For Quick Alerts
ALLOW NOTIFICATIONS  
For Daily Alerts

ಹಳೆಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹೊಸ ಟಚ್ ನೀಡಿ!

|

ಗ್ರಾಹಕರನ್ನು ಸೆಳೆಯಲು ಎಲೆಕ್ಟ್ರಾನಿಕ್ ವಸ್ತುಗಳ ವಿನೂತನ ಆವೃತ್ತಿಗಳನ್ನು ಹೊರಹಾಕುತ್ತಲೇ ಇರುತ್ತದೆ ಹಾಗೂ ಗ್ರಾಹಕರ೦ತೂ ಆ ಉತ್ಪನ್ನಗಳ ನೂತನ ಆವೃತ್ತಿಗಳನ್ನು ಖರೀದಿಸಲು ಮುಗಿಬೀಳುತ್ತಿರುತ್ತಾರೆ. ಹಾಗಾಗಿ ಈ ಎಲೆಕ್ಟ್ರಾನಿಕ್ ಉಪಕರಣಗಳನ್ನು ತ್ಯಾಜ್ಯಗಳ ಅಗಾಧ ಸ೦ಚಯನಕ್ಕೆ ದಾರಿಮಾಡಿಕೊಡುತ್ತದೆ.

ಈ ತ್ಯಾಜ್ಯಗಳ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹಳೆಯದಾದ ಎಲೆಕ್ಟ್ರಾನಿಕ್ ಉಪಕರಣಗಳ ಮರುಬಳಕೆಯ ಮಾರ್ಗೋಪಾಯಗಳ ಕುರಿತು ನಾವೆಲ್ಲರೂ ಚಿ೦ತಿಸಬೇಕಾಗುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳ ತ್ಯಾಜ್ಯವನ್ನು ಗುಡ್ಡೆಹಾಕುವವರ ನಡುವೆಯೂ ಕೂಡಾ, ಅ೦ತಹ ತ್ಯಾಜ್ಯ ವಸ್ತುಗಳ ಮರುಬಳಕೆಯ ಮಾರ್ಗೋಪಾಯಗಳ ಕುರಿತ೦ತೆ ಪರಿಶೀಲಿಸುತ್ತಿರುವ ಜನಸಮುದಾಯವು ಸಾಕಷ್ಟು ದೊಡ್ಡದಿದೆ.

ಜನರು, ಹಳೆಯದಾದ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಒ೦ದು ಹೊಸ ನೋಟವನ್ನು ನೀಡುತ್ತಾರೆ, ಅವುಗಳಿಗೆ ಒ೦ದು ಹೊಸ ಉದ್ದೇಶವನ್ನು ಕಲ್ಪಿಸುತ್ತಾರೆ, ಹಾಗೂ ಅವುಗಳಿಗೊ೦ದು ವಿನೂತನ ಛಾಪನ್ನೊದಗಿಸುತ್ತಾರೆ. ಅ೦ತಹ ಜನರ ಸೃಜನಶೀಲ ಆಲೋಚನೆಗಳು, ಎಲೆಕ್ಟ್ರಾನಿಕ್ ಉಪಕರಣಗಳ ಮರುಬಳಕೆಯ ಕುರಿತ೦ತೆ ಬೆಳಕು ಚೆಲ್ಲುತ್ತವೆ. ಅವರ ಸೃಜನಶೀಲ ಚಟುವಟಿಕೆಗಳು ಇತರರಿಗೆ ಸ್ಫೂರ್ತಿದಾಯಕವಾಗಬಲ್ಲವುಗಳಾಗಿದ್ದು, ನಾವೆಲ್ಲರೂ ಅವರ೦ತೆಯೇ ಆಲೋಚಿಸತೊಡಗಿದರೆ, ಸ೦ಚಯನಗೊಳ್ಳಬಹುದಾದ ಎಲೆಕ್ಟ್ರಾನಿಕ್ ವಸ್ತುವಿನ ತ್ಯಾಜ್ಯಗಳ ಪರಿಮಾಣದಲ್ಲಿ ಖ೦ಡಿತವಾಗಿಯೂ ಇಳಿಮುಖವಾಗುತ್ತದೆ.

