For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿರುವ ಧೂಳನ್ನು ಹೋಗಲಾಡಿಸಲು ಸಿಂಪಲ್ ಟಿಪ್ಸ್

By Jaya subramanya
|

ನಿಮ್ಮ ಮನೆ ಎಷ್ಟೇ ದೊಡ್ಡದಾಗಿದ್ದರೂ ಅದನ್ನು ಧೂಳುಮುಕ್ತಗೊಳಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನಿಮ್ಮ ದೃಷ್ಟಿ ಬೀಳದೇ ಇರುವ ಜಾಗದಲ್ಲಿ ಕೂಡ ಧೂಳು ಬಹುಬೇಗನೇ ಕುಳಿತುಬಿಡುತ್ತದೆ. ಮನೆಯಲ್ಲಿ ಇನ್ನು ಹೆಚ್ಚಿನ ಸೌಕರ್ಯಗಳು ಇದ್ದ ಪಕ್ಷದಲ್ಲಿ ಈ ಧೂಳು ಕುಳಿತುಕೊಳ್ಳುವ ಪ್ರಕ್ರಿಯೆ ಬಹುಬೇಗನೇ ನಡೆದುಬಿಡುತ್ತದೆ. ಆದರೆ ಇವುಗಳ ಸ್ವಚ್ಛತೆಯ ಕೆಲಸವೇ ತುಂಬಾ ಸಮಯವನ್ನು ತೆಗೆದುಕೊಂಡು ಬಿಡುತ್ತದೆ.

ಕಚೇರಿಗೆ ಹೋಗುವ ಹೆಂಗಳೆಯರಿಗೆ ಮನೆ ಸ್ವಚ್ಛತೆ ವಾರಾಂತ್ಯದಲ್ಲಿ ಕೊಂಚ ಬೇಸರದ ಸಂಗತಿಯೇ ಆಗಿರುತ್ತದೆ. ಮನೆಗೆಲಸದವರೂ ಇದ್ದರೂ ಕೂಡ ಅವರು ಮಾಡುವ ಕೆಲಸಲ್ಲಿ ಇವರು ನಿಗಾವಹಿಸಿ ಮನೆ ಸ್ವಚ್ಛತೆ ಕೆಲಸಕ್ಕೆ ಅವರೊಂದಿಗೆ ಕೈಜೋಡಿಸಬೇಕಾಗುತ್ತದೆ. ಮನೆ ಸ್ವಚ್ಛವಾಗಿದ್ದರೆ ಸಾಲದು, ಇತ್ತ ಕಡೆಯೂ ಗಮನವಿರಲಿ...

ಹಾಗಿದ್ದರೂ ಮನೆಯ ಸ್ವಚ್ಛತೆಯನ್ನು ಕೊಂಚವೂ ಬೇಸರವೂ ಇಲ್ಲದೆ ಹೇಗೆ ಮಾಡುವುದು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಮನೆಯ ಧೂಳು ನಿವಾರಿಸಲು ಕೆಲಸವನ್ನು ಕೊಂಚವೂ ಪ್ರಯಾಸವಿಲ್ಲದೆ ನೀವು ಪೂರೈಸಬೇಕು ಎಂದಾದಲ್ಲಿ ಇಂದಿನ ಲೇಖನದಲ್ಲಿ ಅದಕ್ಕಾಗಿಯೇ ಕೆಲವೊಂದು ಸಲಹೆಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ.

ಇದರಿಂದ ಮನೆಯ ಸ್ವಚ್ಛತೆಯನ್ನು ಕೊಂಚವೂ ಶ್ರಮವಿಲ್ಲದೇ ನಿರಾಳವಾಗಿ ಪೂರೈಸಬಹುದಾಗಿದೆ. ಮನೆಯನ್ನು ಧೂಳು ಮುಕ್ತಗೊಳಿಸುವ ಈ ತಂತ್ರಗಾರಿಕೆಯನ್ನು ತಿಳಿಯಲು ನೀವು ಹೆಚ್ಚು ಹೊತ್ತು ವ್ಯಯಿಸಬೇಕಾಗಿಲ್ಲ. ನಿಮ್ಮ ಮನೆಯಲ್ಲೇ ಕೊಂಚ ಮಾರ್ಪಾಡುಗಳನ್ನು ಮಾಡಿಕೊಂಡು ಮನೆಯ ಧೂಳು ಸ್ವಚ್ಛತೆ ಕೆಲಸವನ್ನು ನಿರ್ವಹಿಸಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ನೋಡೋಣ...

