For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಜಿರಳೆಗಳ ಕಾಟವೇ? ಇನ್ನು ಚಿಂತೆ ಬಿಡಿ!

|

ಎಲ್ಲಾ ಬಗೆಯ ಕ್ರಿಮಿ ಕೀಟಗಳು ನಮ್ಮ ಆರೋಗ್ಯ ಮತ್ತು ಆಸ್ತಿ ಪಾಸ್ತಿಗಳಿಗೆ ನಷ್ಟವನ್ನುಂಟು ಮಾಡುತ್ತವೆ. ಸೊಳ್ಳೆಗಳು, ನೊಣಗಳು, ಜೇಡಗಳು ಮತ್ತು ತಿಗಣೆಗಳು ಎಲ್ಲವೂ ಮಾನವನ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ. ಗೆದ್ದಲುಗಳು ಮತ್ತು ಮರವನ್ನು ತಿನ್ನುವ ಬೋರರ್‌ಗಳು ನಮ್ಮ ಪೀಠೋಪಕರಣಗಳನ್ನು ಹಾನಿ ಮಾಡುತ್ತವೆ. ಆದರೂ ಜಿರಳೆಗಳ ವಿಚಾರದಲ್ಲಿ ನಾವು ಆದಷ್ಟು ಜಾಗರೂಕರಾಗಿರಬೇಕು.

ಒಂದು ವೇಳೆ ನೀವು ನಿಮ್ಮ ಮನೆಯನ್ನು ಕೀಟಗಳಿಂದ ಮುಕ್ತವಾಗಿರಿಸಿಕೊಳ್ಳಬೇಕು ಎಂದು ಬಯಸಿದಲ್ಲಿ, ಮೊದಲು ಜಿರಳೆಗಳನ್ನು ಸ್ವಾಭಾವಿಕವಾಗಿ ನಿರ್ಮೂಲನೆ ಮಾಡುವತ್ತ ಆಲೋಚಿಸಬೇಕಾಗುತ್ತದೆ.

ಮಾರುಕಟ್ಟೆಯಲ್ಲಿ ಹಲವಾರು ರಾಸಾಯನಿಕಗಳಿಂದ ಕೂಡಿದ ಜಿರಳೆ ನಿವಾರಕಗಳು ಇದ್ದರೂ, ಮನೆಯಲ್ಲಿ, ಅದರಲ್ಲೂ ವಿಶೇಷವಾಗಿ ಆಹಾರ ಪದಾರ್ಥಗಳು ಇರುವ ಕಾರಣದಿಂದಾಗಿ, ನೀವು ರಾಸಾಯನಿಕಗಳಿಂದ ಮುಕ್ತವಾದ ನಿವಾರಣೆಯ ಉಪಾಯಗಳನ್ನು ಬಳಸಿ, ಜಿರಳೆಗಳನ್ನು ನಿರ್ಮೂಲನೆ ಮಾಡಬೇಕಾಗುತ್ತದೆ. ಇದು ನಿಮಗೂ ಮತ್ತು ನಿಮ್ಮ ಮನೆಯವರೆಲ್ಲರಿಗು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಇಲ್ಲಿ ಅದಕ್ಕಾಗಿ ನಾವು ರಾಸಾಯನಿಕ ಮುಕ್ತ ಮನೆ ಮದ್ದುಗಳನ್ನು ನೀಡಿದ್ದೇವೆ. ಇವುಗಳನ್ನು ಬಳಸಿ, ಜಿರಳೆಗಳಿಂದ ಮುಕ್ತರಾಗಿ....

ಸಕ್ಕರೆ ಮತ್ತು ಬೇಕಿಂಗ್ ಸೋಡಾ

ಸಕ್ಕರೆ ಮತ್ತು ಬೇಕಿಂಗ್ ಸೋಡಾ

ಇದೊಂದು ಅತ್ಯಂತ ಪರಿಣಾಮಕಾರಿಯಾದ ರಾಸಾಯನಿಕ ಮುಕ್ತ ಜಿರಳೆ ನಿವಾರಕವಾಗಿರುತ್ತದೆ. ನೀವು ಇವೆರಡನ್ನು ಮಿಶ್ರಣ ಮಾಡಿಕೊಂಡು, ಜಿರಳೆಗಳು ಓಡಾಡುವ ಭಾಗದಲ್ಲಿ ಹಾಕಿ. ಇದನ್ನು ತಿಂದ ಜಿರಳೆಗಳು ಸಾಯುತ್ತವೆ.