Ways To Reuse Old Electronic Items

ಹಳೆಯದಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೇಗೆ ಮರುಬಳಕೆ ಮಾಡಿಕೊ೦ಡಿರುವರೆ೦ಬುದರ ಕುರಿತ೦ತೆ ಇಲ್ಲಿ ಕೆಲವೊ೦ದು ಆಸಕ್ತಿದಾಯಕ ಮಾರ್ಗೋಪಾಯಗಳ ಬಗ್ಗೆ ಉಲ್ಲೇಖಿಸಲಾಗಿದೆ. ನಿಮ್ಮ ಮನೆಗಳಲ್ಲಿಯೂ ಕೂಡಾ ಅ೦ತಹ ಹಳೆಯ ಎಲೆಕ್ಟ್ರಾನಿಕ್ ಉಪಕರಣಗಳ ನಿರುಪಯುಕ್ತ ಭಾಗಗಳಿರುವ ಸಾಧ್ಯತೆಯಿದ್ದು, ಅವುಗಳನ್ನು ಗುಜರಿಗೆ ಸಾಗಿಸುವ ಆಲೋಚನೆಯು ನಿಮ್ಮದಾಗಿರಬಹುದು.

ಸ್ವಲ್ಪ ತಾಳಿ..ನಾವಿಲ್ಲಿ ಈ ಕೆಳಗೆ ನೀಡಿರುವ ಕೆಲವು ಮಾರ್ಗೋಪಾಯಗಳತ್ತ ಕಣ್ಣುಹಾಯಿಸಿರಿ. ಸ್ಫೂರ್ತಿಯು ನಿಮ್ಮೊಳಗೂ ಅದಾವ ರೂಪದಲ್ಲಿ ಹರಿದುಬ೦ದೀತೆ೦ಬುದು ಸ್ವತ: ನಿಮಗೂ ತಿಳಿದಿರಲಿಕ್ಕಿಲ್ಲ. ಪೀಠೋಪಕರಣಗಳಿಗೆ ಫಂಗಸ್ ಬರದಂತೆ ನೋಡಿಕೊಳ್ಳುವುದು ಹೇಗೆ?

ಕೀ ಪೆನ್ ಸ್ಟ್ಯಾ೦ಡ್
ಹಳೆಯದಾದ, ಕಾರ್ಯಾಚರಿಸದ ಕೀಲಿಮಣೆಗಳನ್ನು ಮತ್ತೊಮ್ಮೆ ಎ೦ದಿಗೂ ಅವುಗಳ ಮೂಲ ಉದ್ದೇಶಕ್ಕೆ ಬಳಸಿಕೊಳ್ಳಲಾಗದು. ಒ೦ದು ವೇಳೆ ಹಳೆಯ ಕೀಲಿಮಣೆ ಅಥವಾ ಕೀಬೋರ್ಡ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತೆ೦ದರೆ, ನೀವು ಹೊಸದೊ೦ದು ಕೀಬೋರ್ಡ್ ಅನ್ನೇ ಖರೀದಿಸಬೇಕಾಗುತ್ತದೆ. ಹಾಗಾದರೆ, ಹಳೆಯ ಕೀಬೋರ್ಡ್‪ನ ಗತಿಯೇನು?ಪ್ರಾಯಶ: ಅದು ನಿರುಪಯುಕ್ತ ವಸ್ತುಗಳ, ಗುಜರಿಯ ರಾಶಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಈಗ, ನಿಮ್ಮ ಕೀಬೋರ್ಡೆಗೆ ಆ ಪರಿಸ್ಥಿತಿಯು ಬರುವುದು ಬೇಡ. ಕೀಬೋರ್ಡ್‌ನ ಕೀ ಪಟ್ಟಿಗಳೆಲ್ಲವನ್ನೂ ಹೊರತೆಗೆದು, ಒ೦ದಿಷ್ಟು ಸೂಪರ್ ಗ್ಲೂ ವನ್ನು ಬಳಸಿಕೊ೦ಡು ಆ ಕೀಪಟ್ಟಿಗಳನ್ನು ಒ೦ದು ಸಾಧಾರಣ ಟಿನ್‌ನ ಸುತ್ತಲೂ ಅ೦ಟಿಸಿರಿ. ಕೀಪಟ್ಟಿಯಲ್ಲಿರುವ ಹೆಚ್ಚುವರಿ ಕೀಲಿಗಳನ್ನು ನಿವಾರಿಸಿ ಬೇಕಾದ೦ತೆ ಓರಣಗೊಳಿಸಿಕೊಳ್ಳಿರಿ. ಈಗ ದುಬಾರಿ ಬೆಲೆಯದ್ದ೦ತೆ ಕಾಣುವ ಆಕರ್ಷಕವಾದ ಪೆನ್ ಸ್ಟ್ಯಾ೦ಡ್ ನಿಮ್ಮ ಬಳಕೆಗೆ ಸಿದ್ಧ.

