನೀವು ಕಚೇರಿಗಾಗಲೀ ಅಥವಾ ಯವುದೇ ಕಾರ್ಯಕ್ರಮಕ್ಕಾಗಲೀ ಹೊರಗಡೆ ತೆರಳುವಾಗ ಮೊದಲು ಯೋಚಿಸುವುದು ತಾನು ತೊಟ್ಟಿರುವ ಉಡುಗೆಯು ಸುಸ್ಥಿತಿಯಲ್ಲಿರುವುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು.

ನಿಜ ಇದು ಒಬ್ಬರ ಬಯಕೆಯಲ್ಲ. ಪ್ರತಿಯೊಬ್ಬರ ಬಯಕೆಯಾಗಿದ್ದು, ಉಡುಗೆ ತೊಡುಗೆಗಳು ಸರಿಯಾದ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವ ಹಂಬಲ ಎಲ್ಲರಿಗಿರುತ್ತದೆ. ಇಸ್ತ್ರಿ ಹಾಕದೇ ಬಟ್ಟೆಯನ್ನು ಹಾಗೆಯೇ ಧರಿಸಿ ಹೊರಗೆ ತೆರಳಿದಲ್ಲಿ ಎಲ್ಲರ ನಡುವೆ ಮುಜುಗರ ಉಂಟಾಗಲು ಕಾರಣವಾಗುತ್ತದೆ.

ಇದರಿಂದ ನಮ್ಮ ಆತ್ಮ ವಿಶ್ವಾಸ ಕಡಿಮೆಯಾಗಿ ಇಡೀ ದಿನ ನಿರಾಸೆಯಲ್ಲಿಯೇ ಕಳೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಸ್ತ್ರಿ ಇಲ್ಲದ ಪ್ರಪಂಚವನ್ನು ಒಮ್ಮೆ ಊಹಿಸಿಕೊಂಡು ನೋಡಿ. ನಮ್ಮ ಬದುಕು ಎಷ್ಟು ಆನಂದದಾಯಕವಾಗುವುದಲ್ಲವೇ? ಪ್ರತಿ ದಿನ ನಿಮ್ಮ ಬಟ್ಟೆಗಳನ್ನು ಇಸ್ತ್ರಿ ಮಾಡುವುದರಿಂದ ಇಡೀ ಅರ್ಧ ಜೀವನ ಇದಕ್ಕೆ ಸವೆದು ಹೋಗುತ್ತದೆ. ಕೆಲವೊಂದು ಬಾರಿ ಇಸ್ತ್ರಿ ಮಾಡಿಕೊಳ್ಳಲು ಸಮಯವೇ ಇರುವುದಿಲ್ಲ. ಆಗ ನಿಜಕ್ಕೂ ತುಂಬಾ ಹತಾಶೆಗೊಳಗಾಗಬೇಕಾಗುತ್ತದೆ.

Genius Tricks for Wrinkle-Free Clothes

ಆದ್ದರಿಂದಲೇ ಬೋಲ್ಡ್ ಸ್ಕೈ ತಾಣವು ಈ ಸಮಸ್ಯೆಗೆ ಸುಲಭದ ಉಪಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದು, ಸುಕ್ಕು ರಹಿತ ಬಟ್ಟೆಗಳನ್ನು ಹೊಂದಲು ಎಲ್ಲರೂ ಅನುಸರಿಸಬಹುದಾದ ವಿಶಿಷ್ಟ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಈ ಕ್ರಮಗಳನ್ನು ನೀವು ಬಟ್ಟೆಗಳನ್ನು ವಾಷಿಂಗ್ ಮೆಷೀನ್ ಗೆ ಹಾಕುವ ಮೊದಲು ಖಡ್ಡಾಯವಾಗಿ ಅನುಸರಿಸಲೇಬೇಕು. ಇಸ್ತ್ರಿ ಹಾಕದೆ ಬಟ್ಟೆ ನಿರ್ವಹಣೆಗೆ ಕೆಲ ಸಲಹೆಗಳು

ವಸ್ತ್ರದ ಬಟ್ಟೆಯ ವಿನ್ಯಾಸವೂ ಸಹ ಬಟ್ಟೆ ಒಗೆಯುವ ವಿಧಾನವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಒರಟಾದ ವಿನ್ಯಾಸವುಳ್ಳ ಬಟ್ಟೆಗಳನ್ನು ಮೊದಲು ಇತರ ಬಟ್ಟೆಗಳಿಂದ ಬೇರ್ಪಡಿಸಿಕೊಳ್ಳಿ. ಸುಕ್ಕು ತಡೆಗಟ್ಟಲು ಮೊದಲು ಈ ಕ್ರಮವನ್ನು ಅನುಸರಿಸುವುದು ಉತ್ತಮ. ಬಹಳ ಸುಲಭವಾದ ವಿಧಾನಗಳು ಚಾಲ್ತಿಯಲ್ಲಿದ್ದು, ನಿಮ್ಮ ಪ್ರಿಯವಾದ ಬಟ್ಟೆಗಳನ್ನು ಸುಕ್ಕುಗಳಿಂದ ತಡೆಯಬಹುದಾಗಿದೆ. ಇನ್ನೂ ಏಕೆ ಚಿಂತಿಸುತ್ತಿದ್ದೀರಿ? ಸುಕ್ಕು ರಹಿತ ಬಟ್ಟೆಗಳನ್ನು ಹೊಂದಲು ಮನೆಯಲ್ಲಿಯೇ ಸುಲಭವಾಗಿ ಅನುಸರಿಸಬಹುದಾದ ಕೆಳಕಂಡ ಕೆಲವು ವಿಶೇಷ ವಿಧಾನಗಳನ್ನು ಬಳಸಿ ಅಚ್ಚುಕಟ್ಟಾದ ಬಟ್ಟೆಗಳನ್ನು ಹೊಂದಿರಿ.