ಕರಿ ಬೇವು ಸೊಪ್ಪುಗಳನ್ನು ಬಳಸಿ

ಕರಿ ಬೇವು ಸೊಪ್ಪುಗಳನ್ನು ಬಳಸಿ

ಸುವಾಸನೆ ಭರಿತ ಕರಿಬೇವು ಸೊಪ್ಪನ್ನು ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಿಡಿ. ಇದರ ವಾಸನೆಗೆ ಅವುಗಳು, ಗೂಡು ಬಿಟ್ಟು ಓಡಿ ಹೋಗುತ್ತವೆ, ಜೊತೆಗೆ ನಿಮ್ಮ ಮನೆಯನ್ನು ಸಹ ತೊರೆದು ಹೋಗುತ್ತವೆ. ಇದು ಜಿರಳೆಗಳನ್ನು ನಿಮ್ಮ ಮನೆಯಿಂದ ಓಡಿಸಲು ಇರುವ ಅತ್ಯುತ್ತಮವಾದ ಉಪಾಯಗಳಲ್ಲಿ ಒಂದಾಗಿದೆ.

ಅಮೋನಿಯಾ ದ್ರಾವಣ

ಅಮೋನಿಯಾ ದ್ರಾವಣ

ಇದು ಸಹ ಜಿರಳೆಗಳನ್ನು ಓಡಿಸಲು ಒಂದು ಪರಿಣಾಮಕಾರಿಯಾದ ಔಷಧಿಯಾಗಿರುತ್ತದೆ. ಎರಡು ಕಪ್ ಅಮೋನಿಯಾವನ್ನು ಒಂದು ಬಕೆಟ್ ನೀರಿಗೆ ಹಾಕಿ ಮತ್ತು ಅದರಿಂದ ನಿಮ್ಮ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ. ಇದರ ಕಟು ವಾಸನೆಗೆ ಜಿರಳೆಗಳು ನಿಮ್ಮ ಅಡುಗೆ ಮನೆಯಿಂದ ಜಾಗ ಖಾಲಿ ಮಾಡುತ್ತವೆ.

ಸೋಪ್ ದ್ರಾವಣ

ಸೋಪ್ ದ್ರಾವಣ

ಸ್ನಾನ ಮಾಡುವ ಸೋಪ್ ಮತ್ತು ನೀರಿನ ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ದ್ರಾವಣವನ್ನು ನೇರವಾಗಿ ಜಿರಳೆಗಳ ಮೇಲೆ ಸಿಂಪಡಿಸಿ, ಈ ದ್ರಾವಣವು ಅವುಗಳನ್ನು ತಕ್ಷಣ ಕೊಲ್ಲುತ್ತದೆ. ಇದನ್ನು ನೀವು ಸ್ಪ್ರೇ ಮೂಲಕ ಸಹ ಸಿಂಪಡಿಸಬಹುದು.

ಬೋರಿಕ್ ಆಮ್ಲ

ಬೋರಿಕ್ ಆಮ್ಲ

ಬೋರಿಕ್ ಆಮ್ಲವನ್ನು ಬಳಸಿ ಜಿರಳೆಗಳನ್ನು ಕೊಲ್ಲಬಹುದು. ಇದಕ್ಕಾಗಿ ಬೋರಿಕ್ ಆಮ್ಲ ಮತ್ತು ಹಿಟ್ಟನ್ನು ಬಳಸಿಕೊಂಡು, ಉಂಡೆಗಳನ್ನು ಮಾಡಿಕೊಳ್ಳಿ. ಇದನ್ನು ಜಿರಳೆಗಳು ಓಡಾಡುವ ಭಾಗದಲ್ಲಿ ಹಾಕಿ, ಇದನ್ನು ಸೇವಿಸಿದ ಜಿರಳೆಗಳು, ಇದರಲ್ಲಿನ ಆಸಿಡ್ ಅಂಶಕ್ಕೆ ಜೀವವನ್ನು ಬಿಡುತ್ತವೆ.

ಮೆಣಸು, ಈರುಳ್ಳಿ ಮತ್ತು ಬೆಳ್ಳುಳ್ಳಿ ದ್ರಾವಣ

ಮೆಣಸು, ಈರುಳ್ಳಿ ಮತ್ತು ಬೆಳ್ಳುಳ್ಳಿ ದ್ರಾವಣ

ಇದು ಸಹ ಒಂದು ಪರಿಣಾಮಕಾರಿಯಾದ ರಾಸಾಯನಿಕ ಮುಕ್ತ ವಿಧಾನವಾಗಿದೆ. ಮೆಣಸಿನ ಪುಡಿ, ಈರುಳ್ಳಿ ಪೇಸ್ಟ್ ಮತ್ತು ಬೆಳ್ಳುಳ್ಳಿಗಳನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಜಿರಳೆಗಳು ಓಡಾಡುವ ಭಾಗದಲ್ಲಿ ಹಾಕಿ. ಈ ಮಿಶ್ರಣದ ವಾಸನೆಗೆ ಜಿರಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.

English summary

Home Remedies To Kill Cockroaches

Pests of all kinds are notorious as they cause a terrible amount of damage to human health and property. Flies, spiders, bed bugs and mosquitoes are dangerous for human health, However, cockroaches are the pests that you should always be careful of. Following are the chemical-free ways to prevent cockroaches, that you can rely on...
Story first published: Tuesday, May 5, 2015, 17:28 [IST]
X
Desktop Bottom Promotion