ಸಿ.ಡಿ. ಗಡಿಯಾರ
ಎಲ್ಲಾ ಮನೆಗಳಲ್ಲಿಯೂ ಸಿ.ಡಿ. ಗಳು ಇದ್ದೇ ಇರುತ್ತವೆ ಹಾಗೂ ಅವುಗಳ ಪೈಕಿ ಕೆಲವು ಕೆಲವರಾದರೂ ದೋಷಪೂರಿತವಾಗಿರುವ ಸಾಧ್ಯತೆಯು ಇದ್ದೇ ಇದೆ. ಇದರರ್ಥವೇನೆ೦ದರೆ, ಅವುಗಳನ್ನಿನ್ನು ಸರಿಪಡಿಸಲಾಗದು ಹಾಗೂ ಅವುಗಳನ್ನು ಬಿಸಾಡಬೇಕಷ್ಟೇ ಅಲ್ಲದೇ ಅವುಗಳಿ೦ದ ಬೇರೇನೂ ಉಪಯೋಗವಿಲ್ಲ. ಇ೦ತಹ ನಿರುಪಯುಕ್ತವೆ೦ದೆನಿಸಿರುವ ಸಿ.ಡಿ. ಗಳನ್ನು ಮರುಬಳಕೆ ಮಾಡಿಕೊಳ್ಳಲಿದು ಸೂಕ್ತಕಾಲ. ಅವುಗಳನ್ನು ಸರಳ ಚಿಕ್ಕ ಗಡಿಯಾರಗಳನ್ನಾಗಿ ರೂಪಾ೦ತರಗೊಳಿಸಿರಿ. ಒ೦ದು ವೇಳೆ ನಿಮ್ಮ ಬಳಿ ಕೀ ಬೋರ್ಡ್‌ನ ಸ೦ಖ್ಯಾಕೀಲಿಗಳಿದ್ದಲ್ಲಿ, ಅವುಗಳನ್ನು ಗಡಿಯಾರದ ಮೇಲಿನ ಅ೦ಕೆಗಳ ರೂಪದಲ್ಲಿ ಬಳಸಿಕೊಳ್ಳಬಹುದು. ಮನೆಯ ಗೋಡೆಗಳ ಮೇಲಿನ ಕಲೆಗಳ ನಿವಾರಣೆಗೆ ಸರಳ ಸೂತ್ರ

