For Quick Alerts
ALLOW NOTIFICATIONS  
For Daily Alerts

ಅಡುಗೆಮನೆಗೆ ಬೇಕೇ ಬೇಕು ಹರಿತವಾದ ಚಾಕು, ಏನಂತೀರಿ?

By CM Prasad
|

ಈಗಿನ ಯುವಜನಾಂಗದ ಚಿಂತನೆಗಳು ಹರಿತವಾದ ಚಾಕುವಿಗಿಂತ ಹೆಚ್ಚು ಚೂಪಾಗಿರುತ್ತದೆ. ನಾವು ಆಡುವ ಮಾತುಗಳೇ ಹರಿತವಾದ ಚಾಕುವಿನಂತೆ ಇರುವಾಗ ಮನೆಯ ತರಕಾರಿ ಕತ್ತರಿಸಲು ಹರಿತವಾದ ಚಾಕು ಬೇಡವೇ? ಆದ್ದರಿಂದ ನಿಮ್ಮ ಅಡುಗೆ ಮನೆಯ ಚಾಕುಗಳನ್ನು ಯಾವಾಗಲೂ ಚೂಪಾಗಿರುವಂತೆ ನೋಡಿಕೊಳ್ಳಿ. ಮೊನಚಾದ ಚಾಕುವು ಅಡುಗೆ ಭಟ್ಟರ ಮಿತ್ರವೆಂದರೆ ತಪ್ಪಾಗಲಾರದು.ತರಕಾರಿಗಳನ್ನು, ಮಾಂಸ, ಹಣ್ಣುಗಳನ್ನು ಕತ್ತರಿಸಲು ನಿಮ್ಮ ಚಾಕುವನ್ನು ತಪ್ಪದೇ ಆಗಿಂದಾಗ್ಗೆ ಚೂಪು ಮಾಡಿಸಿಕೊಳ್ಳುವುದು ಅತ್ಯವಶ್ಯಕ. ಮೊಂಡಾದ ಚಾಕು ನಿಮ್ಮ ಅಡುಗೆ ಮನೆಯಲ್ಲಿದ್ದರೆ ಕೆಲಸ ಕಾರ್ಯಗಳು ಸಹಜವಾಗಿಯೇ ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ಈ ತಾಣದಲ್ಲಿ ನಿಮ್ಮ ಚಾಕುವನ್ನು ಸುಲಭವಾಗಿ ಚೂಪಾಗಿಸಲು ಸರಳವಾದ ಸಲಹೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.

ಈ ಸಮಸ್ಯೆಗೆ ಪರಿಹಾರವೆಂದರೆ, ಒಂದು ಸಣ್ಣ ಓರೆಗಲ್ಲನ್ನು ಅಥವಾ ಇಟ್ಟಿಗೆ ಅಥವಾ ಚಾಕು ಚೂಪುಗೊಳಿಸುವ ಸಾಧನವನ್ನು ಇಟ್ಟುಕೊಳ್ಳುವುದು ಒಳಿತು. ಅಲ್ಲದೆ ನೀವು ಚಾಕು ಖರೀದಿಸುವಾಗ ಅದು ಚೂಪುಗೊಳ್ಳುತ್ತದೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಖರೀದಿಸುವುದು ಒಳಿತು. ನೀವು ಚಾಕುವನ್ನು ಚೂಪುಗೊಳಿಸಿದ ನಂತರ ಬೆಚ್ಚಗಿನ ಸಾಬೂನು ಬೆರೆಸಿದ ನೀರಿನಲ್ಲಿ ಅದ್ದಿ. 15 ನಿಮಿಷದ ನಂತರ ಅದನ್ನು ಒಂದು ಕಪ್ ನೀರು ಮತ್ತು ಅರ್ಧ ಕಪ್ ಬಿಳಿ ವಿನೆಗರ್ ಮಿಶ್ರಣಕ್ಕೆ ಹಾಕಿ. ಇದು ಚಾಕುಗಳನ್ನು ಹೆಚ್ಚು ಕಾಲ ಉಪಯೋಗಕ್ಕೆ ಬರುವಂತೆ ಹಾಗೂ ಹೆಚ್ಚು ತುಕ್ಕು ಹಿಡಿಯದಂತೆ ನೋಡಿಕೊಳ್ಳುತ್ತದೆ. ನಿಮ್ಮ ಮನೆಯಲ್ಲಿಯೇ ಲಭ್ಯವಿರುವಂತಹ ವಸ್ತುಗಳಿಂದ ಚಾಕುಗಳನ್ನು ಸರಳವಾಗಿ ಚೂಪುಗೊಳಿಸಲು ಹಲವು ಸುಲಭ ವಿಧಾನಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ. ವಿವರಗಳಿಗೆ ಮುಂದೆ ಓದಿ. . ಚಾಕು ಸ್ವಚ್ಛಗೊಳಿಸಲು ಕೆಲ ಸಲಹೆಗಳು