ಬಟ್ಟೆ ಒಗೆದ ನಂತರ ಅನುಸರಿಸಬೇಕಾದ ತಂತ್ರ
ಸೂಕ್ಷ್ಮ ಮತ್ತು ಒರಟಾದ ಬಟ್ಟೆಗಳನ್ನು ಬೇರ್ಪಡಿಸಿ ಒಗೆದ ನಂತರ, ತುಂಬಾ ಎಚ್ಚರಿಕೆಯಿಂದ ನಿಮ್ಮ ಬಟ್ಟೆಗಳನ್ನು ತಂತಿಯ ಮೇಲೆ ಒಣ ಹಾಕಿ. ನಿಮ್ಮ ಬಟ್ಟೆಗಳನ್ನು ಒಣಗಿಸುವಾಗ, ಬಟ್ಟೆಗಳ ನೀರನ್ನು ಹಿಂಡದೆ, ಸಹಜ ಸ್ಥಿತಿಯಲ್ಲಿಯೇ ತಂತಿಯ ಮೇಲೆ ಒಣಹಾಕಿ.

ಬಟ್ಟೆಗಳಿಗೆ ಒಣ ಹವೆಯನ್ನು ನೀಡಿ
ಸುಕ್ಕುಗಳ ಗುರುತುಗಳನ್ನು ಬಟ್ಟೆಗಳಲ್ಲಿ ಕಂಡಲ್ಲಿ, ಅವಶ್ಯವಿದ್ದಲ್ಲಿ ಒಣ ಹವೆಯನ್ನು ನೀಡಿ ನಿಮ್ಮ ಹಸ್ತದಿಂದ ಸುಕ್ಕನ್ನು ತೆಗೆಯಲು ಪ್ರಯತ್ನಿಸಿ. ಇದನ್ನು ಬಟ್ಟೆಯು ಬೆಚ್ಚಗಿದ್ದಾಗ ಅಥವಾ ಬಿಸಿಯಿದ್ದಾಗ ನಿಮ್ಮ ಹಸ್ತದಿಂದ ಒತ್ತಬೇಕು. ಈ ಸುಲಭ ತಂತ್ರವು ನಿಮ್ಮ ಬಟ್ಟೆಗಳಲ್ಲಿನ ಸುಕ್ಕಿನ ಗುರುತನ್ನು ಹೋಗಲಾಡಿಸುತ್ತದೆ. ಎಲ್ಲಾ ಬಟ್ಟೆಯಂತಲ್ಲ ಈ ಹತ್ತಿ ಬಟ್ಟೆ!

ನೇರವಾದ ಇಸ್ತ್ರಿಯನ್ನು ಉಪಯೋಗಿಸಿದರೆ ಹೇಗೆ?
ಸುಕ್ಕಿನ ಗುರುತುಗಳನ್ನು ನಿವಾರಿಸಲು ನಿಮ್ಮ ಬಟ್ಟೆಗಳನ್ನು ಇಸ್ತ್ರಿ ಪೆಟ್ಟಿಗೆ ಬಳಸದೆ ಕೂದಲ ನೇರವಾಗಿಸುವ ಅಥವಾ ಇಸ್ತ್ರಿಯನ್ನು ಉಪಯೋಗಿಸಿ ಸುಕ್ಕಿನ ಜಾಗವನ್ನು ಸರಿಮಾಡಬಹುದು.

ನಾಜೂಕಾಗಿ ಮಡಚಿ ಇಟ್ಟುಕೊಳ್ಳಿ

ಬಟ್ಟೆಗಳು ಸಂಪೂರ್ಣವಾಗಿ ಒಣಗಿದ ಮೇಲೆ ಅವುಗಳನ್ನು ನಾಜೂಕಾಗಿ ಮಡಚಿಡಿ. ಸರಿಯಾದ ಮಡಚುವಿಕೆಯೂ ಸಹ ನಿಮ್ಮ ಬಟ್ಟೆಯ ಸುಕ್ಕಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಬಟ್ಟೆಗಳ ವಿನ್ಯಾಸಗಳಿಗೆ ಅನುಗುಣವಾಗಿ ಸರಿಯಾಗಿ ಮಡಚಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇನ್ನುಳಿದ ಬಟ್ಟೆಗಳನ್ನು ತೂಗುವ ತಂತಿಗೆ ಕ್ರಮವಾಗಿ ನೇತುಹಾಕಿ.
English summary

Genius Tricks for Wrinkle-Free Clothes

Imagine a world without ironing. How blissful each of us and our life would be? Ironing clothes on an everyday basis can take away half of one's life, which is why we at Boldsky suggest that you take a look at some of these magical tricks that we have lined up for you today, which involves wrinkle-free clothes.
Story first published: Tuesday, January 19, 2016, 17:30 [IST]
X
Desktop Bottom Promotion