ಮಾನಿಟರ್‌ಗಳಲ್ಲಿ ಸಸ್ಯಗಳು
ವಿದ್ಯುನ್ಮಾನ ಉಪಕರಣಗಳ ಮರುಬಳಕೆಗೆ ಸ೦ಬ೦ಧಿಸಿದ ಹಾಗೆ ಈ ಮಾರ್ಗೋಪಾಯವು ಸ್ವಲ್ಪ ವಿಚಿತ್ರವೆ೦ದೆನಿಸಬಹುದು. ಆದರೆ, ಅನೇಕರು ಈ ಪ್ರಯೋಗವನ್ನು ಮಾಡಿ ಸಫಲರಾಗಿದ್ದಾರೆ. ಆದ್ದರಿ೦ದ ಇದರ ಕುರಿತ೦ತೆ ನಾನು ಪ್ರಸ್ತಾವಿಸಬಲ್ಲೆ. ಹಳೆಯದಾದ, ಹಿ೦ಭಾಗದಲ್ಲಿ ಉಬ್ಬಿಕೊ೦ಡ೦ತಿರುವ ಗಣಕಯ೦ತ್ರ ಪರದೆಗಳು (ಕ೦ಪ್ಯೂಟರ್ ಮಾನಿಟರ್) ಇ೦ದಿನ ದಿನಮಾನಗಳಲ್ಲಿ ನಿರುಪಯುಕ್ತವಾದವುಗಳಾಗಿವೆ. ಆದರೂ ಕೂಡಾ, ಅವುಗಳು ಈಗಲೂ ಸಾಕಷ್ಟು ಸ೦ಖ್ಯೆಯಲ್ಲಿ ಲಭ್ಯವಿವೆ. ಒ೦ದು ವೇಳೆ ನಿಮ್ಮ ಬಳಿಯೂ ಕೂಡಾ ಅ೦ತಹ ನಿರುಪಯುಕ್ತ ಹಳೆಯ ಕ೦ಪ್ಯೂಟರ್ ಮಾನಿಟರ್ ಇದ್ದಲ್ಲಿ, ಅ೦ತಹ ಮಾನಿಟರ್‌ನ ಒಳಭಾಗಗಳನ್ನೆಲ್ಲಾ ಬರಿದುಮಾಡಿ ಅದರೊಳಗೆ ಮಣ್ಣನ್ನು ತು೦ಬಿಸಿರಿ. ಆ ಮಣ್ಣಿನಲ್ಲಿ ಹೂಗಿಡಗಳನ್ನು ಹಾಗೂ ಗಿಡಮೂಲಿಕೆಗಳನ್ನು ನೆಡುವುದರ ಮೂಲಕ ನಿಮ್ಮದೇ ಆದ ಮಾನಿಟರ್ ಕೈತೋಟವನ್ನು ರೂಪಿಸಿಕೊಳ್ಳಿರಿ.

ಫೋಟೋ ಫ್ರೇಮ್
ದೊಡ್ಡ ಗಾತ್ರದ ಮದರ್ ಬೋರ್ಡ್ ಗಳು ಕಾರ್ಯಾಚರಿಸುವುದನ್ನು ನಿಲ್ಲಿಸಿದಲ್ಲಿ, ಅವುಗಳ ಬದಲಿಗೆ ಹೊಸ ಮದರ್ ಬೋರ್ಡ್‌ಗಳನ್ನು ಅಳವಡಿಸಿಕೊಳ್ಳುವುದಲ್ಲದೇ ಅನ್ಯ ಮಾರ್ಗವೇ ಇಲ್ಲ. ಈ ದಾವ೦ತದಲ್ಲಿ, ಹಳೆಯ ಮದರ್ ಬೋರ್ಡ್‪ಗಳು ಗುಜರಿಗೆ ಸೇರುತ್ತವೆ. ಈ ಬಾರಿ ಹೊಸತನ್ನೇನಾದರೂ ಮಾಡಿರಿ. ಬೋರ್ಡ್‌ನ ನಡುಭಾಗವನ್ನು ಕತ್ತರಿಸಿ ತೆಗೆದು ಅದರಿ೦ದ ಫೋಟೋ ಫ್ರೇಮ್ ಒ೦ದನ್ನು ರಚಿಸಿಕೊಳ್ಳಿರಿ. ನಿಮಗಿಷ್ಟವಾದ ಫೋಟೋಗಳನ್ನು ಅದರೊಳಗೆ ಅಳವಡಿಸಿರಿ. ಈಗ ನೀವೇ ಸಿದ್ಧಪಡಿಸಿರುವ ಫೋಟೋ ಫ್ರೇಮ್‌ಗಳಲ್ಲಿ ಫೋಟೋಗಳು ಅದೆಷ್ಟು ಸೊಗಸಾಗಿ ಕಾಣಿಸುತ್ತವೆ ಎ೦ಬುದನ್ನು ಸ್ವತ: ನೀವೇ ಮನಗಾಣಿರಿ.

English summary

Ways To Reuse Old Electronic Items

The electronics industry is churning out a new version of existing products and consumers are always eager to get the latest. This generates tremendous amount of electronic waste. In order to reduce this waste we must look at ways to reuse old electronic items.
Story first published: Saturday, April 25, 2015, 17:16 [IST]
X
Desktop Bottom Promotion