Knife Sharpening Tips

ಉಕ್ಕಿನ ಹಲಗೆಗೆ ಉಜ್ಜಿ
ಮಂದವಾದ ಚಿಕ್ಕ ಸ್ಟೀಲ್ ತುಂಡು ಅಥವಾ ಕಬ್ಬಿಣದ ತುಂಡನ್ನು ಖರೀದಿಸಿ. ಅದನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಬಿಸಿಲಲ್ಲಿ ಅರ್ಧ ಘಂಟೆ ಒಣಗಲು ಬಿಡಿ. ಅದು ಮುಟ್ಟಲು ಬಿಸಿಯಾದ ತಕ್ಷಣ ಚಾಕುವಿನ ಚೂಪಾದ ಭಾಗವನ್ನು ಉಕ್ಕಿನ ತುಂಡಿಗೆ ಚೆನ್ನಾಗಿ ಉಜ್ಜಿ. ಈ ಉಜ್ಜುವಿಕೆಯಿಂದ ಬೆಂಕಿಯ ಸಣ್ಣ ಜ್ವಾಲೆ ಮತ್ತು ಕಿಡಿಗಳು ಬರುತ್ತವೆ. ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಹುಷಾರಾಗಿರಿ.

ಸರಳುಗಳಿಗೆ ಚಾಕುವನ್ನು ಉಜ್ಜಿ
ಚಾಕು ಚೂಪಾಗಬೇಕಾದರೆ, ಚಾಕುವನ್ನು ಉಕ್ಕಿನ ಅಥವಾ ಕಬ್ಬಿಣದ ಸರಳುಗಳಿಗೆ ಚೆನ್ನಾಗಿ ಉಜ್ಜಿ. ಉಕ್ಕಿನ ಸರಳುಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ನಿಮ್ಮ ಚಾಕುವಿನಿಂದ ಹೆಚ್ಚು ಮಾಂಸವನ್ನು ಕತ್ತರಿಸುವುದಿದ್ದರೆ ಈ ವಿಧಾನವು ಹೆಚ್ಚು ಉಪಯೋಗಕರ.

ಗ್ರಾನೈಟ್ ಕಲ್ಲಿನ ಬಳಕೆ
ಚಾಕುವನ್ನು ಚೂಪುಗೊಳಿಸಲು ಉತ್ತಮ ಸಾಧನವೆಂದರೆ ಬೆಣಚುಗಲ್ಲು ಅಥವಾ ಗ್ರಾನೈಟ್ ಕಲ್ಲು. ಚೂಪಾದ ಚಾಕುವಿನ ಭಾಗವನ್ನು ಗ್ರಾನೈಟ್ ಕಲ್ಲಿನ ಮೇಲೆ ೨೦ ಸೆಕೆಂಡುಗಳ ಕಾಲ ಮೇಲಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಚೆನ್ನಾಗಿ ಉಜ್ಜಿ. ಈ ವಿಧಾನವು ಹೆಚ್ಚು ಸುರಕ್ಷಿತವಾಗಿದ್ದು, ಈ ವಿಧಾನದಲ್ಲಿಯೂ ಸಹ ಸಣ್ಣ ಕಿಡಿಗಳು ಹೊಮ್ಮಲಿದ್ದು, ಸ್ವಲ್ಪ ದೂರವಿದ್ದು ಎಚ್ಚರದಿಂದಿರಿ.

ಚಾಕು ಚೂಪುಗೊಳಿಸುವ ಸಾಧನವನ್ನು ಖರೀದಿಸಿ
ಹೆಚ್ಚು ಮೊನಚಾದ ಚಾಕುವನ್ನು ಚೂಪುಗೊಳಿಸಲು ಸಾಧನವನ್ನು ಖರೀದಿಸುವುದು ಹೆಚ್ಚು ಸೂಕ್ತ. ಆದರೆ, ಅದು ಹೆಚ್ಚು ದುಬಾರಿಯಾಗಿದ್ದು ಕೆಲವೇ ಕೆಲವು ವಿಧದ ಚಾಕುಗಳನ್ನು ಮಾತ್ರ ಅದರಿಂದ ಚೂಪುಗೊಳಿಸಬಹುದು.

ಇಟ್ಟಿಗೆಯೂ ಉಪಯುಕ್ತಕರ
ಇಟ್ಟಿಗೆಯೂ ಸಹ ಚಾಕುವನ್ನು ಚೂಪುಗೊಳಿಸಲು ಮತ್ತೊಂದು ಆಯ್ಕೆ. ಮಣ್ಣಿನಿಂದ ತಯಾರಿಸಿದ ಕೆಂಪು ಇಟ್ಟಿಗೆಗಳು ಚಾಕುವನ್ನು ಚೂಪುಗೊಳಿಸಲು ನಿಜಕ್ಕೂ ಉತ್ತಮ ಆಯ್ಕೆ.

English summary

Simple Tips To Sharpen Knives At Home

A dull knife is a cook's worst enemy, and easily the most dangerous tool you can have in your kitchen. It is important to sharpen the knives in your kitchen from time to time, as it can benefit easy chopping of vegetables, meat and fruits in no time. Using a blunt knife in the kitchen will only increase your work load.
X
Desktop Bottom Promotion