ಕಡಿಮೆ ಪೀಠೋಪಕರಣ

ಕಡಿಮೆ ಪೀಠೋಪಕರಣ

ನಿಮ್ಮ ಮನೆಯ ಸ್ವಚ್ಛತೆಯನ್ನು ಕೊಂಚ ಮಾರ್ಪಾಡುಗಳೊಂದಿಗೆ ನೆರವೇರಿಸಿ. ನೆಲವನ್ನು ಒರೆಸಿಕೊಳ್ಳಿ ಧೂಳಿರುವ ಜಾಗಕ್ಕೆ ಕೊಂಚ ಆದ್ಯತೆ ನೀಡಿ.ಪೀಠೋಪಕರಣಗಳನ್ನು ಮರು ಹೊಂದಿಸಿ. ನಿಮಗೆ ಬೇಡದೇ ಇರುವ ಪೀಠೋಪಕರಣಗಳನ್ನು ಬೇರೆಡೆ ಸಾಗಿಸಿ. ಇದರಿಂದ ಸ್ಥಳ ಕೂಡ ನಿಮಗೆ ದೊರೆಯುತ್ತದೆ ಮತ್ತು ಮನೆಯೂ ಸ್ವಚ್ಛವಾಗಿ ಕಾಣುತ್ತದೆ.

ಕಾರ್ಪೆಟ್ಸ್ ಬಳಕೆ ಬೇಡ

ಕಾರ್ಪೆಟ್ಸ್ ಬಳಕೆ ಬೇಡ

ನೆಲದ ಮೇಲೆ ಕಾರ್ಪೆಟ್ ಹಾಸುವುದರಿಂದ ಧೂಳು ಸಲೀಸಾಗಿ ಬಂದು ಕೂರುತ್ತದೆ. ಧೂಳು ರಹಿತ ಮನೆ ನಿಮ್ಮದಾಗಬೇಕು ಎಂದಾದಲ್ಲಿ, ಒಂದಾ ಕಾರ್ಪೆಟ್ ಅನ್ನು ತೆಗೆದುಹಾಕಿ ಇಲ್ಲವೇ ಅದನ್ನು ನಿತ್ಯವೂ ಸ್ವಚ್ಛಮಾಡುತ್ತಾ ಬನ್ನಿ. ಇದಕ್ಕಾಗಿ ವಾಕ್ಯೂಮ್ ಕ್ಲೀನರ್ ಬಳಸಿ.

ಕ್ಲೋಸೆಟ್ಸ್ ಸ್ವಚ್ಛತೆ

ಕ್ಲೋಸೆಟ್ಸ್ ಸ್ವಚ್ಛತೆ

ತೆರೆದ ಕ್ಲೋಸೆಟ್ಸ್ ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ಇಲ್ಲಿ ಧೂಳು ಆರಾಮಾಗಿ ಬಂದು ಕೂರುತ್ತದೆ. ನೀವು ನಿತ್ಯವೂ ಸ್ವಚ್ಛಮಾಡಿಲ್ಲ ಎಂದಾದಲ್ಲಿ ಕ್ಯಾಬಿನೆಟ್‌ಗಳಲ್ಲೂ ಧೂಳು ಇರುತ್ತದೆ. ಆದ್ದರಿಂದ ಜಿಪ್ ಇರುವ ಬ್ಯಾಗ್‌ಗಳಲ್ಲಿ ನಿಮ್ಮ ವಸ್ತುಗಳನ್ನು ತೆಗೆದಿರಿಸುವುದು ಸೂಕ್ತ ಉಪಾಯವಾಗಿದೆ.

ಶೂಗಳನ್ನು ಜೋಡಿಸಿಡುವುದು

ಶೂಗಳನ್ನು ಜೋಡಿಸಿಡುವುದು

ಮನೆಯಲ್ಲಿ ಹೆಚ್ಚು ಧೂಳು ಕುಳಿತುಕೊಳ್ಳುವುದು ನಿಮ್ಮ ಶೂಗಳ ಮೇಲಾಗಿರಬಹುದು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು, ಶೂ ರಾಕ್ ಅನ್ನು ಖರೀದಿಸಿ ಮತ್ತು ಶೂವನ್ನು ಅಲ್ಲಿಡಿ. ಈ ರಾಕ್ ಅನ್ನು ಮನೆಯ ಹೊರಗಿರಿಸಿ. ಮನೆಗೆ ಎಲ್ಲಾ ರೀತಿಯ ಸೂಕ್ಷ್ಮಾಣುಜೀವಿಗಳು ಬರುವ ಕ್ರಿಯೆಯನ್ನು ಈ ಮಾದರಿಯಲ್ಲಿ ನಿಮಗೆ ತಡೆಯಬಹುದಾಗಿದೆ.

ಕರ್ಟನ್ಸ್‌ಗಳ ಸ್ವಚ್ಛತೆ

ಕರ್ಟನ್ಸ್‌ಗಳ ಸ್ವಚ್ಛತೆ

ನಿಮ್ಮ ಮನೆಯ ಕಿಟಕಿಗಳಿಗೆ ಬಳಸುವ ಕರ್ಟನ್‌ಗಳಲ್ಲೂ ಧೂಳು ಹಾಗೆಯೇ ಇರುತ್ತದೆ. ಆದ್ದರಿಂದ ಅವುಗಳ ಸ್ವಚ್ಛತೆಯ ಕಡೆಗೂ ನೀವು ಗಮನಹರಿಸಬೇಕು. ಕನಿಷ್ಠ ಪಕ್ಷ ಎರಡು ತಿಂಗಳಿಗೊಮ್ಮೆಯಾದರೂ ಇವುಗಳನ್ನು ತೊಳೆಯಿರಿ. ಮನೆಯ ಕಿಟಕಿ ಮತ್ತು ಬಾಗಿಲುಗಳಿಗೆ ನೀವು ಹಾಕುವ ಪರದೆಗಳ ಮೇಲೆ ಧೂಳು ಬಹಳ ಬೇಗನೇ ಬಂದು ಕುಳಿತುಬಿಡುತ್ತದೆ.

ಸ್ಟಫ್ ಟಾಯ್ಸ್

ಸ್ಟಫ್ ಟಾಯ್ಸ್

ನಿಮ್ಮ ಮಕ್ಕಳು ಈ ಆಟಿಕೆಗಳನ್ನು ಖಂಡಿತ ಬಳಸಿಯೇ ಬಳಸುತ್ತಾರೆ ಅಲ್ಲವೇ. ನಿಮ್ಮ ಮಗುವಿನ ಕೋಣೆಯಲ್ಲಿ ಇಂತಹ ಆಟಿಕೆಗಳು ಸಾಕಷ್ಟಿರುತ್ತದೆ ಆದರೆ ಇವುಗಳನ್ನು ವಾರಕ್ಕೊಮ್ಮೆಯಾದರೂ ನೀವು ತೊಳೆಯಬೇಕು. ಇದರಲ್ಲಿ ಬಹುಬೇಗನೇ ಧೂಳು ಕುಳಿತುಕೊಳ್ಳುವುದರಿಂದ ನಿಮ್ಮ ಮಕ್ಕಳಿಗೆ ಇದು ಹಾನಿಕರವಾಗಿರುತ್ತದೆ.

English summary

Brilliant Tips To Keep A Dust Free House

Dust contains moulds, fibres, dander from your pets, as well as tiny dust mites that can damage everything in your humble abode. These mites, if not driven away, can thrive in your house if it is too warm and humid. To a large extent, you can eliminate dust from your house in the most simple ways possible.
X
Desktop Bottom Promotion